Nov 5, 2010

"ಬಿಸಿಲ ಹನಿ"

ಹಬ್ಬದಂತೆ ಮೂಡುತ ಬಾಗುವ
ಬಣ್ಣದಬಿಲ್ಲ ನೋಡಿ ಕುಣಿದು ಕುಪ್ಪಳಿಸುವ
ಮನದಲ್ಲಿ ಬರೀ ಬಣ್ಣಗಳ ಚಿತ್ತಾರ.
ಮತ್ತೊಮ್ಮೆ ಮೂಡುವುದೇ ?- ಕೊನೆಯಿಲ್ಲದ ಕಾತರ.
ಬಣ್ಣಗಳ ಬಣ್ಣನೆಯಲ್ಲಿ, ಅಲ್ಪಾಯುಷ್ಯದ ಮಳೆಗೆ ಮೆಚ್ಚುಗೆಯಿಲ್ಲ
ಅಸಲಿಗೆ ಅದರ ಪರಿವಿಲ್ಲ.

ಬಣ್ಣದೊಡಲ ಬಗೆದಾಗ
ಕಲ್ಪನೆಗೂ ಮೀರಿದ ಹನಿಯ
ಹೊಸ ಲೋಕ ತೆರೆಯುವುದು, ತೋರುವುದು.

ಹುಚ್ಚು ಮಳೆಯಿದು
ಬಂದೆರೆಷ್ಟು, ಬಿಟ್ಟರೆಷ್ಟು- ಕೊಂಕಾಡುತಿದೆ ಬಣ್ಣ ನೋಡುವ ಕಣ್ಣು.
ಜೋರಾಗಿ ಹುಯ್ದರೆ ಮಾತ್ರ ಮಳೆಯೇ
ಬಿಸಿಲಮಳೆಗೆ ಬೆಲೆಯಿಲ್ಲವೇ ?


ಪ್ರತಿಸಲವೂ ಮಣ್ಣಿನಾಳದಲ್ಲಿ ಬಂದಿರುವಿಕೆಯನ್ನ
ಮೂಡಿಸುವಲ್ಲಿ ಸೋಲುವುದು.
ಬಿಸಿಲಮಳೆ ಸೋಲಿಗೆ ಹೆದರಿಲ್ಲ ಇದುವರೆಗೂ
ಸತತ ಪ್ರಯತ್ನವದರ ಜಾಯಮಾನ

ಹೋಗುವ ಮೊದಲು
ಅಂತ್ಯವಿಲ್ಲದ ಹಾಳೆಯ ಮೇಲೆ
ಬಣ್ಣ ತಂದು ಸಹಿಮಾಡುವುದು.
ನೋಡುವ ಕಣ್ಣುಗಳಲ್ಲಿ ಉಳಿದಿದ್ದು ಬಣ್ಣಗಳು ಮಾತ್ರ.

ತಿರಸ್ಕಾರಗೊಂಡ ಹನಿಯ
ಬೇಸರದುಸಿರ ಕೇಳಿ
ಸಮಾಧಾನಪಡಿಸಿದವರೆಷ್ಟೋ ?
ಸಿಹಿ ಹನಿಗಾಗಿ ನಾಲಿಗೆ ಚಾಚಿದವರೆಷ್ಟೋ ?
ಅಂಗಳದಲ್ಲಿ ಮನಸಾರೆ ಕಾದು ನಿಂತು
ಹಗುರ ಹನಿಗಳಲ್ಲಿ ಪುಳಕಗೊಂಡು ನೆನೆದವರೆಷ್ಟೋ ?

=====
=====

13 comments:

  1. ತಿರಸ್ಕಾರಗೊಂಡ ಹನಿಯ
    ಬೇಸರದುಸಿರ ಕೇಳಿ
    ಸಮಾಧಾನಪಡಿಸಿದವರೆಷ್ಟೋ ?
    ಸಿಹಿ ಹನಿಗಾಗಿ ನಾಲಿಗೆ ಚಾಚಿದವರೆಷ್ಟೋ ?
    ಅಂಗಳದಲ್ಲಿ ಮನಸಾರೆ ಕಾದು ನಿಂತು
    ಹಗುರ ಹನಿಗಳಲ್ಲಿ ಪುಳಕಗೊಂಡು ನೆನೆದವರೆಷ್ಟೋ ?
    chandada salugalu chandada kavana dhanyavaadagalu :)

    ReplyDelete
  2. naagaraj,

    tumbaa sundara saalugalu ....

    kavi maaguttiddaane....

    munduvarisi....

    ReplyDelete
  3. @ರಂಜಿತ: ಬಿಸಿಲ ಹನಿಯ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

    @ದಿನಕರಣ್ಣ: ಕವಿ ಮಾಗುತ್ತಿದ್ದಾನೆ ಅಂದ್ರಲ್ಲ ಇದಕ್ಕಿಂತ ಪ್ರೋತ್ಸಾಹ ಬೇರೊಂದಿಲ್ಲ ಖಂಡಿತ ಮುಂದುವರೆಸುತ್ತೇನೆ. ಕವನ ಇಷ್ಟಪತ್ತಿದ್ದಕ್ಕೆ ಥ್ಯಾಂಕ್ಸ್.

    ReplyDelete
  4. ಬಿಸಿಲ ಹನಿಗಳ ಬಗ್ಗೆ ಚೆ೦ದದ ಕವನ..

    ReplyDelete
  5. ನಾಗರಾಜು...

    ಹನಿಯ..
    ಮನದನಿ..
    ತುಂಬಾ ಚೆನ್ನಾಗಿ ಮೂಡಿ ಬಂದಿದೆ...

    ಅಭಿನಂದನೆಗಳು...

    ReplyDelete
  6. @ಮನಮುಕ್ತಾ ಮೇಡಂ:: ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

    @ಪ್ರಕಾಶ್ ಮಾಮ:: ಬಂದಿರುವಿಕೆಯನ್ನ ಮೂಡಿಸಲು ಸೋಲುವ ಹನಿಗಳು , ತಮ್ಮ ಮನದನಿಯನ್ನ ನನಗೆ ಮುಟ್ಟಿಸುವಲ್ಲಿ ಗೆದ್ದುಬಿಟ್ಟವಲ್ಲ. ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ಪುಳಕವನ್ನುಂಟು ಮಾಡುವ ಮಳೆಹನಿಗೆ ಮಳೆಹನಿಯೇ ಸಾಟಿ. ಪ್ರತಿಕ್ರಿಯೆಗೆ ಧನ್ಯವಾದಗಳು.

    @ತೇಜಸ್ವಿನಿ ಮೇಡಂ:: ಕವನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್, ಬರುತ್ತಿರಿ . . .

    ReplyDelete
  7. ಚೆನ್ನಾಗಿದೆ ನಾಗರಾಜ್, ಇನ್ನಷ್ಟು ಬರೀರಿ

    ReplyDelete
  8. ನಾಗರಾಜ್;ಕವಿತೆ ತುಂಬಾ ಇಷ್ಟ ಆಯಿತು.ಕವಿ ಮಾಗಿದ್ದಾನೆ!ಕವಿತೆ ಘಮ ಘಮಿಸುತಿದೆ!ಇನ್ನಷ್ಟು ಪರಿಮಳ ಬೀರುವ ಕವಿತೆಯ ಕುಸುಮಗಳು ಅರಳಲಿ.ಧನ್ಯವಾದಗಳು.

    ReplyDelete
  9. ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಲುಗಳು.... ಕವನ ಓದುಗನಿಗೆ ತೃಪ್ತಿ ಕೊಡುತ್ತದೆ...

    ReplyDelete
  10. ನಾಗರಾಜ್,

    ಕವನದ ಭಾವನೆಗಳಿಗೆ ಪಕ್ವತೆ ಬಂದಿಂತಿದೆ. ಸಾಲುಗಳಲ್ಲೇ ಚೆನ್ನಾಗಿವೆ. ನಿಮ್ಮೊಳಗೆ ಕವಿ ಜಾಗೃತನಾಗಿದ್ದಾನೆ..ಮುಂದುವರಿಸಿ..

    ReplyDelete
  11. @ಪರಾಂಜಪೆ ಸರ್, @ಮೂರ್ತಿ ಸರ್, @ಪ್ರವರ ಮತ್ತು @ಶಿವಣ್ಣ :: ನಿಮ್ಮೆಲ್ಲರ ಮೆಚ್ಚುಗೆ ನನ್ನಲ್ಲಿ ಮತ್ತಷ್ಟು ಹುರುಪು ತುಂಬಿದೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

    ReplyDelete
  12. ಅರ್ಥ ಚಿಂತನೆಗೆ ತೀವ್ರವಾಗಿ ತುಡಿಸುವ ಕವನ. ಜೈ ಹೋ!

    ReplyDelete