Jan 26, 2011

"ಚರಿತ್ರೆ"

ಗುರಿ ಮುಟ್ಟಲು ಘರ್ಜಿಸುತ್ತ ಬೆಳಕಿನಂತೆ ಸಾಗುತ್ತಿದ್ದ ನನ್ನ, ನೇರವಾಗಿ ನೋಡದೆ
ಮುಂಗುರುಳ ತೆರೆಯ ಓರೆನೋಟಕೆ ಮೊರೆಹೋದೆ ನೀನು.
ಸಂಚಿಗೆ ನನ್ನ ಗುರಿ ಬಲಿಯಾಯಿತು
ಬೂದಿ ಬಳಿದ ನಿಗಿ ನಿಗಿ ಕೆಂಡ ತಣ್ಣಗಾಯಿತು - ಕಣ್ಣ ಸೆರೆಯಲ್ಲಿ.

ಕೇಕೆ ಹಾಕುತ ತಕಥೈ ತಕಥೈ ಎಂದಾಡಿತ್ತು
ಗೆಲುವಿನ ನಗೆ ಬೀರಿತ್ತು ಮತ್ತದೇ ಓರೆನೋಟ
ಉಳಿಯಿತು ಮುಟ್ಟದ ಗುರಿಯ ನರಳುವ ನೆರಳು -
ಕಾಮಪ್ರಜ್ಞೆಯ ಪಲಾನುಭವಿಯಲ್ಲಿ.

ಗುರಿ ಸಾಧನೆಗೆ ಘರ್ಜಿಸಿ ಮತ್ತೆ ಹೆಜ್ಜೆ ಇಟ್ಟೊಡನೆ
ಧಿಗ್ಗನೆದ್ದು ನಿಲ್ಲುವ - ಬಾಡಿದ ಹೂ,
ಅವಸರಕೆ ಹಾಸುವವರಾರೆಂದು ಮಡಿಚಲು ಮನಸಾಗದೆ ಬಿಟ್ಟ ಹಾಸಿಗೆ,
ಆಮ್ಲಜನಕ ಸುಳಿಯದಂತೆ ಒತ್ತಿಸಿಕೊಂಡ ತುಟಿ
ಇತ್ಯಾದಿ ಇತ್ಯಾದಿಗಳೇ ಪಿಂಡಾರಿ.

ಸಾಕು ಸರಿಸು ಮುಂಗುರುಳ ತೆರೆಯ,
ಒರೆನೋಟದ ಕರೆಯಾ
ಮತ್ತೆ ಮತ್ತೆ ಕೆಣಕದಿರು, ಎಲ್ಲವನು ಮರೆತು ನಿನ್ನಲ್ಲಿಗೆ
ಸ್ಥಳಾಂತರಿಸುವ ಹಾರ್ಗುದುರೆ - ಮೋಹ

ಚಿತ್ತ ಕಲಕದಂತೆ ಸ್ವಲ್ಪ ಮರೆಯಾಗು
ಇಲ್ಲವೇ ಸಿಂಹ ಘರ್ಜನೆಗೆ ಜೊತೆಯಾಗು
ಪ್ರೋತ್ಸಾಹದ ಕಡಲಾಗು - ಮೋಹಿಸದಿರು ಗುರಿ ಮುಟ್ಟುವವರೆಗೂ.

ಗುರಿಘರ್ಭದೊಳಗೆ ಘಮ ಘಮಿಸುವ ಸುಮವರಳಿ ನಿಂತಿದೆ
ತಂದು ಮೂಡಿಸುವೆ ಸಜ್ಜಾಗು
ಗುರಿಪಥದಿ ಹೆಜ್ಜೆಯಿಡುವ ಮುನ್ನ
ಕಡೆಯದಾಗಿ ಕೇಳುತಿರುವೆ : ಸತ್ಯ ಹೇಳು
ನನ್ನೋಳಗೆಕೆ ಇಳಿದೆ ಮಾಯೆ ?
ಹುಟ್ಟಲಿರುವ ಶಾಕುಂತಲೆಯ ತಾಯೆ.

=====
=====

10 comments:

  1. very nice... nagu... naanu yara charitre barita irodu andukonde haha ninnade charitre anisutte...

    ReplyDelete
  2. nagaraaj kavite chennaagide.idu yaara charitre swaami.......!!! anil da atva nimdaa???

    ReplyDelete
  3. really very nice... :)
    ನನ್ನೋಳಗೆಕೆ ಇಳಿದೆ ಮಾಯೆ ?
    ಹುಟ್ಟಲಿರುವ ಶಾಕುಂತಲೆಯ ತಾಯೆ.
    prashne maatra sakath aagide.. :)

    ReplyDelete
  4. ನಾಗರಾಜ್,
    ಸೂಪರ್ ..... ಕಾಡುವ, ಮೋಹಿಸುವ, ಕೆರಳಿಸುವ ನೆನಪಿಗೆ.... ಗೆಳತಿಗೆ..... ಅವಳ ಮುಂಗುರುಳಿಗೆ.... ಈ ಕವನ ಅದ್ಭುತ ಸಲಾಮ್....

    ReplyDelete
  5. This is not my "CHARITRE", most of the young people surrender to or disturbed by opposite sex because of many reasons(now a days with same sex also either) though they know its going to be harmful for their goals(maximum cases). here, i just tried to link the difficult stage of a guy and the "VISHWAMITRA".
    this poem is conceived on baseline :: many people unable to reach their goal, because of unnecessary desires, at wrong time for them. VISHWAMITRA lost his goal when "MENAKA" entered into his life right ? this apply for both male and female. so, this is not my CHARITRE, this is ours. thank u

    ReplyDelete
  6. yappa.. nimma kavite artha maadkollodu kasta kanri.. :( :(

    ReplyDelete
  7. ಸೂಪರ್ ಸಾರ್,
    ಯುವಜನತೆಯ ಸಂಪೂರ್ಣ ಕಥೆ+ವ್ಯಥೆ ಇಲ್ಲೇ ನಿಮ್ಮ ಕವಿತೆಯಲ್ಲಿ....
    ಬರೆಯುತ್ತಲೇ ಇರಿ, ಓದುತ್ತಾ ನಾವಿರುತ್ತೇವೆ.....

    ReplyDelete
  8. ನಿಮ್ಮ ಕವನದಲ್ಲಿರುವ ಚೈತನ್ಯ ಹಾಗು ಆವೇಶಗಳು ಬೆರಗು ಹುಟ್ಟಿಸುವಂತಿವೆ. ಇವು ಕವನಕ್ಕೆ ವಿಶೇಷ ಮೆರಗನ್ನು ಕೊಡುತ್ತಿವೆ.

    ReplyDelete
  9. ನಾಗರಾಜ್
    ಹೌದು, ಬಹುತೇಕ ಯುವಕ-ಯುವತಿಯರು ತಮ್ಮ ಬದುಕಿನ ಉತ್ಕರ್ಷದ ದಿನಗಳಲ್ಲಿ ಚಿತ್ತ ಚಾ೦ಚಲ್ಯಕ್ಕೆ ಬಲಿಯಾಗಿ ಗುರಿಯಿ೦ದ ವಿಚಲಿತರಾಗುತ್ತಾರೆ. ಇದು ಕಾಲದೇಶಗಳ ಪರಿಮಿತಿಯಿಲ್ಲದೆ ಎಲ್ಲೆಡೆ ಕಾಣಬಹುದಾದ ಸಾರ್ವಕಾಲಿಕ ಸತ್ಯ. ನಿಮ್ಮ ಕವನದ ಹಿ೦ದಿನ ಆಶಯ, ಅದು ಹೊಮ್ಮಿಸುವ ಭಾವ ಬಹಳ ಚೆನ್ನಾಗಿದೆ. ಕೊನೆಯ ಎರಡು ಸಾಲುಗಳು ಕವಿತೆಗೆ ವಿಶೇಷ ಅರ್ಥವ್ಯಾಪ್ತಿ ಕಲ್ಪಿಸಿವೆ. ಕವನದಲ್ಲಿ ಬಳಸಿದ "ಘರ್ಜನೆ" ಗೆ ಬದಲು "ಗರ್ಜನೆ" ಎ೦ದಾಗಿದ್ದರೆ ಚೆನ್ನಿತ್ತು. ಅಲ್ಲದೆ "ಗುರಿಘರ್ಭ" ಎ೦ದು ತಪ್ಪಾಗಿ ಮುದ್ರಣವಾಗಿದೆ. ಅದು "ಗುರಿಗರ್ಭ" ಎ೦ದಾಗಬೇಕು. ಒಟ್ಟಿನಲ್ಲಿ ಒಳ್ಳೆಯ ಯತ್ನ.

    ReplyDelete
  10. @ಪರಾಂಜಪೆ ಸರ್, ಥ್ಯಾಂಕ್ಯು . . . . ನೀವು ಹೇಳಿದ ಅಕ್ಷರಗಳಲ್ಲಿನ ತಪ್ಪುಗಳು ನನ್ನ ಕಣ್ ತಪ್ಪಿನಿಂದಾಗಿವೆ, ತಿದ್ದಿಕೊಳ್ಳುತ್ತೇನೆ . . .

    ReplyDelete