ನನಗ ಈ software ಮಂದಿ ಅರ್ಥ ಆಗುವಲ್ರು.
ನನ್ನ ಭಾಳ್ ಮಂದಿ ದೊಸ್ತ್ರು, ಈ software ನಾಗ ಕೆಲ್ಸಾ ಮಾಡ್ತಾರ,
ಖರೆ ಅಂದ್ರ ಅವರು ಅಲ್ಲಿ ಏನ್ ಮಾಡ್ತಾರ ಹ್ಯಾಂಗ ಮಾಡ್ತಾರ..?
ನನಗ ತಿಳಿವಲ್ದು..!!
ನನಗ ತಿಳಿವಲ್ದು..!!
ನನ್ನ ೬ ವರ್ಷದ ದೋಸ್ತ, ಸದ್ಯದ ರೂಮೇಟ್, ಅಣ್ಣ ನಂತಹ ಗೆಳೆಯ ಮೂರೂ ವರ್ಷದಿಂದ ಒಂದು ದೊಡ್ಡ ಕಂಪನ್ಯಾಗ ಕೆಲ್ಸಾ ಮಾಡತಾನ,
ಒಂದ ಮಾತ್ ಏನಂದ್ರ, ಅವನೀಗ ಏನು ಸೋಕಿ ಇಲ್ಲ, ಅಗ್ದಿ ಸರಳ ಜೀವನ,,
ಅಂವಾ ಒಬ್ಬ ರೈತನ ಮಗ..
ಅಂವಾ ಒಬ್ಬ ರೈತನ ಮಗ..
ನನಗ ಅವಾಗ ಅವಾಗ ವಿಚಿತ್ರ ಕಾಣತನ,
ಅವನ ಕೆಲಸ ಏನ್ ಅಂತ ನಾ ಹೆಚ್ಚ ಕೆಳಿಕ್ಕ ಹೋಗಿಲ್ಲ..
ಅವನ ಕೆಲಸ ಏನ್ ಅಂತ ನಾ ಹೆಚ್ಚ ಕೆಳಿಕ್ಕ ಹೋಗಿಲ್ಲ..
ಮುಂಜಾನಿ ೭ ಗಂಟೆಗೆ ಹೋದ ಅಂದ್ರ ಮತ್ತ ನಮ್ಮ ಮಸಡಿ ನಾವು ನೋಡೋದು ರಾತ್ರಿ ೯ ಕ್..
ಒಮ್ಮೆ ಒಮ್ಮೆ ೯:೩೦/ ೧೦ ಗಂಟೆನೂ ಆಗತೈತಿ..
ಒಮ್ಮೆ ಒಮ್ಮೆ ೯:೩೦/ ೧೦ ಗಂಟೆನೂ ಆಗತೈತಿ..
ಶನಿವಾರ - ರವಿವಾರ ಬತ್ತ ಅಂದ್ರ,
" ಭಾಳ ವರ್ಷಕ್ಕ ತವರಿಗ ಹೊಂಟ ಹೆಣ್ಣಿನ ಮುಖದಾಗಿನ ಆನಂದ್ "
" ಭಾಳ ವರ್ಷಕ್ಕ ತವರಿಗ ಹೊಂಟ ಹೆಣ್ಣಿನ ಮುಖದಾಗಿನ ಆನಂದ್ "
ಆದ್ರ ನಾ ಇಲ್ಲಿ ಹೇಳಿಕ್ಕ ಹೊಂಟಿದ್ದ ಏನಂದ್ರ,
ಅಲ್ಲಿ ಅಂವಾ ರೊಕ್ಕ ಕೊಡು ಬದಲಿ, ಗಣಪತಿ ಹಬ್ಬಕ್ಕ/ ದೇವರು ಚಂದ ಬರೆಯು ಪಟ್ಟಿ ಬಂಡಲ್ ಇದ್ದಂತ ಒಂದು ಬಂಡಲ್ ಇಂದ ನಾಲ್ಕು ಚೀಟಿ ಹರದು ಕೊಟ್ಟ..!
ನನಗ ಅದು ಏನು ಗೊತ್ತಿಲ್ಲ..!
ಹೊರಗ ಬಂದು ಸ್ವಲ್ಪ ತಡಾ ಆದ ಮ್ಯಾಲ..
ಅಣ್ಣ ನೀ ಅವಾಗ್ಲೇ ಆ ದುಕಾನ್ ದವನಿಗೆ ಚೀಟಿ ಕೊಟ್ಟೆಲ್ಲಾ.. ಅದು ಏನು..!?
"Meal Pass " ಅಂದ..
ನನಗ ಏನು ಗೊತ್ತಾಗ್ಲಿಲ್ಲ ಅಂತ ಅವನಿಗ್ ಗೊತ್ತಾಗಿ, ನಾ ಮುಂದೆ ಕೇಳು ಮೊದಲ ಅವನೇ ಸುರು ಮಾಡಿ ವಿವರಿಸಿ ಹೇಳ್ದ..
ನನಗೆ ವಿಚಿತ್ರ..!!
"ಅಲ್ಲೋ ಮಾರಾಯ ರೊಕ್ಕ ಕೊಟ್ಟ ಚೀಟಿ ತೊಗೊಳೋದು, ಮತ್ತ ಆ ಚೀಟಿ ರೊಕ್ಕ ಬದಲಿ ಕೊಡೋದು" ಸುಮ್ನೆ ಹೈರಾಣ ಅಲ್ಲ..?
" ಅದರ ಬದಲಿ ಸುಮ್ನೆ ರೊಕ್ಕ ಕೊಟ್ರ ಮಾತ್ ಮುಗಿತಲ್ಲಾ.." ನಾ ಹೇಳ್ದೆ.
ಅದಕ್ಕ ಅಂವಾ ಮತ್ತೊಂದಿಷ್ಟ ವಿವರಿಸಿ, ಬಿಡಿಸಿ ಹೇಳ್ದ..
ಅಲ್ಲಾ ನೀವ್ ಮಂದಿ ಎಷ್ಟ ತಲೀ ಓಡುಸ್ತಿರಿ,,,?
ಹಂಗ " ಅಗ್ದಿ ಆರಂ ಬೇಕು ಅನೌರು " ..!!
ಆರಂ ಅನ್ನೋದು ಎಲ್ಲರಿಗೂ ಬೇಕು,
ಆದ್ರ ನೀವ್ ಮಂದಿ ಭಾಳೇ ಆರಂ ಕೆಳ್ತೀರಪ್ಪ..! ಅದು ಏನ್ ಮಾಡ್ತಿರೋ..?
ಆದ್ರ ನೀವ್ ಮಂದಿ ಭಾಳೇ ಆರಂ ಕೆಳ್ತೀರಪ್ಪ..! ಅದು ಏನ್ ಮಾಡ್ತಿರೋ..?
ನಾ ಏನೇ ಹೇಳ್ದ್ರು, ಸ್ವಲ್ಪ ವಾದ ಮಾಡಿ, ಸ್ವಲ್ಪ ನಕ್ಕು, ವಿವರಣೆ ಕೊಡ್ತಾ ಹೋದ ಅಣ್ಣ..
ಅಲ್ಲೇ ಸಮೀಪದ ಹೋಟೆಲ್ಲಿಗ ಉಟಕ್ಕ್ ಹೋದ್ವಿ..
ಊಟ ಆದ ಮ್ಯಾಲ ಮತ್ತ ನಾ ಸುರು ಮಾಡದೆ,,
ಈಗ ಎಲ್ಲ ಕಡೀ ಕಾರ್ಡ್ ಸಿಸ್ಟಮ್ ಆಗೈತಿ,
Online payment.. Income Tax, Electricity,
Phone Bill, Water Bill, Film/Bus/Train/Flight Ticket..
ಎಲ್ಲ ಕ್ರೆಡಿಟ್ / ಡೆಬಿಟ್ ಕಾರ್ಡ್..
ಅದಕ್ಕ ಅಣ್ಣ ಅಂದ, ಹೌದು ಅದೆಲ್ಲ ನಮ್ಮ ನಿಮ್ಮ ಅನುಕೂಲಕ್ಕೆ.
ಅದರಿಂದ ಎನೇನ ಲಾಭ ಐತಿ ಅಂತ ವನ್ದಿಷ್ಟ ಉದಾಹರಣೆ ಕೊಟ್ಟ.
ನಾ ಬಿಡಬೇಕಲ್ಲ..! ?
ನೀವು ಮುಂದ ಮುಂದ ಹೆಂಗ ಮಾಡ್ರಿ ಅಂದ್ರ,
' ದೇವರ ಹುಂಡಿಗ' ರೊಕ್ಕ ಹಾಕು ಬದಲು, ' ಕಾರ್ಡ್ ಸಿಸ್ಟಮ್' ಮಾಡ್ರೀ...
ಅದೂ ಕೆಲವು ಕಡೆ ಇದೆ, ಮುಂದೆ ಎಲ್ಲ ಕಡೆ ಆಗುತ್ತೆ. ಅಂದ..!!
ಹಾಂ.!
ಹಂಗಂದ್ರ, ಇನ್ನೊಂದಿಷ್ಟು ಅದಕ್ಕ ಸೇರಸ್ರಿ..
ಹಾಲಿನ ರೊಕ್ಕ, ಸಣ್ಣ ಕಿರಾಣಿ ಅಂಗಡಿ, ಕಟ್ಟಿಂಗ್ ದುಕಾನ,
ಚಪ್ಲಿ ದುಕಾನ್, ಬೀಡಾ ಅಂಗಡಿ, ಮನೀ ಬಾಡಗಿ,
ಮಕ್ಕಳ ಸಾಲಿ/ ಟ್ಯುಶನ್ ಫೀಸ್,,,
ವ್ಯವಸಾಯ ಮಾಡೋ ರೈತರಿಗೂ ಒಂದೊಂದು ಕಾರ್ಡ್ ಕೊಡ್ರಿ.. ಅಕ್ಕಿ, ಜೋಳ, ರಾಗಿ,,,
ಎಲ್ಲದಕ್ಕೂ ಮತ್ತ "ಪ್ರೀ ಪೈಡ್/ ಪೋಸ್ಟ್ ಪೈಡ್ ಮಾಡ್ರಿ...!
ಅಣ್ಣ ಒಮ್ಮ ನನಗ ನೋಡಿ, ಸಣ್ಣಗೆ ನಕ್ಕ, ಸ್ವಲ್ಪ ಸರೀ ಅನಸ್ಲಿಲ್ಲ ನನಗ..
ಆ ನಗುವು ನನಗ ಒಂತರ ಸಿಟ್ಟು ತರಸ್ತು..
ಕಡೀಗ ' Public Toilet' ನು ಬಿಡಬ್ಯಾಡ್ರಿ..
ಒಂದಕ್ಕ ಹೋದ್ರ ಇಷ್ಟು, ಸಂಡಾಸ್ ಹೋದ್ರ ಇಷ್ಟು..
ಅದರಾಗ್ 'ಮಂತ್ಹ್ಲಿ ಸ್ಕೀಮ್, ಹಂಗ ಮೂರೂ/ಆರು/ವರುಷದ ಚಂದಾದಾರರಾಗಿ.. "
ಅಂತ ಹಾಕ್ರಿ..!!
ಅದು ಒಂದ ದಿನ ಬರುತ್ತೆ.. !!
ಕಣ್ಣಲ್ಲಿ ಕಣ್ಣಿಟ್ಟು ಅಷ್ಟೇ ನಾ..? ಮುಂದೆ ಕೇಳು..
ಅಲ್ಲೇ ಇದ್ದ " ಹಳೇ ಪೇಪರ್ " ದುಕಾನ್ ನೋಡಿ, ಗಂಭೀರವಾಗಿ ಹೇಳ್ದೆ..
ಅಣ್ಣ, " ನಿಮ್ಮ ಮಂದಿ ಗ , ಹಳೇ ಪೇಪರ್ ಮಾರೋ 'ಫೆಸಿಲಿಟಿ ' ಹ್ಯಾಂಗಿರಬೇಕು ಅಂದ್ರ..
"..... group of old papers" Pvt limited.
Give 10kg of old papers and get 11kg paper's price..
Take 10kg of old paper and get 1 kg absolutely free..!
Cash back offer, --% profit, door delivery........
ಮತ್ತ ಅಲ್ಲಿಗೆ ಬಿಡಬ್ಯಾಡ್ರಿ..
ನಾವು ಇಂತಿಂತ "ಪೇಪರ್" ಜೋಡಿ " ಟೈ ಅಪ್ " ಮಾಡಿವಿ..
ನೀವು ಆ ಪೇಪರ್ ತೊಗೊಂಡ್ರ ನಿಮಗ ವರ್ಷಕ್ಕ ಇಷ್ಟ 'ರಿಯಾಯತಿ'
ಮತ್ತ ನಾವು ಆ ಪೇಪರ್ ಗ ಜಾಸ್ತಿ ರೊಕ್ಕ ಕೊಡ್ತೀವಿ...!!
ಮತ್ತ ನಾವು ಆ ಪೇಪರ್ ಗ ಜಾಸ್ತಿ ರೊಕ್ಕ ಕೊಡ್ತೀವಿ...!!
"ಅಣ್ಣ, ಇವೂ ಮಾಡ್ರಿ... ಬಿಡಬ್ಯಾಡ್ರಿ...!"
ನೋಡೋ..
ಆಗುತ್ತೆ..! ನೀ ಇಷ್ಟೊತ್ತು ಹೇಳ್ದೆ ಅಲ್ಲ ,
ಅದಕ್ಕೂ ಒಂದು ಕಾಲ ಬರುತ್ತೆ.. !!
ಅದಕ್ಕೂ ಒಂದು ಕಾಲ ಬರುತ್ತೆ.. !!
ಚಿಕ್ಕ ಪುಟ್ಟ ಅಂಗಡಿ ಇಂದ, ರಸ್ತೆ ಪಕ್ಕ ಮಾರೋ 'ಬೋಂಡ /ಬಜ್ಜಿ ' ಅಂಗಡಿ ಇಂದ,
ಸಾರ್ವಜನಿಕ ಶೌಚಾಲಯಕ್ಕು.. ಬರುತ್ತೆ..!
ಸಾರ್ವಜನಿಕ ಶೌಚಾಲಯಕ್ಕು.. ಬರುತ್ತೆ..!
ದೇವಸ್ತಾನಕ್ಕೆ ಅಂದಿಯಲ್ಲ..?
ದೇವಸ್ತಾನ ಅಲ್ಲ, ಮನೆಯಲ್ಲಿ ಆಗುವ ಚಿಕ್ಕ-ಪುಟ್ಟ ಕಾರ್ಯಕ್ರಮ,
ಮದುವೆ ಗೆ ಕಾಣಿಕೆ ಆಗಿ ದುಡ್ಡು ಕೊಡತಾರಲ್ಲಾ...?
ಅಲ್ಲಿಗೂ "ಕ್ರೆಡಿಟ್ /ಡೆಬಿಟ್ ಕಾರ್ಡ್ ಬರ್ತಾವೆ..!
ಬಿಲ್ಲಿನಿಂದ ಬಿಟ್ಟ ಬಾಣಿನ ಹಂಗ ಇತ್ತು, ಅವನ ಉತ್ತರ .. !
ಸ್ವಲ್ಪ ಹೊತ್ತು ನನಗ ಏನ್ ಹೇಳ್ಬೇಕು, ಏನ್ ಕೇಳಬೇಕು ಗೊತ್ತಾಗ್ಲಿಲ್ಲಾ.!
ಸುಮ್ನ ಅವನೀಗ ನೋಡಿ ಕೇಳ್ದೆ.. " ಮತ್ತ ಬಿಕ್ಷುಕರು..?"
ಗೊತ್ತಿಲ್ಲ ಅನ್ನೋ ಅರ್ಥ ಬರಂಗ..
ತುಟಿ ಒತ್ತಿ ಹಿಡಿದು, ಎರಡು ಹುಬ್ಬು ಒಮ್ಮೆಲೇ ಮ್ಯಾಲ ಮಾಡದ..!!
ನಾ ಸಣ್ಣಗ ಅನ್ಕೊಂಡೆ
ಅವರಿಗೊಂದೊಂದು "ಕಾರ್ಡ್ ಮಶೀನು" ಅಂತ ನಮ್ಮ ಸರಕಾರ ಕೊಟ್ಟರ,,,
ಆಶ್ಚರ್ಯ ಇಲ್ಲ ಬೀಡು..?
ಆಶ್ಚರ್ಯ ಇಲ್ಲ ಬೀಡು..?
ಕಡೀಗ ನನ್ನ ತಲ್ಯಾಗ ಉಳದಿದ್ದ್ ಒಂದೇ,
"ಇದೆಲ್ಲ ನಮ್ಮ ವಿಕಾಸಕ್ಕೋ, ವಿನಾಶಕ್ಕೋ..?"
ನಮ್ಮ ಜೀವನ ಎಲ್ಲಿ ಹೊಂಟೈತಿ...?
ಹೀಂಗ ಆದ್ರ ಹ್ಯಾಂಗ್...?
life is moving at which diretion no body knows am in office so cant write in kannada
ReplyDeleteದೇಸಾಯರು ತಾವು ಆಪೀಸ್ನಾಗ್ ಅದಾರೆಂದು ತಪ್ಪಿಸ್ಕ್ಯೆಂದ್ರು, ನಾ ಹಂಗ ಮಾಡಾಕ ಬತ್ತದೇನು? ಚೆನ್ನಾಗ್ ಐತ್ರೀ ನಿಮ್ ಕಾರ್ಡ್ ಪುರಾಣ ಏನ್ರಪಾ ಬಹಳಾ ಶಾಣ್ಯಾ ಅದೀರೀ ನೀವು ಹಿಂಗೆಲ್ಲಾ ಬರೀಲಾಕ್ ಹತ್ತೀರಿ, ಕಾರ್ಡ್ ಸುದ್ದಿ ಹಿಂಗ....ಬರ್ಕೋತ ಬರ್ಕೋತ ಎಲ್ಲೆಲ್ಲೀಗ್ ತಲ್ಪ್ಸಾ ಹತ್ತೀರೋ ಕಾಣ್ವಲ್ದು, ಭೇಷಾತು ಬಿಡ್ರಿ, ಇನ್ನೂ ಬರೀರ್ರೀ ಮತ್ತ, ಹೊತ್ತಾಗೇತ ಹೋಗ್ಬರ್ಲೇನು ಮತ್ತ ?
ReplyDeletehmmm card suddi chenagide nagaraj... ee software engg. annudu enayta adu ontara Hitech ಜೀತ ida hange sir...
ReplyDeleteನಿಜ.. ಹಿ೦ಗಾ ಆದ್ರ ಹ್ಯಾ೦ಗ ತಿಳಿವಲ್ದು ...
ReplyDeleteಕಾರ್ಡ್ ಸುದ್ದಿ.. ತು೦ಬಾ ಚೆನ್ನಾಗಿ ಬರೆದಿದ್ದೀರಿ. :)
ಅನಿಲ್;ಇಷ್ಟೆಲ್ಲಾ ಓದಿದ ಮೇಲೆ ಅನಿಸಿದ್ದು'ಹೌದೂ,ಹೀಂಗಾ ಆದ್ರೆ ಹ್ಯಾಂಗೆ?' ಅಂತಾ.ಒಳ್ಳೇ ಲೇಖನ.ಇಷ್ಟ ಆಯ್ತು.
ReplyDeleteChalo bardiri... mansig mutyada.. hinga barita irri :)
ReplyDeleteಏನ್ ಅಂತ ಬರ್ದಿದಿರಿ ಯಪ್ಪಾ ಬಲು ಚಂದದ ರೀ ನಿಮ್ಮ ಬರವಣಿಗೆ ಶೈಲಿ ತುಂಬಾ ಹಿಡಿಸೆತ್ರಿ ..!
ReplyDeleteಸ್ವಲ್ಪ ಬಿಡುವು ಮಾಡಿಕೊಂಡು ಇತ್ತ ಕಡೆ ಬರ್ಯಲಾ
http://manjukaraguvamunna.blogspot.com/
ಚೆಂದದ ವಿಡಂಬನೆ ಚೆನ್ನಾಗಿದೆ.ಸ್ವಲ್ಪ ಯೋಚಿಸಬೇಕು !
ReplyDelete@ ಉಮೇಶ್ ದೇಸಾಯಿ ಸರ್:
ReplyDeleteಮೊದಲ ಪ್ರತಿಕ್ರಿಯ ನೋಡಿ ಬಹಳ ಸಂತೋಷವಾಯ್ತು. ಧನ್ಯವಾದಗಳು..
@ ವಿ.ಆರ್.ಭಟ್ ಸರ್ :
ನಿಮ್ಮ ಪ್ರತಿಕ್ರಿಯೆಯಿಂದ ನನಗಾಗುತ್ತಿರುವ ಆನಂದ ಅಷ್ಟಿಷ್ಟಲ್ಲಾ..!
ನಿಮ್ಮ ಮೆಚ್ಚುಗೆಗೆ ನಾನೆಷ್ಟು ಅರ್ಹನೋ ಗೊತ್ತಿಲ್ಲಾ.
ನಿಮಗೆ ನನ್ನ ನಮನಗಳು..
A-NIL,
ReplyDeleteyappaa en baritiyappa.... chand aiti.... uttar karnaaTakada shaili khushi aatappaa odi....
ಹಿಂಗ ಆದ್ರ ಹಂಗ!
ReplyDeleteತಿಳಿತಿಲ್ಲೋ....
ಭೇಷ್ ಬರ್ದೀಯೋ ಅಪ್ಪ್ಯಾ.
ತಮ್ಮಾ, ನೀವ್ ಹೇಳ್ದ೦ಗೆ ಆಗೋ ದಿನ ದೂರ ಇಲ್ಲ ಅನಿಸ್ತೈತಿ. ವಿದೇಶದಲ್ಲಿ ಹಾದರದ ಮನೇಲೂ ಕಾರ್ಡ್ ಉಜ್ಜಿ ಪೇಮೆ೦ಟ್ ಕೊಡೋ ಸಿಸ್ಟಂ ಇದೆಯ೦ತೆ, ನಿಮ್ಮ ಪಬ್ಲಿಕ್ ಟಾಯ್ಲೆಟ್ ಮತ್ತು ಓಲ್ಡ್ ಪೇಪರ್ ಸ್ಕೀಮ್ ಸೂಪರ್
ReplyDeleteಅನಿಲ್ ,
ReplyDeleteಬಾಳ್ ಮಸ್ತ ಬರ್ದಿರ್ರಿ .. ಕಾರ್ಡ್ ಬಗ್ಗೆ ಚೊಲೊ ವಿಚಾರ ಹೇಳಿರಿ ..
ನನ್ನ ತಲ್ಯಾಗು ಬಂತ್ ನೋಡ್ರಿ .. ಹೀಂಗ ಆದ್ರ ಹ್ಯಾಂಗ್ ??
ನಮ್ಮ್ ಮನಿ ಕಡೆನೂ ಒಮ್ಮೆ ಬರ್ರಲಾ ..ಒಮ್ಮಿನೂ ಬಂದಿಲ್ಲ .. ..
@ತರುಣ್ ಸರ್: "ಪೆನ್ನು ಪೇಪರ್" ಗೆ ಸ್ವಾಗತ.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ReplyDelete@ ಮನಮುಕ್ತಾ ಮೇಡಂ: ಹೀಂಗ್ ಆದ್ರೆ ಹೆಂಗೆ.. ನನಗೂ ತಿಳಿತಿಲ್ಲ.. ಧನ್ಯವಾದಗಳು..
@ ವಸುಧೆಶ್ : ಧನ್ಯವಾದಗಳು..
@ ದೊಡ್ಡಮನಿ ಮಂಜು: "ಪೆನ್ನು ಪೇಪರ್" ಗೆ ಸ್ವಾಗತ, ನಿಮ್ಮ ಮೆಚುಗೆಗೆ , ಧನ್ಯವಾದ.. ಖಂಡಿತ ನಿಮ್ಮ ಬ್ಲಾಗಿಗೆ ಬರುತ್ತೇನೆ..
Dr DTK Murthy Sir :
ReplyDeleteನನಗೆ ಈ ವಿಷಯ ತುಂಬಾ ಕಾಡಿದೆ.. ಉತ್ತರ ಸಿಗುವ ಯಾವ ಲಕ್ಷಣವು ಇಲ್ಲ..
ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಇರಲಿ..
ನಿಮಗೆ ನನ್ನ ನಮನಗಳು....
ಬಾಲು ಸರ್,
ReplyDeleteನೀವು ಹೇಳಿದ್ದು ಸತ್ಯ , ಯೋಚನೆ ಮಾಡುವ ವಿಚಾರ..
ನಿಮ್ಮ ಪ್ರತಿಕ್ರಿಯೆಗೆ
ಧನ್ಯವಾದಗಳು..
ಅನಿಲ್ ತಮ್ಮಾ..
ReplyDeleteಬಾಳ್ ಛಂದ ಬರದೀಯ...
ನೀ ಹೇಳೋದೂ ಖರೆ ಐತಿ ಮತ್ತ..
ಜಗತ್ತು ಹ್ಯಾಂಗೆ ಓಡಾಕ್ ಹತ್ತೈತೋ.. ನಾವು ಹಾಂಗೆ ಓಡ ಬೇಕು ನೋಡಪಾ..
ಇಲ್ಲಾ ಅಂದ್ರ ನಮಗೆ "ಹುಚ್ಚ್ ನನ್ನ ಮಗ" ಅಂತಾರಪಾ..
ನಿನ್ನ ಹಾಂಗೆ ಭಾಳ ಬಾರಿ ನಾನೂ ತಲಿ ಕೆರ್ಕೊಂಡಿದಿನಿ..
ಹಂಗಾಗಿ ನೆತ್ತಿಮೇಲಿ ಕೂದಲು ಉದರೈತಿ ಅನ್ನೋದು ಬಿಟ್ರೆ ಮತ್ತೇನೂ ಆಗಿಲ್ಲ ನೋಡು...
ಭಾಳ್ ಛಂದ ಬರೀತೀಯ ಕಣಪಾ..!
thumba chenna edhe anna.. namma deshadali agtiro badalavane bhage ( transformation anndru tapilla) bhage correct agi bardidiri.. afhre e transformation city ali adhre sake.? halli galali yavaga agodhu..? eradu kade ottige agdhidhre matra e lag tapislike aguthe alva anna.. omme priya vadha STD booth endhu enagide..? a pepperment badhlu cover nalli tumbida Saraku. Gilli dandu badalige chendu dandu (cricket).. heege tereya marege sariyodhu jaggada niyamma.. vichitra viparyasa..!!!
ReplyDeleteಹ್ಹ ಹ್ಹ..ಸೂಪರ್..!!!
ReplyDeleteವಿಕಾಸಕ್ಕೋ, ವಿನಾಶಕ್ಕೋ ಗೊತ್ತಿಲ್ಲ..ಕೆಲವೊಮ್ಮೆ ಮಾತ್ರ ಭಾಳ use ಆಗತ್ತೆ, ಮೊನ್ನೆನಾತು ಅಂದ್ರೆ, ಕಾರ್ ಕೀ ಕಾರ್ ಒಳಗೆ ಬಿಟ್ಟು car lock ಮಾಡಿದೆ.ಕೊನೆಗೆ ಬೇರೆ options ಇಲ್ಲದೆ
ಡೋರ್ ಓಪನ್ ಮಾಡೋವ್ರನ್ನ ಕರ್ದೆ.ಸರಿ ಬಂದ, door ಓಪನ್ ಮಾಡಿದ.ಅವನ ಕೈಯಲ್ಲಿ ಕಾರ್ಡ್ swipe ಮಾಡೋಕ್ಕೆ ಮೊಬೈಲ್ ಮಷಿನ್ ನೋಡಿ ಮಾತ್ರ ಸುಸ್ತು ಹೊಡೆದು ಬಿಟ್ಟೆ..ನಮ್ಮೂರಿಗೂ ಸ್ವಲ್ಪ ದಿನಕ್ಕೆ ಬರತ್ತೆ!!!
ವಿಡಂಬನೆ ತುಂಬಾ ಚೆನ್ನಾಗಿ ಬಂದಿದೆ:-)
ಬಹಳ ಸುಂದರವಾದ ಲೇಖನ, ಏನೇನು ಹೊಸದು ಬರುತ್ತೋ, ಏನೇನು ಅವಾಂತರ ಸೃಷ್ಟಿಸುತ್ತದೋ!!
ReplyDelete@ ದಿನಕರ್ ಸರ್ :
ReplyDeleteನಿಮ್ಮ ಪ್ರೋತ್ಸಾಹ ಪ್ರೀತಿ ಸದಾ ಇರಲಿ..
ನಿಮಗೆ ನನ್ನ ನಮನಗಳು..
@ ಸೀತಾರಾಂ ಸರ್ :
ನೀವು ಹೇಳಿದ್ದು ಖರೆ, ಹೀಂಗ್ ಆದ್ರ ಹಂಗ..
ಧನ್ಯವಾದಗಳು..
@ ಪರಾಂಜಪೆ ಸರ್:
ಮುಂದೆ ಏನೇನು ಆಗಬಹುದೋ ಆಗುತ್ತೋ..?
ಕೆಲವು ಸಾರಿ ಮನಸು ಏನೋ ಗೊಂದಲಕ್ಕೆ ಒಳಗಾಗುತ್ತೆ.. !
ನಿಮ್ಮ ಪ್ರೋತ್ಸಾಹ ಸದಾ ಇರಲಿ..
ಧನ್ಯವಾದಗಳು..
@ ಶ್ರೀಧರ್ ಸರ್:
ನಮಸ್ತೆ,
ಲಗುನ ನಿಮ್ಮ ಮನಿಗ ಬರ್ತೀನಿ..
ಲೇಖನ ಮೆಚಿದ್ದಕ್ಕೆ ಧನ್ಯವಾದಗಳು..
ಪ್ರಕಾಶ್ ಮಾಮ,
ReplyDeleteನೀವು ಹೇಳಿದ್ದು ಸತ್ಯ ಸತ್ಯ..
ನಾವು ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕು..
ಆದರೆ ಮನಸು ಕೆಲವು ಸಾರಿ ಗೊಂದಲ ಗೊಂದಲ..
ಎಲ್ಲಿ ಬದಲಾಗಬೇಕು, ಎಷ್ಟು ಬದಲಾಗಬೇಕು ಅನ್ನೋ ಗೊಂದಲ..
ಅದರಲ್ಲಿ ಇದು ಒಂದು..!
ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಇರಲಿ..
ನಿಮಗೆ ನನ್ನ ನಮನ..
@ ತೇಜು:
ReplyDeleteನಿಜ.. ಎಷ್ಟೊಂದು ವಸ್ತುಗಳು ನಮ್ಮಿಂದ ದೂರ ಆಗಿವೆ..
ಅವೆಲ್ಲ ಎಲ್ಲಿ ಹೋದವೋ..
ಲೇಖನ ಮೆಚ್ಚಿದಕ್ಕೆ ಧನ್ಯವಾದ..
@ವನಿತಾ ಮೇಡಂ:
ನಮಸ್ತೆ, "ಪೆನ್ನುಪಪೆರ್" ಗೆ ಸ್ವಾಗತ..
ನಿಮ್ಮ ಕಾರ್ ಬೀಗದ ಕತೆ ನಿಜವಾಗಿಯೂ ಆಶ್ಚರ್ಯ.. !!
ಮುಂದ.. ನೋಡಬೇಕು.. ಏನೇನು ಗಮ್ಮತ್ ಆಗತಾವೋ..? :)
ನಿಮ್ಮ ಪ್ರೋತ್ಸಾಹ ಸದಾ ಇರಲಿ..
ಧನ್ಯವಾದಗಳು..
@ಸಾಗರಿ:
ನಮಸ್ತೆ..
ಹೊಸತನ ಇರಲಿ, ಆದರೆ ಅವಾಂತರ ಕೆಲವು ಸಾರಿ ಭಯ ಹುಟ್ಟಿಸುತ್ತೆ..
ಲೇಖನ ಮೆಚ್ಚಿದ್ದಕ್ಕೆ,
ಧನ್ಯವಾದ..
ಚೆನ್ನಾಗಿದೆ ಅನಿಲ್ ಈ ವಿಷಯ ಎಲ್ಲರೂ ಯೋಚಸಲೇ ಬೇಕು...... ಸಾಫ್ಟ್ ವೇರ್ ಬಂದೇ ಬಂತು........ ನಾವುಗಳೆಲ್ಲಾ ಸೋಮಾರಿಗಳು ಹಾಗೇ ಬಿಟ್ವಿ.......... ನೀನು ತುಂಬಾ ಯೋಚಿಸೊಕ್ಕೆ ಹೋಗಬೇಡಪ್ಪಾ.... ಆಮೇಲೆ ಇಲ್ಲದೇ ಇರೋದಕ್ಕೆಲ್ಲಾ ತಲೆಕೆಡೆಸಿಕೊಳ್ಳ ಬೇಕಾಗುತ್ತೆ ಹಹಹ..........
ReplyDelete