Mar 14, 2012

"ಮರೆತುಬಿಡಲು ನೆನಪಿಸಿಕೊಂಡು"

ನೆನಪುಗಳಲ್ಲಿ ಮೈತೊಳೆದುಕೊಂಡೆ
ಮೈ ಹಗುರ, ಮನಸೇಕೋ ಭಾರ
ಸಮಾಧಾನಕ್ಕೆ ಗುಡಿಗೆ ಹೋದೆ
ದೇವರು ದೂರ, ನೆನಪುಗಳು ಇನ್ನೂ ಹತ್ತಿರ

ಮರೆತುಬಿಡಲು ನೆನಪಿಸಿಕೊಂಡೆ
ಮತ್ತೆ ಮರೆಯಲಾಗಲೇಯಿಲ್ಲ
ಏಕಾಂತಕ್ಕೆ ಸ್ಮಶಾನಕ್ಕೆ ಹೋದೆ
ಏಕಾಂತ ಸಿಗಲೇಯಿಲ್ಲ, ಹೊಸ ಹೆಣದ ಹೂವಿನ ಘಮವೇ ಎಲ್ಲಾ

ಮಾತು ಬೇಡವೆಂದುಕೊಂಡೆ
ಮೌನ ಸುಮ್ಮನಾಗಲೇಯಿಲ್ಲ
ಸುಮ್ಮನೆ ಕಡಲ ತೀರಕ್ಕೆ ಹೋದೆ
ಅಲೆಗಳೇಯಿಲ್ಲ ನೆನಪುಗಳೇ ಎಲ್ಲಾ

=====
=====

18 comments:

  1. ಕಾಡುವ ನೆನಪುಗಳನ್ನು ಭಾವಪೂರ್ಣವಾಗಿ ಕವಿತೆಯಲ್ಲಿ ಬಂಧಿಸಿದ್ದೀರಿ!

    ReplyDelete
  2. kavana tumba chennagide sir...nimma kalpanege hats of.............

    ReplyDelete
  3. ege kavana barita eri sir.........

    ReplyDelete
  4. ಕಾಡುವ ನೆನಪುಗಳ ಕವನ ಚೆನ್ನಾಗಿದೆ ನಾಗರಾಜ್..:)

    ReplyDelete
  5. ಚೆನ್ನಾಗಿದೆ ಕವನ, ಹೊಸ ಹೆಣದ ಹೂಗಳಿಗೆ ಘಮ ಇಲ್ಲ..ಹಳೆ ಹೆಣಗಳಿಗೋ ??

    ReplyDelete
  6. ನಾಗರಾಜ್ ನೆನಪುಗಳೇ ಹೀಗೆ ಅಲ್ಲವೇ...

    ReplyDelete
  7. ನಾಗು,
    ಕಾಡುವ ನೆನಪುಗಳು ಬೆಂಬಿಡವು...
    ನೆನಪಾಗಿ ಮತ್ತೆ ಕಾಡುವವು........

    ಚಂದದ ಭಾವ ಪೂರ್ಣ ಕವನ,

    ReplyDelete
  8. ನಾಗರಾಜ್: ನೆನಪುಗಳು ಇಷ್ಟೊಂದು effective ಅಂತ ನನಗೆ ಗೊತ್ತೇ ಇರಲಿಲ್ಲ..ತುಂಬಾ ಚೆನ್ನಾಗಿ ಬರೆದಿದ್ದೀರಿ..

    ReplyDelete
  9. ಕವನದ ಪ್ರತಿ ಅಕ್ಷರಗಳು ನೆನಪಿನಲ್ಲೇ ಮೈ ತೊಳೆದು ಕೊಂಡಂತಿದೆ.... ತುಂಬಾ ಚೆನ್ನಾಗಿದೆ..

    ReplyDelete
  10. ನೆನಪುಗಳು ಹಾಗೆ .. ಬೆಂಬಿಡದೆ ಕಾಡ್ತವೆ ... ಚೆನ್ನಾಗಿದೆ ಕವನ .. ಪ್ರತೀ ಪದದಲ್ಲೂ ನೆನಪಿನ ಸುಂದರ ತೋರಣ
    http://nenapinasanchi.wordpress.com

    ReplyDelete
  11. ನಮ್ಮ ಬದುಕಿನಲ್ಲೂ ಹೀಗೆಯೇ ಎಷ್ಟೊಂದು ವಿರೋಧಾಭಾಸಗಳಲ್ಲವೇ? ಇರುವುದು ಇಷ್ಟವಿಲ್ಲ, ಇಷ್ಟಪಡೋದು ದಕ್ಕೊಲ್ಲ. ಹುಡುಕಾಟವೇ ಜೀವನವೇ ?
    ಚೆನ್ನಾಗಿದೆ ಕವನ :-)

    ReplyDelete
  12. @Praveen, Shivanna, Sandhya, Nenapinasanchi and Prashasti : Thank you

    ReplyDelete
  13. nenapina bagegina nimma kavana thumbaa chennaagide.

    ReplyDelete