Jun 12, 2017


ಆಕಸ್ಮಾತ್ತಾಗಿ ಬಂದ ಗೆಳೆಯನಿಗೊಂದು ಮಾತು 


ಗೆಳೆಯಾ ..
ಕರಾವಳಿಯಲಿ ದಿನಗಟ್ಟಲೆ ಸುರಿದ ಮಳೆನೀರು
ಕಲ್ಲುಭೂಮಿಯ ಕೃಪೆಗೆ ಶರಧಿಯ ಪಾಲು

ಮುಗಿಲಾ ಹರ್ಕೊಂಡ ಬಿದ್ದ ಮಳೆಯೊಳು ಹೇಗೆ ಹೋಗಿ ತರಲಿ ಆಲ್ಕೋಹಾಲು,
ನೀನೆ ಹೇಳು

ಬಜ್ಜಿ, ಬೋಂಡ, ಬೋನ್ಲೆಸ್ ಚಿಕನ್ ಕಬಾಬುಗಳ ಸರಕಾರಿ ಭಾಗ್ಯವಿಲ್ಲ !
ಸಕ್ಕರೆ ಬೆರೆಸಿ ಕುಡಿಯೋಣವೇ?  ಬಿಸಿ ಹಾಲು

ಅರರೆ ...ಗುಮ್ಮುವಂತೆ  ಗುರಾಯಿಸುಬೇಡ.
ಮಳೆಹನಿ ಹೊಡೆತ ಕಡಿಮೆಯಾಗಲಿ ತಂದರಾಯಿತು ಒಂದೆರಡು ಫುಲ್ ಬಾಟ್ಲು
======

2 comments:

  1. ಅಹಾ, ನಾಗರಾಜರೆ, ಇಷ್ಟು ವರ್ಷ ಎಲ್ಲಿ ಮಾಯವಾಗಿದ್ದಿರಿ? ಅಥವಾ ಇದು ಫುಲ್ ಬಾಟ್ಲುಗಳ ಪ್ರಭಾವವೆ? ಇರಲಿ, ನಶೆ ಏರುವಂತೆಯೇ ಇದೆ ಈ ಕವನ. ಅಭಿನಂದನೆಗಳು.

    ReplyDelete
  2. Thanks a lot sir... quite busy... writing continues now....

    ReplyDelete