Sep 28, 2011

"ಅಪ್ಪ-ಅಮ್ಮ & SEX"


ನಮಗಂತೂ ಆಗಲಿಲ್ಲ ಮಕ್ಕಳಾದರು ಓದಲಿ. ಚೆನ್ನಾಗಿ ಓದಲಿ. ಓದಿ ಜ್ಞಾನ ಸಂಪಾದನೆ ಮಾಡ್ಲಿ. ಒಳ್ಳೆ ಮನುಷ್ಯ ಆಗ್ಲಿ. ನಮಗ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ, ಮಗಳ ವಿದ್ಯಾಭ್ಯಾಸಕ್ಕೆ ಯಾವ್ದು ಆಡ್ದಿಯಾಗ್ಬಾರ್ದು. ಹೀಗೆ ಇದೆ ರೀತಿಯ ಹಲವಾರು ಆಸೆಗಳಿರುವ ಸಾಮಾನ್ಯ ಮದ್ಯಮ ವರ್ಗದ ತಂದೆ ತಾಯಿಗಳಂತೆ, ಅವರು ಕೂಡ. ತಮ್ಮ ಅದೆಷ್ಟೋ ಆಸೆ, ಕನಸುಗಳನ್ನ ಬಲಿಕೊಟ್ಟು ಓದಿಸಿದರು. ಮಗಳು ಈಗ ಬೆಂಗಳೂರಿನಲ್ಲಿ ಇಂಜೀನಿಯರ್ . "ಹುಡುಗೀನ ಯಾಕ ಓದಸ್ತೀರ ಮದುವೆ ಮಾಡಿ" ಆನ್ನೋ ಮಾತಿಗೆ ಗಮನ ಕೊಡದೆ ಮಗಳನ್ನ ಕಾಲೇಜಿಗೆ ಸೇರಿಸಿದ ಅವಳ, ಅಪ್ಪ-ಅಮ್ಮ ಎಂಬ ಆ ಎರಡು ಜೀವಗಳಿಗೆ ಅದೆಂಥದೋ ಹೇಳಲಾಗದ ಸಂಬ್ರಮ. ಅದೆಷ್ಟು ಕಷ್ಟ ಪಟ್ಟಿದ್ದವು ಆ ಜೀವಗಳು. ಬೆಂಗಳೂರಿನಿಂದ ಸರಿ ಸುಮಾರು 470 km ದೂರದ ಊರು ಅವರದು. ತಂದೆ-ತಾಯಿ ಇಬ್ಬರಿಗೂ ಬೆಂಗಳೂರು ಆಕಸ್ಮಿಕ ಮತ್ತು ಅಪಚಿತ.

ಆ ಊರಿನ ಮೊದಲ ಇಂಜೀನಿಯರ್ ಅವಳು, ಕಾಲೇಜಿನ ಕ್ಯಾಂಪಸ್ ಇಂಟರ್ವೀವ್ ನಲ್ಲೆ ಒಂದು ಕಂಪನಿಗೆ ಸೆಲೆಕ್ಟ್ ಆಗಿದ್ದಳು. ಡಿಗ್ರೀ ಕಂಪ್ಲೀಟ್ ಆದಮೇಲೆ ಸ್ವಲ್ಪ ದಿನ ಊರಲ್ಲಿ ಅಪ್ಪ-ಅಮ್ಮ ನೊಂದಿಗಿದ್ದು ಈಗ್ಗೆ ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಳೆ - ಕಂಪನಿಯವರು joining date ಕೊಟ್ಟಿದಾರೆ. ಹುಡುಗಿಯರ paying guest ನಲ್ಲಿದಾಳೆ. ಕಂಪನಿಯಲ್ಲಿ ಇನ್ನೂ ಟ್ರೈನಿಂಗ್ ನಡೀತಾಯಿದೆಯಾದ್ದರಿಂದ ಸಂಬಳ ಸ್ವಲ್ಪ ಕಡಿಮೆ ಅದರಲ್ಲೇ ಸ್ವಲ್ಪ ಮನೆಗೆ ಕೊಡ್ತಾಯಿದಾಳೆ. ಅಪ್ಪ-ಅಮ್ಮನಿಗೋ ಮಗಳು ದುಡಿದು ನೂರು ರುಪಾಯಿ ಕೊಟ್ಟರು ಅವರ ಸಂತೋಷಕ್ಕೆ ಪಾರಾವೆಯಿರುವುದಿಲ್ಲ. ಮಗಳು ಕೊಡುವ ಕೆಲವು ಸಾವಿರ ರೂಪಾಯಿಗಳನ್ನ ತಾಯಿ ಅದೆಷ್ಟು ಬಾರಿ ಮುಟ್ಟಿ ಕಣ್ಣಿಗೊತ್ತಿಕೊಂಡು ಕಣ್ಣೀರಾದರೋ ಏನೋ - ತೀರದ ಆನಂದ ಭಾಷ್ಪ. ತಂದೆಗೆ ಏನನ್ನೋ ಸಾಧಿಸಿದ ಸಮಾಧಾನ. ದೂರದಲ್ಲೆಲ್ಲೋ, ಮಗಳು ಕೊಟ್ಟ ಹಣದಲ್ಲಿ ಮಗಳಿಗೇ ಸಣ್ಣ ಪುಟ್ಟ ಚಿನ್ನದ ಒಡವೆ ಖರೀದಿಸುವ ಕನಸು ಕಾಣುವ ತಾಯಿ. ಇನ್ನೂ ಮದುವೆ ತಯಾರಿ ಮಾಡ್ಕೊಬೇಕು ಅಂತ ವಿಚಾರ ಮಾಡೋ ತಂದೆ. . . .

. . . . .ಆದರೆ ದುರಂತ
ಇಂಜೀನಿಯರಿಂಗ್ 3 ನೇ ವರ್ಷದ ಕೊನೆಯಲ್ಲಿ ಕಂಪನಿಯೊಂದಕ್ಕೆ ಸೆಲೆಕ್ಟ್ ಆದ ಆ ಹುಡುಗಿ ನಂತರ ಬದಲಾಗಿದ್ದಳು. ಕೋತಿಗೆ ಹೆಂಡ ಕುಡಿಸಿದಂತಾಯ್ತು. ಜೋರು ಜೋರು ಪಾರ್ಟಿಗಳು ಶುರುವಾದವು, ಪ್ರತಿ ಕಂಪನಿಯಲ್ಲಿ ಸೆಲೆಕ್ಟ್ ಆದವರೆಲ್ಲ ಕೊಡುವ ಪಾರ್ಟಿ. ಮತ್ತೊಮ್ಮೆ ತೀರ ಆತ್ಮೀಯರಿಗೆ ಒಂದು ಪಾರ್ಟಿ.ಪಾರ್ಟಿಗಳಲ್ಲಿ ಬೇರೆ ಬೇರೆ ರೀತಿಯ ಮೋಜು ಮಸ್ತಿಗಳು ಇಷ್ಟವಾದವು, ಯೌವನ ನೆತ್ತಿಗೇರಿತು ಹಾಗೆ ಚಟಗಳು ಮೈಯಿಗೇರಿದವು. ಬೆಂಗಳೂರಿಗೆ ಬಂದಿರುವ ಆ ಹುಡುಗಿ ಇನ್ನೂ ಕಂಪನಿಗೆ join ಆಗಿಲ್ಲ ! ಆ ಹುಡುಗಿ, ladies paying guest ನಲ್ಲಿ ಇಲ್ಲ !! ಬೆಂಗಳೂರಿನಲ್ಲಿ ಒಬ್ಬ ಹುಡುಗನ ರೂಮಿನಲ್ಲಿದಾಳೆ !!! ಮನೆಯಲ್ಲಿ ತಂದೆ-ತಾಯಿಗೆ ಸುಳ್ಳು ಹೇಳಿ ಬಂದಿದ್ದಾಳೆ. ಡಿಸೆಂಬರ್ ನಲ್ಲಿ ಕಂಪನಿಯವರು ಜಾಯ್ನಿಂಗ್ ಡೇಟ್ ಕೊಟ್ಟಿದಾರೆ ಆದ್ರೆ ಇವ್ಳು ಬಂದಿರೋದು ಜುಲೈ ನಲ್ಲಿ ! no news about any crash course or something like that.

ಅದೆಷ್ಟೋ ಜನರ ಕೈ-ಕಾಲು ಹಿಡಿದು ಅಮಾಯಕ ತಂದೆ-ತಾಯಿ ಓದಿಸಿದ್ದರು. ತಮ್ಮ ಜೀವನದ ಆಶಾಕಿರಣ ಅಂತ ಭಾವಿಸಿರುವ ನಿಷ್ಕಲ್ಮಶ ಮನದ ಜೀವಗಳ ಮುದ್ದಿನ ಮಗಳ ಮೈ ಚಟಕ್ಕೆ ಬಿದ್ದುಬಿಟ್ಟಿದೆ - ಕಾಮಾತುರಣಂ ನ ಭಯಂ ನ ಲಜ್ಜಾ. ಪ್ರತಿ ಸಲ ಕಾಮಕ್ರೀಡೆ ಮುಗಿದ ಮೇಲೆ ಆ ಹುಡುಗ ಸೋಸಿಯಲ್ ನೆಟ್ವರ್ಕ್ ನಲ್ಲಿ ಬೇರೆಯ ರೀತಿಯಲ್ಲಿ ಅಪ್ಡೇಟ್ ಮಾಡ್ತಾನೆ ಈ ಹುಡುಗಿ ಅದನ್ನ ಲೈಕ್ ಮಾಡ್ತಾಳೆ. ಆ ಹುಡುಗಿ ಮನೆಗೆ ಕೊಡುವ ಹಣ ಆ ಹುಡುಗನದ್ದೆ !! ತಮ್ಮಿಬ್ಬರ ಈ ಕಳ್ಳ ವ್ಯವಹಾರ ತಮ್ಮ ಕಾಲೇಜಿನ ಕೆಲವರಿಗೆ ತಿಳಿದಿದೆ ಅಂತಲೂ ಅವರಿಗೆ ಗೊತ್ತು, ಆದರೂ ಯಾವ ಭಯ,ಸಂಕೋಚ ಅವರಿಗಿಲ್ಲ. ಹೆತ್ತವರ ಅಮಾಯಕತೆ, ಮುಗ್ಧತೆಯನ್ನ ದುರುದ್ದೇಶಕ್ಕೆ ಬಳಸಿಕೊಂಡವರು ಯಾರಿಗೆ ತಾನೇ ಹೆದರ್ತಾರೆ. 'ಇದು ತಪ್ಪಲ್ವಾ ?' ಅಂತ ಕೇಳಿದ್ರೆ 'ಅವಳಿಗೆ ಏನ್ ಬೇಕೊ ಅದನ್ನ, ನಾ ಕೊಡ್ತಿನಲ್ಲ ಮಗ' ಅಂತಾನೆ ಆ ಹುಡುಗ. ಮದುವೆ ಬಗ್ಗೆ ಕೇಳಿದ್ರೆ, ಅಂಥದೊಂದು ಇದಿಯಾ ಅನ್ನುವ ಹಾಗೆ ಮುಖ ನೋಡ್ತಾರೆ. ಇದನ್ನ ಓದಿದ ಮೇಲೆ ಆ ಹುಡುಗಿ, ಏನೂ ತಿಳಿಯದ 'ಮಾಸೂಮ್' ಅಂತೂ ಅಲ್ಲ ಅನ್ನೋದು ನಿಮಗೂ ಮನವರಿಕೆಯಾಗಿದೆ ಅನ್ಕೊಂಡಿದಿನಿ. so, They are not cheating on each other but, just ENJOYING together.

ದೊಡ್ಡ ದುರಂತ . . . .
ಈವರೆಗೆ ನೀವು ಓದಿದ್ದು ಕಾಲ್ಪನಿಕ ಕಥೆಯಲ್ಲ.

ಪ್ರಶ್ನೆಗಳು ::
1) 22 ವರ್ಷ ಪ್ರೀತಿ, ವಾತ್ಸಲ್ಯ, ಮಮಕಾರ, ಕಾಳಜಿ, ವಿದ್ಯಾಭ್ಯಾಸ, ಊಟ, ಬಟ್ಟೆ, ಹಣ ಎಲ್ಲಕ್ಕಿಂತ ಮುಖ್ಯವಾಗಿ ಜನ್ಮ ಕೊಟ್ಟ ಅಪ್ಪ-ಅಮ್ಮನಿಗೆ ಈ ಮಟ್ಟದ ನಯವಂಚನೆ, ನಂಬಿಕೆ ದ್ರೋಹ ಮಾಡಲು ಮನಸ್ಸಾದರೂ ಹೇಗೆ ಬರುತ್ತೆ ?
2) ಅಪ್ಪ-ಅಮ್ಮನ ವಾತ್ಸಲ್ಯದ ಬಿಸುಪಿಗಿಂತ ಹಾಸಿಗೆಯ ಮೇಲಿನ SEX ಹೆಚ್ಚು ಸುಖ,ಶಾಂತಿ, ನೆಮ್ಮದಿ ನೀಡುತ್ತಾ ?
3) ಕೇವಲ ಎರಡು ವರ್ಷಗಳ ಹಿಂದೆ ಪರಿಚಯವಾದವರ ಪ್ರೇಮ, ಮೈಥುನ; ತಂದೆ-ತಾಯಿಯೊಂದಿಗೆ ಐದು ತಿಂಗಳು(ಜುಲೈ -- ಡಿಸೆಂಬರ್) ಇರಲಾರದಷ್ಟು ಕೆರಳಿಸುತ್ತವಾ ? ಅಥವಾ, ತಂದೆ-ತಾಯಿ ಬೇಡವಾಗಿಬಿಡುತ್ತಾರಾ ?
4) ಟ್ರೈನಿಂಗ್ ನಲ್ಲಿ ಕಡಿಮೆ ಸಂಬಳ ಅಂತ ಹೇಳಿದ ಮಗಳು ಯಾವುದರ ಟ್ರೈನಿಂಗ್ ನಲ್ಲಿದ್ದಾಳೆ, ಇದೆ ಟ್ರೈನಿಂಗ್ ಆದ್ರೆ ನಂತರದ ವೃತ್ತಿ ?
5) ಊರ ತುಂಬಾ ತಮ್ಮ ಮಗಳು ಕಂಪನಿಯಲ್ಲಿ ದುಡಿದು ಹಣ ಕಳಿಸಿದಾಳೆ ಅಂತ ಹೇಳಿಕೊಳ್ಳುವ ತಂದೆ-ತಾಯಿಗಿದು ತಿಳಿದರೆ ಅವರು ಏನಾಗ್ತಾರೆ ?
6) now we are in relationship ಅಂತ ಹೇಳುವ ಇವರದು ಇದೇನು ಹಾದರವಾ ? ಆತ್ಮವಂಚನೆಯಾ ? ಟೈಮ್ ಪಾಸ್ ?ಅಥವಾ, ಯಾಮಾರಿ ಅಪ್ಪಿ-ತಪ್ಪಿ ಇದಕ್ಕೆ LOVE ಅಂತಾರ?
7) ನಿಜ ಹೇಳಿ, ಇಂಥವರು ಮದುವೆಯಾಗಿ ನೆಟ್ಟಗೆ ಸಂಸಾರ ಮಾಡ್ತಾರೆ ಅಂತ ನಿಮಗನ್ನಿಸುತ್ತಾ ? (ನನಗಂತೂ ಇಲ್ಲ)
8) ಮುಂದೆ ಈ ಹುಡುಗ, ಹುಡುಗಿಯನ್ನ ಮದುವೆಯಾಗೋ ಯಾವುದೋ ಹುಡುಗಿ, ಹುಡುಗನ ಪಾಡೇನು ?
9) ನಮ್ಮನ್ನ ಹೆತ್ತವರು ನಮ್ಮೊಂದಿಗೆ ಸಮಯ ಕಳೀಬೇಕು ಅಂತ ಕಾಯ್ತಿರ್ತಾರೆ, ಕಾಲೇಜ್ ನಲ್ಲಿ ನಡೆದ ಸಣ್ಣ ಸಣ್ಣ ಘಟನೆಗಳನ್ನ ಹೇಳುವಾಗ ಬೆರಗುಗಣ್ಣಿನಿಂದ ಕೇಳ್ತಾರೆ; ಇವು ನಮಗೆ ನೆನಪಾಗಲ್ವಾ ?
10) ಯಾವ ನೆಲದವರು ನಾವು ? ಎಲ್ಲಿರುವೆವು ? ಎಲ್ಲಿಗೆ ಹೊರಟಿರುವೆವು ? ಅಸಲಿಗೆ ಯಾರು ನಾವು ?

ಹೀಗೆ ನನಗೆ ನಾನೇ ಪ್ರಶ್ನೆ ಹರವಿಕೊಂಡು ಉತ್ತರ ಕೊಡುವ ಪ್ರಯತ್ನ ಮಾಡುತ್ತಾ, ತುಂಬಾ ಬೇಜಾರಾಗಿ ಇದ್ಯಾಕೆ ಹಿಂಗ್ ಮಾಡ್ತು ಹುಡುಗಿ ಅಂತ ಯೋಚಿಸ್ತಿರುವಾಗಲೇ. ಚಕ್ಕನೆ ಹೆಸರೊಂದು ಮಿಂಚಿದಂತಾಯ್ತು, ಅದು ಕೂಡ ಹುಡುಗಿಯ ಹೆಸರೇ - 'ಐರೊಮ್ ಚಾನು ಶರ್ಮಿಲ'. ಆಕೆ Iron lady of Manipur. ತನ್ನ 28 ನೇ ವಯಸ್ಸಿನಿಂದ Armed Forces (Spacial Powers)Act, 1958 (AFSA) ವಿರುದ್ದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ ಶರ್ಮಿಲ. ಈಗ ಆಕೆಗೆ 39 ವರ್ಷ ವಯಸ್ಸು, ಅಂದ್ರೆ ಕಳೆದ ಹನ್ನೊಂದು ವರ್ಷಗಳಿಂದ ಶರ್ಮಿಲ ಉಪವಾಸವಿದ್ದಾಳೆ. ಪ್ರಪಂಚದ ಅತ್ಯಂತ ಕಿರಿಯ ವಯಸ್ಸಿನ 'Hunger striker' ಈವರೆಗೂ ಊಟ ಇಲ್ಲ, ನೀರು ಇಲ್ಲ. ಶರ್ಮಿಲ ಅವರ ಮೂಗಿಗೆ ಒಂದು ಪೈಪ್ ಇರುತ್ತೆ ಆ ಪೈಪ್ ಮೂಲಕ ದಿನ ಸ್ವಲ್ಪ ಹಣ್ಣಿನ ರಸ ಹನಿಹನಿಯಾಗಿ ಆಸ್ಪತ್ರೆಯವರು ಕೊಡ್ತಾರೆ. 11 ವರ್ಷಗಳಿಂದ ಶರ್ಮಿಲ ಅವರ ಮೂಗಿನ ಪೈಪ್ ಆಕೆಯ ದೇಹದ ಒಂದು ಭಾಗವೇನೋ ಎಂಬಷ್ಟರಮಟ್ಟಿಗೆ ಒಗ್ಗಿಹೋಗಿದೆ. ಊಟ ಮೂಗಿನ ಮೂಲಕ ಅದೂ ಸ್ವಲ್ಪ ಹನಿ ಹಣ್ಣಿನ ರಸ ಅಷ್ಟೇ - Oh My God. ತನ್ನ ಜನರ ಸಲುವಾಗಿ ತನ್ನ ಜೀವನವನ್ನೇ ಮುಡಿಪಾಗಿತ್ತು ಅವಿರತ ಹೋರಾಡುತ್ತಿರುವ 'ಶರ್ಮಿಲ' ಅವರ ಆತ್ಮಸ್ಥೈರ್ಯಕ್ಕೆ ನಮೋನ್ನಮಃ.

=====
=====

23 comments:

  1. ಓದಿ,ಮನಸ್ಸಿಗೆ ತುಂಬಾ ನೋವಾಯಿತು ನಾಗರಾಜ್.

    ReplyDelete
  2. hmmmm heart touching story dear!!!!!!!!!!

    ReplyDelete
  3. ಅಯ್ಯಪ್ಪಾ...ಶುರುವಿನಲ್ಲಿ ಇದು ಇಲ್ಲೇ ಇಲ್ಲೋ ಆಧುನಿಕ ಜಗತ್ತಿನ ಸುತ್ತ ಮುತ್ತ ಹೆಣೆದ ಕಥೆ ಅನ್ನಿಸ್ತು.. ಆದ್ರೆ ಓದುತ್ತಾ ಹೋದಂತೆ ಅದರೊಳಗೆ ಬೇರೆಯದೇ ಲೋಕ ಕಾಣಿಸಿದ್ದು ಸತ್ಯ...

    ಬನ್ನಿ ನಮ್ಮನೆಗೂ,
    http://chinmaysbhat.blogspot.com/

    ಆಕೆಯ ಹೋರಾಟಕ್ಕೆ ಜಯ ಸಿಗಲಿ ಎಂಬ ಆಸೆ ಹೊತ್ತು,
    ನಿಮ್ಮನೆ ಹುಡುಗ
    ಚಿನ್ಮಯ ಭಟ್

    ReplyDelete
  4. ನಾಗರಾಜ್,
    ಪ್ರಸಕ್ತ ಬದುಕಿನ ಕನ್ನಡಿ ನಿಮ್ಮ ಲೇಖನ..... ಇದೆಲ್ಲರೆಡೆಗೆ ನಿಮ್ಮ ನೋವು ತುಂಬಿದ ಲೇಖನ .. ಇದನ್ನೆಲ್ಲಾ ಫ಼್ಯಾಷನ್ ಎಂದೇ ತಿಳಿದಿದ್ದಾರೆ... ನಿಜಕ್ಕೂ ನೋವಾಗತ್ತೆ.....

    ReplyDelete
  5. ಸರ್,
    ನನಗೆ ಮೊದಲ ಭಾಗಕ್ಕೂ ಎರಡನೆಯ ಭಾಗಕ್ಕೂ ಸಂಬಂಧ ಗೊತ್ತಾಗಲಿಲ್ಲ. ಆದರೂ ಭಾಷೆಯ ಮೇಲಿನ ಹಿಡಿತಕ್ಕೆ, ಕ್ಲಿಷ್ಟ ವಿಷಯವನ್ನು ಸರಳವಾಗಿ ಪ್ರಸ್ತುತಕ್ಕೆ ಅನ್ವಯಿಸಿ ಬರೆದ ರೀತಿಗೆ ಅಭಿನಂದನೆಗಳು.
    ಸಮಯವಿದ್ದರೆ ನನ್ನ ಬ್ಲಾಗನ್ನೂ ಓದಿ, ಟಿಪ್ಪಣಿ. ಕೊಡಿ.
    http://subrahmanyahegde.blogspot.com/

    ReplyDelete
  6. @Murthy sir, Akshata akka, Chinmay, Dinakaranna::
    Thank u for feedback.

    @Subramanya : Two blocks reveal the exactly opposite thoughts. one cheating herself & her people. Sharmila is dedicated her life to her people.

    ReplyDelete
  7. Tumba chennagi badukina durantavanna helidira

    badukanna noduva muncheye badukina durantakke baliyaagabaaradalva

    eccharikeya baraha

    ReplyDelete
  8. ವಿಭಿನ್ನ ಮನದ ಜನರು ಇದ್ದಾರೆ... ಏನೋ ಮನುಷ್ಯ ಬಹಳ ಬದಲಾವಣೆಯನ್ನ ಬಯಸುತ್ತಾನೆ ಆದರೆ ಆ ಬದಲಾವಣೆ ಎಲ್ಲಿಗೆ ತಂದು ನಿಲ್ಲಿಸುತ್ತದೋ ತಿಳಿಯದು.

    ReplyDelete
  9. This is what I have seen and I thing that has made that girl do what she is doing.

    1. As she is in Bangalore, a big city, where people cannot recognize her, and she can get lost in the lot, she thinks that unless she tell her, her parents would never get to know what she is doing. This gives her a lot of courage to do things that she would not have done otherwise.
    2. When you start, SEX is an addiction and in foreign countries people even get psychological help to get out of this addiction, am not saying that girl is addicted but it is a very strong driver. When she can party, enjoy and have fun here, she would not be wanting to send time with her parents at native, where her life would be very regular. (wanted to use the word boring but you might not agree with it)
    3. This may be anything, love, timepass, anything. Those two might get married, might not. She has not realized the seriousness of what she is doing. When you share your sex life with somebody and then decide to move on with another, she does not know the pain. Hope that does not happen to her and hope they get married, but if she lands up in trouble, she may get unpredictable. Its trouble both to her and her parents.
    4. This is influence of western cultures. We watch English movies where marriage, post marriage relationship, pre-marital sex, everything is shown as a very common thing. We have developed an attitude that everything is okay, unless you got caught (or even when you got caught it is okay… its my life). We do not appreciate the values our parents have given us, we just do not care.

    This attitude is what has made that girl and boy do what they are doing.

    God, help them!

    ReplyDelete
  10. ಭಾರತೀಯ ಸಂಸ್ಕೃತಿಯ ಅಪಮೌಲ್ಯಕ್ಕೆ ಟೀವಿ ಹಾಗು ಚಲನಚಿತ್ರಗಳು ದೊಡ್ಡ ಕೊಡುಗೆ ನೀಡಿವೆ. ಜೊತೆಗೇ ‘ಪಬ್ ಸಂಸ್ಕೃತಿ’ಗೆ ಬುದ್ದಿಜೀವಿಗಳು ಅನ್ನಿಸಿಕೊಳ್ಳುವವರ ಬೆಂಬಲ ಬೇರೆ! ನೀವು ಕೇಳಿದ ಯಕ್ಷಪ್ರಶ್ನೆಗಳಿಗೆ ಪರಿಹಾರ ಎಲ್ಲಿದೆ?

    ReplyDelete
  11. No comments!!!!!! Olleya baraha.. heegu unte.. intavra bagge gottadare maryadiyinda jeevana maduvavara meloo apanambike baruvudu kandita...

    ReplyDelete
  12. ನಾಗರಾಜ್ ,
    ಹೆತ್ತವರ ಪ್ರೀತಿಯ ಮುಗ್ಧತೆ ಇಂತಹವರಿಗೆ ಏನು ಬೇಕಾದರೂ ಮಾಡಲು ಧೈರ್ಯ ತಂದುಕೊಡುತ್ತದೆ. ಇಲ್ಲಿ ಯಾರನ್ನೋ ಅಥವಾ ಯಾವುದೇ ವ್ಯವಸ್ಥೆಯನ್ನೂ ದೂರಿ ಪ್ರಯೋಜನವಿಲ್ಲ. ಇಂದಿನ ಎಲ್ಲಾ ಸಂದರ್ಭಗಳೂ ಇಂತಹ ಕಾಯಕಕ್ಕೆ ಪೂರಕ. ಇವೆಲ್ಲಾ ಸಾದಾರಣ ವಿಷಯಗಳು. ಮುಂದುವರಿದಂತೆ ಇನ್ನೂ ಏನೇನಿದೆಯೋ ನೋಡುತ್ತಾ ಹೋಗುವುದಷ್ಟೇ ನಮ್ಮ ಕರ್ಮ!

    "ಇಂದಿನ ಮಹಿಳೆ ಅಭಲೆಯಲ್ಲ, ಸಭಲೆ! ಗಂಡಿನಂತೆ ಸಮಾನ ಹಕ್ಕುದಾರಳು. ಪ್ರತಿಯೊಂದರಲ್ಲೂ!!!"

    ಜೀವನ ಏನೆಂದು ಅರ್ಥಮಾಡಿಕೊಂಡು ಮುಂದಿನ ಹಾದಿಯಲ್ಲಿ ಕಾಲಿಡಬೇಕಾದ ಇಂದಿನ ಯುವ ಪೀಳಿಗೆ ತೆಗೆದುಕೊಳ್ಳುವ ನಿರ್ಧಾರಗಳಲ್ಲೇ ಎಡವುತ್ತಿದ್ದಾರೆ.
    ಇಂದಿನ ಹದಿಹರೆಯದ ನವಯುವಕ-ಯುವತಿಯರು ಕಾಲು ಜಾರಿ ಬಿದ್ದು ಕೊನೆಗೆ ಅಡ್ಡ ದಾರಿ ಹಿಡಿದು ಪಡಬಾರದ ಕಷ್ಟ ಪಟ್ಟು, ಜೀವನವನ್ನು, ಹೆತ್ತವರ ಪ್ರೀತಿಯ ಅರ್ಥವನ್ನು ತಿಳಿದು ಕೊಳ್ಳುವಷ್ಟರಲ್ಲಿ ಅರ್ಧ ಆಯಸ್ಸು ಕಳೆದಿರುತ್ತದೆ. ಕಾಲ ಮಿಂಚಿರುತ್ತದೆ, ಜೀವನ ಪೂರ್ತಿ ನೆಮ್ಮದಿ ಕಳೆದುಕೊಂಡು ತನ್ನ ಜೋತೆಗಿದ್ದವರಿಗೂ ಕೂಡಾ ನೆಮ್ಮದಿ ನೀಡದೆ ಮುಂದೊಂದು ದಿನ ಇಲ್ಲವಾಗುವಾಗ ಅದೆಷ್ಟೋ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ!
    ಇವೆಲ್ಲದರ ಮಧ್ಯೆ ಅಲ್ಲೊಂದು ಇಲ್ಲೊಂದು ಐರೊಮ್ ಚಾನು ಶರ್ಮಿಲ ರಂತಹ ಆಶಾ ಕಿರಣಗಳು ಕಂಡುಬಂದು ಕತ್ತಲ ಗುಹೆಯಲ್ಲಿ ಬೆಳಕಿನ ಕಿರಣವೊಂದು ಮೂಡಿ ಮರೆಯಾದಂತೆ ಬಾಸವಾಗುತ್ತಾರೆ!

    ReplyDelete
  13. ಅಬ್ಬಬ್ಬಾ ಕಥೆ ಭಯಾನಕವಾಗಿದೆ... ನೀವು ಕೇಳಿರುವ ಪ್ರಶ್ನೆಗಳು ಚೆನ್ನಾಗಿದೆ..

    Liked Bhashe's analysis of the story... very realistic & down to earth words

    ReplyDelete
  14. @Gurumurthy sir, Sugunakka, Mahesh Sir, BhaShe,
    Sunaath sir, Vanishri, Praveen, Pradeep ::
    Thank u so much . . . such a wonderful feedback.
    thanks again . . .

    ReplyDelete
  15. ನಮ್ಮೂರ ಕಡೆ ಒಂದು ಮಾತಿದೆ,

    ಊರು ಹೇಗೆ ಅಂತ ತಿಳಿಯೋಕೆ ಊರ ಬಾಗಿಲ ನೋಡು, ಅದಕ್ಕೆ ತೋರಣ,ಹೂಮಾಲೆ ಕಟ್ಟಿದ್ದರೆ ಊರಿನ ಹಿರಿಯರು ಸುಸಂಸ್ಕೃತರು ಅಂತ

    ಹುಡುಗ ಹೇಗೆ ಅಂತ ತಿಳಿಯೋಕೆ ಅವ ದುಡಿಯೋಕೆ ಶುರು ಮಾಡಿದ ಮೇಲೆ ನೋಡು
    ಮತ್ತು
    ಹುಡುಗಿ ಹೇಗೆ ಅಂತ ತಿಳಿಯೋಕೆ ಆಕೆಯ ತಾಯಿಯನ್ನ ನೋಡು ಸಾಕು

    ಆದ್ರೆ ಇಂಥ ಜನ ಜೀವನ ಅಂದ್ರೆ ಏನು ಅಂತ ನೋಡೋ ಮುಂಚೆನೇ ಇವ್ರು ಹೀಗ್ ಹಾಳಾಗಿ ಬಿಟ್ರೆ ಮುಂದೆ ಇವ್ರು ಒಂದು ಒಳ್ಳೆ ಸಮಾಜ ಕಟ್ಟೋದಿರಲಿ ಒಂದು ಒಳ್ಳೆ ಸಂಸಾರ ಕೂಡ ಕಟ್ಟಲ್ಲ.

    ಬುದ್ಧಿ ಹೇಳೋಕೆ ಹೋದ್ರೆ ನಾನು-ನನ್ನ ಜೀವನ ಅಷ್ಟೇ, ಸಮಾಜ ಅಂದ್ರೆ I dont care!
    I am not leaving for others its my life I can do whatever I want ಅಂತ ಹೇಳಿಬಿಡ್ತಾರೆ.

    ಪಾಶ್ಚಾತ್ಯರ ಮೋಜು-ಮಸ್ತಿ maatra ಬೇಕು ನಮ್ಮ ಜನಕ್ಕೆ.

    ದೇವರೇ ನೀನೇ ಕಾಪಾಡಬೇಕು ನಮ್ಮ ಸಂಸ್ಕೃತಿಯನ್ನ
    --

    ReplyDelete
  16. ನಾಗರಾಜ್ ಸರ್...
    ಜೀವನದ ಬಗ್ಗೆ ಉಡಾಫೆ ಹೊಂದಿರುವ ಯುವಜನತೆ ಯ ಬಗ್ಗೆ ಚೆನ್ನಾಗಿ ಬರೆದ್ದಿದ್ದಿರಿ...ಮತ್ತು ಎಲ್ಲಾ ಪ್ರಶ್ನೆಗಳೂ ಕೂಡ ಓದುಗರನ್ನ ಯೋಚನೆಗೆ ಹಚ್ಚುತ್ತವೆ...
    ಶರ್ಮಿಳರ ಬಗ್ಗೆ ಪತ್ರಿಕೆಯೊಂದರಲ್ಲಿ ಚಿಕ್ಕದಾಗಿ ಬಂದಿತ್ತು..ನೀವು ಚಿಕ್ಕದಾಗೆ ಪರಿಚಯಿಸಿದ್ದಿರ...ಅಂತರ್ಜಾಲದಲ್ಲಿ ಮಾಹಿತಿ ಸಿಗಬಹುದು...ಅವರ ಬಗ್ಗೆ ಕುತೂಹಲವಿದೆ..ದಿಟ್ಟತನದ ಬಗ್ಗೆ ಹೆಮ್ಮೆಯಿದೆ...
    ಆದರೆ ಸರ್...ಮೊದಲ ಭಾಗಕ್ಕೂ...ಎರಡನೆಯ ಭಾಗಕ್ಕೂ ಎತ್ತಣ ಸಂಬಂಧವೆಂದು ಗೊತ್ತಾಗಲಿಲ್ಲ...

    ReplyDelete
  17. @Anand : Thank u for nice feedback.

    @Mounaraaga : As i have already replied for the same question - Two parts are revealing the two different thoughts & acts of person. please, read all comments if possible. Thank u.

    ReplyDelete
  18. ನಿಮ್ಮ ಬರಹ ಈಗಿನ ಮೌಲ್ಯರಹಿತ ಮನಸ್ಸುಗಳ ಭೀಕರ ಚಿತ್ರಣವಾಗಿದೆ. ಇವರು ಮು೦ದೆ ಏನಾದರು ಮಕ್ಕಳು ಬೇಕೆನಿಸಿ ಪಡೆದರೆ(?) ತಮ್ಮ ಮಕ್ಕಳಿಗೆ ಏನನ್ನು ಕಲಿಸುತ್ತಾರೆ? ಯಾವ ರೀತಿ ಮಾರ್ಗದರ್ಶನ ನೀಡುತ್ತಾರೆ? ನಿಮ್ಮ ಹತ್ತು ಉತ್ತರಿಸಲಾಗದ ಪ್ರಶ್ನೆಗಳ ಜೊತೆಗೆ ನನ್ನವೂ ಹಲವು ಪ್ರಶ್ನೆಗಳಿವೆ. ತನ್ನ 28 ನೇ ವಯಸ್ಸಿನಿಂದ Armed Forces (Spacial Powers)Act, 1958 (AFSA) ವಿರುದ್ದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಶರ್ಮಿಲ ಅವರ ಬಗ್ಗೆಯೂ ತಿಳಿಸಿ ಮಾನವತ್ವದ ಬಗ್ಗೆ, ಮೌಲ್ಯಗಳ ಉಳಿವಿನ ಬಗ್ಗೆ ತಿಳಿಸಿ ಆಶಾ ಭಾವನೆ ಮೂಡಿಸಿದ್ದೀರಿ. ಧನ್ಯವಾದಗಳು.

    ReplyDelete
  19. Time,Environment, Friend circle, Money,dareness,Neglegence abt the future all are the reason for this.

    ReplyDelete
  20. Thumba bejar aythu sir kathe odhi, papa sir avl appa amma yest kasta pattu avlna odhisro alwa.

    ReplyDelete