Apr 27, 2010

ವರ್ಷಾ..

ಆಹಾ ..

ಬಿರುಬೇಸಿಗೆಯಲ್ಲಿ ಮಳೆಯ ಪ್ರಭಾವ.. ಸಂಜೆ ಆದಂತೆ ಜೋರು ಜೋರು ಗಾಳಿ, ತುಂತುರು ಮಳೆ..
ಉಳಿದಹೊತ್ತು, ಬೆವರ ಮಳೆ ...
ಆದರೆ ಗೆಳತಿ, ಮನಸೆಲ್ಲ ಮುಂಗಾರು ಮಳೆ..!!
ಎಲ್ಲ ಹನಿಗಳ ಲೀಲೆ..

ನೆನಪಿದಿಯ..? ನಮ್ಮಿಬ್ಬರ ಮೊದಲ ಭೇಟಿ. ಆ ಮಳೆಗಾಲದ ದಿನ, ಶಾಲೆ ಬಿಟ್ಟ ವೇಳೆ ಮುಖ ಮುಚ್ಚುವಂತೆ ಕೊಡೆ ಹಿಡಿದು ಓಡಿ ಬರುವಾಗ ಒಬ್ಬರಿಗೊಬ್ಬರು ಡ್ಯಾಶ್ ಹೊಡೆದದ್ದು...!!
ಗುನು ಗುನು ಅಂತ ನನ್ನ ಬೈಕೊಂಡು ಹೋಗಿ ಮರದಡಿಗೆ ನಿಂತಿದ್ದು..
ಬಾಲ್ಯದ ಆ ಮಳೆಗಾಲ ಎಷ್ಟೊಂದು ಚೆನ್ನ..


"ವೋ ಕಾಗಜ್ ಕಿ ಕಷ್ತಿ, ವೋ ಬಾರೀಶ್ ಕ ಪಾನಿ.."


ಕೊಡೆ ಇದ್ದರು, ಮಡಚಿಟ್ಟು... ರೈನ್ ಕೋಟ್ ಬಿಚ್ಚಿ..
ಓ ಓ ಓ ... ವೋ... ಅಂತ ಕೂಗಿಕೊಂಡು ಕುನಿದಾಡ್ತಾ ಆ ಮಳೆಯಲ್ಲಿ ನೆನೆಯೋದು ಮಜಾ ರೆ ಮಜಾ..
ತಲೆಯಲ್ಲ ವದ್ದೆ ಆಗಿ, ಸ್ಕೂಲ್ ಉನಿಫಾರ್ಮ್ ಕೆಸರಿಕರನವಾದದ್ದು
ಅಮ್ಮ ಬೈಕೊಂಡು ಬೈಕೊಂಡು ತಲೆ ವರಸಿದ್ದು..
ಕೊಡೆ ಕಳೆದಾಗ, ತಲೆ ಮೇಲೆ ಎರಡು ಕೊಟ್ಟಿದ್ದು....
ಆ ಹಾ.. ಸವಿ ಸವಿ ನೆನಪು..
ಮನದಲ್ಲಿ ಹಸಿ ಹಸಿ..

ಅವೆಲ್ಲ ಆಗಿ ಎಷ್ಟು ವರುಷಗಳಾದವು ,, ಎಷ್ಟು ಮಳೆಗಾಲ ಕಳೆದವು..
ಕೆಲ ವರುಷಗಳ ಅಗಲಿಕೆ, ಮತ್ತೆ ಮಳೆಗಾಲದ ಸಂಜೆ ಭೇಟಿ, ನೆನಪುಗಳ ಮೋಡದಲ್ಲಿ ಮನಸುಗಳು ತೇಲಾಡಿದ್ದು..
ನಮ್ಮಿಬ್ಬರ ಪ್ರೀತಿ....!!!!!!


ಹಾ..! ಆ ಸಂಜೆ ಪಾನಿಪುರಿ ತಿಂದು ಇನ್ನೇನು ಹೋರದಬೇಕು ಅನ್ನೋದ್ರಲ್ಲಿ ತುಂತುರು ಸುರಿದ ಮಳೆ..
ಮೊದಲೆಲ್ಲಾ, ಮಳೆ ಅಂದ್ರೆ ಕೆಸರು... ಶ್ಹೀ ಶ್ಹೀ.. ನೆನೆದರೆ ಆಕ್ಷ್ಹೀ.. ಅನ್ನೋಳು.. ಅವತ್ತು ಹೇಗೆ ನೆನೆದೆ, ಕುಣಿದೆ,,
ಚಪ್ಪಲಿ ಕೈಯಲ್ಲಿ ಹಿಡಕೊಂಡು ನಡೆದದ್ದು.. ನಿಲ್ಲದ ನಿನ್ನ ಆ ಚಿಕ್ಕ ಚಿಕ್ಕ ಗುಂಡಿಯಲ್ಲಿನ ಜಿಗಿತ...

ಮಳೆ ಜೋರಾದಾಗ, ಅಲ್ಲೇ ಇದ್ದ ಟೀ ಅಂಗಡಿಯ ಶೆಡ್ದಲ್ಲಿ ನಿಂತು ನಿನ್ನ ಕುದಲೋಮ್ಮೆ ಸೊಂಯ್ಯನೆ ತಿರುಗಿಸಿದ್ದು...
ಆಹಾ ಆಹಾ,, ಅವತ್ತು ನನ್ನ ನಾನು ಕಷ್ಟ ಪಟ್ಟು ಕಂಟ್ರೋಲ್ ಮಾಡಿದ್ದು...!!!
ಶೆಡ್ಡಿನ ಸಂದಿಯಿಂದ ಸರಿಯುತ್ತಿದ್ದ ಹನಿಗಳಿಗೆ ಕೈ ಒಡ್ಡಿ ನನ್ನ ಮುಖಕ್ಕೆ ಎರಚಿದ್ದು..

ಒಂದು ಮಾತು, ಅವತ್ತಿನ ನಿನ್ನ ಚೆಲುವಿನ ಬಗ್ಗೆ ಎನ್ಹೆಳಲಿ..
ನೀನು ಇಷ್ಟೇ ಸರಿಸಿದ್ದರು ನಿನ್ನ ಮುಖಕ್ಕೆ ಅಂತು ಕೊಂಡೆ ಇದ್ದ ಆ ಕೂದಲ ಗುಂಪು..
ನಿನ್ನ ಹಣೆ, ಕಣ್ಣ ರೆಪ್ಪೆ ಮುದ್ದಿಸುತ್ತಿದ್ದ ಇನ್ನೊಂದು ಕೂದಲ ಗುಂಪು..
ಕಿವಿಯ ತುದಿ, ಮೂಗಿನ ತುದಿಗೆ ಜೋತು ಬಿದ್ದ ನೀರ ಹನಿ..!
ಬೆವರ ಹನಿಗಳು ಮುತ್ತಿಟ್ಟಂತ ಕಾಣುತಿದ್ದ ನಿನ್ನ ಹಣೆ..,
ನೀಲಿ ಬಣ್ಣದ ಓಲೆ.. ಒಂದು ಒಲೆಗೆ ಸುತ್ತಿಕೊಂಡ ಕೂದಲು..
ಆಕಾಶ ನೀಲಿ ಚುಡಿ...
ಚಂದಿರನಿಗೆ ಚುಕ್ಕಿ ಇಟ್ಟ ಹಾಗೆ ನಿನ್ನ ನಯನ...
ಆ ಕೆಂದುಟಿ...
ಅಬ್ಬಾ... !!!


"ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಗ್ನ್ಯ"


ಅಸಲಿಗೆ ನಮ್ಮಿಬ್ಬರದು ಎಂಥ ಸಮಾಗಮ..?
ನನ್ನದು.. ಲೆತು, ವೆಲ್ದಿಂಗು, ಗ್ರಿಲ್ಲಿಂಗು, ದ್ರಿಲ್ಲಿಂಗು...!!
ನಿನ್ನದು.. ಸ್ಕೆತೊಸ್ಕೊಪು, ಎಕ್ಸ್ ರೆ, ಸ್ಕಾನಿಂಗು ....!!
ಹಾ.. !!


ಮೈ ಡಿಯರ್ ಹನಿ,
ಹನಿ ಹನಿಗಳಿಂದ ಹಳ್ಳ ಅಂತಾರೆ..
ನಾನು ಮೆಡಿಕಲ್ ಸೇರಿಲ್ಲ, ಮನೆಯಲ್ಲಿ ಮದುವೆಗೆ ಒಪ್ಪಿಗೆ ಕೊಡ್ತಾರೋ ಇಲ್ಲವೋ ಎಂದು ನೀನು ಸೀರಿಯಸ್ ಆಗಿ ಇಟ್ಟ ಕಣ್ಣೀರ ಹನಿ,,,
ಒಪ್ಪಿಗೆ ಕೊಟ್ಟಾಗ ಆನಂದ ಭಾಷ್ಪ..
ನಿನ್ನ ಹಣೆಗೆ ಮೊದಲ ಹೂ ಮುತ್ತು ಕೊಟ್ಟಾಗ , ನಿನ್ನ ಕಣ್ಣಂಚಲಿ ಬಂದ ಆ ಮುತ್ತು ಹನಿ..!
ಪಾನಿಪುರಿ ತಿನ್ನೋವಾಗ ನಿನ್ನ ಕೇಳ ತುಟಿಗೆ ನೇತಾಡುತ ನನ್ನ ಗಂಟಲ ಒಣಗಿಸುವ ಆ ಹನಿ,,,,!!!


ಹೆಜ್ಜೆನಿನಂತೆ ಸುರಿಯುವ ಪುಟ್ಟ ಕಂದಮ್ಮಗಳ ಜೊಲ್ಲ ಹನಿ..

ಮಳೆಗೂ ನಮಗೂ ಎಂಥ ಸಂಭಂದವೋ..?
ಇನ್ನು ಬೆರಳೆಣಿಕೆಯ ದಿನಗಳಲ್ಲಿ ನಮ್ಮ ಮದುವೆ....!!

ಆ ದಿನವು ಮಳೆ ಬಂದರೆ ಎಷ್ಟು ಚೆನ್ನ..
ಹಸಿ ಹಸಿ.. ಬಿಸಿ ಬಿಸಿ.. !!

ಮತ್ತೊಂದು ಮಾತು,,
ನಮ್ಮ ಮಗಳ ಹೆಸರು......
" ವರ್ಷಾ "

***

( ಇದು ಎರಡು ವರ್ಷಗಳ ಹಿಂದೆ ಬರೆದದ್ದು. ನಾಗ {NRK} ಬರೆದ 'ಶುರು ಆಯ್ತಲ್ರಿ' ಓದಿ ನೆನಪಾಯಿತು )

11 comments:

  1. ಚೆನ್ನಾಗಿದೆ ಕಣ್ರೀ,
    ಇದು ನಿಮ್ಮ ಜೀವನದ ಕತೆಯೋ, ಅಥವಾ ಕಾಲ್ಪನಿಕ ಕತೆಯೋ?
    ಸುಂದರವಾಗಿದೆ.

    ReplyDelete
  2. ಬೆಡಗೆ ಯವರೇ , ಅದ್ಭುತ ಕಣ್ರೀ.
    ಬೆಳಗೆರೆ ಶೈಲಿ ಲೀ ಬರ್ದಿದಿರಾ, ಅವ್ರಿಗಿಂತ ಚೆನ್ನಾಗಿ ಬರ್ದಿದಿರಾ.

    ReplyDelete
  3. ಬಿಸಿಲ ಬೇಗೆಯಲ್ಲಿ ಮಳೆಯ ಹಳೆಯ ನೆನಪು ಚೆನ್ನಾಗಿದೆ
    "ವರ್ಷಾ" ಪೂರ್ತಿ ಮಳೆಯ ಹನಿಗಳ ನೆನಪಾಗಿದೆ ಅನ್ಸುತ್ತೆ,,
    ,,,ಸಾಲುಗಳು ತುಂಬಾನೇ ಇಷ್ಟ ಆಯ್ತು

    ReplyDelete
  4. ಒಂದು ಸುಂದರ ಕಥೆ
    ಕಣ್ಣಿಗೆ ಕಟ್ಟುವಂತೆ ಹೇಳಿದ್ದಿರಾ
    ನಿಜದ ಕಥೆಯ?

    ReplyDelete
  5. wow,,, wat a feelings,,,,very curious to know who is tat lucky girl...keep it up

    ReplyDelete
  6. Thumba chanagidde

    ReplyDelete
  7. ಹಲೋ ಸರ್,

    ಚೆನ್ನಾಗಿ ಬರೆದಿದ್ದೀರಿ...ಮೊದಲು ಓದುತ್ತಾ ಖುಶಿಯೆನಿಸಿದರೂ ನಂತರ ಇದು ಕಲ್ಪನೆ ಕಥೆಯೆನ್ನಿಸಿತ್ತು. ಮುಂದುವರಿಸಿ....

    ಬಿಡುವಾದಾಗ ನನ್ನ ಬ್ಲಾಗಿನೆಡೆಗೆ ಬನ್ನಿ.
    http://www.chaayakannadi.blogspot.com/

    ReplyDelete
  8. @:praveen Sir (Manadaaladinda) &
    Gurumurthy Sir (Saagaradacheya Inchara): Idu kalpanika, nimma pratikriyege dhanywada..

    @:Chandru Bhat, Malingaraya, A-Parichita, Chaitra ks: Nimmellarigu thanks..

    @: Shivu Sir, thank you.. Blog lokakke hosabaru naavu, Nimmellara Preeti, Prosaha heege Irali..
    Pennupaperige swagat...

    ReplyDelete
  9. ಭಾವನೆಗಳ ಉತ್ಕಟ ಅಭಿವ್ಯಕ್ತಿ ಜೊತೆಗೆ ರೋಮಾ೦ಚಕ ಭಾಷೆ. ಚೆ೦ದದ ಗದ್ಯ ಕಾವ್ಯ.

    ReplyDelete
  10. superb...........Abba ful feeilngs sir........:-)

    ReplyDelete