May 6, 2010


"ಕಾಣದ ನೋವು"

ಬರೆಸಿಕೊಳ್ಳುವ ಹಾಳೆ ಕೇಳಿತು,
ಬರೆವ ಕವಿಗೊಮ್ಮೆ !
ಮರದುಸಿರ ನಿಲ್ಲಿಸಿ
ಕೊರೆದು ಅರೆದು ತರೆವಾರಿ ಕತ್ತರಿಸಿ ನಗುವಾಗ,
ಮರದಳಲು ನಿನಗೆ ಕೇಳಲಿಲ್ಲವೇ ?
ಎಲ್ಲರ ಮನದಾಳಕಿಳಿವ ಕವಿಯೇ .
ನಿನ್ನ ಪ್ರತಿ ಅಕ್ಷರವೂ ನನ್ನೆದೆ ಇರಿವಾಗ,
ಮಾನವೀಯ ಮೌಲ್ಯ ಎತ್ತಿ ಹಿಡಿವ ಕವಿತೆ
ಬರೆದೆ ಎನ್ನುವ ಹೆಮ್ಮೆಯಲಿ ನೀನಿರುವಾಗ,
ನನ್ನೆದೆಯ ರಕ್ತದ ಕಲೆ ನಿನಗೆ ಕಾಣಲಿಲ್ಲವೇ ?

ಮೃದು ಕವಿ ನಕ್ಕು ನುಡಿದ:
ಎಲ್ಲವೂ ಅನುಭವಿಸಬೇಕಾದ ಅನಿವಾರ್ಯತೆ.
ಹಾಳೆಯಕಣ್ಣಲ್ಲಿ ಕಣ್ಣಿಟ್ಟು ನೋಡಿದ ಕವಿಗೆ
ಹೊಳೆಯಿತು ಹೊಸ ಕವಿತೆ.

=====
=====

20 comments:

  1. ಹಾಳೆ ಕೇಳಿದ್ದರ ಬಗ್ಗೆ ಒಮ್ಮೆ ಯೋಚಿಸಿ ನೋಡಿದರೆ ಹೌದು ಅನ್ನಿಸುತ್ತದಲ್ವಾ?
    ಅದರೂ..................
    ಯಾರದೋ ಸಾಧನೆ, ಉದ್ಧೇಶದ ಹಿಂದೆ ಇನ್ನ್ಯಾರದೋ ತ್ಯಾಗ ಇದ್ದೆ ಇರುತ್ತಲ್ಲ!

    ReplyDelete
  2. @ ಮನದಾಳದಿಂದ: ಖಂಡಿತ ನಾವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಅವಲಂಬಿತರೆ. . .
    ಹಾಳೆಗೂ ಕಣ್ಣಿದೆ, ಹೃದಯವಿದೆ ಅದರ ಮೇಲೆ ನಾವು ಬರಿತೇವೆ .
    ಆ ಕಾರಣಕ್ಕಾದರೂ ನಾವು ಬರವಣಿಗೆಗೆ ನ್ಯಾಯ ಒದಗಿಸಬೇಕೆಮ್ಬುದು ನನ್ನ ಆಶಯ

    ReplyDelete
  3. ತುಂಬಾ ಚೆನ್ನಾಗಿದೆ...

    ಅಭಿನಂದನೆಗಳು...

    ReplyDelete
  4. Superb!!.. Tumbaa chennaagide..

    ReplyDelete
  5. GOOD WRITING..
    ELLIGOMME BETI NEEDI

    www.vanishrihs.blogspot.com

    ReplyDelete
  6. ಎನ್ನಾರ್ಕೆ, ಕವಿಯಾದ ಕವಿತೆ -ಕವಿತೆಯಾದ ಕವಿ..ಎಲ್ಲವನ್ನೂ ಎಲ್ಲರನ್ನೂ ಕವನಿಸಲು ಮೇವು ನೀಡುವ ವಿಚಾರ...ಹುಳ ಬಿಡೋಕೆ...ತಲೆಗೆ...ಅಹಾ...ಎಂಥ ವಿಚಾರ...

    ReplyDelete
  7. @ಸೀತಾರಾಮ ಕೆ ಮತ್ತು ವಾಣಿಶ್ರೀ ಭಟ್ : ನಿಮಗೆ ಥ್ಯಾಂಕ್ಸ್

    ReplyDelete
  8. @ಜಲನಯನ: ಸರ್ ನೀವು ಹುಳ ಬಿಟ್ಕೊಂಡಿದ್ರೆ, ನಾನು ಬರದಿದ್ದಕ್ಕೂ ಸಾರ್ಥಕ.
    ಪೆನ್ನುಪೆಪರ್ ಗೆ ಬಂದಿದ್ದಕ್ಕೆ ಥ್ಯಾಂಕ್ಸ್, ಮತ್ತೆ ಮತ್ತೆ ಬನ್ನಿ . . .

    ReplyDelete
  9. just speechless bro...awesome...

    ReplyDelete
  10. ವಾಹ್! ಎಂಥ ಅದ್ಬುತ ಕಲ್ಪನೆ, ತುಂಬಾ ಚೆನ್ನಾಗಿ ಬರೆದಿದ್ದೀರಿ..

    ಥ್ಯಾಂಕ್ಸ್..

    ReplyDelete
  11. ತುಂಬಾ ಚೆನ್ನಾಗಿದೆ ಕವನ..

    ReplyDelete
  12. @ಆರತಿ, ದಿಲೀಪ್ ಮತ್ತು ಶಿವಣ್ಣ : ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್

    ReplyDelete
  13. ತುಂಬಾ ಚನ್ನಾಗಿ ಮೂಡಿ ಬಂದಿದೆ ನಿಮ್ಮ ಕವನ

    ಹೊನ್ನ ಹನಿ
    http://www.honnahani.blogspot.com

    ReplyDelete
  14. Kavimahaashayare "haaleya Novu" adbutha kalpane.....:)

    ReplyDelete