ಅಂದೊಮ್ಮೆ ಹಿಂದೆ
ಜನ್ಮಗಳ ಹಿಂದೆ ಘಟಿತ ಸುದ್ದಿ ಹೇಳುವೆ
ಕೇಳೆ,
ಅದು ಇಂಥದ್ದೇ ಒಂದು ಮುಸ್ಸಂಜೆ ವೇಳೆ
ಕಲ್ಲಿಗೆ ರೂಪಕೊಟ್ಟು
ನುಣುಪುಕೊಟ್ಟು, ಜೀವಕೊಟ್ಟಿದ್ದ ಯುವಶಿಲ್ಪಿ
ಜಗತ್ಸುಂದರಿಯ ಗಂಡ ಸಾಮ್ರಾಜ್ಯದರಸ
ಶಿಲೆಯ ನೋಡಿ, ಮುಟ್ಟಿ ಕಲೆಯ ಕಂಡು
ಹೊಗಳಿದ - 'ಎನ್ನರಸಿಗಿಂತ ಸೊಗಸು'
ಶಿಲ್ಪಿ ಅಂದದ್ದಿಷ್ಟೇ -'ಸಾರ್ಥಕವಾಯಿತು'
ಧರೆಯ ಸುಂದರಿಯನ್ನ ಕಲ್ಲಲ್ಲಿ ಸೃಷ್ಟಿಸಿದ ಅಹಂ
ಅರಸನ ಮೆಚ್ಚುಗೆ, ಪಾರಿತೋಷಕ
ಕೊಬ್ಬಿದ ಹರೆಯ - ಶಿಲ್ಪಿಯ ನರನಾಡಿಗಳಲ್ಲಿ ಜಿಂಕೆಯಂತೆ ಓಡುತ್ತಿದ್ದವು
ಆ ಮುಸ್ಸಂಜೆ ವೇಳೆ
ನದಿಯ ದಂಡೆಯುದ್ದಕ್ಕೂ ನಡೆದು ಬರುತ್ತಿದ್ದ
ಹೊಸದಾರಿಯ ಹಿಡಿದು ಮನೆಗೆ ಹೋಗುತ್ತಿದ್ದ
ಮಹಾಸ್ಪೋಟವಾಯಿತು :ಒಮ್ಮೆಲೇ ಬಾಯಿ ತೆರೆದು ಉಸಿರು ಹಿಡಿದ
ಬೆಚ್ಚಿದ, ಪಾರಿತೋಷಕವನ್ನ ನದಿಗೆ ಬಿಸಾಡಿದ
ಕುಸಿದು ಮಂಡಿಯೂರಿ,ಆತ್ಮಸುಂದರಿಗೆ ಶರಣಾದ
ಅವಳು ಕಂಡಕೂಡಲೇ, ಇಂಥದ್ದೇ ಆ ಮುಸ್ಸಂಜೆ ವೇಳೆ
ಈವರೆಗೆ ಕಂಡ ಸೌಂದರ್ಯ, ಸೌಂದರ್ಯವೇ ?
ಪ್ರಶ್ನೆ ಮೂಡುವುದರೊಳಗೆ ಕೂಗಿದ - 'ಸುಂದರಿ'
ಒಮ್ಮೆ ನೋಡಿದಳು, ಮುಂಗುರುಳ ಹಿಂದೆ ತುಸು ನಕ್ಕಳು
ಶಿಲ್ಪಿ ಮಂಡಿಯೂರಿ ಸೌಂದರ್ಯ ಸವಿಯುತಿದ್ದ
ಆಹ್ವಾನ ಕೊಟ್ಟಳು -'ಬೇಕೆಂದರೆ ಹುಡುಕಿ ಬಾ'
ನೋಡನೋಡುತ್ತಿದ್ದಂತೆ ಮರೆಯಾದಳು
ಶಿಲ್ಪಿ, ಆಗಲೆಂಬಂತೆ ಅಮಲಿನ ನಗೆ ನಕ್ಕ
ಹೊಸ ಮಜಲಿಗೆ ತಯಾರಾದ
ನದಿ ದಂಡೆಯ ಮೇಲೆ, ಆ ವೇಳೆ
ಇಬ್ಬರಿಗೂ ಜನ್ಮಗಳುರುಳಿದವು - ಹುಡುಕಾಟ ತಪಸ್ಸು
ಇದು ಜನ್ಮಗಳ ಹಿಂದೆ ನಿನಗಾಗಿ ಶುರುವಾದ ಅನ್ವೇಷಣೆ
ಇಂದಿಗೆ ಪಲಿತಾಂಶ - ನೀನು ಕಂಡ ಮೇಲೆ
ಅಂಥದ್ದೇ ಒಂದು ಈ ಮುಸ್ಸಂಜೆ ವೇಳೆ
'ಮತ್ತೆ ಮರೆಯಾಗದಿರು' - ಅನ್ವೇಷಕನ ಪ್ರಾರ್ಥನೆ
=====
=====
ತುಂಬಾ ಮಾರ್ಮಿಕವಾದ ಕವನ ಶಿಲ್ಪಿ ಹೆಚ್ಚೋ - ಅಥವಾ - ಅವನು ಮಾಡಿದ ಶಿಲ್ಪವೇ ಹೆಚ್ಚೋ ಎನ್ನುವ ಜಿಜ್ಞಾಸೆ ತಂದಿಟ್ಟ ಕವನ. ಮೆಚ್ಚಿಗೆಯಾಯಿತು.
ReplyDeletehttp://badari-poems.blogspot.in/
ಸೊಗಸಾದ ಕಥನಶೈಲಿಯ ಕವನ. ತುಂಬ ಇಷ್ಟವಾಯಿತು.
ReplyDeleteHey nagraj,,,,,when i started reading this,,i couldnot able to stop imagine the characters its bcoz your words have that power to create the pictures infront our eyes,its awesome:-),,,,,
ReplyDelete@ Badriyanna, Sunaath Sir and Sowmya : Thank u so much . . .
ReplyDeleteತುಂಬಾ ಚೆನ್ನಾಗಿದೆ ನಾಗರಾಜ್..
ReplyDeleteKavanadalle kathe helida reeti super....
ReplyDeletechanda chanda.... :) :)
@Ashok, Sandhya: Thank u . . .
ReplyDeleteಕವನದಲ್ಲಿನ ಕಥೆ ತುಂಬಾ ಚೆನ್ನಾಗಿದೆ. ನೀವು ಬರೆದ ಶೈಲಿ ನನಗೆ ಇಷ್ಟವಾಯಿತು.
ReplyDeleteನನ್ನ ಬ್ಲಾಗಿಗೂ ಭೇಟಿ ಕೊಡಿ.