Aug 3, 2012

 "ಸುಮ್ಮನೆ . . ." 

ಅವಳನ್ನ ಮೊದಲು ಕಂಡಾಗ ಮುಂಜಾನೆಯೋ, ಮುಸ್ಸಂಜೆಯೋ ?
ಉಸಿರಿರೋವರೆಗೂ ಆ ಘಳಿಗೆಯೊಂದನ್ನ ನೆನಪಿಟ್ಟುಕೊಳ್ಳಬೇಕಿದೆ.
ಅವಳನ್ನ ಸಂಪೂರ್ಣವಾಗಿ ತಿಳಿಯುವ ಕುತೂಹಲವೋ, ಪ್ರೇಮವೋ ?
ಯಾವುದಾದರೇನು, ನನಗೆ ಹೀಗೆ ಚೆನ್ನಾಗಿದೆ.
ಅವಳು ನನ್ನತ್ತ ನೋಡುವ ನೋಟ ಆಹ್ವಾನವೋ, ತಿರಸ್ಕಾರವೋ ?
ಆ ನೋಟವೆ ಸಹಿಸಲಾಗದಷ್ಟು ಸುಂದರವಾಗಿದೆ.
ಅವಳ ರೆಪ್ಪೆಗಂಟಿದ ಹನಿ ಮಳೆಯದೋ, ಕಣ್ಣೀರಿನದೋ ?
ನನ್ನ ನಾಲಿಗೆಯಿಂದ ನಯವಾಗಿ ಒರೆಸಬೇಕಿದೆ.
ಅವಳ ತುಟಿಯ ಬಣ್ಣ ತುಟಿಗಳದ್ದೋ, ಅವಳೇ ಹಚ್ಚಿಕೊಂಡ ಬಣ್ಣದ್ದೋ?
ನನ್ನಲ್ಲಿನ ಅಷ್ಟು ಪ್ರೀತಿಯನ್ನ ಅವಳ ತುಟಿಗಳಿಗೆ ಪರಿಚಯಿಸಬೇಕಿದೆ.
ಅವಳು ನನ್ನವಳಾಗುವಳೋ. . .ಆಗುವಳೋ . . . ಆಗುವಳೋ . . . !!
ಪೂರ್ಣವಾಗದ ಈ ಪ್ರಶ್ನೆಗೆ ಉತ್ತರ ಹುಡುಕದೆ,
ಉಸಿರ ದೀಪ ಆರುವವರೆಗೂ ಅವಳನ್ನ ಆರಾಧಿಸಬೇಕಿದೆ,
ಸುಮ್ಮನೆ ಆರಾಧಿಸಬೇಕಿದೆ . . .

=====
=====

10 comments:

  1. ಇಂತಹ ಆರಾಧಾನಾ ಭಾವ ಇದೆಯಲ್ಲ ಸಾರ್, ಅದು ಆರ್ಧ್ರತೆಯ ಸಂಕೇತ. ಅಮಿತ ಒಲುಮೆಯ ಭಾವಾತೀರೇಕದ ಈ ಕಾವ್ಯ ನನಗೆ ಮೆಚ್ಚುಗೆಯಾಯಿತು.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ಲೇಖನ ಚೆನ್ನಾಗಿದೆಯೋ, ಇಲ್ಲವೋ ಎಂದು ಕೇಳುವದೇ ಬೇಡ. ತುಂಬ ಚೆನ್ನಾಗಿದೆ!

    ReplyDelete
  3. ಕವನ ಇಷ್ಟವಾಯಿತು.

    ReplyDelete
  4. @Badarinath sir, Sunaath sir & DTK Murthy sir: Thank you for feedback :-)

    ReplyDelete
  5. ನೀವು ಆಕೆಯನ್ನು ನಿಮ್ಮವಳನ್ನಾಗಿ ಹೊಂದುವಿರೋ ಇಲ್ಲವೋ ಆದ್ರೆ ನಿಮ್ಮಲ್ಲಿ ಇಂಥ ಒಂದು ಸುಮಧುರ ಭಾವೆನೆಯ ಸುರಿಮಳೆ ತಂದ ಆಕೆ ಧನ್ಯಳು :)

    ಸುಮ್ಮನೆ ಹೇಳೋದಲ್ಲ ತುಂಬಾ ರೋಮಾಂಚಕವಾಗಿದೆ ಈ "ಸುಮ್ಮನೆ", ಮನಸಲ್ಲಿ ಏನೋ ಒಂದು ಹೊಸ ಸಂತೋಷ ತಂದಿದೆ ನಿಮ್ಮ ಈ ಸುಮ್ಮನೆ :)

    ವೆರಿ ಗುಡ್ ವರ್ಕ್ ಕೀಪ್ ಇಟ್ ಅಪ್.

    ReplyDelete
  6. ವ್ಹಾವ್ ........!!!!ಸೂಪರ್.....:):)

    ReplyDelete
  7. As usual Awesome!!! :)- -Aurthy :)

    ReplyDelete
  8. Hanumanthappa MagaladaOctober 9, 2012 at 7:05 AM

    very long gap where were u all these days Mr.rajahrudaya?

    ReplyDelete