Nov 20, 2010

"ಮಗನಾಗೋ ಮುಕುಂದ"

ಮನ ಮಡಿಯಾಗಿಸಿ
ಜೇಡಿಮಣ್ಣಲಿ ನಿನ್ನ ಬಂಧಿಸಿರುವೆ, ಪೂಜಿಸಲಲ್ಲೋ
ಮುದ್ದಿಸಲು ಮಗನೆ

ನನ್ನ ಸೆರಗೆಳೆದು
ಬೆಣ್ಣೆಗಾಗಿ ಕೈ ಚಾಚಲು ಬಾರೋ
ಕಾಡಿ-ಬೇಡಿ ಹುಸಿಮುನಿಸ
ಕಣ್ಣೀರ ತರಲು ಬಾರೋ

ನಡುಮನೆಯಲ್ಲಿ ಬೆಣ್ಣೆ
ಮುಚ್ಚಿಟ್ಟಿರುವೆ, ಕದಿಯಲು
ಕಳ್ಳ ಹೆಜ್ಜೆಯಲಿ ಬಾರೋ
ಬಂದಾರು ಬಾರೋ ಹಾಲುಗೆನ್ನೆಯ ಕಂದ

ರಗಳೆಯಾಗಲಿ
ಚೆಲ್ಲಾಟವಾಗಲಿ ಏನಾದರಾಗಲಿ,
ನಿನ್ನದೇ ಗೆಲುವಾಗಲಿ ಬಾರೋ
ನನ್ನೆದೆಯಲಿ ಹಾಲ್ಗಡಲ ಜಿನುಗಿಸಲು
ಒಡಲಿಗೆ ಚಿಗುರಾಗಿ ಜಾರೋ

ಹಠ ಬಿಟ್ಟು,
ಬಾಯ್ತುಂಬ ಅಮ್ಮಾ ಎಂದು ಕರೆಯೋ
ಮಣ್ಣ ಮುಕುಂದ,
ಮುದ್ದು ಮುಕುಂದ

=====
=====

14 comments:

  1. ನಾಗರಾಜ್;ಸುಂದರ ಕವನ.

    ReplyDelete
  2. ತುಂಬಾ ಚೆನ್ನಾಗಿದೆ.. ಬರೆಯುತ್ತಿರಿ.. ಧನ್ಯವಾದಗಳು!

    ReplyDelete
  3. ಕವನ ಚೆನ್ನಾಗಿದೆ ನಾಗರಾಜ್,ಹೀಗೆ ಬರೆಯುತ್ತಿರಿ.

    ReplyDelete
  4. ಎಲ್ಲರಿಗೂ ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ಹೀಗೆಯಿರಲಿ . . .

    ReplyDelete
  5. ನಾಗರಾಜ್ ಕವನ ತುಂಬಾ ಚೆನ್ನಾಗಿದೆ..

    ReplyDelete
  6. ಕವನ ಚೆನ್ನಾಗಿದೆ, ಈ ಪ್ರಯತ್ನ ಮುಂದುವರಿಯಲಿ, ಶುಭಕೋರುತ್ತಿದ್ದೇನೆ

    ReplyDelete
  7. ನಾಗರಾಜ್,
    ಕೃಷ್ಣನ ಬಾಲ ಲೀಲೆಯನ್ನು ಸೊಗಸಾಗಿ ಬರೆದಿದ್ದೀರಿ ..ಚೆನ್ನಾಗಿದೆ

    ReplyDelete