Sep 16, 2010

"ಖಾಲಿ ಏಕೆ ಕುಳಿತೆ ?"

ಖಾಲಿ ಏಕೆ ಕುಳಿತೆ ?
ಕಾಡುತಿಲ್ಲವೆ ಹೊಸ ಕವಿತೆ
ಆಸೆಯ ಭಾವ,
ಭಾವಂತರಂಗದ ಕನಸುಗಳು
ಪ್ರಸವಿಸಲಿಲ್ಲವೇ ಕವಿತೆ ?
ಹುಟ್ಟಿ ಬರಲಿ ಲೋಕಪೂಜಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ತಿದ್ದಿ ತೀಡುವುದು ಅನುಭವದ ಹಣತೆ
ದಿವ್ಯ ಶಿಲ್ಪಿಯ ಬೆಳಕಿಗೆ
ಹರಳುಗಟ್ಟುವುದು ಕವಿತೆ
ಹಸಿವಿಗೆ ಶಬ್ಧಾಮೃತ ಕವಿತೆ
ಉಲ್ಲಾಸದ ಸೂರ್ಯ ರಶ್ಮಿ ಕವಿತೆ
ಖಾಲಿ ಏಕೆ ಕುಳಿತೆ ?

ಕಪ್ಪು ಬಿಳುಪು ಛಾಯಾಚಿತ್ರ
ಸಾರುವ ಭಾವ ಕವಿತೆ
ಸೌದರ್ಯ ಸಿರಿಯ ಸೆರೆಹಿಡಿವ
ಕಣ್ಣೊಳಗೆ ಭಾಷೆ ಸೋಲುವ ಕವಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ಪ್ರೇಮಸುಮದ ಘಮ ಕವಿತೆ
ಮೌನ ಆಡಲಾಗದ ಕವಿತೆ
ಮುತ್ತಾಗುವುದು ಸ್ಪರ್ಶ ಕವಿತೆ
ಭಕ್ತಿ ಕಾಣದ ಕವಿತೆ
ಹಡೆದವಳು ಕಣ್ತೆರೆದೊಡನೆ ಕಾಣುವ ದೇವತೆ
ಖಾಲಿ ಏಕೆ ಕುಳಿತೆ ?
ಪೂರ್ವಾಗ್ರಹಗಳಿಲ್ಲದೆ ಕಾಣು
ಎಲ್ಲೆಲ್ಲಿಯೂ ಕವಿತೆ
ಖಾಲಿ ಏಕೆ ಕುಳಿತೆ ?

ಖಾಲಿ ಏಕೆ ಕುಳಿತೆ ?
ಪುಟಿದೇಳುವ ಕವಿತೆಗೆ
ದನಿಯಾಗು, ಶಬ್ಧವಾಗು
ಒಂದಾದಮೇಲೊಂದು ಮೊಳಕೆಯೊಡೆಯಲಿ ಕವಿತೆ
ಖಾಲಿ ಏಕೆ ಕುಳಿತೆ ?
ಬದುಕು ಹರಿವ ಕವಿತೆ
ಖಾಲಿ ಏಕೆ ಕುಳಿತೆ ?
ಖಾಲಿ ಏಕೆ ಕುಳಿತೆ ?

=====
=====

18 comments:

  1. ಎಲ ಎಲಾ ಸೂಪರ್ ಕವಿತೆ!ಇಷ್ಟು ದಿನ ಎಲ್ಲಿ ಅವಿತು ಕುಳಿತೆ?!!!

    ReplyDelete
  2. ಕವಿತೆ ತು೦ಬಾ ಚೆನ್ನಾಗಿದೆ.
    ಒ೦ದಾದ ಮೇಲೊ೦ದು ಮೊಳಕೆಯೊಡೆಯಲಿ ಕವಿತೆ..
    ಬರೆಯುತ್ತಿರಿ ಕವಿತೆಗಳಿಗೆ ಕೊನೆಯಿಲ್ಲದ೦ತೆ..

    ReplyDelete
  3. ಬಹಳ ದಿನಗಳ ನಂತರ ಕವಿತೆ ಪೋಸ್ಟ್ ಮಾಡಿದಿಯ. ಚೆನ್ನಾಗಿದೆ

    ReplyDelete
  4. ಕವಿತೆ ಚನ್ನಾಗಿ ಮೂಡಿದೆ ಈ ಸಾಲುಗಳು ಇಷ್ಟವಾದವು
    ಪುಟಿದೇಳುವ ಕವಿತೆಗೆ
    ದನಿಯಾಗು, ಶಬ್ಧವಾಗು
    ಒಂದಾದಮೇಲೊಂದು ಮೊಳಕೆಯೊಡೆಯಲಿ ಕವಿತೆ

    ReplyDelete
  5. nagraj kavite chennagide istavaytu... good heege baritairu...

    ReplyDelete
  6. ಸೂಪರ್ ಸೂಪರ್ ಕವಿತೆ.........
    ಬಿಡಿ ಎಲ್ಲಾ ಚಿಂತೆ........
    ಬರುತಿರಲಿ ಇಂತಹ ಕವಿತೆ......


    ನಾಗಪ್ಪ. ಸುಪರ್ರಪ್ಪ.........

    ReplyDelete
  7. ನಾಗರಾಜ್,
    ನಿಮ್ಮ ಕವಿತೆ ಓದಿ, " ಕವಿತೆ, ಕವಿತೆ, ನೀನೇಕೆ ಪದಗಳಲಿ ಅವಿತೆ...? " ಎಂಬ ಸಿನೆಮಾ ಹಾಡು ನೆನಪಿಗೆ ಬಂತು....
    ತುಂಬಾ ಚೆನ್ನಾಗಿದೆ.....

    ReplyDelete
  8. ಕವಿತೆ ಚೆನ್ನಾಗಿದೆ. ಪ್ರಾಸಬದ್ದವಾಗಿದೆ.ಸೂಪರ್

    ReplyDelete
  9. "ಭಾವಾ೦ತರಂಗದ ಕನಸುಗಳ ಪ್ರಸವಿಸಲಿಲ್ಲವೇ.."
    ಉತ್ತಮ ಕಲ್ಪನೆ..ನಾಗರಾಜ್
    ಶುಭಾಶಯಗಳು
    ಅನ೦ತ್

    ReplyDelete
  10. ನಾಗರಾಜ್,

    ಅದೆಷ್ಟು ಸುಲಭವಾಗಿ ಕವಿತೆ ಬರೆಯುತ್ತೀರಿ! ನನಗೆ ಅಷ್ಟು ಸುಲಭವಾಗಿ ಕವಿತೆ ಸಾಧ್ಯವಿಲ್ಲ. "ಕಾಲಿ ಏಕೆ ಕುಳಿತೆ" ಶೀರ್ಷಿಕೆ ಸೂಪರ್. ಜೊತೆಗೆ ಕವಿತೆಯೂ ಕೂಡ.

    ReplyDelete
  11. DTK sir commentE nanna comment...
    channagide... :)

    ReplyDelete
  12. .ನಾಗರಾಜ್
    ಕವಿತೆ ಚೆನ್ನಾಗಿದೆ ಹೀಗೆಯೇ ಬರೆಯುತ್ತಿರಿ.

    ReplyDelete
  13. ಒಳ್ಳೆ ಕವಿತೆ ಮಿತ್ರ, ಭೇಷ್!
    ನನ್ನ ಬ್ಲಾಗಿಗೆ ನಿಮಗೆ ಸ್ವಾಗತ...

    ReplyDelete
  14. ನಾಗರಾಜರವರೇ,
    ಕವನ ಸೊಗಸಾಗಿದೆ. ಆದರೆ ಖಾಲಿ ಏಕೆ ಕುಳಿತೇ ಪದೇ ಪದೇ ಬಂದು ಕವನದ ಓಟಕ್ಕೆ ಮತ್ತು ಓಘಕ್ಕೆ ಅಡೆತಡೆ ಮಾಡಿದೆ ಅನಿಸಿತು.

    ReplyDelete