Jul 16, 2010


"ಯಾರು  ನಾವು"


ಯಾರು ಧ್ರೋಹಿಗಳು
ಯಾರು ಮೋಸಗಾರರು
ಯಾರು ಹಿತಶತ್ರುಗಳು
ಯಾರು ನಯವಂಚಕರು
ನಮಗಾಗುತಿಲ್ಲ ಮನವರಿಕೆ
ಅಪರಾಧಿ ಹೋದರು ಮರಳಿ ಮಣ್ಣಿಗೆ .
ನಮ್ಮಲ್ಲಿ  ಬರೀ  ಕೊನೆಯಿರದ ತನಿಖೆ ತನಿಖೆ . . . .

ಆಶವಾದಿಯ ನಿಷ್ಕಲ್ಮಶ ರಾಷ್ಟ್ರದ ಕನಸು ಕಣ್ಮರೆಯಾಗುತಿದೆ.
ಕ್ರಾಂತಿಯ ಕನವರಿಕೆ ಪಾಪದ ಸುಳಿಯಲ್ಲಿ ಸಿಲುಕಿದೆ.
 ಪವಿತ್ರ ಕನವರಿಕೆಯೊಂದು ಕನಸಲ್ಲಿ ತೊದಲು ನುಡಿಯಾಡಲು ಸಹ  ತಡವರಿಸಿದೆ.
ಯಾರ ಭಯಕೋ ಏನೋ , ಭಾರತಾಂಬೆ ಬರಡಾಗುತಿಹಳು.

=====
=====

17 comments:

  1. ಅದ್ಭುತ ಕವನ. ಭಾರತಮಾತೆ ಹೆದರಿ ಹಿಡಿಯಾಗಿರುವುದು ಕಹಿ ಸತ್ಯ.

    ReplyDelete
  2. ತನಿಖೆಗಳೆಲ್ಲಾ ಬೀಸೋ ದೊಣ್ಣೆ ತಪ್ಪಿಸಿಕೊಳ್ಳೋದಕ್ಕೆ ಮಾತ್ರ ಎನಿಸುತ್ತದೆ.ಕವನ ಚೆನ್ನಾಗಿದೆ.

    ReplyDelete
  3. ನಿಜ, ನಾವು ಯಾರೆಂದು ಗುರುತು ಹಿಡಿಯುವದು ನಮಗೇ ಕಷ್ಟವಾಗಿದೆ..ಕವನದ ಉದ್ದೇಶ ಸಫಲವಾಗಿದೆ.

    ReplyDelete
  4. ಎಷ್ಟು ಬೈದ್ರು ಸಾಕಾಗಲ್ಲ ನಮ್ಮ ರಾಜಕಾರಿಣಿಗಳಿಗೆ..ಎಲ್ಲ ಹಾಳು ಮಾಡಿ ಹಾಕಿದ್ದಾರೆ.
    ನಿಮ್ಮವ,
    ರಾಘು.

    ReplyDelete
  5. @ ಭಾಶೆ : ಧೀರತನಕೆ, ಶೂರತನಕೆ ಮತ್ತು ಕ್ರಾಂತಿಗೆ ಹೆಸರಾದ ಭಾರತ (ಶಾಂತಿಗೂ ಸಹ ಆದ್ರೆ ಈಗ ಅದರ ದುರುಪಯೋಗ ಜಾಸ್ತಿ)
    ಹೆದರಿ ಹಿಡಿಯಾಗಿರುವುದು ಸತ್ಯ ಎಂದು ಹೇಳುವಷ್ಟು ನಾವು ಹೆದರಲು ಬಿಟ್ಟು ಬಿಟ್ಟೆವಲ್ಲ. ಛೆ

    @ಮೂರ್ತಿ ಸರ್: ಹುಲಿ ಹಿಡಿಯೋ ತನಿಖೆಗಳಲ್ಲಿ ಹುಲಿ ಬಾಲಾನೂ ಸಿಕ್ಕಿಕೊಳ್ಳುತ್ತಿಲ್ಲ.

    @ನಾರಾಯಣ್ ಭಟ್ ಸರ್: ನಾವು ಯಾರೆಂದು ತಿಳಿದುಕೊಳ್ಳುವ ಪ್ರಯತ್ನಕ್ಕೆ ನಾವು ತಯಾರಾಗಿಲ್ಲ ಅನ್ನೋದು ಉತ್ತಮ ಅನ್ನಿಸುತ್ತೆ.

    @ರಘು: ಬರೀ ರಾಜಕಾರಣಿಗಳಲ್ಲ ನಾವೆಲ್ಲಾ ಕೂಡ ಭಾಗಿಗಳೇ ಆದ್ರೆ ನಾವು ಪ್ರೇಕ್ಷಕರಾಗಿ ಉಳಿದಿದ್ದೇವೆ ಅಷ್ಟೇ.
    ತಪ್ಪು, ತಪ್ಪೇ
    ತಪ್ಪನ್ನ ನೋಡಿ ಸುಮ್ಮನಿರೋದೂ ಕೂಡ ತಪ್ಪೇ ಅಲ್ವಾ ?

    ReplyDelete
  6. @ವಸಂತ್ : ನಮ್ಮ ಬಾಳು ಅಂದ್ರೆ ಭಾರತದ ಬಾಳು , ಭಾರತ ಅಂದ್ರೆ ನಾವು.
    ಭಾರತದ ಬಾಳು ಬರಡಾದರೆ ಅದು ನಮ್ಮ ಬಾಳೆ ತಾನೇ .
    ನಿಮ್ಮ ಕಮ್ಮೆಂಟ್ ಗೆ ಥ್ಯಾಂಕ್ಸ್

    ReplyDelete
  7. ನಾಗರಾಜ್,

    ಕವನದ ಉದ್ದೇಶ ಅರ್ಥವಾಯಿತು. ಭಾಷೆ ಇನ್ನಷ್ಟು ಹರಿತವಾದರೆ ಅದು ಮುಟ್ಟ ಬೇಕಾದ ಕಡೆ ಮುಟ್ಟುತ್ಟೇನೋ.....

    ReplyDelete
  8. ನಮ್ಮ ಬದುಕು ಸಾಗಿದರಾಯಿತು! ಬೇರೇನೂ ಆದರೇನು ನಮಗ್ಯಾಕೆ? ನಾವು ಪ್ರಶ್ನಿಸಿದರೆ ನಮಗೆ ತೊಂದರೆ? ಎ೦ಬ ಧೋರಣೆ ನಮ್ಮನ್ನು ಇಲ್ಲಿಗೆ ದೂಡಿದೆ!
    ಪ್ರಾಸಂಗಿಕ ಅವಶ್ಯ ವಿಷಯ ಎತ್ತಿದ್ದಿರಾ!

    ReplyDelete
  9. @ಶಿವಣ್ಣ: ಎಲ್ಲರಿಗೂ ಮುಟ್ಟಲಿ ಎಂಬುದು ನನ್ನ ಆಶಯ, ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್

    ReplyDelete
  10. @ಸೀತಾರಾಮ್ ಸರ್: ನಿಮ್ಮ ಮಾತು ನಿಜ, ನಾವೆಲ್ಲಾ ನಮ್ಮ ನಮ್ಮ ಅನುಕೂಳಗಳನ್ನಷ್ಟೇ ಬಯಸುತ್ತಿದ್ದೇವೆ . ಸ್ವಲ್ಪ ವಿಶಾಲ ಮನಸ್ಸಿನಿಂದ ನೋಡುವ ಅವಶ್ಯಕತೆ ಇದೆ

    ReplyDelete
  11. @ಚುಕ್ಕಿ ಚಿತ್ತಾರ: ನಿಜ, ನಿಜ ಅಲ್ವಾ?

    ReplyDelete
  12. ನಿಜಾ
    ತುಂಬಾ ಸತ್ಯ
    ಒಳ್ಳೆಯ ಕವನ

    ReplyDelete
  13. @Shiva n Guru sir: see all the people having same opinion but still y this . . . thanks for comment.

    ReplyDelete
  14. ಕವನ ಚೆನ್ನಾಗಿದೆ.

    ReplyDelete
  15. @ಮನಮುಕ್ತಾ: ಥ್ಯಾಂಕ್ಸ್ :-)

    ReplyDelete