Apr 16, 2011

ಪಕ್ಕು ಮಾಮಾ... ಮತ್ತೆ ಬಂದ...!!

ನಿನ್ನೆ ಚಾರ್ಲಿ ಚಾಪ್ಲಿನ್ ೧೨೨ ನೆ ಜನ್ಮದಿನ.

ಕಷ್ಟದ ಜೀವನ ಬದುಕಿದರೂ, ಎಲ್ಲರನ್ನೂ ನಗಿಸಿದ ಹಾಸ್ಯ ಬ್ರಹ್ಮ.

ಅವನಿಗೊಂದು ಸಲಾಮು.. ಬನ್ನಿ ನೀವು ಸ್ವಲ್ಪ ನಕ್ಕು ಬಿಡಿ..!!






ಇತ್ತೀಚಿಗೆ ನಮ್ಮ 'ಪಕ್ಕು ಮಾಮಾನ' ತಲೆಯ 'ಹೊಳಪು' ಜಾಸ್ತಿ ಆಗಿದೆ.

ಮೊದಲು ಮುಂದೆ ಸೂರ್ಯೋದಯ ಹಿಂದೆ ಚಂದ್ರೋದಯದಂತಿದ್ದ ಅವರ ತಲೆ

ಈಗ ಅರ್ಧ ಎಕರೆ ಬಂಜರಾಗಿದೆ..!

ಏನ್ ಮಾಮಾ ಹೀಂಗೆ ಅಂದ್ರೆ..?

ಏ ಬಿಡ್ರೋ ಅಳಿಯಂದಿರ "ಹೇನುಗಳು ಖುಷಿಯಾಗಿರ್ತಾವೆ" ಅಂತಾರೆ..!!!

ನಿಮ್ಮ ತಲೆಕೂದಲು ಉದುರೋದಕ್ಕು ಹೇನುಗಳ ಆನಂದಕ್ಕೂ ಏನ್ ಲಿಂಕು ಮಾಮಾ..? ನೋಡ್ರೋ.. ಅರ್ಧಂಬರ್ಧ ತಲೆಕುದಲಿದ್ರೆ, ಹೇನುಗಳಿಗೆ ಆನಂದವೋ ಆನಂದ..!

ಅವು ಬೇಕೆಂದಾಗ "ಜಾರು ಬಂಡೆ ಆಡಬಹುದು, ಮರಕೋತಿ ಆಟನೂ ಆಡಬಹುದು"


*****

ಅದೊಮ್ಮೆ ಕಾಲೇಜಿನಲ್ಲಿ ' ಸಾಂಸ್ಕೃತಿಕ ' ಕಾರ್ಯಕ್ರಮ ನಡಿಯುವುದಿತ್ತು.

ಸರಿ, ಎಲ್ಲ ತಯಾರಿ ಶುರು ಆದವು ಹಾಗು ಎಲ್ಲವೂ ಸರಿಯಾಗಿ ಯೋಜಿಸಲಾಯ್ತು.

ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಂಡಿದ್ದ, 'ಪಕ್ಕು ಮಾಮಾ' ಮುಂದಾಳತ್ವ ವಹಿಸಿಕೊಂಡಿದ್ದ.

ಆದರೇ...? ಇಲ್ಲಿ ಒಂದು ಸಮಸ್ಯೆ..!

ಅದು ಅಂತಹ ದೊಡ್ಡದಲ್ಲ, ಆದರೂ ಅದನ್ನ ತಡಿಯಬೇಕು..!

ಅದು ಕಾಲೇಜಿನಲ್ಲಿರುವ 'ಶೌಚಾಲಯದ' ಸ್ವಚ್ಚತೆ..!

ಕಾರ್ಯಕ್ರಮ ಅಂದಮೇಲೆ ಜಾಸ್ತಿ ಜನ ಬರ್ತಾರೆ ಬಂದವರು ಇಲ್ಲಿಗೊಂದು ಭೇಟಿ ಕೊಡ್ತಾರೆ.

ಅವರಿಗೆ ಭೇಟಿ ಕೊಡಬೇಡಿ ಎಂದು ಹೇಳಲಿಕ್ಕೆ ಆಗದು ಆದರು ಸಚ್ಚವಾಗಿರಬೇಕು.!

ಕಷ್ಟ ಕಷ್ಟ..


ಪಕ್ಕು ಮಾಮಾನಿಗೆ ಸಹಾಯಕ್ಕೆ ಬಂದಿದ್ದು ಮತ್ತೊಬ್ಬ 'ಪ್ರತಿಭಾ-ವಂತ' ವಿದ್ಯಾರ್ಥಿ,

"ಚಪಾತಿ ಮಿತ್ರ, ನಾಗು"..!

ಕೊನೆಗೂ ನಾಗುವಿನ ಉಪಾಯ ಫಲಿಸಿತು..!

ಉಪಾಯ ಹೀಗಿತ್ತು:

"ಮಹಿಳೆಯರಿಗೆ" ಅಂತ ಬರೆದಿದ್ದ ಸುತ್ತ ಮುತ್ತ 'ಅಂದಕಾಲತ್ತಿಲ್' "ಹಿರೋಗಳ" ವಿವಧ ಭಂಗಿಯ ಕೆಲವು ಚಿತ್ರಗಳು.

"ಪುರುಷರಿಗೆ" ಅಂತ ಬರೆದಿದ್ದರ ಸುತ್ತಮುತ್ತ, ಹೂವಿನ ಮಾಲೆ ಹಿಡಿದಿದ್ದ,

ಆರತಿ ಹಿಡಿದು ನಿಂತಿದ್ದ, ಮಾದಕವಾಗಿ ನೋಡುತಿದ್ದ "ಹಿರೋಯಿನ್" ಫೋಟೋಗಳು

ಅಂಟಿಸಿದ್ದ ಅಷ್ಟೇ.!!


*****

ಅದ್ಯಾಕೋ ಗೊತ್ತಿಲ್ಲ.. ಇತ್ತೀಚಿಗೆ ಪಕ್ಕು ಮಾಮಾನ ಮೊಬೈಲಿಗೆ ಅನಾಮಧೇಯ ಕರೆಗಳು ಜಾಸ್ತಿ ಆಗ್ಬಿಟ್ಟಿದಾವೆ.!

ಕಳೆದವಾರ ಒಬ್ಬ ಪುಣ್ಯಾತ್ಮ ಫೋನ್ ಮಾಡಿ, ದುಡ್ಡು, ಡೆಲಿವರಿ,

"ಫಾರಿನ್ ಮಾಲು' ಅಂತ ಏನೇನೋ ಮತಾಡಿದ್ನಂತೆ.!

ಈಗ ನಿನ್ನೆ ನೋಡಿದ್ರೆ.......

ಹೇಯ್ ನೀವೇ ಕೇಳಿಬಿಡಿ..


ಆತ: ಹಲೋ ಸರ್ ನಮಸ್ಕಾರ..

ಪಕ್ಕು ಮಾಮಾ: ನಮಸ್ತೆ ಸಾರ್ ಹೇಳಿ...

ಆತ: ಸಾರ್ ನೀವು ಪ್ರಕಾಶ್ ಅವರಾ..?

ಪಕ್ಕು ಮಾಮಾ: ಹೌದು ಸಾರ್ ನಾನೇ.

ಆತ: ಸಾರ್ ನೀವು ಪ್ರಕಾಶ್ ಹೆಗಡೆ ಅವರಾ..?

ಪಕ್ಕು ಮಾಮಾ: ಖಂಡಿತ ಅದು ನಾನೇ.

ಆತ: ಸಾರ್ ನೀವು "ಚಪಾತಿ" ಪ್ರಕಾಶ್ ಹೆಗಡೆ ಅವರಾ..!??

ಪಕ್ಕು ಮಾಮಾ: ಹಾ..!...ಹು....! ಹು... ಸಾರ್ ನಾನೇ..

ಆತ: ಸಾರ್ ನಿಮ್ಮ ಬಗ್ಗೆ ತುಂಬಾ ಕೇಳಿದೀನಿ ಸಾರ್.

ಪಕ್ಕು ಮಾಮಾ: ಒಹ್.. ತುಂಬಾ ಧನ್ಯವಾದಗಳು ಸರ್...

ಆತ: ಸಾರ್ ಈಗ ನೀವು ನಮಗೆ ಬೇಕೇ ಬೇಕು.. ನಿಮ್ಮ ಬಗ್ಗೆ ತುಂಬಾ ಕೇಳಿದೀನಿ..!!


ಪಕ್ಕು ಮಾಮಾ: ಸಾರ್ ನಾನ್ ಬೇಕಾ..??

ಆತ: ಸಾರ್, ನೀವು ಏನು ನೆಪ ಹೇಳಂಗಿಲ್ಲ...

ಅದು ಏನಾದ್ರೂ ಆಗ್ಲಿ.. ಆದರೇ ನನಗೆ ನೀವು ಬೇಕು..

ನನಗೆ ೫೦೦ ಜನಕ್ಕೆ ಆಗೋವಷ್ಟು "ಚಪಾತಿ" ಬೇಕು.!!

ಬರೋ ಭಾನುವಾರ ನಮ್ಮ ಮನೆಯಲ್ಲಿ ಫಂಕ್ಷನ್ ಇದೇ.

ಪಕ್ಕು ಮಾಮಾ: (ತಲೆ ಕೆರೆಯುತ್ತ ) ಅಲ್ಲ ಸಾರ ನಾನೂ....

ಆತ: ಸಾರ್ ನೀವು ಏನು ಹೇಳಲೇ ಬೇಡಿ..

ನೋಡೀ ದೊಡ್ಡ ದೊಡ್ಡ ಜನ ಬರ್ತಾರೆ.. ದೊಡ್ಡ ಫ್ಯಾಮಿಲಿಯವರು ಬರ್ತಾರೆ,

ಅವರಿಗೆಲ್ಲ ಖುಷಿ ಆಗೋ ಹಂಗೆ ನೀವು "ಚಪಾತಿ" ಮಾಡಬೇಕು..

ಮುಟ್ಟಿದರೆ ಅಂಗೆ ರೇಷ್ಮೆ ಇದ್ದಂಗೆ, ಮಲ್ಲಿಗೆ ಹೂ ಇದ್ದಂಗೆ ಇರಬೇಕು..

ಇನ್ನೊಂದು, ಮತ್ತೊಂದು ಕೇಳಬೇಕು.. ಅಂಥ ಚಪಾತಿ ಮಾಡಬೇಕು.


ಪಕ್ಕು ಮಾಮಾ: ಅಲ್ಲ ಸಾರ್ ದಯವಿಟ್ಟು ಕೇಳಿ ಇಲ್ಲಿ.. ನಾನೂ ಆ........

ಆತ: ನೀವು ಟೆನ್ಶನ್ ಮಾಡ್ಕೋಬೇಡಿ ಸಾರ್.

ಎಲ್ಲ ಮಟೆರಿಯಲ್ ನಾವೇ ರೆಡಿ ಮಾಡಿ ಇದ್ತಿವಿ..

ಆದರೇ, "ಚಪಾತಿ" ನಿಮ್ದೆ ಬೇಕು..!

ನೀವೇ ಮಾಡಬೇಕು..

ದೊಡ್ಡ ದೊಡ್ದೊರೆಲ್ಲ ಬರ್ತಾರೆ, ಎಲ್ಲರಿಗೂ "ನಿಮ್ದೆ ಚಪಾತಿ"..

ಎಲ್ಲರು ನನಗಿನ್ನೊಂದು ಅನ್ನಬೇಕು..!


ಪಕ್ಕು ಮಾಮಾ: ಎಲ್ಲರಿಗೂ ನಂದೇ "ಚಪಾತಿ"...!!??


ಆತ: ಹಂಗ್ ಹೇಳಬೇಡಿ, ನಮಗೆ ನಿಮ್ದೆ..........


ತಲೆಕೆಟ್ಟು... ಮೊಬೈಲ್ ಆಫ್ ಮಾಡಿ ತಲೆ ತಲೆ ಚೆಚ್ಚಿಕೊಂಡ..

ಪಾಪ ನಮ್ಮ 'ಪಕ್ಕು ಮಾಮಾ' ..!!


***** ***** *****

ಕೆಲವು ಸಂಬಂಧಗಳು ಹೇಗೆ ಆಗ್ತವೆ.?

ಬಾಳ ಪಯಣದಿ ಕೆಲವರು ನಮಗೆ ಹೇಗೆ ಸಿಕ್ಕಿದರು ಯಾಕೆ ಸಿಕ್ಕಿದರು,

ಅನ್ನೋ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟ.

ಉತ್ತರ ಹುಡುಕುವುದು ಬೇಕಾಗಿಲ್ಲ ಅನ್ನೋ ಹಾಗಿರ್ತಾವೆ.

ಆ ಸಂಬಂಧದಲ್ಲಿನ ಪ್ರೀತಿ, ಭಾವನೆಗಳಿಗೆ ಮಾತು ಸೋಲುತ್ತವೆ.!

ಅಂತಹುದೊಂದು ಸಂಬಂಧ ನಮ್ಮದು ಮತ್ತು ಪ್ರಕಾಶ್ ಮಾಮಾನದು.

"ಇಟ್ಟಿಗೆ ಸಿಮೆಂಟ್' ನ "ಪ್ರಕಾಶ್ ಹೆಗಡೆ" ..!!

ಅವರ "ಹೆಸರೇ ಬೇಡ.." ಪುಸ್ತಕದಿಂದ ಅವರ ಬ್ಲಾಗಿನ ಪರಿಚಯವಾದದ್ದು,

ಒಂದು-ವರೆ ವರ್ಷದ ಹಿಂದೆ..!

ಮೊದಲ ಸಲ ಮಾತಾಡಿದಾಗ 'ಮಾಮಾ' ಅಂದೆ ಯಾಕೆ ಅಂತ ಗೊತ್ತಿಲ್ಲ..!

ನಾವಿಬ್ರು ಅವರಿಗಿಂತ ತುಂಬಾ ಚಿಕ್ಕವರು, ಆದರು ನಮ್ಮಲ್ಲಿ ಒಂದು ಗೆಳೆತನ ಇದೆ.. ಪ್ರೀತಿ ಇದೆ. ಬಿಡುವಿದ್ದಾಗ ಭೇಟಿ ಆಗ್ತೇವೆ. ಯಾವುದೋ ರಸ್ತೆಯ ಟೀ ಅಂಗಡಿಯಲ್ಲಿ,

ಜಯನಗರದ ಬಿ.ಡಿ.ಏ. ಕಾಂಪ್ಲೆಕ್ಸ್ ಕಟ್ಟೆಯ ಮೇಲೆ ಕುಳಿತು

ಯಾವುದೋ ಕಾಲದ ಗೆಳೆಯರಂತೆ ಹರಟಿದ್ದೇವೆ.

ಸಿನಿಮಾ ಹೋಗಿದ್ದೇವೆ..

ಹಾಗು ಜೀವನದ ದಾರಿಯಲ್ಲಿ ಎದುರಾಗುವ ಕೆಲವು ವಿಷಯಗಳ ಬಗ್ಗೆ,

ನಮಗಾಗುವ ಗೊಂದಲಗಳ ಬಗ್ಗೆ ಕೇಳಿದಿವಿ.

ಅದಕ್ಕವರು ತಿಳಿಸಿ ಹೇಳಿದ್ದು ಇದೆ.!


ಸದಾ ನಗು, ಆರೋಗ್ಯಕರ ಹಾಸ್ಯ... ಜೀವನ ಪ್ರೀತಿ..

ಹಾಗು ಬಹು ಮುಖ್ಯವಾಗಿ ನಾವು ಅವರಲ್ಲಿ ನೋಡಿದ್ದು 'ಮಾನವೀಯ ಸಂಬಂಧದ ಮೌಲ್ಯ'.

ಒಂದು ಅಂತರದಲ್ಲಿ ನಾವು ಎಷ್ಟೋ ವಿಷಯಗಳ ಬಗ್ಗೆ ಮಾತಾಡಿದಿವಿ, ಚರ್ಚಿಸಿದ್ದಿವಿ,

ವಾದ ಮಾಡಿದಿವಿ.. ಹಾಗು ನಾವು ಕಲಿತಿದ್ದಿವಿ.

ನಮ್ಮ ಮೇಲೆ ನಮ್ಮ ಕೆಲವು ಯೋಜನೆಗಳಿಗೆ ಪ್ರೋತ್ಸಾಹದ ಜೊತೆ,

ಕಿವಿ ಮಾತು-ಬುದ್ದಿ ಮಾತು ಹೇಳಿದ್ದು, ಮೆಲ್ಲಗೆ ಗದರಿದ್ದು..

"ಏ ಹುಡುಗರ ನಿಮ್ಮದು ತಪ್ಪು ಅಲ್ಲ ನಿಮ್ಮ ವಯಸ್ಸಿನ ತಪ್ಪು,

ಅದಕ್ಕೆ ಮಂಗನಂಗ ಆಡ್ತೀರಾ" ಅಂದಿದ್ದು.


ಎಲ್ಲಿಯೂ ಅತಿಶಯೋಕ್ತಿ ಇಲ್ಲದ ಮಾತು.


ಇವರ ಬ್ಲಾಗಿನಲ್ಲಿ ಬರುವ, ನಾಗು,ಶಾರಿ, ಕುಷ್ಟ.. ನಮಗೆಲ್ಲರಿಗೂ ಆತ್ಮೀಯ.

ಹಾಗೇನೆ ಅಲ್ಲಲ್ಲಿ ಬರುವ ಬದುಕಿನ ಕಹಿ ಅನುಭವಗಳು ಕಲಿಸುವ ಪಾಠ.

ತಮ್ಮ ಬಗ್ಗೆನೇ ತಾವು ಹಾಸ್ಯ ಮಾಡಿಕೊಳ್ಳೋದು ಅದ್ಭುತ. ಹಾಗು ಅದೇ ತಿಳಿ ಹಾಸ್ಯದ ಔತಣ. ಹಾಸ್ಯ ಅಂದಾಗ ಅದು ಬೇರೆಯವರ ಕಾಲು ಎಳೆದೋ, ಇಲ್ಲ ಅಪಹಾಸ್ಯ ಅಲ್ಲ.

ಒಂದು ಆರೋಗ್ಯಕರ ಹಾಸ್ಯ ಇವರದು.

"ಮಿಲ್ತಿ ಹೈ ಜಿಂದಗಿ ಮೇ ಮೊಹಬ್ಬತ್ ಕಭಿ ಕಭಿ" ಎಂತಹ ಅನುಭವ ಹೇಳುವ ಭಾವುಕ.

ಸದಾ ಸಕಾರಾತ್ಮಕವಾಗಿ ಯೋಚಿಸುವ, ನೋಡುವ, ಮಾತಾಡುವ..

'ಪ್ರಕಾಶಣ್ಣ' ನ ಕಂಡರೆ ಎಲ್ಲರಿಗೂ ಏನೋ ಆನಂದ.


ಈಗ ಮತ್ತೊಂದು ಸಂತಸದ ದಿನ ನಮ್ಮ ಪ್ರಕಾಶ್ ಮಾಮಾನದು.

ಅವರ ಎರಡನೇ ಪುಸ್ತಕ

"ಇದೇ ಇದರ ಹೆಸರು"

ಇದೇ ತಿಂಗಳ, ಭಾನುವಾರ ೨೪ ತಾರೀಕು ಬಿಡುಗಡೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿರುವ ವಾಡಿಯ ಸಭಾಂಗಣದಲ್ಲಿ.

ದಯವಿಟ್ಟು ಬನ್ನಿ..

ನಮ್ಮ ಪ್ರಕಾಶ್ ಮಾಮಾ ಅವರ ಪರವಾಗಿ ಹಾಗು ನಮ್ಮ ಪರವಾಗಿ ಆತ್ಮೀಯ ಸ್ವಾಗತ.

ಪುಸ್ತಕ ಬಿಡುಗಡೆಯ ಜೊತೆ ಒಂದಿಷ್ಟು ಹಾಡು, ಹರಟೆ ಹಾಗು ನಗು ನಮ್ಮದಾಗಲಿ.



ನಮಗೆ ಇಲ್ಲಿ ಕೇವಲ ಒಬ್ಬ ಪ್ರಕಾಶ್ ಮಾಮಾ ಅಷ್ಟೇ ಅಲ್ಲ.

ಬ್ಲಾಗ್ ಅಂಗಳಕ್ಕೆ ಬಂದ ಮೇಲೆ ಕೆಲವು ಅಣ್ಣನಂತಹ/ಅಕ್ಕನಂತಹ ಗೆಳೆಯರು..

ಹಿರಿಯರ ಅನುಭವದ ಪಾಠ, ಒಡನಾಟ ದೊರೆತಿದ್ದು ತುಂಬಾ ಖುಷಿ ವಿಷಯ.

ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಇರಲಿ.

ಪ್ರೀತಿ ಬೆಳೆಯಲಿ.

ಅನಿಲ್ ಬೇಡಗೆ & ನಾಗರಾಜ್.ಕೆ.


[ಪಕ್ಕು ಮಾಮನ ಚಾರ್ಲಿ ಚಾಪ್ಲಿನ್ ಚಿತ್ರ ಎಡಿಟ್ ಮಾಡಿದವರು, 'ದಿಗ್ವಾಸ್ ಹೆಗಡೆ'.

ಅವರಿಗೆ ಅನಂತ ಧನ್ಯವಾದಗಳು.]


ಮೊದಲಿನ ಪಕ್ಕು ಮಾಮಾನ ಬಗ್ಗೆ
http://pennupaper.blogspot.com/2010/07/blog-post.html

46 comments:

  1. ಇನ್ನು ಮುಗಿತು ಬಿಡು ಚಾರ್ಲಿ ಜೊತೆ ಪ್ರಕಾಶಣ್ಣನ ಫೋಟೋ ಮೆತ್ತಿ ಆಯ್ತ ಹಹಹ... ಬಹಳಾ ಚೆನ್ನಾಗಿದೆ... ಒಟ್ಟಲ್ಲಿ ಕಛೇರಿಯಲ್ಲಿ ಕುಳಿತ ನಮ್ಮನ್ನು ಜನ ನೋಡಿ ಹುಚ್ಚುಹಿಡಿದಿರಬೇಕು ಎಂಬಂತೆ ಮಾಡಿಬಿಟ್ಟಿದ್ದೀಯ ಹಹಹ... ಸುಮ್ಮನೆ ಹುಚ್ಚರಂಗೆ ನಗ್ತಾ ಇದ್ದೀನಿ ಹಹ

    ReplyDelete
  2. ಅನಿಲ್ ನಕ್ಕು ನಕ್ಕೂ ನನ್ನ ಪಕ್ಕೆಯೆಲ್ಲಾ ಸಡಿಲವಾಯ್ತು. ಮಾಮನಿಗೆ ಸರಿಯಾದ ಉಡುಗೊರೆ ಕೊಟ್ಟು ಭಲೇ ಅಳಿಯ ಆಗಿಬಿಟ್ರೀ!!! ಕಳೆದ ರಸಸಮಯಗಳ ಮೆಲುಕು ಚೆನ್ನಾಗಿ ಮೂಡಿಬಂದಿದೆ .ಜೈ ಹೋ ಅನಿಲ್.
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  3. ha..haa..hhaa...hhaaa..........................................................................................................

    nice..:)

    ReplyDelete
  4. ಹಹಹ....ಪಕ್ಕು ಮಾಮಂಗೆ ಜೈ ಹೋ.....:-D
    ೨೪ ರಂದು ಎಲ್ಲರು ಭೇಟಿಯಾಗೋಣ.

    ReplyDelete
  5. ಹ್ಹ ಹ್ಹ ಹ್ಹ...ತುಂಬಾ ಚೆನ್ನಾಗಿ ಬರೆದಿದ್ದೀರಿ...ಪ್ರಕಾಶಣ್ಣ ನ ಫೋಟೋ ಇನ್ನೂ ಚೆನ್ನಾಗಿದೆ.... ಆದರೆ ಅವರ ತಲೆ ಬಗ್ಗೆ ಮಾತಾಡಿದ್ರೆ ನಂಗೆ ಬೇಜಾರಾಗುತ್ತೆ...ಯಾಕೆ ಅಂತೀರಾ ....ನನ್ ತಲೇನೂ ಹಾಗೆ ಆಗ್ಬಿಟ್ಟಿದೆ.....೨೪ ಕ್ಕೆ ಖಂಡಿತಾ ಭೇಟಿಯಾಗೋಣ....ಜೈ ಹೊ.....

    ReplyDelete
  6. ಅನಿಲ್;ಪ್ರಕಾಶಣ್ಣ ನಮ್ಮೆಲ್ಲ ಬ್ಲಾಗಿಗರಿಗೂ ಆತ್ಮೀಯ.ಹಾಸ್ಯ ಲೇಖನಗಳು ಸೊಗಸಾಗಿವೆ.ಜೈ ಹೋ !

    ReplyDelete
  7. ಪ್ರಕಾಶ್ ಹೆಗಡೆಯವರ ಎರಡನೆ ಕೂಸನ್ನು ನೋಡಲು, ಮುದ್ದು ಮಾಡಲು, ಆಟ ಆಡಿಸಲು, ಜೋಗುಳ ಹಾಡಲು, ಕಂದನ ಕೇಕೆಯೊಂದಿಗೆ ನಲಿಯಲು ನಾವೆಲ್ಲರೂ ರೆಡಿ.....ಜೈ ಹೋ.....

    ReplyDelete
  8. ಅನಿಲ ಚಿಕನ್ ಬಿರಿಯಾನಿ ಸ್ವಲ್ಪ ಜಾಸ್ತೀನೇ ತಿಂದುಬಿಟ್ಟು ಯೋಚನೆ ಆಗ್ತಿತ್ತು...ಮನೆಲಿ ಹಾಜ್ಮೋಲಾನೂ ಇರ್ಲಿಲ್ಲ ಪುದೀನ್ ಹರಾ ನೂ ಹರೋರಹರ ಡಬ್ಬದಿಂದ...ಬೇಜಾರಾಗಿ ಸೆಟಕೊಂಡೇ ಬಜ್ ನೋಡಿ ..ಅರೆ..ಇದೇನು ಚಾರ್ಲಿ...(ನನ್ನ ಅತಿ ಫೇವರೈಟ್ ಕಮೆಡಿಯನ್) ಇಷ್ಟು ದಪ್ಪ ಆಗಿದ್ನಾ? ಯಾವಾಗಿಂದು ಫೋಟೋ...?? ಹೊಟ್ಟೆ ಬಿರಿತ ನಿನ್ನ ಬಜ್ ತಲೆಬರಹ ಆಗ್ಲಿ ಬೇರೆದಾಗ್ಲಿ ನೋಡಿರ್ಲಿಲ್ಲ್...ತಕ್ಷಣ ಲಿಂಕ್ ಕ್ಲಿಕ್ ಆಯ್ತು...ಬಡ ಬಡಾ ಓದಿದೆ...ನಗು ತಡೀಲಿಕ್ಕೆ ಆಗ್ಲಿಲ್ಲ,,,ಪೂರ್ತಿ ಓದಿ ಮುಗಿಸೋ ಹೊತ್ತಿಗೆ...ಹೊಟ್ಟೆ ಇರ್ಲಿ...ನನ್ನ ಚಪಾತಿನೂ...ಸಡ್ಲ ಆಗಿತ್ತು...ಮತ್ತೆ ಏನಾದ್ರೂ ತಿನ್ನಬೇಕು ಅನ್ನೋ ಥರ....ಹಹಹಹ ಸೂಪರ್,,ಪಕ್ಕು ಹಿಟ್ಲರ್ ಚಾಪ್ಲಿನ್...

    ReplyDelete
  9. hha hha Odi tumbaa nagu bantu......

    namma karyakarama idu.... success maaDoNa...

    ReplyDelete
  10. ಅನಿಲ,
    ಹಾಸ್ಯದ ಹೊನಲಲ್ಲಿ ತೇಲಿಸಿದ್ದೀರಿ. ಧನ್ಯವಾದಗಳು.

    ReplyDelete
  11. ಹ್ಹ ಹ್ಹ ಹ್ಹ,,,,,
    ಪಕ್ಕೂ ಮಾಮನಿಗೆ ಮೀಸೆ ಚನ್ನಾಗಿ ಅಂಟಿಸಿದೀರಿ..
    ಜೋರಾಗಿ ಶ್ವಾಸ ತೆಗೆದರೆ ಬಿದ್ದೀತು....

    ಪಕ್ಕೂ ಮಾಮ ಹಾಗೇ.... simple ಅಂದ್ರೆ ಸಿಂಪಲ್...
    ಎಲ್ರಿಗೂ ಇಷ್ಟ ಆಗ್ತಾನೆ....

    ReplyDelete
  12. Nice writeup on "ittige cement charlie.."

    ReplyDelete
  13. ಒಳ್ಳೆ ಹಾಸ್ಯಭರಿತ ಲೇಖನ ಅನಿಲ್. ತುಂಬಾ ಚೆನ್ನಾಗಿದೆ. ಪಕ್ಕು ಮಾಮಾ ನ ಫೋಟೋ ನ ಚಾಪ್ಲಿನ್ ತರ ತುಂಬಾ ಚೆನ್ನಾಗಿ ಎಡಿಟ್ ಮಾಡಿದಾರೆ ದಿಗ್ವಾಸ್. ನಗೆ ನಗಾರಿಯಲ್ಲಿ ತೇಲಿಸಿದ್ದಕ್ಕೆ ನಿಮ್ಮೆಲ್ಲರಿಗೂ ತುಂಬಾ ಥ್ಯಾಂಕ್ಸ್ .

    ReplyDelete
  14. anila...namma manelu mundina tingalu ondu funtion ide.....chapathy beda antha ankondidiwi....prakashanna madtare andre nodbeku.....sakkat nagu banthu.....

    ReplyDelete
  15. ಅದ್ಭುತ! ಮೊದಲನೆಯದಾಗಿ ಇದು ಯಾರ ಚಿತ್ರ ಎಂದು ತಲೆ ಕೆಡಿಸಿಕೊಂಡಿದ್ದೆ... ಪ್ರಕಾಶ್ ಹೆಗ್ಡೆಯವರದ್ದು ಎಂದು ಕೊನೆಗೆ ತಿಳಿದು ನಗು ಬಂದಿತು.. ದಿಗ್ವಾಸ್‍ರವರು ಇಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ! ನಿಮ್ಮ ಹಾಗು ಪ್ರಕಾಶ್‍ರವರ ನಡುವಿನ ಬಾಂಧವ್ಯದ ಬಗ್ಗೆ ಕೇಳಿ ಬಹಳ ಸಂತೋಷವಾಯಿತು! ಚಪಾತಿಯ ಜೋಕ್ ನಗು ತಂದಿತು.. ಅಹ್ವಾನ ನೀಡಿದ್ದಕ್ಕೆ ಧನ್ಯವಾದಗಳು. ಬರುತ್ತೇನೆ.

    ReplyDelete
  16. ಅನಿಲ್ ಮತ್ತು ನಾಗರಾಜ್,

    ಮುಟ್ಟಿದರೆ ಅಂಗೆ ರೇಷ್ಮೆ ಇದ್ದಂಗೆ, ಮಲ್ಲಿಗೆ ಹೂ ಇದ್ದಂಗೆ ಇರಬೇಕು..

    ಇನ್ನೊಂದು, ಮತ್ತೊಂದು ಕೇಳಬೇಕು.. ಅಂಥ ಚಪಾತಿ ಮಾಡಬೇಕು.

    ನನಗಿಷ್ಟವಾದ ಹತ್ತಾರು ಸಾಲುಗಳಲ್ಲಿ ಇವು ಕೂಡಾ..ಆದ್ರೆ ನಿಮ್ಮ ಪ್ರಕಾಶ್ ಮಾಮ ನನ್ನ ಪ್ರಕಾಶ್ ಹೆಗಡೆ ಬಗ್ಗೆ ನೀವು ನೀವು ಬರೆದಿರುವ ಅಷ್ಟು ಸಾಲುಗಳು ಸೂಪರೋ..ಸೂಪರು..ಬೇರೆಯವರ ಬಗ್ಗೆ ಹಾಸ್ಯ ಮಾಡುವುದಕ್ಕಿಂತ ತಮ್ಮ ಬಗ್ಗೆ ಅಪಹಾಸ್ಯ ಮಾಡಿಕೊಳ್ಳುವುದರ ಮೂಲಕ ಚಾರ್ಲಿಚಾಪ್ಲಿನ್ ಹೋಲುತ್ತಾರೆ. ಅಂಥ ಮನಸ್ಸಿನ ಭಾವನೆ ಹೊಂದುವುದು ಬದುಕಿನಲ್ಲಿ ತುಂಬಾ ಕಷ್ಟ. ಇಂಥ ಫೋಟೊ ಸೃಷ್ಟಿಸಿದ ದಿಗ್ವಾಸ್ ಹೆಗಡೆ ಸರ್..ತುಂಬಾ ಧನ್ಯವಾದಗಳು..ಎರಡನೆ ಪುಸ್ತಕದ ಪ್ರಕಾಶಕರು ಮಣಿಕಾಂತ್ ಅವರ ಪ್ರಯತ್ನ ಯಶಸ್ವಿಯಾಗಲಿ.

    ReplyDelete
  17. chennaagide... chapaati mamana kathe.-sitaram

    ReplyDelete
  18. ha ha ha masth!!!!!! Hitler charlie chaplin mama:)

    ReplyDelete
  19. @ಮನಸು: ಸುಗುಣಕ್ಕ, ಹ ಹ ಚಾರ್ಲಿ ಪ್ರಕಾಶ್ ಮಾಮಾನ ಜೊತೆಯಲ್ಲೇ ಇರೋದು.
    ಮತ್ತೇ ನೀವು ಹಂಗೆಲ್ಲ ನಕ್ಕಿದ್ರ ಜನ ನೋಡೇ ನೋಡ್ತಾರೆ.. ಅದಕ್ಕೆ ನಾನು ಜವಾಬ್ದಾರನಲ್ಲಾ :)

    ReplyDelete
  20. @ನಿಮ್ಮೊಳಗೊಬ್ಬ: ಬಾಲು ಸರ್ ತುಂಬಾ ತುಂಬಾ ಥ್ಯಾಂಕ್ಸ್, ೨೪ ಕ್ಕೆ ಭೇಟಿ ಆಗುವ.
    ಖಂಡಿತ ಬನ್ನಿ.

    ReplyDelete
  21. @ಚುಕ್ಕಿಚಿತ್ತಾರ:ವಿಜಯಶ್ರೀ ಮೇಡಂ, ಅನಂತ ಧನ್ಯವಾದಗಳು.
    ದಯವಿಟ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ.. :)

    ReplyDelete
  22. @ಹೆಗಡೆ ಜಿ:ಥ್ಯಾಂಕು ಗಣಪತಿ ಸರ್, ಖಂಡಿತ ೨೪ಕ್ಕೆ ಭೇಟಿ ಆಗುವ :)

    ReplyDelete
  23. @ಅಶೋಕ್ ಸರ್: ತುಂಬಾ ತುಂಬಾ ಥ್ಯಾಂಕು ಸರ್, ತಲೆ ಬಗ್ಗೆ ಬೇಜಾರ್ ಆಗಬೇಡಿ ಸರ್.
    ಬೇಜಾರಿದ್ರೆ ನಮ್ಮ ಮಾಮಾನಿಗೆ ಕೇಳಿ.. ಹ ಹ
    ೨೪ ಕ್ಕೆ ಖಂಡಿತ ಭೇಟಿ ಆಗುವ.
    ಧನ್ಯವಾದಗಳು.

    ReplyDelete
  24. @ಡಿ.ಟಿ.ಕೆ. ಮೂರ್ತಿ ಸರ್: ತುಂಬಾ ಧನ್ಯವಾದಗಳು ಸರ್, ೨೪ ಕ್ಕೆ ದಯವಿಟ್ಟು ಬನ್ನಿ. ಭೇಟಿ ಆಗಿ ತುಂಬಾ ದಿನ ಆಯ್ತು. :)

    ReplyDelete
  25. @ಮಲ್ಲಿಕಾರ್ಜುನ್ ಡಿ. ಜಿ: ಖಂಡಿತ ಮಲ್ಲಿ ಅಣ್ಣ.. ಖಂಡಿತ.. ಜೈ ಹೋ.. :)

    ReplyDelete
  26. @ಜಲನಯನ: ಆಜಾದ್ ಸರ್, ಹ ಹ ಹ. ನಿಮ್ಮ ಚಪಾತಿ ಸಡಿಲ ಆದ್ರೆ ಅದಕ್ಕೆ ನೇರ ಕಾರಣ ಪಕ್ಕು ಮಾಮಾ :) ಹ ಹ.
    ನಿಮ್ಮನ್ನ ಈ ಸಲ ಮಿಸ್ ಮಾಡ್ತಿವಿ.. :) ಧನ್ಯವಾದಗಳು.

    ReplyDelete
  27. @ದಿಗ್ವಾಸ್ ಹೆಗಡೆ: ಫೋಟೋ ಎಡಿಟ್ ಮಾಡಿದ್ದು, ಎಲ್ಲರ ನಗುವಿಗೆ ಮತ್ತೊಂದು ಕಾರಣ.೨೪ಕ್ಕೆ ಭೇಟಿ ಆಗುವ, ದಯವಿಟ್ಟು ಬನ್ನಿ.
    ಅನಂತ ಧನ್ಯವಾದಗಳು. :)

    ReplyDelete
  28. @ಶಿವಪ್ರಕಾಶ್: ಥ್ಯಾಂಕ್ಸ್ ದೋಸ್ತ.. ೨೪ ಮುಂಜಾನಿ ಜಲ್ದಿ ಬಾ :)

    ReplyDelete
  29. @ಚೇತನ: ಧನ್ಯವಾದಗಳು. ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ. :)

    ReplyDelete
  30. @ದಿನಕರಣ್ಣ: ಖಂಡಿತ ಖಂಡಿತ ಸಿಗುವ.. ಧನ್ಯವಾದಗಳು :)

    ReplyDelete
  31. @ಸುನಾಥ ಬಾಬಾ: ಅನಂತ ಧನ್ಯವಾದಗಳು :)

    ReplyDelete
  32. @ಕನಸು ಕಂಗಳ ಹುಡುಗ: ಧನ್ಯವಾದಗಳು, ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ :)

    ReplyDelete
  33. @ಸಂದೀಪ್ ಕೆ.ಬಿ.: ಧನ್ಯವಾದಗಳು ಸರ್, ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ :)

    ReplyDelete
  34. @ಓ ಮನಸೇ, ನೀನೇಕೆ ಹೀಗೆ?: ಚೇತನ ಅಕ್ಕ, ನೀವೆಲ್ಲರೂ ಹೊಟ್ಟೆ ತುಂಬಾ ನಗಬೇಕು ಅದು ಮುಖ್ಯ :)
    ೨೪ ಕ್ಕೆ ಭೇಟಿ ಆಗುವ, ಧನ್ಯವಾದಗಳು.

    ReplyDelete
  35. @ಸಾಗರದಾಚೆಯ ಇಂಚರ: ಗುರುಮೂರ್ತಿ ಸರ್, ಖಂಡಿತ ಪಕ್ಕು ಮಾಮಾನಿಗೆ ಜೈ ಹೋ..!!
    ಧನ್ಯವಾದಗಳು.

    ReplyDelete
  36. @ಸವಿಗನಸು: ಮಹೇಶ್ ಸರ್, ಪಕ್ಕು ಮಾಮಾ ಹೊಸ ಫಂಕ್ಷನ್ ಆರ್ಡರ್ ನಲ್ಲಿ ಬ್ಯುಸಿ ಇರಬೇಕು, ಪ್ರಯತ್ನಿಸಿ ನೋಡಿ. :)
    ಹ ಹ.. ಧನ್ಯವಾದಗಳು :)

    ReplyDelete
  37. @ಪ್ರದೀಪ್ ರಾವ್: ತುಂಬಾ ತುಂಬಾ ಧನ್ಯವಾದಗಳು.
    ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ ಭೇಟಿ ಆಗುವ. :)

    ReplyDelete
  38. @ಶಿವಣ್ಣ; ಹ ಹ ತುಂಬಾ ತುಂಬಾ ಥ್ಯಾಂಕ್ಸ್. ನಮ್ಮಿನ್ದಾನು ಅಭಿನಂದನೆಗಳು. ಜೈ ಹೋ.
    ಧನ್ಯವಾದಗಳು :)

    ReplyDelete
  39. @ಸೀತಾರಾಂ ಸರ್: ಹ ಹ, ತುಂಬಾ ತುಂಬಾ ಥ್ಯಾಂಕು ಸರ್. :) ೨೪ ಕ್ಕೆ ಸಿಗುವ :)

    ReplyDelete
  40. @ವನಿತಾ: ಥ್ಯಾಂಕು ಅಕ್ಕ.. :) ೨೪ಕ್ಕೆ ಭೇಟಿ ಆಗುವ. :)

    ReplyDelete
  41. makku maman kate superb..... prakash mavan jote istala kate nedaddu hel gottittille.....:)

    ReplyDelete