May 21, 2011

"ನಾನೂ ಒಂದು ಪದ . . . . "

ಏಕಾಂತದಲ್ಲಿ ಅವಳ ಮುಂದೆ ಹಾಡಬೇಕೆಂದು

ಹೂವು, ಚಂದ್ರ, ಮಳೆ, ತಂಗಾಳಿ - ಎಲ್ಲವನ್ನ ಪೋಣಿಸಿ
ಇಷ್ಟಪಟ್ಟು, ಪ್ರೀತಿಯಿಂದ ಒಂದು ಪದ ಕಟ್ಟಿದ್ದೆ.

ಆಗ,

ಹಾಡಲು ಒಂದೇ ಒಂದು ಅವಕಾಶ ಕೊಡಲಿಲ್ಲ; ಆಕೆ.
ನಾನು ಪ್ರಯತ್ನಿಸಿದೆನಾದರು, ನಾನೂ ಸುಮ್ಮನಾಗಿಬಿಟ್ಟೆ

ಕಾಲಪಲ್ಲಟಕ್ಕೆ ಯಾರ ಹಂಗು - ನನ್ನದಾ ? ಅವಳದಾ?

ಚಲಿಸುತ್ತಲೇ ಬಂತು, ನಿಲ್ಲಿಸಲು ನಾನು ಪ್ರಯತ್ನಿಸಲಿಲ್ಲ

**

ಅನಿರೀಕ್ಷಿತವಾಗಿ ಎದುರಿಗೆ ಬಂದು ನಿಂತಿದ್ದಾಳೆ,
ಅವಳಲ್ಲಿ ನಿಶ್ಯಬ್ದಕ್ಕಿಂತ ಮೆಲು ಮಾತು - ಮತ್ತೇನು ಉಳಿದಿಲ್ಲ

ಈಗ,

ಕಷ್ಟಪಟ್ಟರೂ, ಯಾಕೋ ಒಂದು ಸಾಲು ನೆನಪಾಗುತ್ತಿಲ್ಲ,
ಮರೆತ ಮಾತನ್ನ ಕೆದಕುವ ಪುರಸೊತ್ತು ನನಗಿಲ್ಲ.
ನಿಜ - ನಾನು ಒಮ್ಮೆ ಪದ ಕಟ್ಟಿದ್ದೆ.

=====

=====

21 comments:

  1. ತುಂಬಾ ಸರಳವಾಗಿ..
    ನೇರವಾಗಿ ಒಳಗಿನ ಭಾವಗಳನ್ನು ಬಿಂಬಿಸುವ "ಪದ ಕಟ್ಟಿದ್ದೆ" ಇಷ್ಟವಾಯಿತು...

    ReplyDelete
  2. ಆ ಪದವೇ ಅವಳಲ್ಲಿನ ಪ್ರೀತಿ ತೋರಿಸುತ್ತೆ.... ಚೆನ್ನಾಗಿದೆ ನಾಗು..

    ReplyDelete
  3. ಈಗ ಪದ ಮರೆತಿದ್ದರೂ ಕಣ್ಣಿನ ಭಾವ ಆ ಪದದ ಅರ್ಥ ಮಾಡಿಸುತ್ತೆ....
    ಚೆನ್ನಾಗಿದೆ ಸಾಲುಗಳು....

    ReplyDelete
  4. ಸೊಗಸಾದ ಭಾವನಾಲೋಕ. ಮಾತು ಬೆಳ್ಳಿಯಾದರೆ, ಮೌನ ಬಂಗಾರ.

    ReplyDelete
  5. ನಾಗ್ ಪದ ಕಟ್ಟೋಕೆ ಹೆಣ್ಗಾಡಬೇಕಿಲ್ಲ ..ಮನಮುಟ್ಟೋದು ಮುಖ್ಯ ಅನ್ನೋದು ನಿನ್ನ ಕವನ ಹೇಳುತ್ತೆ...ನೈಸ್ ಮಗಾ....ಕೀಪ್ ಇಟ್ ಅಪ್ಪು...

    ReplyDelete
  6. ನಾಗರಾಜ್,
    "ಮರೆತ ಮಾತನ್ನ ಕೆದಕುವ ಪುರಸೊತ್ತು ನನಗಿಲ್ಲ" ಖಂಡಿತ ಆ ಸಮಯ ಹಾಗೆ ಇರುತ್ತದೆ. ಪದಗಳ ಭಾವುಕತೆ ತುಂಬಾ ಚೆನ್ನಾಗಿದೆ....

    ReplyDelete
  7. very nice. I think "neevu aaga kattida pada" might not even stay relevant now. Time changes everything.

    very nice poem.

    ReplyDelete
  8. ನೀವು ಪದ ಕಟ್ಟಿರುವ ಶೈಲಿ ಚೆನ್ನಾಗಿದೆ.
    ಹೂವು, ಚಂದ್ರ, ಮಳೆ, ತಂಗಾಳಿ ಮತ್ತೆ ನಿಮ್ಮ ಬಾಳಲ್ಲಿ ಬರಲಿ .

    ReplyDelete
  9. Kalada joteyalli kaviteyu kaledu hoytu ansutte.. Chennagide Naga :-)

    ReplyDelete
  10. ಮನಸು ತಟ್ಟಿ ಬಿಟ್ಟಿತು...

    ReplyDelete
  11. ಪದಗಳ ಸಾಲು ಚೆನ್ನಾಗಿದೆ... ಭಾವ ದೊಡ್ಡದಿದೆ

    ReplyDelete
  12. very touchy lines...........:):)

    ReplyDelete
  13. This comment has been removed by the author.

    ReplyDelete
  14. Hats of to the feeling Raaja :)

    ReplyDelete