"ತಾರೆಗಳಂತೆ ಚೆಲ್ಲಾಪಿಲ್ಲಿಯಾದ ಪರಮ ಭಕ್ತನ ಪ್ರಾರ್ಥನಾ ಗೀತೆ"
ನಿನ್ನ ದೀರ್ಘ ಆಲಿಂಗನದ ಬ್ರಮೆಯಲ್ಲಿ ನಾನು
ಕಡಲಲೆಗಳ ಏರು-ಇಳಿವುಗಳಿಗೆ ಮುತ್ತಿಟ್ಟು ಮುಂದೆ ಸಾಗುವ ದೋಣಿ
ಕಿನಾರೆಯ ಬೆಚ್ಚನೆಯ ಮರಳಿಗೆ ನಿನ್ನೆದೆಯ ಶಾಕ
ನಿನ್ನ ಕಣ್ಣ ಹೊಳಪಿಗೆ ಬೆಳಗಬಹುದೇನೋ ಇನ್ನೊಂದು ಲೋಕ
ಪರಿಮಳದ ಹೊಸ ಪರಿಭಾಷೆ ನೀನು
ನಿತ್ಯ ಪ್ರೀತಿಯ ನಿಸರ್ಗ ನೀನು
ಅಕ್ಷರಲೋಕದ ಹೊಸ ಆವಿಷ್ಕಾರ ನೀನು
ಪ್ರೇಮಕವಿಗಳ ಎದೆಯಲ್ಲಿ ನಗುವ ಚೆಲ್ಲಿ ಕುಳಿತವಳು ನೀನು
ನೀನೇ ಸುಂದರಿ, ನೀನೆ ವಿಸ್ಮಯ
ನಿತ್ಯ ಪ್ರೀತಿಯ ನಿಸರ್ಗ ನೀನು
ಅಕ್ಷರಲೋಕದ ಹೊಸ ಆವಿಷ್ಕಾರ ನೀನು
ಪ್ರೇಮಕವಿಗಳ ಎದೆಯಲ್ಲಿ ನಗುವ ಚೆಲ್ಲಿ ಕುಳಿತವಳು ನೀನು
ನೀನೇ ಸುಂದರಿ, ನೀನೆ ವಿಸ್ಮಯ
ಎದೆಯ ತುಂಬಾ ಮಾತಿದ್ದರೂ ಆಡದ ಮೌನ ನೀನು
ನೀನೇ ಸತ್ಯ,
ನೀನೇ ಸತ್ಯ,
ನೆಲದ ಮೈಯ ತೊಳೆಯಲು ಮಳೆಯ ಕರೆವ ಕರೆಯೋಲೆ ನೀನು
ನಗುವನ್ನೇ ಅಲಂಕರಿಸಿಕೊಂಡೆ ನೀನು
ಹೂವಿನೆದೆಯ ಮಕರಂದ ನೀನು
ಕನಸಿಗೂ ಮಾತು ಕೊಟ್ಟ ಭಾಷೆ ನೀನು
ಕಾಮನ ಬಿಲ್ಲಿಗೆ ಬಣ್ಣ ಬಳಿಯುವ ಕುಂಚ ನೀನು
ನನ್ನ ಭಕ್ತಿಗೆ ಒಲಿಯದಿದ್ದರೂ ಸರಿ
ಕಾಮನ ಬಿಲ್ಲಿಗೆ ಬಣ್ಣ ಬಳಿಯುವ ಕುಂಚ ನೀನು
ನನ್ನ ಭಕ್ತಿಗೆ ಒಲಿಯದಿದ್ದರೂ ಸರಿ
ತಿರಸ್ಕರಿಸಬೇಡ,
ಮೆಚ್ಚಿಸಿಕೊಂಡ ಧನ್ಯತೆಯ ಆನಂದ ದುಬಾರಿ
ಆದರೆ, ತಿರಸ್ಕರಿಸಲ್ಪಡುವ ಕಲ್ಪನೆಯೇ ಆಘಾತಕಾರಿ
=====ಮೆಚ್ಚಿಸಿಕೊಂಡ ಧನ್ಯತೆಯ ಆನಂದ ದುಬಾರಿ
ಆದರೆ, ತಿರಸ್ಕರಿಸಲ್ಪಡುವ ಕಲ್ಪನೆಯೇ ಆಘಾತಕಾರಿ
=====
ಇಷ್ಟವಾಯ್ತು ಸರ್...
ReplyDeleteಚೆನಾಗಿದೆ :)..
ಮತ್ತೆ ಅಲ್ಲಿ ಪ್ರೆಮ ಆಗಿದೆ ಒಂದ್ಚೂರ್ ನೋಡಿ..
ನಮಸ್ತೆ :)
ಚನ್ನಾಗಿದೆ...................
ReplyDeleteಆಹಾ! ರೋಮಾನ್ಸ್ ಅಂದರೆ ಹೀಗಿರಬೇಕು!
ReplyDeleteನಿಜವಾಗಲೂ ನಾಗರಾಜ್ ಸಾರ್, ಕಡೆಯ 4 ಸಾಲುಗಳು ನನ್ನನ್ನು ನನ್ನ ಕೆಟ್ಟ ಸ್ಥಿತಿಯನ್ನು ಪದೇ ಪದೇ ನೆನಪಿಸಿದವು
ReplyDelete"ನನ್ನ ಭಕ್ತಿಗೆ ಒಲಿಯದಿದ್ದರೂ ಸರಿ
ತಿರಸ್ಕರಿಸಬೇಡ,
ಮೆಚ್ಚಿಸಿಕೊಂಡ ಧನ್ಯತೆಯ ಆನಂದ ದುಬಾರಿ
ಆದರೆ, ತಿರಸ್ಕರಿಸಲ್ಪಡುವ ಕಲ್ಪನೆಯೇ ಆಘಾತಕಾರಿ "
Nice one Nagraj!
ReplyDelete