Apr 14, 2010

"ಶುರುವಾಯ್ತಲ್ಲರೀ . . ."

ರೋಡಿನಲಿ ಹಾರಡಿಕೊಂಡು ಬೀಳುವ ಹಳದಿ ಹೂಗಳು
ಒಡಲುಕ್ಕಿ ಹರಿಯುವ ಚರಂಡಿಗಳು
ಅಕ್ಕ ಪಕ್ಕ ಸಿಕ್ಕ ಸಿಕ್ಕ ಮರ,ಮನೆಗಳ ಕೆಳಗೆ ಪಿಳಿ ಪಿಳಿ ಕಣ್ಣು ಬಿಡುವ ಗಂಡು ಹೆಣ್ಣು.
ಬೋಂಡ ಬಜ್ಜಿಯ ಕರೆಯೋಲೆ ಆಹಾ ಆಹಾ

ಚಹಾದ ಘಮ ಘಮ, ಸಿಗರೇಟಿನ ಘಾಟು

ಮನೆಯಂಗಳದಲಿ
ಮುಗಿಲಿಗೆ ಬಾಯೊಡ್ಡಿ, ಕೈ ರೆಕ್ಕೆ ಮಾಡಿಕೊಂಡು ಗಿರ ಗಿರ ತಿರುಗುವ ಪುಟ್ಟ ಪುಟ್ಟಿ
ರಾತ್ರಿ ಬರುವ ಕರೆಗೆ, ಸಂಜೆಯಿಂದಲೆ ಮೊಬೈಲನ್ನ ತಬ್ಬಿಕೊಂಡ ರೆಪ್ಪೆಗಂಟಿದ ಹನಿ
ಪದೆ ಪದೆ ಹಾಸಿಗೆಯಲಿ ಮುದುಡಿಕೊಳ್ಳುವ ಮದುವೆ ಸಿಶ್ಚಯವಾದ ಹುಡುಗ ಹುಡುಗಿ
'ಮಗ, ಅರ್ಜೆಂಟ್ ಆಗಿ ಒಂದು ಹುಡುಗಿನ ಲವ್ ಮಾಡ್ಬೇಕನಿಸ್ತಿದೆ ' ಅನ್ನೋ ಸ್ನೇಹಿತ
ಅಂತು ಇಂತೂ ಮಳೆಗಾಲ ಶುರುವಾಯ್ತು.


=====
=====

15 comments:

  1. NAGA male huytu, igladru sangati hudko..
    illa andre male gaalanella obbanti age kaldu bidtiya,
    tea cigarate gala naduve kaledu hogtiya.

    poem chennagide

    ReplyDelete
  2. ಅಂತೂ ನಮಗೆ ಬಜ್ಜಿ ಬೋಂಡಾ ನೆನಪು ಮಾಡಿ ಬಿಟ್ರಿ
    ಚೆನ್ನಾಗಿದೆ ಸಾಲುಗಳು

    ReplyDelete
  3. ಕವನ ಚೆನ್ನಾಗಿದೆ.ಈ ವೈಶಾಕದಲ್ಲೇ ನಿಮ್ಮ ಜೀವನದ ಶ್ರಾವಣ ಶುರುವಾಗಲಿ.

    ReplyDelete
  4. ಮೊನ್ನೆ ಮಳೆ ಸುರಿಯುವಾಗ, ಟೀ ಅಂಗಡಿಯ ಮುಂದೆ ಗೆಳೆಯನ ಜೊತೆ ನಿಂತಾಗ ನೋಡಿದ-ಅನುಭವಿಸಿದ ಸಾಲುಗಳಿವು.
    ಏನೋ ಮಳೆಗಾಲ ಶುರುವಾಯ್ತು ಅಂತ ಬರೆಯೋಣ ಅನ್ಸ್ತುಸುಮ್ಮನೆ ಸ್ವಗತವೆನ್ನುವಂತೆ ಬರೆದೆ, ನಿಮಗೆಲ್ಲಾ ಇಷ್ಟ ಆಗಿದೆ ಥ್ಯಾಂಕ್ಸ್.
    ಎಲ್ಲರಿಗೂ ಮಳೆಗಾಲದ ಶುಭಾಶಯಗಳು.

    ReplyDelete
  5. ರೀ "NRK"..,
    ನನಗಂತೂ 'ಒಲವಿನ ಮಳೆ' ಬೇಕೆನಿಸುತ್ತಿದೆ..

    ReplyDelete
  6. kavana chennaagide...... innoo bisila jhaLa ide.... maLegaalada olage hudukikoLLi.......

    ReplyDelete
  7. Thumba dina admele light agi nim blog alli male agiro tara ide... Chenagide,,, Heege barta irli...

    ReplyDelete
  8. ಮಳೆಗಾಲ ಇನ್ನೇನು ಶುರುವಾಗಲಿದೆ. ಬೋಡಾ ಬಜ್ಜಿ ನೆನಪು ಮಾಡಿಬಿಟ್ಟಿರಲ್ಲ. ಚೆನ್ನಾಗಿದೆ ಕವನ

    ReplyDelete
  9. ಬೋಂಡ ಬಜ್ಜಿಗಳಿಗೆ ಮನಸೋತ ಎಲ್ಲರಿಗೂ, ತುಂಬಾ ಥ್ಯಾಂಕ್ಸ್ . ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲೆಂದು ಬಯಸುವೆ.

    ReplyDelete
  10. Thumba chenaagide............
    aa maleyalli neneyo putta hudugi agbeku anno aase baro haaage maadidya........ :-)
    Joru male bisi bisi bonda,tea-adbutha combination..........:-)
    light agi male barthane ide alva, so feelings alli idya............???? :)

    ReplyDelete