Jul 1, 2013

"ಪೋಯಮ್ಮು"


ಕಡಲಿಗೆ ನದಿಯೋ ?
ನದಿಯಿಂದಲೇ ಕಡಲೋ ?
ನಿನ್ನ ಮೇಲೆ ಪ್ರೀತಿಯೋ ?
ನೀನೇ ಪ್ರೀತಿಯೋ ?
ಮೊದಲೆರಡು ಸಾಲಿನ ಪ್ರಶ್ನೆಗೆ 
ಹುಡುಕಿದರೆ ಸಿಕ್ಕೀತು ಉತ್ತರ 
ಉಳಿದವುಗಳ ಬಗ್ಗೆ ಇನ್ನು ಸಂಶೋದನೆಯಾಗಬೇಕಷ್ಟೆ !!!!

ವೈಜ್ಞಾನಿಕ ಸ್ಪಷ್ಟೀಕರಣದ ನಿರೀಕ್ಷೆಯಿಲ್ಲ 
ಉತ್ತರದ ಹಂಗಿಲ್ಲದ ಪ್ರಶ್ನೆಗಳೂ ತರತರಾ 
ಕೆಲವೊಮ್ಮೆ ಉತ್ತರಕ್ಕಿಂತ ಪ್ರಶ್ನೆಯೇ ಸುಂದರ 

ಸಂಕೊಚದಲಿ ಮಿಂದು ಬೆದರಿದ ಜಿಂಕೆಯಾದ ಭಾವಗಳಿಗೆ, 
ನೀನು ದನಿಯಾದೆ 
ನಿನ್ನ ಪೂಜೆಗೆ, ಅರಳಿದ ಹೂ ತರಲು ಹೋದೆ 
ಹೂವೇ ನೀನಾದೆ !!!

ಎಲ್ಲೋ ಇಳಿಯಬೇಕಾದವನು ಇಲ್ಲಿಳಿದು ಬರೆಯುತ್ತಿದ್ದೇನೆ 
ನೀನು ಕಣ್ಮುಂದೆ ಬಂದರೆ ಸಾಕು 
ನಿನ್ನ ನೆನೆದರೆ ಸಾಕು 
ಪಯಣದ ಹಾದಿ ಮರೆತು ಎಲ್ಲೋ ಇಳಿಯುತ್ತೇನೆ  

ಪೋಯಮ್ಮಿನ ಸಾಲುಗಳು ಹಿಂದುಮುಂದಾದವೇನೋ ?
 . . . . . ನನ್ನಂತೆ !

=====
=====