Jul 31, 2010

"ಕಿಟಕಿಯಂಚಲ್ಲಿ"

ಕಿಟಕಿಯಿಂದ ಏನೇನೂ
ಕಾಣುತ್ತಿಲ್ಲವೆಂದು !
ಹತಾಶೆಯಿಂದ ಕಿಟಕಿಯನ್ನ
ಜೋರಾಗಿ ಮುಚ್ಚಿದೆ.

ಕಿಟಕಿ ಬಾಗಿಲು ಬೀಸಿದ ಗಾಳಿಗೆ,
ಖಾಲಿ ಪುಸ್ತಕದ ಹಾಳೆ ತಾನಾಗಿ ತೆರೆದುಕೊಂಡಿತು .
ಅಲ್ಲಿ, ತಾಜಾ ಹೂವಿನ ಪರಿಮಳವಿತ್ತು.
ಹೊಸ ಮುನ್ನುಡಿಗೆ ಕಾಯುತ್ತಿತ್ತು.

ತಕ್ಷಣ ನನ್ನೊಳಗೆ ಬೀಸಿದ ತಂಗಾಳಿಗೆ
ಕಿಟಕಿ ತೆರೆಯಿತು.
ನನ್ನ ನೋಟ ಬದಲಾಗಿತ್ತು.
ಆಕಾಶವೆಲ್ಲ ಚೆಂದದ ಚಿತ್ತಾರವೆನಿಸಿತು.
ಯಾವುದೋ ಹಕ್ಕಿ ಕತ್ತಲಲ್ಲೂ ಗೂಡು ಕಟ್ಟುವ ತವಕದಲ್ಲಿತ್ತು.
ಕಿಟಕಿಯಂಚಲ್ಲಿ ಹೊಸ ಕನಸೊಂದು ಮೆಲ್ಲಗೆ ನನ್ನಾವರಿಸಿಕೊಂಡಿತು.

=====
=====

24 comments:

  1. ದೃಷ್ಟಿಕೋನದ ಬದಲಾವಣೆಯಿ೦ದ ಮನಸ್ಸು ಎಷ್ಟೊ೦ದು ಮುದಗೊಳ್ಳಬಹುದು ಎ೦ಬುದನ್ನು ಕವನದಲ್ಲಿ ಸು೦ದರವಾಗಿ ವರ್ಣಿಸಿದ್ದೀರಿ.ಹಿಡಿಸಿತು.

    ReplyDelete
  2. ಇಲ್ಲಿ ಕಿಟಕಿಯ ಬಾಗಿಲನ್ನು ಮನದ ಬಾಗಿಲಿಗೆ ಉಪಮೆಯಾಗಿ ಬಳಸಬಹುದು.ಸುಂದರ ಕವನ ನಾಗರಾಜ್.ಅಭಿನಂದನೆಗಳು.

    ReplyDelete
  3. ಅದಕ್ಕೆ ಹೇಳುವುದು ಸ್ವಾಮಿ..........
    ಅವಾಗಾವಾಗಾದ್ರೂ ಒಳ್ಳೆ ಯೋಚನೆ ಮಾಡಿ ಅಂತ.........!
    ಹ್ಹ ಹ್ಹ ಹ್ಹಾ.......
    ಚೆನ್ನಾಗಿದೆ, ಅಂತೂ ದೃಷ್ಟಿಕೋನ ಬದಲಾಗಿ ಸಂತೋಷ ಸಿಕ್ಕಿತಲ್ಲಾ..........

    ReplyDelete
  4. ಕವನ ಚೆನ್ನಾಗಿದೆ.. ತಮ್ಮ ಭಾವನೆಯನ್ನು ಬಡಿದೆಬ್ಬಿಸಿದ ತಂಗಾಳಿಯಂತೆ

    ReplyDelete
  5. @ಮನಮುಕ್ತಾ: Beauty always in the beholder's Eyes.
    ನಮ್ಮ ಮನಸಿನ ದೃಷ್ಟಿಯೇ ಎಲ್ಲವನ್ನ ನಮಗೆ ನೀಡುತ್ತದೆ.
    ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್.

    ReplyDelete
  6. @Murthy ಸರ್: ನನ್ನ ಉದ್ದೇಶವು ಅದೆಯಾಗಿದೆ.
    ನೀವು ಅದನ್ನ ಪತ್ತೆ ಮಾಡಿದ್ದೆರ, ಎಷ್ಟೇ ಆಗ್ಲಿ ಡಾಕ್ಟರ್ ಅಲ್ವಾ :-)

    ReplyDelete
  7. @ಚುಕ್ಕಿಚಿತ್ತಾರ : ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :-)

    ReplyDelete
  8. @ಮನದಾಳದಿಂದ: ಸರ್ ನಾನು ಕೆಲವೊಮ್ಮೆ ಅಷ್ಟೇ ಕೆಟ್ಟ ಯೋಚನೆ ಮಾಡ್ತೀನಿ, ಅದು ಇಲ್ಲ ಅಂದ್ರೆ ಒಳ್ಳೇದು ಯಾವುದು ಕೆಟ್ಟದ್ದು ಯಾವುದು ಅಂತ ತಿಳಿಬೇಕಲ್ಲ :-) ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್ .

    ReplyDelete
  9. @ಸಾಗರಿ: ನಿಮಗೆ ನನ್ನ ಭಾವನೆಗಳನ್ನ ಬಡಿದೆಬ್ಬಿಸಿದ ತಂಗಾಳಿ ಚೆನ್ನವೆನಿಸಿದ್ದಕ್ಕೆ ಥ್ಯಾಂಕ್ಸ್ .

    ReplyDelete
  10. @ ವಿ ಆರ್ ಭಟ್: ಸರ್ ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್. ಆಗಾಗ ಬರುತ್ತಿರಿ :-)

    ReplyDelete
  11. ಕ್ಷಣಮಾತ್ರದಲ್ಲಿ ಏನೆಲ್ಲಾ...

    ReplyDelete
  12. @ಕತ್ತಲೆ ಮನೆ: ಅದು ಹಾಗೇನೆ, ಎಲ್ಲವೂ ಕ್ಷಣ ಮಾತ್ರದಲ್ಲೇ ಆಗೋದು. ಆದ್ರೆ ಕ್ಷಣ ಬರೋಕೆ ಸ್ವಲ್ಪ ಪ್ರಯತ್ನದ ಅವಶ್ಯಕತೆ ಇದೆ. ಕತ್ತಲೆ ಮನೆ, ಬೆಳಕಿನ ಮನೆ ಆಗೋದಕ್ಕೆ ಕೂಡ, ಅಲ್ವಾ ?

    ReplyDelete
  13. ಎಲ್ಲೂ ಬಚ್ಚಿಟ್ಟು,
    ಕಾಡಿಸಿ,
    ಕೆರಳಿಸಿ,
    ಮುದಗೊಳಿಸಿ
    ಬರೆಸಿಕೊಳ್ಳುವ
    ಸಾಲುಗಳು,
    ಕವನವಾಗತ್ತೆ ......
    ತುಂಬಾ ಚೆನ್ನಾಗಿದೆ ನಿಮ್ಮ ಕವನ....

    ReplyDelete
  14. @ದಿನಕರ್ sir : ನೀವು ಹೇಳಿದ್ದು 100% ಸತ್ಯ

    ReplyDelete
  15. ಸರ್, ತುಂಬಾ ಇಷ್ಟಆಯ್ತು

    ReplyDelete
  16. jeevanavanna nodo drushtikonada bagge kitiki upame bahala adbhutavagi balasiddiraaa..

    ReplyDelete
  17. @ವಿ ಡಿ ಭಟ್ ಸರ್ ಮತ್ತು ಸೀತಾರಾಮ್ ಸರ್: ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್

    ReplyDelete
  18. @ ಶಿವಶಂಕರ್: ನಾನೇ ಬರೆದು, ಪೋಸ್ಟ್ ಮಾಡಿದೆ :-)

    ReplyDelete
  19. ಶ್ರೀ ನಾಗರಾಜ್, ಸುಂದರ ಭಾವದ ಸುಂದರ ಅಭಿವ್ಯಕ್ತಿ.

    ReplyDelete
  20. @ಕವಿ ನಾಗರಾಜ್ ಸರ್ : ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete