"ಮುಪ್ಪರಿಯದ ಅಭಿಸಾರಿಕೆ-ರಾಧೆ"
ಕಾದಿರುವಳು ರಾಧೆ
ನೆನಪಿನಲೆಗಳ ಮುಂದೆ
ತನ್ನ ತಾ ಮರೆತು, ಒಂದಾಗುತಿಹಳು
ಸಂಜೆಗೆಂಪಿನೊಳಗೆ
ತುಸು ಬೇಗನೆ ಬಂದಿಲ್ಲಿ ದಾರಿ ನೋಡುವಳು
ಅವನು 'ಏಕಿಷ್ಟು ಬೇಗನೆ ಬರುವೆಯೆಂದರೆ'
ಇವಳದು ಅದೇ ರಾಗ:
'ಕಾಯಿಸುವವನಿಗೇನು ಗೊತ್ತು
ಕಾಯುವ ಸುಖ'
**
ಹತ್ತಿರ ಹತ್ತಿರ ಇನ್ನೂ ಹತ್ತಿರ ಬರುವನು
ಗೋಧೂಳಿಯ ಘಮದ ಸುಮ.
ಅವನ ಮೀಸೆಯಂಚಲ್ಲಿ ಧೂಳು ಧೂಳು ಪರಾಗ !
ಪ್ರತಿಸಂಜೆ ರಾಧೆಯಲ್ಲಿ ಹೊಸ ಪುಳಕ
ಬಂದ ಗೊಲ್ಲ, ಇವಳ ಗಲ್ಲ ತಟ್ಟಿ,
ಉತ್ತರ ಗೊತ್ತಿದ್ದರೂ ಕೇಳುವ: 'ತುಂಬಾ ಹೊತ್ತಾಯಿತಾ?'
ಅಲೆಗಳಾಗ ಶಾಂತ ಶಾಂತ
ಮೆಲ್ಲಗೆ ಅವನ ನೋಡುವಳು-
ರಾಧೆಯ ಬೆರಗುಗಣ್ಣಿನಲ್ಲಿ ಸುಕೋಮಲ ಕೋಪ, ಕೋಪಶಮನ, ಉರಿ !
**
ಕಾದು ಕಾದು
ಎಲ್ಲವನು ತೋರಿ
ತಾನೇ ಕಾಣದಾಗುವಳು-ರಾಧೆ.
ಮತ್ತೆ ಮತ್ತೆ ಕಾಯುವಳು
ಅಲೆಗಳಾ ಮುಂದೆ !
ರಾಧೆ ರಾಧೆ ಎಲ್ಲರಲೂ ಹರಿವ ಸುಧೆ
ಅವಳು, ಅವಳ ಅಭಿಸಾರ- ನಿರಂತರ . . . .
=====
=====
Mar 2, 2011
Subscribe to:
Post Comments (Atom)
ಬಹಳ ದಿನಗಳ ನಂತರ ಒಂದು ಸುಂದರ ಕವನ ಓದಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅಭಿನಂದನೆಗಳು ನಾಗರಾಜ್.ಕವನ ತುಂಬಾ ಇಷ್ಟವಾಯಿತು.ನಿಮ್ಮೊಳಗಿನ ಕವಿಗೆ ನಮೋನ್ನಮಃ.
ReplyDeleteಪ್ರೀತಿಯಲ್ಲಿ ಕಾದಷ್ಟು ಸುಖ-ರುಚಿ ಇನ್ನೊಂದರಲ್ಲಿ ಇಲ್ಲ ಎಂದು ಯಾರೋ ಹೇಳಿದಾರೆ..... ಚೆನ್ನಾಗಿದೆ ಕವನ....
ReplyDeleteನಾಗರಾಜ,
ReplyDeleteನಿತ್ಯನಿರಂತರ ಅಭಿಸಾರವನ್ನು ಬಲು ಚೆನ್ನಾಗಿ ಕವನಿಸಿದ್ದೀರಿ. ಅಭಿನಂದನೆಗಳು.
kavana super :)
ReplyDeletechannaagide.. kavite...
ReplyDeleteNagaraj,
ReplyDeletekavanavannu chennaagi barediddiri..
keep writing.
Thanks to ALL
ReplyDeleteನಾಗರಾಜು...
ReplyDeleteಬಹಳ ಸುಂದರ ಕವನ...
ಇಷ್ಟವಾಯಿತು..
ಇದನ್ನು ನನ್ನ ಬ್ಲಾಗಿನಲ್ಲಿ ಹಾಕಬಹುದಾ?
(ಫೋಟೊ ಸಂಗಡ)
@ಪ್ರಕಾಶ್ ಮಾಮ , ನಿಮ್ಮ ಬ್ಲಾಗಿನಲ್ಲಿ ಈ ಕವನವನ್ನ ಪ್ರಕಟಿಸಿ. ರಾಧೆಯನ್ನ ಮೆಚ್ಚಿಧ್ಧಕ್ಕೆ ಥ್ಯಾಂಕ್ಸ್.
ReplyDeleteಕಾಯುವಿಕೆಗೆ ಗೊತ್ತುಪಡಿಸಿದ ಹೆಸರುಗಳೆಂದರೇನೇ ಅವರಿಬ್ಬರದು....
ReplyDeleteಒಬ್ಬಳು ರಾಧೆ
ಇನ್ನೊಬ್ಬಳು ಶಬರಿ.....
ಎಲ್ಲಾ ಸಾಲುಗಳೂ ಒಂದಕ್ಕಿಂತ ಒಂದು ಸುಂದರ....
ಇಷ್ಟವಾದಳು ಮುಪ್ಪರಿಯದ ಅಭಿಸಾರಿಕೆ...... ರಾಧೆ
nagaraj,
ReplyDeleteee kavanada bagge tumbaa jana friends jote maatanaaDiddene...
tumbaa sogasaada kavana....
nijakku saraLavaagi bareda , sumadhura kavana....
tumbaa tumbaa ishTa aaytu....
@ಕನಸು ಕಂಗಳ ಹುಡುಗ: ಥ್ಯಾಂಕ್ಸ್.
ReplyDelete@ದಿನಕರಣ್ಣ: ಇಷ್ಟ ಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.
ತುಂಬಾ ಚೆನ್ನಾಗಿದೆ ನಾಗರಾಜ್..
ReplyDeleteThanks Pradeep
ReplyDeletevery nice ... :))
ReplyDeleteexcellent lines. "raadhe ellaraloo hariva sudhe avalu. avala abhisaara nirantara" ee saalugalu tumba ishtavaaytu.
ReplyDelete@Soumya and Chetana madam:: Thank you
ReplyDeleteಎಲ್ಲ ಸಾಲುಗಳು ಅದ್ಬುತ .....:)
ReplyDeleteತುಂಬ ಚೆನ್ನಾಗಿದೆ ..........:)
ರಾಧೆಯಾ ಕೋಪ ಶಮನವಾಗುವುದಕ್ಕು ,
ಅಲೆಗಳು ಶಾಂತ ವಾಗುವ -ಹೋಲಿಕೆ ,ಮಸ್ತ್ ಇದೆ .......:):)
@ಹವಳಮಲ್ಲಿಗೆ: ವೆಲ್ ಕಂ ಮತ್ತು ಥ್ಯಾಂಕ್ಸ್
ReplyDelete