Dec 5, 2010

ತನ್ನ ವಿಶಿಷ್ಟ ಶೈಲಿಯ ನಿರೂಪಣೆಯಿಂದ ಗುರುತಿಸಿಕೊಂಡ ಕನ್ನಡದ ಪ್ರಸಿದ್ದ ಬರಹಗಾರ "ಶ್ರೀಕೃಷ್ಣ ಆಲನಹಳ್ಳಿ"ಯವರು (ಜನನ: ೩-೪-೧೯೪೭ ನಿಧನ: ೪-೧-೧೯೮೯) ಕವಿತೆ-ಕತೆ-ಕಾದಂಬರಿ ಈ ಮೂರು ಪ್ರಕಾರಗಳಲ್ಲೀ ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ಕಾಡು, ಭುಜಂಗಯ್ಯನ ದಶಾವತಾರಗಳು ಮತ್ತು ಪರಸಂಗದ ಗೆಂಡೆತಿಮ್ಮ ಮರೆಯಲು ಹೇಗೆ ತಾನೇ ಸಾಧ್ಯ ಅಲ್ಲವೆ? ಅಂತೊಬ್ಬ ಸಾಹಿತಿಯ ಕವಿತೆ ಇದೋ ನಿಮಗಾಗಿ . . . .

"ಊಟಕ್ಕೆ ಕೂತಾಗ"

ಊಟಕ್ಕೆ ಕೂತೆ- ಥಟ್ಟನೆ
ಸುರಿದ ಅನ್ನ- ಬೆಳ್ಳಗೆ
ಮಲ್ಲಿಗೆಯಂತೆ ನೋಡುನೋಡುತ್ತ
ಯಾಕೋ ಕಪ್ಪಾದಂತೆ
ಕೂತೆ- ಕ್ಷಣ
ತಪ್ಪು ಮಾಡಿದ ಹಾಗೆ

ಹೆಂಡತಿ ಕೇಳಿದಳು: 'ಯಾಕೆ?'- ಮಾತಾಡಲಿಲ್ಲ
'ಎಷ್ಟು ಬೆಳ್ಳಗಿದೆ ಅನ್ನ- ನಮ್ಮ ಗದ್ದೆಯದೆ ಭತ್ತ' ಅಂದಳು
'ಹೌದೆ' ಅಂದೆ.

ಕಣ್ಣು ತುಂಬಿತು ಗದ್ದೆ- ಉತ್ತಿ
ಬಿತ್ತಿ, ಕಳೆ ತೆಗೆದು

ಬೆಳೆದು ತೂಗಿದ ಬಂಗಾರದ ತೆನೆಗಳು
ಜೊತೆಗೆ ಕೆಸರಲ್ಲಿ ದುಡಿದವರ
ನೋವು ತುಂಬಿದ ಕಪ್ಪು ಮುಖಗಳು.

10 comments:

  1. putta maahiti.. jotege kavithe..chennaagide..

    ReplyDelete
  2. chikka saalugaLalli maaruddada arthagaLu...

    oLLeya kavana, kaviya parichaya maaDiddakke dhanyavaada....

    ReplyDelete
  3. ಕೃಷ್ಣ ಆಲನಹಳ್ಳಿ ಯವರ ಕವನಗಳು, ಕನ್ನಡ ಕಾವ್ಯಲೋಕದ ದಿಕ್ಕನ್ನು
    ಬದಲಿಸಿದ ಕಾವ್ಯಗಳು. ಅ೦ದಿನಿ೦ದ ಇಂದಿನವರೆವಿಗೂ ಆಲನಹಳ್ಳಿ ಯವರ
    ಕಾವ್ಯ ಹಾಗು ಬರಹ ತನ್ನ ಗಟ್ಟಿ ತನದಿ೦ದ ಉಳಿದಿದೆ ಕೃಷ್ಣ ಆಲನಹಳ್ಳಿ ಯವರನ್ನ ಪುನಹ ಓದಿಸಿಧಕೆ ವ0ದನೆಗಳು .

    ReplyDelete
  4. ಕೆಸರಲಿ ದುಡಿದು ತಿಂದವರ ನೋವುಂಡ ಕಪ್ಪು ಮುಖಗಳು...ಬಹಳ ಹಿಡಿಸಿತು ಈ ಶಬ್ದಗಳ ಪ್ರಯೋಗ..ನೋವುಂದರೆ ದುಡಿಮೆ, ಹಾಗೆ ದುಡಿದು ತಿನ್ನುವ ಮುಖ ಕಪ್ಪು ಎನ್ನುವುದು ರೈತನ ಹೆಪ್ಪುಗಟ್ಟಿದ ಅಸಹಾಯಕತೆಗೆ ಸೂಚ್ಯ...ಬಹಳ ಚನ್ನಾಗಿದೆ ನಾಗ್ ಕವನ...

    ReplyDelete
  5. bhava tumbida salugalu ...chandada kavana :)

    ReplyDelete
  6. ಅಲನಹಳ್ಳಿ ಕೃಷ್ಣ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಥ್ಯಾಂಕ್ಸ್.

    ReplyDelete
  7. ನಾಗರಾಜು..

    ದಿನಾಲೂ ಊಟ ಮಾಡುವಾಗ..
    ದುಡಿಯುವ ರೈತನ ಕಷ್ಟ ಗೊತ್ತೇ ಆಗುವದಿಲ್ಲ..

    ಇದಕ್ಕೆ "ವಾಸ್ತವಿಕ ಕಲ್ಪನೆ" ಅನ್ನ ಬಹುದಾ?

    ಥ್ಯಾಂಕ್ಯೂ.. !

    ReplyDelete