[ಸುಮ್ನೆ ನಿಮ್ಮ ಮಾಹಿತಿಗಾಗಿ ಒಂದು ವಿಷಯ: A study by the Associated Chambers of Commerce and Industry of India says Rs.12,000 Cr. spent on Valentine week 2010]
ಆದರೇ,
ಪ್ರೀತಿ ಅಂದ್ರೇನು? ಅದು ಹೇಗಿರುತ್ತೆ..? ಹೇಗಾಗುತ್ತೆ..? ಯಾಕಾಗುತ್ತೆ..? ಆದಮೇಲೆ ಹೇಗೆ..?
ವಿವರಿಸೋದು ಕಷ್ಟ, ಕಷ್ಟ.!
ಈ ಪ್ರೀತಿ ಬಗ್ಗೆ ಕೇಳಿದಿವಿ, ಓದಿದಿವಿ.
ಒಬ್ಬೊಬ್ಬರ ದ್ರಷ್ಟಿಯಲ್ಲಿ ಒಂದೊಂದು ರೀತಿ, ಪ್ರೀತಿ.
ಎಷ್ಟೊಂದು ಹಾಡು/ಕವಿತೆಗಳು. ಕತೆ, ಸಿನೆಮಾಗಳು ಈ ಪ್ರೀತಿಯ ಮೇಲೆ.
ಪ್ರೀತಿಯ ಅನುಭವ ಹೇಳಲಾಗದು, ಅದನ್ನು ಅನುಭವಿಸಬೇಕು ಅಷ್ಟೇ.
ಹೂವಿನ ಪರಿಮಳ ವಿವರಿಸಿ ಹೇಳಲಾಗದ ಹಾಗೆ.!!
ಅನುಭವಿಸಿದವರಿಗೇ ಗೊತ್ತು, ಪರಿಮಳ.
"ಮಕರಂದ ಸವಿಯಲು ದುಂಬಿ ಆಗಲೇಬೇಕು"
ಪ್ರೀತಿ.......... ಪ್ರೀತಿನೆ..!!
***
ಈ ಪ್ರೀತಿಯ ಬಗ್ಗೆ ಕೆಲವು ಭಾವನೆಗಳು..
ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಚಡಪಡಿಸುತ್ತಿರುವ ಪ್ರೇಮಿ:
"ತುಸು ದೂರ ನನ್ನೊಡನೆ ನೀ ನಡೆಯಬೇಕು,
ನನ್ನೀ ಮನದ ಕತೆಯೊಂದ ನೀ ಕೇಳಬೇಕು.
ಅರಿಯದ ಕಣ್ಣ ಮಾತನ್ನ,
ಮನಬಿಚ್ಚಿ ನಾ ಹೇಳಲೇಬೇಕು.!"
ಪ್ರೇಯಸಿಯನ್ನು ಕಳೆದುಕೊಂಡ ಘಳಿಗೆ:
"ನಿನ್ನ ವಿರಹದಲಿ ಅದೆಷ್ಟು ಸಾರಿಯೋ ನಾನಿಟ್ಟದ್ದು ಕಂಬನಿ.
ಮೊನ್ನೆ ಎಣಿಸಿ ಬರೆಯುವಾಗ, ಬರೀದಾಯಿತು ಲೇಖನಿ..!"
ಅವಳ ನೆನಪಿನಲ್ಲಿ ಕೊರಗುತ್ತಿದ್ದ ಅವನಿಗೆ, ಇದು ನನ್ನ ಜೀವನ ಅಲ್ಲ ತಾನು ಬದಲಾಗಲೇಬೇಕು ಎನಿಸಿತು:
"ಕಾರಣ ನೀಡದೇ, ನನ್ನ ಪ್ರೀತಿಯನ್ನು ತೊರೆದು ಹೋದವಳೇ,
ನಿನ್ನ ವಿರಹದಲಿ ಬೆಂದು-ಬಂಡೆಯಾದ ಈ ಹೃದಯದಲಿ,
ನೋಡು, ಮತ್ತೇ ಪ್ರೀತಿ ಎಲೆ 'ಚಿಗುರಿದೆ'..!! "
ಕಳೆದು ಹೋದ ಪ್ರೀತಿಯ ದಿನಗಳು ಮರೆಯಬೇಕು. ಸಂಪೂರ್ಣ ಮರೆಯಲಾಗದಿದ್ದರೂ ಮರೆಯಲತ್ನಿಸಬೇಕು,
ಹೊಸ ಕನಸು ಕಾಣಬೇಕು:
"ನಿನ್ನ ನೋಡದ ನಿನ್ನ ಧ್ವನಿ ಕೇಳದ,
ಎಲ್ಲಿರುವೆ, ಹೇಗಿರುವೆ ಎಂಬ ಸುಳಿವು ಇಲ್ಲದ.
ನನ್ನ ಬಾಳ ಸಂಗಾತಿಯಾಗಿ, ಬಾಳ ಬಂಡಿಗೆ ಹೆಗಲು ಕೊಡುವ.
ನಕ್ಷತ್ರಗಳೆಣಿಸಲು ಜೊತೆಯಾಗುವ.
ಹುಣ್ಣಿಮೆಯ ರಾತ್ರಿ, ಚಳಿಗೆ ಬಿಸಿ-ಬೆಸುಗೆಯಾಗುವ.
ಮೌನಕ್ಕೆ ಮಾತಾಗುವ, ಪದಗಳಿಗೆ ಹಾಡಾಗುವ.
ನನ್ನೀ ಮನದ ಒಡತಿಯಾಗುವ ಗೆಳತಿಯೇ.
ನಿನ್ನ ಹೃದಯದಾಗಮನದಿಂದ, ನನ್ನ ಹೃದಯದಲ್ಲಾಗುವ
ರಿಂಗಣಿಕೆಗೆ,
ನಾ ಕಾದಿರುವೆ.....!!! "
***
ಪ್ರೀತಿ ಬೆಳೆಯಬೇಕು, ಪ್ರೀತಿ ಬೆಳಗಬೇಕು..!!
ಚಿತ್ರ:ಅನಿಲ್ ಬೇಡಗೆ