Feb 13, 2011

ಪ್ರೀತಿ ಬೆಳೆಯಲಿ-ಪ್ರೀತಿ ಬೆಳಗಲಿ..



ಇವತ್ತು 'ಪ್ರೇಮಿಗಳ ದಿನಾಚರಣೆ'.

ಪ್ರೀತಿಗೂ-ಪ್ರೇಮಕ್ಕು ಒಂದು ದಿನ ಅಂತ ಇರಬೇಕ..? ಗೊತ್ತಿಲ್ಲ..!
ಅದರ ವಿವರಣೆ ಇಲ್ಲಿ ಅನವಶ್ಯಕ.

[ಸುಮ್ನೆ ನಿಮ್ಮ ಮಾಹಿತಿಗಾಗಿ ಒಂದು ವಿಷಯ:
A study by the Associated Chambers of Commerce and Industry of India says Rs.12,000 Cr. spent on Valentine week 2010]


ಆದರೇ,
ಪ್ರೀತಿ ಅಂದ್ರೇನು? ಅದು ಹೇಗಿರುತ್ತೆ..? ಹೇಗಾಗುತ್ತೆ..? ಯಾಕಾಗುತ್ತೆ..? ಆದಮೇಲೆ ಹೇಗೆ..?
ವಿವರಿಸೋದು ಕಷ್ಟ, ಕಷ್ಟ.!

ಈ ಪ್ರೀತಿ ಬಗ್ಗೆ ಕೇಳಿದಿವಿ, ಓದಿದಿವಿ.
ಒಬ್ಬೊಬ್ಬರ ದ್ರಷ್ಟಿಯಲ್ಲಿ ಒಂದೊಂದು ರೀತಿ, ಪ್ರೀತಿ.
ಎಷ್ಟೊಂದು ಹಾಡು/ಕವಿತೆಗಳು. ಕತೆ, ಸಿನೆಮಾಗಳು ಈ ಪ್ರೀತಿಯ ಮೇಲೆ.

ಪ್ರೀತಿಯ ಅನುಭವ ಹೇಳಲಾಗದು, ಅದನ್ನು ಅನುಭವಿಸಬೇಕು ಅಷ್ಟೇ.

ಹೂವಿನ ಪರಿಮಳ ವಿವರಿಸಿ ಹೇಳಲಾಗದ ಹಾಗೆ.!!
ಅನುಭವಿಸಿದವರಿಗೇ ಗೊತ್ತು, ಪರಿಮಳ.

"ಮಕರಂದ ಸವಿಯಲು ದುಂಬಿ ಆಗಲೇಬೇಕು"

ಪ್ರೀತಿ.......... ಪ್ರೀತಿನೆ..!!


***


ಈ ಪ್ರೀತಿಯ ಬಗ್ಗೆ ಕೆಲವು ಭಾವನೆಗಳು..

ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಚಡಪಡಿಸುತ್ತಿರುವ ಪ್ರೇಮಿ:

"ತುಸು ದೂರ ನನ್ನೊಡನೆ ನೀ ನಡೆಯಬೇಕು,
ನನ್ನೀ ಮನದ ಕತೆಯೊಂದ ನೀ ಕೇಳಬೇಕು.
ಅರಿಯದ ಕಣ್ಣ ಮಾತನ್ನ,
ಮನಬಿಚ್ಚಿ ನಾ ಹೇಳಲೇಬೇಕು.!"


ಪ್ರೇಯಸಿಯನ್ನು ಕಳೆದುಕೊಂಡ ಘಳಿಗೆ:

"ನಿನ್ನ ವಿರಹದಲಿ ಅದೆಷ್ಟು ಸಾರಿಯೋ ನಾನಿಟ್ಟದ್ದು ಕಂಬನಿ.
ಮೊನ್ನೆ ಎಣಿಸಿ ಬರೆಯುವಾಗ, ಬರೀದಾಯಿತು ಲೇಖನಿ..!"


ಅವಳ ನೆನಪಿನಲ್ಲಿ ಕೊರಗುತ್ತಿದ್ದ ಅವನಿಗೆ, ಇದು ನನ್ನ ಜೀವನ ಅಲ್ಲ ತಾನು ಬದಲಾಗಲೇಬೇಕು ಎನಿಸಿತು:

"ಕಾರಣ ನೀಡದೇ, ನನ್ನ ಪ್ರೀತಿಯನ್ನು ತೊರೆದು ಹೋದವಳೇ,
ನಿನ್ನ ವಿರಹದಲಿ ಬೆಂದು-ಬಂಡೆಯಾದ ಹೃದಯದಲಿ,
ನೋಡು, ಮತ್ತೇ
ಪ್ರೀತಿ ಎಲೆ 'ಚಿಗುರಿದೆ'..!! "


ಕಳೆದು ಹೋದ ಪ್ರೀತಿಯ ದಿನಗಳು ಮರೆಯಬೇಕು. ಸಂಪೂರ್ಣ ಮರೆಯಲಾಗದಿದ್ದರೂ ಮರೆಯಲತ್ನಿಸಬೇಕು,
ಹೊಸ ಕನಸು ಕಾಣಬೇಕು:


"ನಿನ್ನ ನೋಡದ ನಿನ್ನ ಧ್ವನಿ ಕೇಳದ,
ಎಲ್ಲಿರುವೆ, ಹೇಗಿರುವೆ ಎಂಬ ಸುಳಿವು ಇಲ್ಲದ.

ನನ್ನ ಬಾಳ ಸಂಗಾತಿಯಾಗಿ, ಬಾಳ ಬಂಡಿಗೆ ಹೆಗಲು ಕೊಡುವ.
ನಕ್ಷತ್ರಗಳೆಣಿಸಲು
ಜೊತೆಯಾಗುವ.
ಹುಣ್ಣಿಮೆಯ ರಾತ್ರಿ, ಚಳಿಗೆ ಬಿಸಿ-ಬೆಸುಗೆಯಾಗುವ.

ಮೌನಕ್ಕೆ ಮಾತಾಗುವ, ಪದಗಳಿಗೆ ಹಾಡಾಗುವ.
ನನ್ನೀ ಮನದ ಒಡತಿಯಾಗುವ ಗೆಳತಿಯೇ.

ನಿನ್ನ ಹೃದಯದಾಗಮನದಿಂದ, ನನ್ನ ಹೃದಯದಲ್ಲಾಗುವ
ರಿಂಗಣಿಕೆಗೆ,
ನಾ ಕಾದಿರುವೆ.....!!! "


***


ಪ್ರೀತಿ ಬೆಳೆಯಬೇಕು, ಪ್ರೀತಿ ಬೆಳಗಬೇಕು..!!


ಚಿತ್ರ:ಅನಿಲ್ ಬೇಡಗೆ

42 comments:

  1. ಚ೦ದ್ ಬರದೀರ್ರಿ...ಅ-ನಿಲ್..:)

    ReplyDelete
  2. ವಿಜಯಶ್ರೀ ಮೇಡಂ,
    ತುಂಬಾ ತುಂಬಾ ಥ್ಯಾಂಕ್ಸ್ :):)

    ReplyDelete
  3. "ಮಕರಂದ ಸವಿಯಲು ದುಂಬಿ ಆಗಲೇಬೇಕು" ಎಂಬ ಸಾಲುಗಳು ತುಂಬಾ ಇಷ್ಟವಾಯ್ತು. ಚೆನ್ನಾಗಿ ಬರೆದಿದ್ದೀರಿ

    ReplyDelete
  4. ಮೊನ್ನೆ ಎಣಿಸಿ ಬರೆಯುವಾಗ, ಬರೀದಾಯಿತು ಲೇಖನಿ..!"... bahaLa chennagide

    ReplyDelete
  5. ಅನಿಲ್ ಭಾಳ್ ಛಲೋತ್ನಾಗ್ ಬರ್ದಿ ಬಿಡಪಾ...
    ನಕ್ಷತ್ರಗಳೇಣಿಸಲು ಯಾಕಪ್ಪಾ ಏಣಿ ಹಾಕಿ ಎಣಿಸಿದೆಯೇನು...? ಗಳೆಣಿಸಲು..ಮಾಡು.

    ReplyDelete
  6. ಪ್ರೀತಿ.. ಪ್ರೇಮಕೆ..
    ಅದರ ರೀತಿಗೆ..
    ನಿಮ್ಮ ಶಬ್ಧಗಳೇ.. ಸೊಗಸು..

    ತುಂಬಾ ಸೊಗಸಾಗಿ ಬರೆದಿದ್ದೀರಿ.. ಅಭಿನಂದನೆಗಳು...

    ReplyDelete
  7. ವಾಹ್!ಅನಿಲ್! ಪ್ರೀತಿಯ ಬಗೆಗೆ ಸೊಗಸಾದ ವ್ಯಾಖ್ಯಾನ!

    ReplyDelete
  8. ಪ್ರೀತಿಯ ಭಾವನೆಗಳು ಚೆಂದವಾಗಿ ಮೂಡಿದೆ ,ಬೆಡಗೆ ಸರ್ ........
    'ಮೌನಕ್ಕೆ ಮಾತಗು ,ಪದಗಳಿಗೆ ಹಾಡಗು '-superb ಲೈನ್.......:)

    ReplyDelete
  9. ಅನಿಲ್.........
    ಸೂಪರ್ ಸರ್,
    ಪ್ರೀತಿ ಬೆಳೆಯಬೇಕು.........
    ಆದರೆ ಅದು ಪ್ರೀತಿಯಂತಿರಬೇಕು

    ReplyDelete
  10. ಅರಿಯದ ಕಣ್ಣ ಮಾತನ್ನ,
    ಮನಬಿಚ್ಚಿ ನಾ ಹೇಳಲೇಬೇಕು.!"
    ee lines super agide

    ReplyDelete
  11. tumba chennagide Ani.... preeti beLayabeku, haage beLagabeku....

    ReplyDelete
  12. ಅನಿಲ್, ಪ್ರೀತಿ ಬಗ್ಗೆ ನಿನ್ ವ್ಯಾಖ್ಯಾನ ಬಲು ಚಲೋ ಇದೆ ಕಣಪ್ಪಾ!!!!

    ReplyDelete
  13. ಅನಿಲ್ ನಿಮ್ ಈ ಬರಹ ಒಂತರ ರುಚಿ ರುಚಿಯಾದ ಗುಲ್ಬರ್ಗ ಕಟ್ ಮಿರ್ಚಿ ಮೊಸರಲ್ಲಿ ತಿನ್ದನ್ಗಾಯ್ತು,

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  14. @ ಪ್ರದೀಪ್: 'ಪೆನ್ನು ಪೇಪರ್' ಗೆ ಸ್ವಾಗತ.
    ಮಕರಂದ ಬೇಕು ಅಂದ್ರೆ ದುಂಬಿ ಆಗ್ಲೇ ಬೇಕಲ್ವ..?
    ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  15. @ ಸೋಮಶೇಖರ್ ಹುಲ್ಮನಿ: "ಪೆನ್ನು ಪೇಪರ್" ಗೆ ಸ್ವಾಗತ.
    ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಪ್ರೋತ್ಸಾಹ ಹೀಗೆ ಇರಲಿ.

    ReplyDelete
  16. @ಆಜಾದ್ ಸರ್: ಪ್ರೀತಿ ಪ್ರೇಮಕ್ಕ ಯಾವ ಹೊತ್ತಾದರ ಏನು..?
    ನೀವು ತಿಳಿಸಿದ ಹಾಗೆ ಬದಲಾವಣೆ ಮಾಡಿದಿನಿ.
    ನಿಮ್ಮ ಪ್ರೀತಿ ಸದಾ ಇರಲಿ.
    ಧನ್ಯವಾದ :)

    ReplyDelete
  17. @ಪ್ರಕಾಶ್ ಮಾಮಾ: ಪ್ರೀತಿ ಎನ್ನುವುದೇ ಒಂದು ಸೊಗಸು.
    ಅದರ ಬಗ್ಗೆ ಏನು ಹೇಳಬೇಕು.? ಎಲ್ಲಾ ತಾನೇ ಆಗಿಬಿಡುತ್ತೆ. :)
    ಪ್ರೀತಿ ಇರಲಿ..

    ReplyDelete
  18. @ಸುನಾಥ್ ಕಾಕಾ: ಧನ್ಯೋಸ್ಮಿ.
    ನಿಮ್ಮಂತಹ ಹಿರಿಯರ,
    ಪ್ರೀತಿ-ಆಶೀರ್ವಾದ ಸದಾ ಇರಲಿ.

    ReplyDelete
  19. @ಕಾವ್ಯ:
    ಪ್ರೀತಿಯಲ್ಲಿ ಇದ್ದಾಗ ಮಾತಿನ ಅಗತ್ಯವಿಲ್ಲ, ಅಲ್ಲಿ ಮೌನವೆ ಮಾತು..!
    ಧನ್ಯವಾದ :)

    ReplyDelete
  20. @ಲತಾಶ್ರೀ ಮೇಡಂ:
    ಧನ್ಯವಾದಗಳು :) ನಿಮ್ಮ ಪ್ರೋತ್ಸಾಹ ಸದಾ ಇರಲಿ.

    ReplyDelete
  21. @ಪ್ರವೀಣ್ ಸರ್: ಹೌದು ಪ್ರೀತಿ, ಪ್ರೀತಿಯ ಹಾಗೆ ಇರಬೇಕು.
    ಪ್ರೀತಿಯಲ್ಲಿ, ನಾವು ಬೆಳೆಯಬೇಕು.. ಬಾಳು ಬೆಳಗಬೇಕು.:)

    ReplyDelete
  22. @ದಿವ್ಯಾ: "ಪೆನ್ನು ಪೇಪರ್" ಗೆ ಸ್ವಾಗತ.
    ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು :)

    ReplyDelete
  23. @ಮಂಜು: "ಪೆನ್ನು ಪೇಪರ್" ಗೆ ಸ್ವಾಗತ.
    ಅವಳು ನನ್ನ ಕಣ್ಣ ಮಾತನ್ನ ಅರಿಯಲಿಲ್ಲ.. ಏನ್ ಮಾಡ್ಲಿ ಬಾಯಿಬಿಟ್ಟು ಹೇಳಲೇ ಬೇಕಲ್ವ..?
    ಬರುತ್ತಿರಿ.
    ಧನ್ಯವಾದಗಳು.

    ReplyDelete
  24. @ಸುಗುಣಕ್ಕ: ಹೌದಲ್ವಾ..
    ನಾವು ಪ್ರೀತಿಯಲ್ಲಿ ಬೆಳಯಬೇಕು,
    ಆ ಪ್ರೀತಿ ಬಾಳ ಬೆಳಗಬೇಕು :)
    ಪ್ರೀತಿ ಇರಲಿ.

    ReplyDelete
  25. @ಉದಯ್ ಜಿ: "ಪೆನ್ನು ಪೇಪರ್" ಗೆ ಸ್ವಾಗತ.
    ಧನ್ಯವಾದಗಳು. ಬರುತ್ತಿರಿ.

    ReplyDelete
  26. @ಪರಾಂಜಪೆ ಸರ್:
    ಧನ್ಯವಾದ, ನಿಮ್ಮ ಪ್ರೋತ್ಸಾಹ-ಪ್ರೀತಿ ಸದಾ ಇರಲಿ.

    ReplyDelete
  27. @ಬಾಲು ಸರ್:
    'ಗುಲ್ಬರ್ಗ ಕಟ್ ಮಿರ್ಚಿ' ನೆನಪಿಸಿ ಬಾಯಲ್ಲಿ ನೀರು ಬರ್ಸದ್ರಿ..
    ತುಂಬಾ ತುಂಬಾ ಥ್ಯಾಂಕ್ಸ್.
    ಪ್ರೀತಿ ಇರಲಿ.

    ReplyDelete
  28. priti bagge baredu baredu..... haage .... hige... hige ..... haage... endellaa baredu konege..." priti beLeyabeku... priti beLagabEku " andyalla .... khushi aaytu..... chandagina baraha...

    ReplyDelete
  29. @ದಿನಕರಣ್ಣ: "ನಮ್ಮೊಳಗಿನ ಪ್ರೀತಿ ಬೇಳಿಯಬೇಕು,
    ಆ ಪ್ರೀತಿಯಿಂದ ನಮ್ಮ ಬಾಳು ಬೇಳಗಬೇಕು."
    ಅದನ್ನ ಹೇಳಲು ಹೊರಟವನು, ಅಷ್ಟೆಲ್ಲ ಹೇಳಿದೆ :)
    ಪ್ರೀತಿ ಇರಲಿ.

    ReplyDelete
  30. ಮಸ್ತ್ ಬರ್ದಿರ್ರಿ ಅನಿಲ್ .... ಒಮ್ಮೊಮ್ಮೆ ಹೂವಿನ ಪರಿಮಳ ಜಾಸ್ತಿ ಆಗ್ಬಿಟ್ರೆ ತಲೆನೋವು ಬರತ್ತೆ ಹುಷಾರು ;) :P

    ReplyDelete
  31. @ರಂಜಿತ ಮೇಡಂ:
    'ಪರಿಮಳ' ಸಿಕ್ಕೆ ಇಲ್ಲ, ಇನ್ನು ಜಾಸ್ತಿ ಆಗೋದು ಎಲ್ಲಿಂದ.? ಹ ಹ..
    ಭಾಳ್ ದಿನ ಆದಮ್ಯಾಲ ಬಂದ್ರಿ, ಖುಷಿ ಆತು :)

    ReplyDelete
  32. ತುಂಬಾ ಸೊಗಸಾಗಿ ಬರೆದಿದ್ದೀರಿ.. ಅಭಿನಂದನೆಗಳು..

    ReplyDelete
  33. @ಮಾಹಬಲ ಗಿರಿ ಭಟ್ : ಧನ್ಯವಾದಗಳು,ಬರುತ್ತಿರಿ..

    ReplyDelete
  34. @ವಸಂತ್: ತುಂಬಾ ಥ್ಯಾಂಕ್ಸ್, ಬರುತ್ತಿರಿ.

    ReplyDelete
  35. ಚನ್ನಾಗಿದೆ ಅನಿಲ್. ಆದರೆ ಈಗಿನ ಕಾಲದಲ್ಲಿ ಎಸ್ಟೋ ಪ್ರೀತಿಗಳಿಗೆ ಭಾವನೆಗಳೇ ಇರೋದಿಲ್ಲ. ಭಾವನೆ ಗೀವನೆ ಅಂದ್ರೆ "Be Practical Dude" ಅಂತಾರೆ ಅಸ್ಟೆ.... !!!

    ಅನ್ದೊಂದಿತ್ತು ಕಾಲ,
    ಪ್ರೀತಿಯೆಂಬ
    ಭಾವನೆಗಳ ಜಾಲ,
    ಈಗಿನಿದ್ದರು
    ಬರಿ ಹುಡುಗಿಯರಿಗಾಗಿ
    ಹುಡುಗ ಮಾಡುವನು
    ಸಾಲ, ಸೋಲ...


    --
    ಶಿವಪ್ರಕಾಶ್

    ReplyDelete
  36. @ದೋಸ್ತ ಶಿವಪ್ರಕಾಶ್.
    ಎಷ್ಟೋ ಕಡೆ ಅಂದಿಯಲ್ಲ, ಅದು ಸತ್ಯ..!
    ಆದರೇ, ನಮ್ಮ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಇದ್ದೆ ಇರುತ್ತೆ.
    ನಿಜ, ಈಗಿನ ಕೆಲವು ಪ್ರೀತಿಗಳು, ಪ್ರೀತಿಗಳಾ..? ಅನಿಸುವ ಹಾಗಿರುತ್ತೆ..!
    ಸಾಲ ಸೋಲ, ಅದು ನಮ್ಮ ಬುದ್ದಿಗೆ, ವಿವೇಚನೆಗೆ, ನಮಗೆ ಬಿಟ್ಟದ್ದು. ಹ ಹ..

    ನಾವು, ಪ್ರೀತಿಯಲ್ಲಿ ಬೇಳಿಯಬೇಕು. ಆ ಪ್ರೀತಿ ಬಾಳ ಬೇಳಗಬೇಕು. ಅಷ್ಟೇ. :)

    ReplyDelete
  37. ಪ್ರೀತಿ ಎ೦ದರೇನು? ಎನ್ನುವುದಕ್ಕೆ ಸೊಗಸಾದ ವ್ಯಾಖ್ಯಾನ ನೀಡಿದ್ದೀರಿ! ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

    ReplyDelete
  38. @ ಪ್ರಭಾಮಣಿ ಮೇಡಂ: "ಪೆನ್ನು ಪೇಪರ್" ಗೆ ಸ್ವಾಗತ.
    ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ಖಂಡಿತ ನಿಮ್ಮ ಬ್ಲಾಗಿಗೆ ಬರುವೆ.
    ಧನ್ಯವಾದಗಳು.

    ReplyDelete
  39. nice one anil:):):) loved it:):)

    ReplyDelete