Jul 2, 2010

ಪಕ್ಕು ಮಾಮ...


೧)
ಗೆಳೆಯನಿಗೆ ಹುಷಾರಿಲ್ಲ, ರಾತ್ರಿ ಮನೆಗೆ ಲೇಟಾಗಿ ಬರುವೆ ಎಂದು ಆಶಾ ಅಕ್ಕನಿಗೆ ಹೇಳಿಹೋದ 'ಪಕ್ಕು ಮಾಮ' ..
'ಚಿಯರ್ ಗರ್ಲ್ಸ್' ಹಿಂದೆ ಕುಣಿಯುತ್ತ, ಟೀವಿಯಲ್ಲಿ 'ಲೈವ್' ಆಗಿ ಸಿಕ್ಕಿಬಿದ್ದ ..!


***

೨)
ಹೆಂಡತಿ ತವರಿಗೆ ಹೋದ ಖುಷಿಯಲ್ಲಿ, ಆರಾಮಾಗಿ ಟೀವಿ ನೋಡುತ್ತಾ ಕುಳಿತಿದ್ದ 'ಪಕ್ಕು ಮಾಮ' ಏನೋ ಹೊಳೆದಂತಾಗಿ, ಗೆಳೆಯನಿಗೆ ಫೋನ್ ಮಾಡಿ ಹೇಳಿದ.. " ಬೇಗ ಎಫ್ ಟೀವಿ ಹಾಕು ಮಾರಾಯ, ಒಳ್ಳೆ ಪ್ರೊಗ್ರಾಮ್.. ಕಿಂಗ್ ಫಿಷೆರ್ ಕ್ಯಾಲೆಂಡರ್ ದು .. "
ಆ ಕಡೆಯಿಂದ : ಅಪ್ಪ ಮಲಗಿದ್ದಾರೆ, ಥ್ಯಾಂಕ್ಸ್ ಫಾರ್ ದಿ ಇನ್ಫಾರ್ಮಶನ್, ಗುಡ್ ನೈಟ್ ಅಂಕಲ್.. ಎಂದು ಗೆಳೆಯನ ಮಗ ಫೋನ್ ಇಟ್ಟ.. !


***

೩)
ಬೇಸಿಗೆ ರಜೆಯಲ್ಲಿ ಮಗನಿಗೆ 'personality developement ' ಕ್ಲಾಸಿಗೆ ಸೇರಿಸಲು ಹೋದ 'ಪಕ್ಕು ಮಾಮ' ಮಗನ 'ಮಿಸ್' ಜೊತೆ ಮಾತಾಡುವಾಗ ಸಂಕೊಚಪಟ್ಟ.
ಹೊರಗೆ ಬಂದು, ಛೆ... ಎಂತ ಮಾಡಿದೆ,,? ಮಿಸ್ ಮುಂದೆ ಯಾಕೆ ಅಷ್ಟು ಸಂಕೋಚ..?
ತನ್ನ ಮೇಲೇನೆ ಸಿಟ್ಟು ಮಾಡಿಕೊಂಡು ಮರುಗಿದ..
ಎರಡು ನಿಮಿಷ ಯೋಚಿಸಿ, ಒಂದು ನಿರ್ಧಾರಕ್ಕೆ ಬಂದ..!
ತಾನು 'develope ಮಾಡ್ಕೊಬೇಕು, personality ನಾ ..
ಎಂದು "SPA " ಅತ್ತ ಹೊರಟ.... !!!


***


)
ಮೇಷ್ಟ್ರು: ವಾಟ್ ಇಸ್ ಟೀನ್ ಏಜ್..?

ನಾಗು: (ಅಮಾಯಕ ದನಿಯಲ್ಲಿ )
ಸರ್, ಕ್ವಾಟರ್ ಮೊದಲು ನೈಂಟಿ..
ನೈಂಟಿ ಗಿಂತ ಮೊದಲು, ಬೀರ್ ಬಾಟಲ್ ..
ಬಾಟಲ್ ಗಿಂತ ಮುಂಚೆ ಟಿನ್ ಬೀರ್..
'ಟಿನ್' ಕುಡಿಯುವ ಕಾಲಾವಧಿಯನ್ನು, ಟೀನ್ ಏಜ್ ಎನ್ನುವರು..!!


ಪಕ್ಕು ಮಾಮ (ಜಾಣ ಹುಡುಗ):
'ಟೀ' ಡಬಲ್ '' 'ಏನ್' 'ಎ' 'ಜಿ' ''.. ಟೀನ್ ಏಜ್.
ಟೀನ್ ಏಜ್ ಎಂದರೆ ...

ಹುಡುಗ 'ಯಂಗ್ ಏಜ್' ನಲ್ಲಿ
ಹುಡುಗಿ ಜೊತೆ 'ಎಂಗೇಜ್' ಆಗಿರುವುದು..!!


***


)
ಆಗತಾನೆ 'ತ್ರೀ ಇಡಿಯಟ್ಸ್' ನೋಡಿ ಬಂದ ,
ನಾಗು , ವಿನಾಯಕ (ಅಮಾಯಕ) ಮತ್ತು ಪಕ್ಕು ಮಾಮ..

ನಾಗು : ಪ್ರಕಾಶು ನಮ್ಮ ಅಮಾಯಕನ ತಲೆ
ಆಹಾ ಏನ್ ತಲೆ.. " ತೊಳೆದ ಕನ್ನಡಿ "

ವಿನಾಯಕ : ಹಂಗಂದ್ರೆ ನಿಮ್ಮದು..?
"ಕೊಳೆಯಾಗಿರೋ ಕನ್ನಡಿ ನಾ..? "

ಪಕ್ಕು ಮಾಮ: ಇಬ್ಬರದು ಸರಿ ಎಂದು..
ನನ್ನ ತಲೇನೆ ಪರವಾಗಿಲ್ಲ,
'ಮುಂದೆ ಸೂರ್ಯೋದಯ... ಹಿಂದೆ ಅರ್ಧ-ಚಂದ್ರೋದಯ'


***





[ ಗೆಳೆಯರೇ; ನಿಮಗೆಲ್ಲ 'ಇಟ್ಟಿಗೆ ಸೆಮೆಂಟ್' ನ ಪ್ರಕಾಶ್ ಹೆಗ್ಡೆ - ಪ್ರಕಾಶ್ ಅಣ್ಣ ಗೊತ್ತು.. ಆದರೆ ನನಗೆ ಅವರು 'ಪ್ರಕಾಶ್ ಮಾಮ' .. ' ಹೆಸರೇ ಬೇಡ'.. ಪುಸ್ತಕದಿಂದ ಪರಿಚಯ ಆಗಿದ್ದು.. ಮೊದಲಸಲ ಮಾತಾಡಿದಾಗ 'ಮಾಮ' ಅಂದೇ.. ಯಾಕೆ..? ಗೊತ್ತಿಲ್ಲ.! ಇವತ್ತು ನನಗೆ ನಾಗರಾಜ್ ನಿಗೆ ಅವರು ಮಾಮ.. "ಪಕ್ಕು ಮಾಮ" ..
ಪ್ರೀತಿಯಿಂದ,
ಅನಿಲ್ ಬೇಡಗೆ (A-NIL: anilbedge@gmail.com)
ನಾಗರಾಜ್.ಕೆ (NRK: rajahridaya@gmail.com) ]



26 comments:

  1. ಪ್ರಕಾಶಣ್ಣನ 'ಹೆಸರೇ ಬೇಡ'ಪುಸ್ತಕಾ ಓದಿ ಒಳ್ಳೇ ಮಜಾ ತೊಗೊತಾ ಇದ್ದೀನಿ.ಪುಸ್ತಕ ಸಖತ್ತಾಗಿದೆ.ಇನ್ನೂ ಪೂರ್ತಿಯಾಗಿಲ್ಲ.

    ReplyDelete
  2. ಅಲ್ಲ ಅನಿಲ್ ಅವರೇ,
    ಪಾಪ ನಮ್ಮ ಪ್ರಕಾಶಣ್ಣನ ಗುಟ್ಟಿನ ಸತ್ಯಗಳನ್ನು ಯಾಕೆ ನಮಗೆ ಹೇಳಿದ್ದು? ಮತ್ತೆ ಅವರು ನಿಮ್ಮನ್ನು ಅಟ್ಟಿಸಿಕೊಂಡು ಹೊಡೆದರೆ?
    ಹ್ಹ ಹ್ಹ ಹ್ಹಾ.............


    super............!

    ReplyDelete
  3. ಓಕೆ. ಹೀಗೋ ವಿಷಯ..ಪ್ರಕಾಶ್ ಮಾಮ(ಅಣ್ಣ ಇಲ್ಲ..)
    ಚೆನ್ನಾಗಿದೆ ಪಕ್ಕು ಮಾಮ.
    ನಿಮ್ಮವ,
    ರಾಘು.

    ReplyDelete
  4. tumbaa chennaagide......... (prakaashanna na kshame kori)

    nanna blog ge banni.......

    ReplyDelete
  5. ಅನಿಲ್,

    ಓದಿದೆ...ಸೂಪರ್...ಸಕ್ಕತ್ ನಗುಬಂತು.

    ReplyDelete
  6. ಅನಿಲ್,
    ಪಕ್ಕು ಮಾಮ ನ ಲೀಲೆಗಳನ್ನು ಸಕ್ಕತಾಗಿ ಬರೆದಿದ್ದೀರ....
    ಪಾಪ ಮಾಮ ಆ ತರಹ ಇಲ್ಲ ಅನ್ಸುತ್ತೆ......
    ಪ್ರಕಾಶಣ್ಣ ಸೂಪರ್ ಆಗಿವೆ ಅಲ್ವ..........

    ReplyDelete
  7. ೧) ಮೂರ್ತಿ ಸರ್, ನೀವು ಹೇಳಿದ್ದು ಸತ್ಯ ಸತ್ಯ.. 'ಹೆಸರೇ ಬೇಡ..' ಮಸ್ತ್ ಮಜಾ..
    ನಮ್ಮ ಪಕ್ಕು ಮಾಮ, ' ಮಸ್ತ್ ಮಜಾ ಮಾಮ' ..
    ಧನ್ಯವಾದಗಳು..

    ೨) ಪ್ರವೀಣ್ ಸರ್ (ಮನದಾಳದಿಂದ) : ನಮ್ಮ ಪ್ರಕಾಶ್ ಮಾಮ ಹಂಗೆಲ್ಲ ಬೇಜಾರ್ ಮಾಡ್ಕೊಳಲ್ಲ..
    ಎಷ್ಟೇ ಆಗ್ಲಿ ನಾನು 'ಅಳಿಯ' ಅದ್ದಂಗೆ ಅಲ್ವಾ.. :-)

    ೩) ರಘು, ಗೆಳೆಯ ಯಳವತ್ತಿ, ಮೊಗೆರ್ ಸರ್ ; ನಿಮ್ ಪ್ರೋತ್ಸಾಹ ಹೀಗೆ ಇರಲಿ.. ಧನ್ಯವಾದಗಳು..

    ೪) ಶಿವೂ ಅಣ್ಣ, ನಮ್ಮ ಪ್ರಕಾಶ್ ಮಾಮ ಅವರ ಹಾಸ್ಯ ಪ್ರಜ್ಞೆ ನಿಮಗೆ ಚೆನ್ನಾಗಿ ಗೊತ್ತು,
    ನನ್ನದು ಒಂದು ಪುಟ್ಟ ಪ್ರಯತ್ನ.. ನಿಮ್ಮ ಪ್ರೀತಿ ಸದಾ ಇರಲಿ..

    ೫) ಸವಿಗನಸು: ಪ್ರಕಾಶ್ ಮಾಮ ಅವರೆ ಸೂಪರ್..
    ನಿಮ್ ಪ್ರೋತ್ಸಾಹ ಹೀಗೆ ಇರಲಿ... ಧನ್ಯವಾದ..

    ReplyDelete
  8. ಒಳ್ಳೇ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ತುಂಬಾ ಚೆನ್ನಾಗಿ ಬರೆದಿದ್ದೀರಿ.

    ReplyDelete
  9. ಪಕ್ಕು ಮಾಮನ ಪಕ್ಕಾ ಕಥನ...ಪಕ-ಪಕ ನಗುವನ್ನೇ ತರಿಸಿತು....ಹಹಹಹ......ಉತ್ತಮ ಅತಿ ಉತ್ತಮ

    ReplyDelete
  10. ಸು೦ದರ ಹಾಸ್ಯಭರಿತ ಪ್ರಸಂಗಗಳು!

    ReplyDelete
  11. ಗುರುಪ್ರಸಾದ್ ಸರ್, ಭಾಷೆ, ವಸುಧೆಶ್, ಹರೀಶ್: ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.. ಪ್ರೀತಿ ಇರಲಿ..

    ಮಲ್ಲಿಕರ್ಜಿನ್ ಸರ್, ಅಜಾದ್ ಸರ್, ಸೀತಾರಾಂ ಸರ್: ನಿಮ್ಮ ಪ್ರೋತ್ಸಾಹ, ಪ್ರೀತಿ ಸದಾ ಇರಲಿ.. ಧನ್ಯವಾದ..

    ಗುಬ್ಬಚಿ ಸತೀಶ್; ಧನ್ಯವಾದಗಳು..

    ReplyDelete
  12. ತುಂಬಾ ಚೆನ್ನಾಗಿದೆ :-)

    ReplyDelete
  13. Chenagidhe anna.. hosa tana anudina..:-)

    ReplyDelete
  14. ಪಕ್ಕುಮಾಮನ ಸಾಹಸಗಳು ಚೆನ್ನಾಗಿವೆ. ಪಾಪ ಪ್ರಕಾಶಣ್ಣ

    ReplyDelete