Jun 12, 2017


ಆಕಸ್ಮಾತ್ತಾಗಿ ಬಂದ ಗೆಳೆಯನಿಗೊಂದು ಮಾತು 


ಗೆಳೆಯಾ ..
ಕರಾವಳಿಯಲಿ ದಿನಗಟ್ಟಲೆ ಸುರಿದ ಮಳೆನೀರು
ಕಲ್ಲುಭೂಮಿಯ ಕೃಪೆಗೆ ಶರಧಿಯ ಪಾಲು

ಮುಗಿಲಾ ಹರ್ಕೊಂಡ ಬಿದ್ದ ಮಳೆಯೊಳು ಹೇಗೆ ಹೋಗಿ ತರಲಿ ಆಲ್ಕೋಹಾಲು,
ನೀನೆ ಹೇಳು

ಬಜ್ಜಿ, ಬೋಂಡ, ಬೋನ್ಲೆಸ್ ಚಿಕನ್ ಕಬಾಬುಗಳ ಸರಕಾರಿ ಭಾಗ್ಯವಿಲ್ಲ !
ಸಕ್ಕರೆ ಬೆರೆಸಿ ಕುಡಿಯೋಣವೇ?  ಬಿಸಿ ಹಾಲು

ಅರರೆ ...ಗುಮ್ಮುವಂತೆ  ಗುರಾಯಿಸುಬೇಡ.
ಮಳೆಹನಿ ಹೊಡೆತ ಕಡಿಮೆಯಾಗಲಿ ತಂದರಾಯಿತು ಒಂದೆರಡು ಫುಲ್ ಬಾಟ್ಲು
======