ನನ್ನ ಮರೆತ ಅವಳ ನೆನಪುಗಳನ್ನು,
ಮರೆತು ಬಿಟ್ಟಿದ್ದೆನೆಂದು ಮರೆತಿದ್ದೆ..
ಮರೆತು ನಿನ್ನೆ ಮತ್ತೆ ನೆನಪಿಸಿಕೊಂಡೆ...
ಮನಸಿಗೆ ಏನೂ ಗೊತ್ತಾಗದೆಂದು,
ಶರಾಬು ಸುರಿದು ಸುಟ್ಟುಬಿಟ್ಟೆ ..
ಹಾಳಾದ ಮನಸು..!
ನೆನಪುಗಳ ಸುಟ್ಟಬೂದಿ
ವಿಭುತಿಯಂತೆ ಭಾಸವಾಗುತ್ತಿದೆ... !!
Feb 27, 2010
Feb 7, 2010
"ತುಂಬು ಹೃದಯದಿಂದ...."
ನನ್ನ ಎರಡು ಹನಿಗವನಗಳನ್ನ ಪ್ರಕಟಿಸಿದ 'ಸಿಂಪ್ಲಿ ಸಿಟಿ' ಪೇಜ್ ನ ಮಣಿಕಾಂತ್ ಸರ್ ಅವರಿಗು ಹಾಗು 'ವಿಜಯಕರ್ನಾಟಕ' ದಿನಪತ್ರಿಕೆ ತಂಡಕ್ಕೂ ಈ ನನ್ನ ದಿನವನ್ನ ಖುಷಿಯಿಂದಿರುವಂತೆ ಮಾಡಿದ್ದಕ್ಕೆ ತುಂಬು ಹೃದಯದಿಂದ ಥ್ಯಾಂಕ್ಸ್.
=====
=====
=====
=====
Feb 6, 2010
ನಾನು ನಿರುತ್ತರ .....!
ಅವತ್ತು ರಜಾ ದಿನ, ಬಹಳ ದಿನಗಳ ನಂತರ ಮುದ್ದು ಮಗನನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂಡಿಸಿಕೊಂಡು ಹೊರಟೆ. ಸಮಯ ಮಧ್ಯಾನ ೧೨ ಗಂಟೆ..
ಸುಮಾರು ದೂರ ಹೋದ ನಂತರ, ಪೊಲೀಸರು ತಡೆ ಹಿಡಿದರು. ಎಲ್ಲ ದಿಕ್ಕಿನಲ್ಲೂ...
ಯಾರೋ, ದೊಡ್ಡ (?) ಮನುಷ್ಯ ಬರಬೇಕಿತ್ತು. ಛೆ,,! ಸ್ವಲ್ಪ ಬೇಗ ಬಂದಿದ್ರೆ ಆರಾಮಾಗಿ ಹೋಗಬಹುದಿತ್ತಲ್ಲ,,! ಮನಸ್ಸಲ್ಲೇ ನನಗೆ ನಾನೇ ಹೇಳಿದೆ. ಹತ್ತು ನಿಮಿಷ ಆಯ್ತು, ದೊಡ್ಡ ಮನುಷ್ಯನ ಪತ್ತೆ ಇಲ್ಲ. ಒಮ್ಮೆ ಹಿಂದೆ ತಿರುಗಿ ನೋಡಿದೆ, ಇರುವೆಯ ಸಾಲಿನಂತೆ ಕಂಡವು ಗಾಡಿಗಳು, ಕೊನೆಯಲ್ಲಿ ಕಾಣಿಸಿದ್ದು ಲಾರಿ ಬಹುಶ ಅದರ ಹಿಂದೇನು ಇದ್ದವೇನೋ ಇನ್ನಷ್ಟು..
ಮತ್ತೆ ಹತ್ತು ನಿಮಿಷ ಕಳೆದವು,ಇ ದೊಡ್ಡ ಮನುಷ್ಯನ ಸುಳಿವಿಲ್ಲ. ಚಳಿಗಾಲದ ದಿನ ಅಷ್ಟೇನೂ ಶಕೆ ಇರ್ಲಿಲ್ಲ, ಆದರು ಜನ ಕುದಿಯುತಿದ್ದರು ಒಳಗಿನ ಬಿಸಿಗೆ...!
ಇಷ್ಟೊತ್ತು ಆಫ ಆಗಿರದ ಕೆಲವು ಇಂಜಿನ್ ಗಳು ಇಗ ಆಫ ಆದವು..!
ಅಲ್ಲೊಬ್ಬ ಸೆಂಟರ್ ಸ್ಟ್ಯಾಂಡ್ ಹಾಕಿ ಆರಾಮಾಗಿ ಗಾಡಿ ಮೇಲೆ ಕೂತಿದ್ದ, ಅವರು ಯಜಮಾನರು ತಮ್ಮ ಹಳೆ 'ಹಮಾರ ಬಜಾಜ್' ಮೇಲೆ ಎರಡು ಕೈ ಕಟ್ಟಿ, ಯಾರಿಗೋ ಹೊಡೆಯುವಂತೆ ನೋಡುತ್ತಿದ್ದರು..
ಪಕ್ಕದಲ್ಲಿ ನಿಂತಿದ್ದ ಸಾಹೇಬರು ಕಷ್ಟ ಪಟ್ಟು ಸೆಂಟರ್ ಸ್ಟ್ಯಾಂಡ್ ಹಾಕಿ, 'ಫೂಟ್ ಪಾತ್' ಪಕ್ಕದಲ್ಲಿದ್ದ ಮರಕ್ಕೆ 'ನೀರುಣಿಸಿ ' ಬಂದರು....!
'ಅಪ್ಪ' ಎಲ್ಲರು ಯಾಕೆ ನಿಂತಿದಾರೆ,,? ಅಷ್ಟೊತ್ತು ಸುಮ್ಮನಿದ್ದ ಮಗ ಕೇಳಿದ..
ಯಾರೋ ' ವಿ.ಆಯ.ಪಿ "ಹೋಗ್ಬೇಕು ಪುಟ್ಟ ಅದಕ್ಕೆ...
'ವಿ. ಆಯ. ಪಿ' ...? ಮಗ ಕೇಳಿದ.
'ವೆರಿ ಇಮ್ಪೋ..................
ಅಷ್ಟರಲ್ಲಿ ಅದೆಲ್ಲಿತ್ತೋ ಬುರ್ರ್ರ ಬುರ್ರ ,,,,,,,,,, ಅಂತ ಜೋರಾಗಿ ಶಬ್ದ ಮಾಡುತ್ತಾ, ಸಂದಿ ಸಂದಿ ನುಗ್ಗಿ, ಬಂತೊಂದು 'ಬ್ಲಾಕ್ ಪಲ್ಸೆರ್' ..
ಸಣ್ಣ ಗೆ ಗಾಳಿಯು ನುಗ್ಗದಂತೆ ತಬ್ಬಿ ಕೂತಿದ್ದಳು ಅವನ ಗರ್ಲ್ ಫ್ರೆಂಡ್.. ಎಲ್ಲರ ಕಣ್ಣು ಇವರ ಮೇಲೆ...!!
ಅವನು ತನ್ನ ಹೆಲ್ಮೆಟ್ ತೆಗೆದು ಕನ್ನಡಿಗೆ ನೇತು ಹಾಕಿದ , ಅವರ ಮಾತುಗಳು ಶುರು ಆದವು ಕೆನ್ನೆ ಕೆನ್ನೆ ತಾಕುತ ..
ಬಿಸಿಲಲ್ಲಿ ಬಿಸಿ ಬಿಸಿ, ಫುಲ್ ಬ್ಯುಸಿ... !!
ಎಲ್ಲರು ಅವರತ್ತ ಧ್ಯಾನ ಮಗ್ನರಾಗಿದ್ದರು, ಪಟಕ್ಕನೆ ಆ ಹುಡುಗಿ ತನ್ನ ಹುಡುಗನ ಕಿವಿಗೆ ಕಚ್ಚಿ ಬಿಡೋದಾ.....!!!?
'ಅಪ್ಪ.........
ಅಕ್ಕಾ..... ಅಣ್ಣಾ..... ಕಿವಿ........ !!!! ನನ್ನ ಮಗನೂ ಅವರನ್ನು ನೋಡಿದ...!!!
ಮಗನ ಕೆನ್ನೆ ಮತ್ತೊಂದೆಡೆ ತಳ್ಳಿದೆ... ಹಂಗೆ ಗಾಡಿ ತಳ್ಳಿ ಎರಡು ಹೆಜ್ಜೆ ಮುಂದೆ ಬಂದೆ.
ಅಬ್ಬಾ......
ಮನಸೂ ಯಾಕೋ ಎರಡು ಸೆಕೆಂಡ್ ಮೌನ ವಾಯಿತು..
ವಾಹ್ಹ್,,,!! ಎಂಥ ಲೈನು.. !! ಅಲ್ಲೇ ಪಕ್ಕದಲ್ಲಿ ನಿಂತಿದ್ದ್ದು ಆಟೋ..
ಆಟೋ ಹಿಂದೆ ಬರೆದ ಲೈನ್, " ದಮ್ಮ ಇದ್ರೆ ಫಾಲೋ ಮಾಡು, ದಿಲ್ ಇದ್ರೆ ಲವ್ ಮಾಡು" ....!!!!!
ತುಂಬಾ ಖುಷಿ ಆಯ್ತು , ಹಾಗೇನೆ ಮನಸು ನೆನಪಿನ ಪೆಟ್ಟಿಗೆಗೆ ಜಾರಿತು..
ಆವಾಗ ಇವಾಗ ಓದಿದ ಆಟೋ ಅಣಿ ಮುತ್ತುಗಳು ನೆನಪಾದವು,
"ದೇವರ ಹೆಸರು, ತಂದೆ ತಾಯಿ ಆಶಿರ್ವಾದ್, ಮಕ್ಕಳ ಹೆಸರು,
ತಮ್ಮ ಪ್ರೀತಿಯ ನಟನ, ಸಿನಿಮಾ ಹೆಸರು..!
ತುಂಬಾ ಮಜಾ ಮಜಾ ಅಣಿ ಮುತ್ತುಗಳು..
" ಲವ್ ಮಾಡಿದ್ರೆ, ಲವ್ ಸ್ಟೋರಿ.. ಕೈ ಕೊಟ್ಟರೆ, ಕ್ರೈಂ ಸ್ಟೋರಿ..."
"ದುಡ್ಡು ದೊಡ್ಡಪ್ಪ ವಿದ್ಯೆ ಅವರಪ್ಪ "
ತುಂಬಾ ಇಷ್ಟ ಆಗಿದ್ದು, " ಪ್ರಕೃತಿಯ ಪ್ರಿತಿಸಿದರೆ ಹಸನ್ಮುಖಿ.. ಇಲ್ಲದಿದ್ದರೆ ಜ್ವಾಲಾಮುಖಿ.... " !!!
ಚಿಕ್ಕವರಿದ್ದಾಗ, ಅಪ್ಪನ ಹಳೆ ಸ್ಕೂಟರ್ ಸ್ಟೆಪ್ನಿ ಕವರ್ ಮೇಲೆ, ನನ್ನ ಹೆಸರು ಬರೆದಿದ್ದು... ಎಲ್ಲಾ ನೆನಪಾದವು...!!
ಹಂಗೆ ಸ್ವಲ್ಪ ಮುಂದೆ ಹೋದೆ, ಡ್ರೈವರ್ ಸಾಹೇಬರು ಬೀಡೀ ಸುಡುತ್ತ ಕೂತಿದ್ದರು...
ಆಟೋ ಗಾಜಿನ ಮೇಲೆ ಬರೆದಿದ್ದು ಉಲ್ಟಾ ಕಾಣುತಿತ್ತು , ಹಾಗೇನೆ ಓದಲು ಪ್ರಯತ್ನಿಸಿದೆ,
ಶ್ರೀ......... ಸ್ವಾಮಿ ಕೃಪೆ " ಪೂರ್ತಿ ಗೊತ್ತಾಗಲಿಲ್ಲ....
ಕೆಳಗೆ, ಉದ್ದ ತಿಲಕವಿರುವ 'ಶಂಕರ್ ನಾಗ್' ಫೋಟೋ..!
'ನಲಿವ ಗುಲಾಬಿ ಹೂವೆ......'
ನನಗರಿವಿಲ್ಲದಂತೆ, ಗುನುಗಿದೆ....!!
'ಅಪ್ಪ'... ದೊಡ್ಡ ಮನುಷ್ಯ ಅಂದ್ರೆ ಯಾರು,,,?
ಎಷ್ಟು ದೊಡ್ಡವರು..? ನೋಡಕೆ ಹೆಂಗಿರ್ತಾರೆ,,,?
'ಹುಲ್ಕ್' ಗಿಂತ ದೊಡ್ಡವರಾ,, ? ಹನುಮಾನ್ ದೇವರುಥರ ನಾ...?
ಮಗನ ಪ್ರಶ್ನೆಗೆ ಏನಂಥ ಉತ್ತರಿಸಲಿ ತಿಳಿಯಲಿಲ್ಲ ...!!
ಅವರು 'ರಾಜಕಾರಣಿ' ಅಂದೇ...
ಅಃ..?
ಅಂದ್ರೆ ಕ್ಲಾಸ್ ಬಾಯ್ / ಕ್ಲಾಸ್ ಹೆಡ್ ಅಂತಾರಲ್ಲ,, ಹಂಗೆ... ಇವರು ಎಲ್ಲರಿಗು ಹೆಡ್...
ಎಲ್ಲರಿಗೂ.....?
ಎಸ್.. !
ಅವರಿಗೆ ಯಾರು ಹೆಡ್ ಮಾಡಿದ್ರು....!? ಹೆಂಗೆ ಮಾಡಿದ್ರು....!!!! ??
ತಕ್ಷಣ ಬಾಯಿಗೆ ಬೀಗ ಹಾಕಿದಂಗೆ ಆಯ್ತು, ಮಾತು ಹೊರಡಿಲಿಲ್ಲ... ಏನಂಥ ಹೇಳಲಿ...
ಹೇಗೆ ಹೇಳಲಿ... !!!!!
ಅಷ್ಟರಲ್ಲಿ, ಅವನು ಸೆಂಟರ್ ಸ್ಟ್ಯಾಂಡ್ ಹಾಕಿ ಕೂತಿದ್ದವನು, ನಾಲ್ಕು ದಿಕ್ಕಿಗೂ ಕೇಳಿಸುವಂತೆ ಕಿರುಚುತಿದ್ದ, ಮೊಬೈಲ್ ನಲ್ಲಿ ...!!
"ಅವನ....ನ....
ಅವರ.....ನ...
ಮುಕ್ಕಾಲು ಗಂಟೆ ಇಂದ ನಿಂತಿದೀನಿ, ಅವನ್ಯಾವನೋ 'ಬೊ....... ಮಗ, ಬರಬೇಕಂತೆ... ಇನ್ನು ಬಂದಿಲ್ಲ.
ಎಲ್ಲಿ ಏನ್ 'ಹ.......ನೋ..... 'ಸು.....ಗ......."""
'ಮಾಜಿ ಪ್ರಧಾನಿಗಳ ಭಾಷೆಯಲ್ಲಿ, ದೊಡ್ಡ ಮನುಷ್ಯನ ಬಗ್ಗೆ, ಸ್ಯಾನೆ..... ಹೊಗಳುತಿದ್ದ....!!!!! "
ಎಲ್ಲರು ಅವನ ಬೆನ್ನಿಗೆ ಶುರು ಹಚಿಕೊಂಡರು...!
ಅರೆ, ಇವಳೇ ಲ್ಲಿಂದ ಬಂದಳು ನೋಡೇ ಇಲ್ಲ ....
'ಸ್ಕೂಟಿ ಮೇಲೆ ಬ್ಯೂಟಿ' !!
ಆಟೋ ಅಣಿ ಮುತ್ತಿನ ನೆನಪಿನಲ್ಲಿ ಇವಳ ಕಾಣಲೇ ಇಲ್ಲ...
ಅಂದಗಾತಿ,,,,,, ದೊಡ್ಡ ರಿಂಗ್ ಕಿವಿಗೆ ನೇತಾಡ್ತಾ ಇದ್ವು ....
ಹೆಡ್ ಫೋನ್ ಹಾಕೊಂಡು ಹಾಡು ಕೇಳ್ತಿದಾಳೆ, ಅನ್ಕೊಲ್ಲುವಷ್ಟ್ರಲ್ಲಿ......
" ನೋ ಯಾ...........
ಆಯಂ ನಾಟ್ ಎಟ್
ಆಯ ಡೋಂಟ್ ನೋ ,
ವ್ಹೆನ್ ವಿಲ್ಲ್ ದಿಸ್ ಬ್ಲಡಿ ಮ್ಯಾನ್ ವಿಲ್ ಗೋ......!!! "
ಹಾ..... !!!!!
ಅವಳ ಮಾತು , ಅವಳ ಉಡುಪಿ ನಂತೆ ,, ಟೂ.... ಹಾಟ್..!
'ಅಪ್ಪಾ..... ' ಮಗ ಜೋರಾಗಿ ಹೇಳಿದ... ಯಾರು ಅವರಿಗೆ ದೊಡ್ಡೋರು ಮಾಡಿದ್ದೂ,,,?
ಮಗ ಜೋರು ಮಾಡಿದ....
ಮತ್ತೆ ಮೌನ, ಏನಂತ್ ಹೇಳ್ಬೇಕು..
ವೋಟು ಹಾಕಿ ಎಲೆಕ್ಟ್ ಮಾಡಿದಿವಿ ಅಂತ ಹೇಳಲೇ,,,,!!?
ನೀನು, ವೋಟು ಹಾಕಿದಿಯ...? ಅಂತ ಕೇಳ್ದ್ರೆ...?
ಎಲ್ಲರು ಅವನಿಗೆ ಹಾಕಿದರ...? ಹೆಂಗೆ,,,?
ಏನು ಹೇಳಲಿ... ?
ಇ ಹೊಲಸು ರಾಜಕೀಯದ ಬಗ್ಗೆ, ಇ ವ್ಯವಸ್ತೆ ಬಗ್ಗೆ...!!!!
ಮತ್ತೆ ಮತ್ತೆ ಪ್ರಶ್ನೆ ಹಾಕಿದ್ರೆ....!?
ಹೌದು, ನಾನು ವೋಟು ಮಾಡಿದಿನ,,,?
ನನ್ನ ಹತ್ರ ವೋಟರ ಆಯ್ಡಿ ನೆ ಇಲ್ಲಾ... !!!
ಮುಂದೆ ಮಗ ದೊಡ್ದವನಾದ್ ಮೇಲೆ ಅನ್ನು ಏನೇನೋ ಪ್ರಶ್ನೆ ಕೇಳ್ತಾನೆ.. !
ನಿಮ್ ಕಾಲ್ದಿಂದನೆ, "ಭ್ರಷ್ಟಾಚಾರ ಶುರು ಆಗಿದ್ದು, ಎಲ್ಲಾ ನಿಮ್ಮಿಂದ.... ನಿಮ್ಮ ವಯಸ್ಸ್ನೋರು ಎಲ್ಲರ ತಪ್ಪು..."
ಅಯ್ಯೋ ದೇವರೆ , ಏನಿದು....!?
ಕ್ಷಣ ಹೊತ್ತು ಯೋಚನೆ ಮಾಡಿದೆ .... !!!
ಕೈ, ಬೆವರಲು ಶುರು ಆಗಿದೆ, ಯಾಕೆ,,,? ಗೊತ್ತಿಲ್ಲ...
ಮಗ, ದೊಡ್ಡವ್ನಾದ್ ಮೇಲೆ ಎಲ್ಲ ಅರ್ಥ ಮಾಡ್ಕೋಬಹುದು, ಇಲ್ಲ ಅಂದ್ರೆ...!?
ಛೆ ಛೆ, ಅವನು ಅರ್ಥ ಮಾಡ್ಕೋತಾನೆ ,
ಅವನೂ ಬುದ್ದಿವಂತ...!!!!!
ಮಗನಿಗೆ ಏನು ಹೇಳಬೇಕು ಅಂತ ಕೊನೆಗೂ ನನಗೆ ತಿಳಿಯಲಿಲ್ಲ...
ಅಷ್ಟರಲ್ಲಿ, ಇ ದೊಡ್ಡ ಮನುಷ್ಯ ತನ್ನ ಕೆಂಪು ಘುಟದ ಕಾರಿನಿಂದ ಎಲ್ಲರತ್ತ ಕೈ ಮಾಡುತ, ಭರ್ರ್ರ್ರ್ ನೆ ಹೋದ......
***
ಅವನು ಹೋಗಿದ್ದೆ ತಡ, ಎಲ್ಲಾ ದಿಕ್ಕಿನಲ್ಲಿದ್ದ ಗಾಡಿಗಳು ಒಮ್ಮೆಲೇ ಸ್ಟಾರ್ಟ್ ಆದವು,,,
ಆ ಜೋರಾದ ಇಂಜಿನ್ ಗಳ ಶಬ್ದದಲ್ಲಿ , ಮಗನ ಮಾತು ಕಳೆದು ಹೋಯಿತು,,,
ಸೈಲೆಂಸೆರ್ ಉಗುಳುತ್ತಿದ್ದ ಹೊಗೆಯಲ್ಲೀ, ಅವನ ಪ್ರಶ್ನೆಗಳು ಲೀನ ವಾದವು....!!!!
ನಾನು, ನಿರುತ್ತರ......!!!!!

Feb 1, 2010
"ಸರಣಿ ಕೊಲೆ"

ಮರವೆಲ್ಲ ಬೋಳಾಗಿ ಮತ್ತೆ ಎರಡನೆ ಬಾರಿ ಚಿಗುರಿತ್ತು, ಭೂಮಿಯ ಬಿಸಿ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು.
ಒಂದು ದಿನ ಅದೆಂತಹ ವಿಚಿತ್ರ, ಬೆಂಗಳೂರಿನ ಆ ರಿಂಗ್ ರೋಡಿನಲ್ಲಿ ಜನರ ಸದ್ದುಇಲ್ಲ, ಅಸಲಿಗೆ ಕಣ್ಣಿಗೆ ಕಾಣುವಷ್ಟು ದೂರದವರೆಗೆ ಎಡ-ಬಲಗಳಲ್ಲಿ ಒಂದೇಒಂದು ವೆಹಿಕಲ್ ಇಲ್ಲ ! ! !
ಅದೇ ರಸ್ತೆಯ ತಕ್ಕ ಮಟ್ಟಿನ ದೊಡ್ಡ ಮರದ ಕೆಳಗೆ ಭೇಟಿ ಮಾಡಬೇಕೆಂದು ಡಿಸಯ್ದ್ ಮಾಡಿದ್ರು ಅವರಿಬ್ಬರು ! ಒಂದು ವರ್ಷದ ಹಿಂದೆ!
ಅವನು ಬರ್ ಬರ್ರ ಅಂತ ಜೋರಾಗಿ ಬಂದ, ಯಾರು ಇಲ್ಲದ ರೋಡ್ ನೋಡಿ ಅವನ ಬೈಕಿನ ಸೌಂಡ್ ಗೆ ಆತಂಕವಾಯ್ತು. ಇವತ್ತು ಬೆಂಗಳೂರು ಬಂದ್ ಇರಬಹುದಾ? ಸೌಂಡ್ ತನ್ನ ಪಾಡಿಗೆ ತಾನು ಸುಮ್ಮನಾಯಿತು. ಇಲ್ಲ ಇಲ್ಲ ನಮ್ಮಿಬ್ಬರ ಭೇಟಿಗೆ ಇದು ಪೂರ್ವ ಸಿದ್ದತೆ ಇರಬಹುದು ಎಂದು ಒಳೊಳಗೆ ಕಳ್ಳ ನಗೆ ನಕ್ಕ.
ಬೈಕ್ ಇಳಿದು ಮರವನ್ನೊಮ್ಮೆ ಎದುರು ನಿಂತು ಪ್ರೀತಿಸಿದ, ಬೆನ್ನು ಅವಳ ಮನೆ ಕಡೆಗಿತ್ತು. ಸಂಜೆಯ ಸೂರ್ಯ ಮರವನ್ನ ಸೀಳಿಕೊಂಡು ಇವನ ಮುಖದ ಮೇಲೆ ಬೀಳುತ್ತಿದ್ದ. ಹಳೆಯ ಘಟನೆಗಳನ್ನ ನೆನೆಯುತ್ತಿದ್ದ, ನಗುತ್ತಿದ್ದ, ಯೋಚಿಸುತ್ತಿದ್ದ ಮತ್ತು ಅವಳಿಗಾಗಿ ಕಾಯುತ್ತಿದ್ದ . ಆ ಮರ ಅವನ ಪ್ರೇಮದ ಸಾಕ್ಷಿಯಾಗಿತ್ತು. ಮರದ ನೆರಳಿನಲ್ಲಿ ನಿಂತು ಅವಳ ನೋಡಲು ಶಬರಿಯಂತೆ ಕಾಯುತ್ತಿದ್ದ ವರ್ಷದ ಹಿಂದೆ. ಅದೇನಾಯಿತೋ ಏನೋ ಅವಳಿಗೆ ಇವನು ಇಷ್ಟ ಆಗಲಿಲ್ಲ, ತಿರಸ್ಕಾರಕ್ಕೆ ಕಾರಣವೂ ಇಲ್ಲ.
ಯೋಚನೆಯಲ್ಲಿರುವಾಗಲೇ ಹಕ್ಕಿಯೊಂದು ಬಂದು ಇವನಿಗೆ ಹತ್ತಿರವಿರುವ ರೆಂಬೆಯ ತುದಿಯಲ್ಲಿ ಕೂತಿತು. ತನ್ನವಳು ಬಂದಳೇ ಎಂದು ತಿರುಗಿ ನೋಡಿದ ಯಾರು ಇಲ್ಲ, ಆಸೆಗೆ ನಿರಾಸೆಯಾಯಿತು. ಮರದೆಡೆ ನೋಡಿ ಹಕ್ಕಿಯನ್ನೊಮ್ಮೆ ನೋಡಿದ.
ಪರ್ ಫ್ಯುಂ ಪರಿಮಳ ಮೆಲ್ಲಗೆ ಬರಲಾರಂಭಿಸಿತು ತಿರುಗಿ ನೋಡಿದ ಅವಳ ನಡಿಗೆ ರಸ್ತೆ ದಾಟಿ ಇವನತ್ತಲೇ ಬರುತ್ತಿತ್ತು, ಜಿಬ್ರ ಕ್ರಾಸ್ ದೂರದಲ್ಲಿ ಮಲಗಿತ್ತು.
ಹಕ್ಕಿ ಹಾರಿಹೋಯಿತು.
ಅವಳ ಕಂಡೊಡನೆ ಬೈಕು ನಿಂತುಕೊಂಡಲ್ಲಿಯೇ ನೂರು ಕಿಲೋ ಮೀಟರ್ ಸ್ಪೀಡಿನಲ್ಲಿ ತೇಲಾಡಿತು.
ಅವಳು ತಾನಾಗಿ ಬಂದಿಲ್ಲ, ಆ ದಿನಕ್ಕಾಗಿ ಪರಿತಪಿಸಿಯೂ ಇಲ್ಲ, ತಾವಿಬ್ಬರು ಯಾವ ಕಾರಣಕ್ಕಾಗಿ ಭೇಟಿಯಾಗಬೇಕೆಂದು ನೆನಪಿರಲಿಲ್ಲ, ಪ್ರೀತಿಗೆ ಷರತ್ತುಗಳನ್ನ ಹಾಕಿದ ಹುಡುಗಿಗೆ.
ಫೋನು ಮಾಡಿ ಎಲ್ಲವನ್ನ ನೆನಪು ಮಾಡಿಕೊಟ್ಟು ಬರಹೇಳಿದ್ದ, ಆ ದಿನಕ್ಕಾಗಿ ತಪಸ್ಸು ಮಾಡಿದ್ದ ಆಸೆಯ ಕಣ್ಣುಗಳ ಕನಸಿನ ಹುಡುಗ. ಇವನಲ್ಲಿ ಅನುಮಾನವಿತ್ತು, ಆತಂಕವಿತ್ತು ಹೆಚ್ಚಾಗಿ ತನ್ನ ಪ್ರೀತಿಯ ಬಗ್ಗೆ ನಂಬಿಕೆಯಿತ್ತು.
ಬಂದವಳೇ ಅದೆನಂದ್ಲೋ ಏನೋ ಯಾರಿಗೂ ತಿಳಿದಿಲ್ಲ, ಅಸಲಿಗೆ ಅಲ್ಲಿ ಯಾರು ಇರಲಿಲ್ಲ.
ಅವಳು ಬಂದಿದ್ದಳು ಎನ್ನುವ ಗುರುತು ಸಿಗದ ಹಾಗೆ ರೋಡ್ ಕ್ರಾಸ್ ಮಾಡಿ ಹೊರಟು ಹೋದಳು.
ಹಾರಿ ಹೋದ ಹಕ್ಕಿ ಮತ್ತೆ ಬಂದು ಕೂತಿತು, ಇವನು ಅದನ್ನ ನೋಡಲಿಲ್ಲ.
ಕಲ್ಪನೆಯಲ್ಲಿ ಬಂದಂತೆ ಬಂದು ಹೋದ ಅವಳು ಎದೆಗೆ ಸಾವಿರ ಬಾರಿ ಇರಿದು ಹೋಗಿದ್ದಳು.
ಸೂರ್ಯ ಪೂರ್ತಿಯಾಗಿ ಸರಿದಿರಲಿಲ್ಲ ಆದರೆ ಇವನು ಹಾಗೆಂದುಕೊಂಡ, ಬೈಕ್ ಸ್ಟಾರ್ಟ್ ಆಗ್ಲಿಲ್ಲ ಇನ್ನೊಮ್ಮೆ ಕಿಕ್ ಮಾಡಬೇಕು ಅಂತ ಅನ್ನಿಸದೆ ಇವನ ನೆರಳು ಬೈಕ್ ತಳ್ಳಿಕೊಂಡು ಸತ್ತಂತೆ ಚಲಿಸಿತು, ಹಕ್ಕಿಗೆ ಅಳುಬಂದಿತು.
ಅನುಮಾನ ಬಂದಂತೆ ಹಕ್ಕಿ ಅವನು ನಿಂತ ಜಾಗವನ್ನೊಮ್ಮೆ ನೋಡಿತು, ಹೌದು ಅಲ್ಲೇನೋ ಬಿದ್ದಿದೆ ಕರೆಯೋಣವೆಂದು ಇವನತ್ತ ನೋಡಿತು, ಯಾರು ಕಾಣಲಿಲ್ಲ.
ಆ ಇಡೀ ರಸ್ತೆಯ ಶಾಂತಿಯನ್ನು ಕೊಲೆಮಾಡುತ ದಡಗ್ ಬದಗ್ ಎನ್ನುತ ಒಂದೇ ಒಂದು ಪಾರ್ಟು ಸರಿಯಿಲ್ಲದ, ಆಯುಷ್ಯ ಮುಗಿದು ಹೋದ ಕಾರ್ಪೋರಶನ್ ಲಾರಿಯೊಂದು ಮರದ ಹತ್ತಿರ ಬಂದು ನಿಂತಿತು.
ಡ್ರೈವರ್ 'ಏ ಇಲ್ಲೇನೋ ಸತ್ತು ಬಿದ್ದಿದೆ ಯೆತ್ತಾಕ್ಕೊಲ್ರಲೇ' ಅಂದ
ಅನಾಥ ಶವವೊಂದು ಕಾರ್ಪೋರಶನ್ ಲಾರಿ ಸೇರಿತು.
ಅದೆಷ್ಟೋ ಸಿಗರೇಟಿನ ತುಂಡುಗಳು, ರಮ್ಮು, ವ್ಹಿಸ್ಕಿ, ಬೀರಿನ ಬಾಟಲಿಗಳು ಮಾತಾಡುತ್ತಿದ್ದವು ' ನಾವು ಇಷ್ಟು ದಿನ ಸೇರುತ್ತಿದ್ದದು ಕಡಲ ಪ್ರೀತಿಯ ಹುಡುಗನ ವಿರಹದೆದೆಯಲ್ಲಿ'
ಕುತೂಹಲದಿಂದ ನೋಡುತ್ತಿದ್ದ ಹಕ್ಕಿಗೆ ಆ ಮಾತು ಕೇಳಿತು ಅದಕ್ಕೆ ಮನವರಿಕೆಯಾಯಿತು, ಅವಳ ಮಾತಿನಿಂದ ಇವನ ಮನಸ್ಸು ಕೊಲೆಯಾಗಿತ್ತು.
ಹಕ್ಕಿ ಬಿಕ್ಕಳಿಸಲಾರಂಭಿಸಿತ್ತು. ಕಾರ್ಪೋರಶನ್ನಿನ ಲಾರಿ ಕೊನೆಯ ಪಯಣಕೆ ಸಾಗಿತು ! !
ಹಕ್ಕಿ ಇನ್ನೂ ಅಳುತ್ತಿತ್ತು ಹಾರಿ ಹೋಗಲಿಲ್ಲ.
ಸ್ವಲ್ಪ ಹೊತ್ತಿನಲ್ಲಿ ಹುಡುಗ- ಹುಡುಗಿಯರಿಂದ ತುಂಬಿದ ಕಾಲೇಜು ಬಸ್ಸೊಂದು ಬರ್ರನೆ ಮರದ ಮುಂದೆ ತೂರಿ ಹೋಯಿತು.
ಹಕ್ಕಿಯ ಎದೆಯೊಡೆದು ಪ್ರಾಣಪಕ್ಷಿ ಹಾರಿ ಹೋಯಿತು. ಇವನ ಮನಸು ಬಿದ್ದಿದ್ದ ಜಾಗದಲ್ಲಿ ಹಕ್ಕಿ ಉರುಳಿ ಬಿತ್ತು.
ಬಸ್ಸಿನಲ್ಲಿ ಅದೆಷ್ಟು ಕೊಲೆಯಾದ ಮನಸುಗಳನ್ನ ನೋಡಿತೋ ಪಾಪ.
ಮರುದಿನ ಹತ್ತು ಗಂಟೆಗೆ ಎರೆಡು ನಿಮಿಷ ಹತ್ತು ಸೆಕೆಂಡು ಬಾಕಿ ಇತ್ತು, ಬೀದಿ ದೀಪ ಇನ್ನೂ ಉರಿಯುತ್ತಿತ್ತು !
ಒಂದು ಹುಡುಗ ಅದೇ ಮರಕ್ಕೆ ವರಗಿ ನಿಲ್ಲಲು ಹತ್ತಿರ ಹೋದ
ವೆಹಿಕಲ್ಲುಗಳ ಹೋಗೆಯಿಂದ, ವಿರಹಿಗಳ ಬಿಸಿಯುಸಿರಿನಿಂದ ಏರುವ ಭೂಮಿಯ ಬಿಸಿಯಿಂದ ಮರವೆಲ್ಲ ಕಪ್ಪಾಗಿತ್ತು.
ಆ ಹುಡುಗ ವರಗಿಕೊಳ್ಳದೆ ಅದರ ನೆರಳಲ್ಲಿ ಮರಕ್ಕೆ ಬೆನ್ನು ತೋರಿಸಿ ನಿಂತುಕೊಂಡ, ಬಾಯಿ ತೆರೆದ ಮ್ಯಾನ್ ಹೋಲ್ ನ ವಾಸನೆ ಸಹಿಸಿಕೊಂಡು. ಕಣ್ಣುಗಳಲ್ಲಿ ಸಾವಿರ ಕನಸುಗಳಿದ್ದವು, ತುಟಿಯ ಮೇಲೆ ಆಸೆ ಮಿತಿಯಿಲ್ಲದೆ ಹರಿದಾಡುತ್ತಿತ್ತು.
ಹೊಸ ಹಕ್ಕಿ ಬಂದು ಮರದಲಿ ಕೂತಿತು.
ಮರ ಮತ್ತೊಂದು ಪ್ರೇಮಕಥೆಗೆ, ಅಮಾಯಕ ಮನಸಿನ ಕೊಲೆಗೆ ಪ್ರತ್ಯಕ್ಷ ಸಾಕ್ಷಿಯಾಗಲು ತಯಾರಾಗಿತ್ತು.
=====
=====
Jan 31, 2010
"ಕವಿ ಶ್ರೇಷ್ಠನಿಗೆ ಶುಭಾಷಯ"

ಇಂದು ೩೧ ಜನವರಿ 'ವರಕವಿ ಅಂಬಿಕಾತನಯದತ್ತ' (ದತ್ತಾತ್ರೇಯ ರಾಮಚಂದ್ರ ಬೇಂದ್ರೆ) ಅವರ ಜನ್ಮದಿನ (ಜನನ: ೩೧-೦೧-೧೮೯೬, ಧಾರವಾಡ. ಮರಣ: ೨೬-೧೦- ೧೯೮೧,ಮುಂಬೈ)
ಆ ಮಹಾಚೇತನ ಹಳ್ಳಿ ಸೊಗಡಿನ ಕನ್ನಡ ಭಾಷೆಗೊಂದು ಚೆಂದದ ಹೊಸ ಆಯಾಮ ನೀಡಿ ತಮ್ಮೆಲ್ಲ ಕವನಗಳಲ್ಲಿ ತೀವ್ರವಾಗಿ ಬಳಸಿಕೊಂಡರು.
ಕವಿ ಶ್ರೇಷ್ಠ ಬೇಂದ್ರೆಯವರಿಗೆ ಸಾಹಿತ್ಯ ರಸಿಕರೆಲ್ಲರ ಪರವಾಗಿ ತುಂಬು ಹೃದಯದ ಶುಭಾಷಯಗಳು.
'ಅಂಬಿಕಾತನಯನಿಗೆ ಕರೆಯೋಲೆ'
ಕನ್ನಡ ತಾಯಿ ಹರಕೆ ಹೊತ್ತು ಹಡೆದ ಮಗ ನೀನು
ಪಾಠ ಹೇಳಿಕೊಟ್ಟು, ಕವನ ಬರೆದುಕೊಟ್ಟು,
ಹಕ್ಕಿ ಪಿಕ್ಕಿ ಗಿಡ ಮರ ಮಂಜು ಮುಸುಕು
ಚಿಟ್ಟೆ ನದಿ ಹಳ್ಳ ಕೊಳ್ಳ ದೇವರು ದಿಂಡರು
ಹಬ್ಬ ಹರಿದಿನಗಳಿಗೊಂದು ಬದುಕು ಕಟ್ಟಿಕೊಡುತ್ತಾ
ಮುಗಿಲನೇರಿ ಹೊರಟು ಹೋದೆಯಲ್ಲ ಸೂರ್ಯ ಚಂದ್ರ ಚುಕ್ಕಿಗಳ
ಮುಟ್ಟಲು, ಸ್ವರ್ಗದಲೊಂದು ಕಾವ್ಯ ಲೋಕ ಕಟ್ಟಲು.
'ಕೃಷ್ಣ ಕುಮಾರಿ'ಯನ್ನ 'ಉಯ್ಯಾಲೆ'ಯಲ್ಲಿ ಕೂರಿಸಿ
ಸುಖವಾದ 'ಸಖಿಗೀತ'ವನ್ನು ಹಾಡಿದೆ
ನಿನ್ನ 'ಹಾಡು-ಪಾಡು'ಗಳಿಗೆ ಅವಳ 'ಹೃದಯ ಸಮುದ್ರ'ದಲ್ಲಿ
'ಕಾಮಕಸ್ತೂರಿ' , 'ಮುಗಿಲ ಮಲ್ಲಿಗೆ' ಅರಳುವಂತೆ ಮಾಡಿದೆ.
'ಕನ್ನಡ ಮೇಘದೂತ'ನ 'ಗರಿ'ಯಿಂದ 'ನಾಕುತಂತಿ'ಯ ಮೀಟಿದೆ
ಇಂದಿಗೂ 'ನಾದಲೀಲೆ' 'ಜೀವಲಹರಿ'ಯಾಗಿ 'ಮುಕ್ತಕಂಠ'ದಿಂದ ಹೊರಹೊಮ್ಮುತಿದೆ.
'ಮತ್ತೆ ಶ್ರಾವಣ ಬಂತು' ಅನ್ನುವ ಹಾಗೆ ಮತ್ತೆ ಬಾ.
ಕವಿ ಸಾಮ್ರಾಟನೆ ನಿನಗೆ ಸಾವಿರ ಸಾವಿರ 'ನಮನ'.
ಮತ್ತೆ ಬಾ ಸಾಧನಕೇರಿಗೆ, ನೀನಿಲ್ಲದೆ ಸೊರಗಿಹೊಗುತಿರುವ ಈ ಮಣ್ಣಿಗೆ.
=====
=====
Jan 30, 2010
"ಶಿಫಾರಸು"
ಪ್ರೀತಿ ತರಗತಿಯಲ್ಲಿ
ತರಬೇತಿ ಪಡೆದು ಬಂದಿರುವೆ !
ಸಂದರ್ಶನದಲ್ಲಿ ಪರಿಗಣಿಸದೆ
ಪರಿತಪಿಸುವಂತೆ ಮಾಡಿದೆ ! !
ಪ್ರೆಮದನುಭವ ಇಲ್ಲವೆನ್ನುವ
ಎದೆಯ ಶಿಫಾರಸು ಕೇಳದೆ ! ! ! ?
=====
=====
"ಶಾಶ್ವತ"
ವಿರಹದಸ್ಥಿಪಂಜರಕೆ,
ಚೆಂದದ ಹೊದಿಕೆ ಪ್ರೇಮ.
ಮೋಹದ ಪ್ರೇಮ ಅನಿಶ್ಚಿತ.
ಆರಲಾರದ ಚಿತೆ,
ಎದೆಯೊಳಗಿನ ವಿರಹ
ಅದು ಶಾಶ್ವತ !
=====
=====
"ಮಧುಪಾನ"
ಉಸಿರು ನಿಲ್ಲಿಸೋ,
ಮಧುಪಾನಕೆ ದಾಸನಾಗಿರುವೆ.
ಅವಳ ಮರೆಯಲೆಂದು
ನಾ ಬದುಕಿರುವೆ.
ವಿಧಿಯಾಟವೇನೋ ಗೊತ್ತಿಲ್ಲ,
ಕುಡಿಯುವ ಪ್ರತಿ ಹನಿಯಲ್ಲೂ
ಕಾಣುವಳು ನನ್ನ ಚೆಲುವೆ.
=====
=====
"ತಪಸ್ಸು"
ಒಲವು,
ವಯಸ್ಸಿನ ಮೇಲೆ ಆಪಾದನೆ
ಹೊರಿಸುವ
ಪರಿತಪಿಸುವ ಮನಸಿನ
ತಪಸ್ಸು.
(ವಿಜಯಕರ್ನಾಟಕದಲ್ಲಿ ಪ್ರಕಟಗೊಂಡಿದೆ)
=====
=====
Jan 29, 2010
"ಸುಖ:-ದುಖ:ದ ರೂಪ"
ಬೇಕೆಂದಾಗ ಬರದ, ಹೀಗೆ ಬಂದು ಹಾಗೇ ಹೋಗುವ
ಸ್ಥುರದ್ರುಪಿ ಸುಖ:ವೇ, ನಿನ್ನ ಮನವೆಷ್ಟು ಕುರೂಪ..
ಕತ್ತಲಲ್ಲಿ ನೆರಳು ಬಿಟ್ಟರು, ಗೆಳತಿಯ ನೆನಪಿನಂತೆ ಕಾಡುವ
ಕುರೂಪಿ ದುಖ:ವೇ, ನಿನ್ನ ಮನವೆಷ್ಟು ಸ್ಥುರದ್ರುಪ..
ಸುಖ:-ದುಖ: ದ ಸಮಾಗಮ, ಅದೆಷ್ಟು ಅಪರೂಪ..!
Jan 28, 2010
"ಸೆಂಟು-ಮಿಂಟು "
ಅವಳಿದ್ದಾಗ, ಅದೇನು ಕಲರ್ ಕಲರ್ ಶರ್ಟು
ಘಮ್ಮೆನ್ನುವ ಸೆಂಟು...
ಅವಳು ಹೋದಮೇಲೆ, ಒಂದರ ಮೇಲೊಂದು ಸಿಗರೇಟು
ಜ್ಹುಮ್ಮೆನ್ನುವ ಮಿಂಟು...
ಆಹ್ಹಾ ,,,,,
ಹೇಳಲಾಗದ 'ಸೆಂಟಿಮೆಂಟು'
Jan 26, 2010
"ಬರಹಗಾರ-ಮೀನುಗಾರ"
ಸುಂದರ ಪ್ರೇಮ ಪತ್ರಿಕೆಗೆ,
ಹೃದಯವೀಗ ಪ್ರೀತಿ ಅಂಕಣದ ಬರಹಗಾರ.
ಚೆಂದಗೆ ಮಾತಾಡುವ ಮುದ್ದು ವರದಿಗಾರ.
ಪ್ರೇಮ ಮಹಾಸಾಗರದಲಿ,
ಹೃದವೀಗ ಆಸೆ, ಭಾಷೆಗಳೆಂಬ
ಪುಟ್ಟ ಪುಟ್ಟ ಮೀನುಗಳನ್ನ ಉಸಿರಿಗಿಂತ ಹೆಚ್ಚು ಪ್ರೀತಿಸಿ
ಬದುಕು ಕಟ್ಟಿಕೊಡುವ ಮೀನುಗಾರ.
=====
=====
" ವರ್ಣನೆ "
ಸಿಹಿ ಹೂರಣದಾಗ ಹೆಜ್ಜೇನು ಬೆರತಾಂಗ
ನವಿಲಿನ ನಾಟ್ಯಕ ಕೋಗಿಲೆ ಗಾನ ಜೋತೆಯಾದಂಗ
ಕತ್ತಲ ರಾತ್ರಿಗೆ ಬೆಳಕು ಚೆಲ್ಲಿದಾಂಗ
ಕಲ್ಪನೆಯಲ್ಲವಿದು, ನನ್ನಾಕಿಯ ಮನಸಯ್ತಿ ಹೀಂಗಾ !
=====
=====
ನವಿಲಿನ ನಾಟ್ಯಕ ಕೋಗಿಲೆ ಗಾನ ಜೋತೆಯಾದಂಗ
ಕತ್ತಲ ರಾತ್ರಿಗೆ ಬೆಳಕು ಚೆಲ್ಲಿದಾಂಗ
ಕಲ್ಪನೆಯಲ್ಲವಿದು, ನನ್ನಾಕಿಯ ಮನಸಯ್ತಿ ಹೀಂಗಾ !
=====
=====
Jan 25, 2010
"ಹೀಗೊಂದು ಪ್ರಸವ ಪ್ರಸಂಗ"
'ಸೂಚನೆ: ಇದು ಸತ್ಯ ಘಟನೆ ಜೊತೆಗೆ ಸ್ವಲ್ಪ ಕಲ್ಪನೆ'
ಅದೊಂದು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಹೆರಿಗೆ ವಾರ್ಡಿನಲ್ಲಿ ಹೊಸ ಜೀವವೊಂದು ತನ್ನ ಬಂದಿರುವಿಕೆಯನ್ನ ಪೂರ್ತಿ
ವಾರ್ಡಿಗೆ ಕೇಳಿಸಿತ್ತು ಫಸ್ಟ್ ಟೈಮ್ ಜೋರಾಗಿ ಅಳುತ್ತಾ. ಆ ಅಳು ಡಾಕ್ಟರ್ ತನ್ನ ಬೆನ್ನ ಮೇಲೆ ಹೊಡೆದದ್ದಕ್ಕೋ ಅಥವಾ ತಾನು
ಹುಟ್ಟಿದ್ದಕ್ಕೋ ಎನ್ನುವ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.
ಮಗುವಿನ ಚೀರಾಟವನ್ನ, ಡಾಕ್ಟರ್ ತನ್ನ ಯಶಸ್ಸಿಗೆ ಸಲ್ಲುವ ಪ್ರಶಂಸೆ ಎಂದುಕೊಂಡು ಗೆಲುವಿನ ನಗೆ ನಕ್ಕ.
ಹೆಲ್ಪ್ ಮಾಡಿದ ನರ್ಸು ಒಂದಿಷ್ಟು ದುಡ್ಡು ತಂದು ಕೊಡುವ ಲಾಟರಿ ಎಂದುಕೊಂಡು ಒಳಒಳಗೆ ಆಸೆ ಪಟ್ಟಳು.
ಸುತ್ತಲು ನಿಂತಿದ್ದ ಮೆಡಿಕಲ್ ವಿದ್ಯಾರ್ಥಿಗಳೆಲ್ಲ ತಮ್ಮ ಕುತೂಹಲ ಮತ್ತು ಪ್ರಶ್ನೆಗಳಿಗೆ ಉತ್ತರವನ್ನ ಆ ಅಳುವಿನಲ್ಲಿ ಕಂಡುಕೊಡಿದ್ದರು.
("ಮಗುವಿನ ನಗು ಜಗತ್ತಿನ ಎಲ್ಲ ಸೌಂದರ್ಯವನ್ನ ತೋರಿಸುವುದರ ಜೊತೆಗೆ ತನ್ನ ಪ್ರಥಮ ಅಳುವಿನಲ್ಲೂ ಅದೆಷ್ಟೋ ಜನಕ್ಕೆ ಭರವಸೆಯನ್ನು ನೀಡುವುದೇ ನಿಷ್ಕಲ್ಮಶತೆಯ ಪ್ರತಿರೂಪ" )
ಮಗುವಿನ ತಾಯಿಗೆ ಅದು ಮೂರನೇ ಹೆರಿಗೆ ಅದೇ ಕಾರಣಕ್ಕೋ ಏನೋ ಆಕೆ ಹೆರಿಗೆ ಸಮಯದಲ್ಲಿ
ಅಷ್ಟೊಂದು ಕಷ್ಟಪಟ್ಟಂತೆ ಕಾಣಲಿಲ್ಲ ಆದರೂ ಆಕೆಯ ಮುಖದಲ್ಲಿ ಸಂತೋಷವಿರಲಿಲ್ಲ ! !
ಭಯಮಿಶ್ರಿತ ನಗುವಿತ್ತು ! ! !
ವಾರ್ಡಿನಲ್ಲಿದ್ದ ಗರ್ಭಿಣಿಯರು ಅವರ ಜೋತೆಗಿದ್ದವರು ಮಗವಿನ ಬಗ್ಗೆ ಕುತೂಹಲ ಹೊಂದಿದ್ದರೂ ಸ್ವತಃ ತಾಯಿಗೆ ಹೆದರಿಕೆಯಿತ್ತು.
ಡಾಕ್ಟರ್ ತಾಯಿಯ ಮುಖ ನೋಡಿ, ಮಗು ಆರೋಗ್ಯವಾಗಿದೆ ಏನು ಹೆದರಬೇಕಾಗಿಲ್ಲ ತುಂಬಾ ಮುದ್ದಾದ "ಹೆಣ್ಣು ಮಗು" ಎಂದು ಪ್ರೀತಿಯಿಂದ ಹೇಳಿದ. ನರ್ಸು ಅದನ್ನೇ ಹೇಳಿದಳು.
ಡಾಕ್ಟರ್ ತಾಯಿಗೆ ಟೆಕ್ ಕೇರ್ ಎಂದು ಹೇಳಿ ಹೊರಟ, ನರ್ಸಗೆ ಚೆನ್ನಾಗಿ ನೋಡಿಕೋ ಎನ್ನುವ ಸನ್ನೆ ಮಾಡುತ.
ತಾಯಿಯ ನೋವಿನ ಕಣ್ಣೀರು ಕಣ್ಣಂಚಿನಿಂದ ಸರಿದು ಕಿವಿಯೊಳಗೆ ಬಿದ್ದದು ಯಾರಿಗೂ ಕಾಣಲಿಲ್ಲ.
ಹೌದು, ಡಾಕ್ಟರ್ ಆಕೆಯ ಭಯವನ್ನ ನಿಜವಾಗಿಸಿದ್ದ ಅದು ತನಗೆ ಹುಟ್ಟಿದ ಮೂರನೇ ಹೆಣ್ಣುಮಗು.
ಯಾವುದು ಬೇಡವಾಗಿತ್ತೋ ಅದೇ ನೆರಳಿನಂತಾಗಿತ್ತು. ಗಂಡ ಈ ಸಲ ಗಂಡುಮಗು ಆಗಲೇಬೇಕೆನ್ನುವ ಕಂಡಿಶನ್ ಹಾಕಿದ್ದ.
(ಗಂಡು ಅಥವ ಹೆಣ್ಣು ಹುಟ್ಟುವುವಿಕೆಗೆ ತನ್ನದು ಸಮಪಾಲು ಇದೆಯೆನ್ನುವುದನ್ನ ಮರೆತಿದ್ದ ಪದವಿಧರ.)
ಮಗುವಿನ ತಂದೆಯೆನಿಸಿಕೊಂಡಿದ್ದವನು ಫೋನಿನಲ್ಲಿ ಸುದ್ದಿ ತಿಳಿದ ನಾಲ್ಕನೇ ದಿನಕ್ಕೆ ಬಂದ.
ಸ್ವೀಟು ತರದೆ ನಗುವು ಮರೆತವನಂತೆ ಬಂದಿದ್ದ. ಬಂದವನು ಮಾವ ಅತ್ತೆಯನ್ನು ಮಾತಾಡಿಸಲಿಲ್ಲ
ಅವರು ಮೇಲೆಬಿದ್ದು ಮಾತಾಡಿಸಲಿಲ್ಲ, ತನ್ನ ಹೆಂಡತಿಯ ಜೊತೆಗೆ ಒಂದೆರಡು ಪ್ರೀತಿಯ ಮಾತು
ಉಹುಂ ಅದು ಇಲ್ಲ. ಮಗುವಿನ ಮರೆಯದ ನೋಟವನ್ನ ತನ್ನ ಕಣ್ಣಲ್ಲಿ ಹಚ್ಚೆ ಹಾಕಿಕೊಳ್ಳಲಿಲ್ಲ !
ಅತ್ತ-ಇತ್ತ ಎರಡು ಸಲ ನೋಡಿ, ಕೋಪಗೊಂಡು ನೇರವಾಗಿ ಡಾಕ್ಟರ್ ಚಂಬರ್ರಿನತ್ತ ನಡೆದ ಅಲ್ಲಿ
ಡಾಕ್ಟರ್ ಜೊತೆ ಕೆಲವು ವಿದ್ಯಾರ್ಥಿಗಳು ಮತ್ತು ಹೆರಿಗೆಗೆ ಹೆಲ್ಪ್ ಮಾಡಿದ ನರ್ಸು ಹೊರಗಡೆ ನಿಂತು ಮಾತಾಡುತಿದ್ದರು.
ಮಗುವಿನ ತಂದೆ ಬಂದವನೇ ಹೆರಿಗೆ ಮಾಡಿಸಿದ ಡಾಕ್ಟರ್ ಗೆ
" ಏನ್ ಸರ್ ನಿಮ್ಮ ಆಸ್ಪತ್ರೆ ಯಲ್ಲಿ ನನಗೆ ಬರೀ ಹೆಣ್ಣುಮಗುನೆ ಹುಟ್ತಾವಲ್ಲ ಸರ್" ಅಂದ.
ನರ್ಸಗೆ ತನ್ನ ಲಾಟರಿ ನಂಬರ್ರಿಗೆ ದುಡ್ಡು ಬರಲ್ಲ ಅನ್ನೋದು ಖಾತ್ರಿಯಾಯಿತು.
ಪಕ್ಕದಲ್ಲಿ ಹೋಗುತಿದ್ದ ಇನ್ನೊಬ್ಬ ಈ ಡಾಕ್ಟರ್ ನತ್ತ ಅನುಮಾನದ ನೋಟ ಹರಿಸಿ ಮುಂದೆ ಹೋದ.
ಆದ್ರೆ ಈ ಮನುಷ್ಯ ಸುಮ್ಮನಿರಬೇಕಲ್ಲ
" ಅಲ್ಲ ಸರ್ ಹಿಂದೆ ಎರಡು ಸಲ ಇದೆ ಆಸ್ಪತ್ರೆಗೆ ಅಡ್ಮಿಟ್ ಮಾಡ್ಸಿದ್ರ ಅವಗ್ಲು ಹೆಣ್ಣ ಇದ ಮೂರನೆ ಸಲ ಈಗ ಹೆಣ್ಣ ! ! ಹ್ಯಾಗೆ ಸರ್ ಹೀಗಾದ್ರೆ "
ಈಗ ಜೊತೆಗೆ ನಿಂತಿದ್ದ ಹುಡುಗರ ಸರದಿ ಡಾಕ್ಟರ್ ಮೇಲೆ ಹೊಸ ಜೋಕ್ ಮಾಡೋಕೆ.
ಅವ್ರು ಒಳ್ಳೆ ಕಾನ್ಸೆಪ್ಟ್ ಸಿಕ್ತು ಅಂತ ಖುಷಿ ಪಟ್ರು. ಆದ್ರೆ ಡಾಕ್ಟರ್ ಸಂಕಟ ಡಾಕ್ಟರ್ ಗಾಗಿತ್ತು.
ಇವನು ಮತ್ತೆ ಮುಂದುವರೆಸಿ " ನೋಡಿ ಸರ್ ನೀವು ಏನಾದ್ರು ಮಾಡ್ಕೊಳ್ಳಿ ನನಗೆ ನಿಮ್ಮ ಫೀಸ್
ಪೂರ್ತಿ ಕಟ್ಟೋ ಶಕ್ತಿಯಿಲ್ಲ ಮತ್ತ ಈ ಸಲ ನಾನು ನರ್ಸಗೆ ಭಕ್ಷಿಸು ಅಂತ ದುಡ್ಡು ಕೊಡಲ್ಲ. "
ಕೊನೆಯ ಮಾತು ಕೇಳುತ್ತಿದ್ದಂತೆ ತನ್ನ ಬುಡಕ್ಕೆ ನೀರು ಬಂದದ್ದು ತಿಳಿದ ನರ್ಸು,
ಡಾಕ್ಟರ್ ಗುರಾಯಿಸುವ ಮುಂಚೆ ಮೆಲ್ಲಗೆ ಜಾರಿಕೊಂಡಳು.
ಮಗುವಿನ ತಂದೆಯ ಮಾತು ಮತ್ತು ಕಿರಿಚಾಟ ಕೇಳಿದವರು ಬುದ್ದಿವಾದಹೆಳುವ ನೆಪದಲ್ಲಿ ಮೆಲ್ಲಗೆ
ಸುತ್ತಲು ಬುದ್ದಿಜೀವಿಗಳು ಜಮಾಯಿಸತೊಡಗಿದರು, ಮಾತಿನ ಚಕಮಕಿಯ ಮಜಾ ತೆಗೆದುಕೊಲ್ಳಲು.
ಪರಿಸ್ಥಿತಿ ಅರಿತ ಡಾಕ್ಟರ್ ಮಗುವಿನ ತಂದೆಯನ್ನ ತಮ್ಮ ಚಂಬರ್ರಿನೊಳಗೆ ಕರೆದೊಯ್ದರು.
(ಬಹುಶಃ ಇನ್ನು ಸ್ವಲ್ಪ ಜನ ಸೇರಿದರೆ ಡಾಕ್ಟರ್ ನಿರ್ಲಕ್ಷದಿಂದ ಹೆಣ್ಣು ಮಗು ಜನನ ಎಂದು ಚಳುವಳಿ ಶುರುವಾಗುವುದೆನ್ನುವ ಭಯದಿಂದ)
ತಮ್ಮ ಸೀಟ್ ಎನ್ನುವ ಸೈಟಿನಲ್ಲಿ ಕುಳಿತು ಡಾಕ್ಟರ್, ತಣ್ಣನೆಯ ನೀರು ಕುಡಿದು ಸ್ವಲ್ಪ ತಣ್ಣಗಾಗಿ ಹೇಳಿದರು
" ಅಲ್ಲಯ್ಯ ನಿನಗೆನಾದ್ರು ತಲೆ ಕೆಟ್ಟಿದಿಯಾ? ನಿನಗೆ ಹೆಣ್ಣು ಮಗು ಹುಟ್ಟೋದಕ್ಕೂ ಈ ಆಸ್ಪತ್ರೆಗೂ
ಏನಯ್ಯ ಸಂಭಂದ. ನಿನ್ನ ಹೆಂಡ್ತಿ ಹೆರಿಗೆಗೆ ಬಂದಿದ್ಲು ಹೆರಿಗೆ ಸರಳವಾಗಿ ಆಗಿದೆ.
ಸಂತೋಷ ಪಡಬೇಕು, ನೀನ್ ನೋಡಿದ್ರೆ ಹಿಂಗಾಡ್ತಿಯಾ"
ಅಂತ ಸಮಾಧಾನವಾಗಿ ನಿಧಾನವಾಗಿ ತಿಳಿಸಿಹೇಳುತ್ತಿರುವಾಗ....
"ಅಲ್ಲ ಸರ್ ಮೂರನೆ ಸಲಾನೂ ಹೆಣ್ಣು ಸರ್ ......" ಇವನು ಮತ್ತೆ ಶುರುವಿಟ್ಟುಕೊಂಡ
ಕೇಳಿ ಕೇಳಿ ಸಾಕಾಗಿಹೊಗಿದ್ದ ಜೊತೆಗೆ ತಮ್ಮ ಫೀಸ್ ಬಗ್ಗೆ ಅನುಮಾನಹೊಂದಿದ್ದ ಡಾಕ್ಟರ್ ತಾಳ್ಮೆ ಕಟ್ಟೆ
ಬಿರುಕು ಬಿಡುತ್ತಿತ್ತು ಹಾಗಿದ್ದರೂ " ನೋಡಪ್ಪ ನಿನ್ನ ಹೆಂಡ್ತಿ ಪ್ರಜ್ಞೆಂಟ್ ಆದ್ಮೇಲೆ ಇಲ್ಲಿಗೆ ಬಂದದ್ದು,
ನೀನು ನಿನ್ನ ಹೆಂಡ್ತಿನೇ ಕಾರಣ ಹೆಣ್ಣು ಹುಟ್ಟೋದಕ್ಕೆ ಅಷ್ಟೆ. ಫೀಸ್ ನ ಕೌಂಟರ್ ನಲ್ಲಿ ಕಟ್ಟಿ ನಿನ್ನ
ಹೆಂಡ್ತಿನ, ಮಗುನ ಕರಕೊಂಡು ನೀನಿನ್ನೂ ಹೋಗಬಹುದು" ಅಂತ ಹೇಳಿದರು.
"ಅದೆಲ್ಲಾ, ಫೀಸ್ ಗೀಸ್ ಕಟ್ಟಕಗಾಲ್ಲ ಸರ್ ಮುಂದಿನ ಡೆಲವರಿಗೆ ಈ ಆಸ್ಪತ್ರೆಗೆ ಬರಲ್ಲ ನನ್ನ ಹೆಂಡ್ತಿ "
ಮಗುವಿನ ತಂದೆ ಜೋರಾಗಿ ವದರಿದ.
ಡಾಕ್ಟರ್ ಮತ್ತೆ ಬಿಸಿಯಾಗಿ " ನಿನ್ನ ಹೆಂಡ್ತಿ, ಮಗುನಾ . . . ." ಡಾಕ್ಟರ್ ಇನ್ನು ಮುಗಿಸಿರಲಿಲ್ಲ
"ಅಷ್ಟೆಲ್ಲಾ ಫೀಸ್ ಕಟ್ಟಕಾಗಲ್ಲ ಸರ್ ಹುಟ್ಟಿರೋದೆನ್ ಗಂಡು ಮಗುನಾ?, ಮೂರನೆ ಹೆಣ್ಣು "
ಮೂರು ಹೆಣ್ಣು ಮಕ್ಕಳ ತಂದೆಯಾದ ಮೂರು ಬಿಟ್ಟವನು ಗುನುಗಿದ.
ಡಾಕ್ಟರ್ ಬಂದಿರುವ ಕೋಪವನ್ನ ತಡೆದುಕೊಂಡರು ಆದ್ರೆ ಆಗಲಿಲ್ಲ ಕೊನೆಗೆ
"ಆ ಮೂರು ಹೆಣ್ಣುಮಕ್ಕಳನ್ನ ಕೆತ್ತನೆ ಮಾಡಿರೋದು ನೀನು ಕಣಯ್ಯಾ, ನಾನಲ್ಲ ! ! ! !"
ಅಂತ ಅಂದುಬಿಟ್ಟರು ! !
ಅಲ್ಲಿ ಮಗುವಿನ ತಂದೆ ಡಾಕ್ಟರ್ ಜೊತೆ ಜಗಳವಾಡಿ ಹೊರಬಂದ, ನರ್ಸು ಹಿಡಿ ಶಾಪ ಹಾಕುತ ಅವನ ಮೆಂದೆ ನಡೆದು ಹೋದಳು.
ಡಾಕ್ಟರ್ ಎಸಿಯ ಗಾಳಿ ಜೋರಾಗಲೆಂದು ರೆಗುಲೇಟರ್ ತಿರುವಿದ. ಸುದ್ದಿ ತಿಳಿದ ಉಳಿದ ಡಾಕ್ಟರ್ ಗಳು ವ್ಯಂಗ್ಯವಾಗಿ
ಮಾತಾಡಿದರು (ಮಗುವಿನ ತಂದೆ ಬಗ್ಗೆ). ವಿದ್ಯಾರ್ಥಿಗಳು ಸಿಗರೇಟನ್ನ ಹಚ್ಚುವುದರ ಜೊತೆ ನಡೆದ ಘಟನೆಗೆ ಉಪ್ಪು ಖಾರ ಹಚ್ಚಿ
ಜೋಕ್ ಮಾಡಲಾರಂಭಿಸಿದರು.
ಆದರೆ,
ಇಲ್ಲಿ ಮಗುವಿನ ತಾಯಿಯ ಕಣ್ಣಂಚಲ್ಲಿ ಇನ್ನು ನೀರಿತ್ತು ! ! ! ತಾನು ಕೂಡ ಹೆಣ್ಣಾಗಿ ಹುಟ್ಟಿದಾಗ ತನ್ನ ತಾಯಿ ಕೂಡ ಹೀಗೆಅತ್ತಿರಬಹುದಾ?
ಎನ್ನುವ ಪ್ರಶ್ನೆಯೊಂದಿಗೆ ತನ್ನ ತಾಯಿಯ ಕಡೆ ನೋಡಿದಳು.
ಮಗುವಿನ ಅಜ್ಜಿ ಬಾಣಂತಿಯತ್ತ ಖುಷಿಯಲ್ಲಿ ಬೆರೆತ ಸಂಕಟದ ಕಿರು ನಗೆ ನಕ್ಕಳು, ಅಜ್ಜಿಗೆ ತೊಟ್ಟಿಲಲ್ಲಿದ್ದ ಮೊಮ್ಮಗು ಕಾಣಲಿಲ್ಲ.
ಬಾಣಂತಿಯ ಪ್ರಶ್ನೆಗೆ ಉತ್ತರ ಸಿಗಲಿಲ್ಲ ?
ತಾಯಿಯ ಪಕ್ಕದಲ್ಲಿದ್ದರೂ ಮಗು ಎರಡನೇ ಬಾರಿ ಜೋರಾಗಿ ಅಳತೊಡಗಿತು. ಬಹುಶಃ ಈ ಸಲ ಮಗುವಿನ ಅಳು ತಾನು ಹುಟ್ಟಿದ ತಪ್ಪಿಗಾಗಿ.
ಆ ಹಸಿ ಕಂದನ ದನಿಯಲ್ಲಿರುವ ಗಂಭೀರ ಸಮಸ್ಯೆ ಅದೇಷ್ಟು ಕಂದನಿಲ್ಲದ ಕರುಳಿಗೆ ಕೇಳಿತೋ ಏನೋ ? ತಿಳಿಯಲೇ ಇಲ್ಲ.
=======
=======
Subscribe to:
Posts (Atom)