Aug 14, 2013

"ಪುರಾತನ ಕಾವ್ಯದ ಆಯ್ದ ಭಾಗಗಳ ಔತಣ"


ಅಸಹಾಯಕ ವಯಸ್ಸಿನಲ್ಲಿ 
ಎಂದೋ ಮರೆಯಾದ ಅವಳ ಸವಿನೆನಪು
ಬಾಡಿದ ಕಣ್ಣುಗಳು 
ಹಸಿಯಾಗುವಷ್ಟು ಪುರಾತನ ಪ್ರೇಮದ ಬಿಸುಪು 
ಇನ್ನಾದರೂ ಬರಬಹುದೇನೋ -ನಿರೀಕ್ಷೆಯಲ್ಲಿ ಕೂತಿದ್ದೇನೆ 
ಕುಳಿತ ಪಾರ್ಕಿನ ಹೆಸರು ನೆನಪಾಗುತ್ತಿಲ್ಲ !!

++++

ಗೊಂದಲಗಳ ನಡುವೆ ಬಾಡಿಗೆ ಮನೆ ಮಾಡಿರುವೆ 
ಬಂದವು ಅವಶ್ಯಕ ಅನವಶ್ಯಕ ವಿಚಾರಗಳು 
ನನ್ನದಲ್ಲದ ಮನೆಯಲ್ಲಿ ನಾನೇ ತಂದ ವಸ್ತುಗಳ ವಿಲೇವಾರಿಯ ಬಗ್ಗೆ ಮತ್ತೆ ಗೊಂದಲಗಳಿವೆ!!
ಹೊರಸಾಗಿಸುವಂತೆಯೂಯಿಲ್ಲ ಎಲ್ಲವೂ ಇರಲೆನ್ನುವಷ್ಟು ಜಾಗವೂಯಿಲ್ಲ 

=====
=====

5 comments:

  1. ಚೆನ್ನಾಗಿದೆ ಪುರಾತನ ಕಾವ್ಯ :)

    ReplyDelete
  2. ಇದು ಪುರಾತನವೂ ಹೌದು, ನಿತ್ಯನೂತನವೂ ಹೌದು!

    ReplyDelete
  3. Tamma... nanna mane hattirave ide...mareyabeDa..
    hha hha...

    chennaagide...

    ReplyDelete