Mar 7, 2013



"ವ್ಯಾಪಾರಿ"

ನಾನು, ಮುತ್ತು ಕೊಟ್ಟು ಪಡೆವ ವ್ಯಾಪಾರಿ 
ವ್ಯಾಪಾರದಲ್ಲಿ ನಾವಿಬ್ಬರೇ - ನಾನು ಮತ್ತು ಅವಳು 
ಅವಳೊಬ್ಬಳೇ ನನ್ನ ಗ್ರಾಹಕಿ !
ಒಂದೇ ಒಂದು ಮುತ್ತನ್ನು ಬಾಕಿ ಉಳಿಸಿರಲಿಲ್ಲ, ಅಂಥಾ ಗ್ರಾಹಕಿ

ಆದರೆ ಒಮ್ಮೆ ಅವಳ ಗಲ್ಲಕ್ಕೊಂದು ಮುತ್ತು ಕೊಟ್ಟೆ 
ಏಕೋ  - ಮರು ಪಾವತಿಯಾಗಲಿಲ್ಲ 
ತಿಳಿದಿದ್ದಿಷ್ಟೇ ಇನ್ನೆಂದು ಮರು ಪಾವತಿಯಾಗುವುದಿಲ್ಲ 

ನನಗೀಗ ಮುತ್ತಿನ ವ್ಯಾಪಾರದಲ್ಲಿ ಮನಸಿಲ್ಲ 
ಮನಸಲ್ಲಿ ಬಾಕಿ ಇರುವ ಮುತ್ತನು ಬಿಟ್ಟು ಬೇರೆ ಏನೂ ಉಳಿದಿಲ್ಲ 

ಈಗ ನೆನಪುಗಳನ್ನ ಹರವಿಕೊಂಡು ಕೂತಿರುತ್ತೇನೆ 
ಮಾರುವವನು, ಕೊಳ್ಳುವವನೂ ನಾನೇ 
ನನ್ನ ಕಂಡು ಮರುಗುವವನೂ ನಾನೇ 

ಮತ್ತೆ ಮತ್ತೆ ತಾಳೆ ಹಾಕಿ ನೋಡಿದೆ 
ಮತ್ತದೇ ಪಲಿತಾಂಶ --
ವ್ಯಾಪಾರದಲ್ಲಿ ಮೊದಲು ಇಬ್ಬರಿದ್ದೆವು, ಈಗ ನಾನೊಬ್ಬನೇ 
ನಾನು ಈಗಲೂ ವ್ಯಾಪಾರಿಯೇ, ವ್ಯಾಪಾರ ಬದಲಾಯಿತಷ್ಟೇ. 

(ನಿನ್ನೆ ರಾತ್ರಿ ಪುತ್ತೂರಿನ ಮಳೆಯಲ್ಲಿ ಕೂತು ಮೊಬೈಲ್ ಬೆಳಕಿನ-
-ಸಹಕಾರದೊಂದಿಗೆ ಬರೆದದ್ದು !!!)

======
======

6 comments:

  1. ಚೆನಾಗಿದೆ ಸರ್...
    ಇಷ್ಟವಾಯ್ತು...

    ReplyDelete
  2. ಒಂದೇ ಸಲಕ್ಕೆ ನಿರಾಶರಾಗಬೇಡಿ. ನಿಮ್ಮ ವ್ಯಾಪಾರ ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತೇನೆ.

    ReplyDelete
  3. ಮಸ್ತ್ ಮಸ್ತ್ ಕವಿತೆ.. ನಾನೂ ಹಿಂದೊಮ್ಮೆ ಸಂತೆಯಲ್ಲಿ ಮುತ್ತಿನಂಗಡಿ ತೆರೆದು ಕುಳಿತಿದ್ದೆ... ಇಲ್ಲಿದೆ ನೋಡಿ...

    http://sampada.net/blog/dileep-hegde/12/07/2010/26778

    http://vismayanagari.com/node/6963

    ReplyDelete