Jun 21, 2011

"ಇದು ಸೈಡ್ ಸ್ಟೋರಿ"


. 'ಇದು ನಾಯಿ ಪ್ರೀತಿ'

ನಿನ್ನ ಕೇಶರಾಶಿ ನೋಡಲು ರೋಮಾಂಚನ
ನೀ ನನ್ನತ್ತ ಬರಲು ನನ್ನೊಳಗೆ ಮಧುರ ಕಂಪನ
ಆದರೂ ಸಹಿಸಲಾರೆ ನಿನ್ನೀ ಎಂಜಲಿನ ತುಂತುರು ಸಿಂಚನ
ನನ್ನ ಮುದ್ದು ನಾಯಿಮರಿಯೇ ತಪ್ಪು ತಿಳಿಯಬೇಡ ನನ್ನ

. 'ಇದುವೇ ಸದ್ಮಾ'

ಮೊದ್ಲು, ಅವಳು ನನ್ನ ನೋಡಿ 'ಕಿಸ ಕಿಸ ಕಿಸಕ್' ಅಂತ ನಗ್ತಿದ್ಲು
ಆಗೆಲ್ಲ ನನ್ನ ಕಣ್ಣಿಗೆ ಫುಲ್ ಬೆಳದಿಂಗಳು

ಒಮ್ಮೆ ಫೋನ್ ಮಾಡಿ ಕರೆದಳು
ನಾ ಹೋಗ್ದೆಯಿರ್ತಿನಾ ?

ಲಗ್ನಪತ್ರ ಕೈಗಿಟ್ಟು ಮತ್ತೆ 'ಕಿಸಿ ಕಿಸಿ ಕಿಸಕ್' ಅಂತ ನಕ್ಕಳು
ನನ್ನ ಕಣ್ಣ ಮುಂದೆ ಅಮಾವಾಸ್ಯೆ ಕತ್ಲು

ಹೇಳ್ದೆ ಕೇಳ್ದೆ ಶೋಕಗೀತೆಯ ಕೋರಸ್ ಶುರುವಾತು :
'
ಇದು ಸದ್ಮಾ . . . ಇದುವೇ ಸದ್ಮಾ,
ನಿನಗ್ಯಾಕ ಬೇಕಾಗಿತ್ತು ಉಸಾಬರಿ ತಮ್ಮಾ . . . '

. 'ಶೀಟ್ ಮ್ಯಾನ್'

ಬೆಳಗಾದ ಮೇಲೂ ಅವಳು,
ರಾತ್ರಿ ಕೊಟ್ಟ ಮುತ್ತಿನ ಗಮ್ಮತ್ತು ಇನ್ನೂ ಇತ್ತು-ಇಸ್ ಇಟ್ ? ಅಬ್ಬೋ

ಹಾಲು ಕರಿಯಲು,
ಕೊಟ್ಟಿಗೆಯತ್ತ ಹೋದೆ ತೂರಾಡುತ ಅಮಲಿನಲ್ಲಿ, ಮುತ್ತಿನ ಅಮಲಿನಲ್ಲಿ
ಲಿಪ್ಪಿಸ್ಟಿಕ್ಕಿನ ಕೆಂಪು ತುಟಿಗಳ ಗುರುತು ಇನ್ನೂ ಇತ್ತು - ಆಹಾ ಕಳ್ಳ, ಬರೀ ಮುತ್ತಿಗೆ ಟೈಟಾದ್ರೆ ಹೆಂಗೆ ?

ನೀರು ಚಿಮುಕಿಸಿ ಹಸುವಿನ ಕೆಚ್ಚಲಿಗೆ ಕೈಹಾಕುವ ಮುನ್ನವೂ,
ನನ್ನಲ್ಲಿ ಮುತ್ತಿನ ಮತ್ತೇ ಇತ್ತು - ಇದ್ಯಾಕೋ ಸ್ವಲ್ಪ ಜಾಸ್ತಿಯಾಯ್ತು.
ಕೆಚ್ಚಲಿಗೆ ಕೈಹಾಕಿದ ಕ್ಷಣಾರ್ಧದಲ್ಲಿ ಕಂಡವು ನಕ್ಷತ್ರ - ಬೆಳಗ್ಗೆ ನಕ್ಷತ್ರಗಳಾ? ಏನಾಯ್ತು?

ಕೆಚ್ಚಲಿಗೆ ಕೈಹಾಕಿದವನಿಗೆ ಹಾಲು ಸಿಗಲಿಲ್ಲ, ಅಸಲಿಗೆ ಕೆಚ್ಚಲಿದ್ದರೆ ತಾನೇ !!
ಮುತ್ತಿನ ಗುಂಗಿನಲ್ಲಿ ನಾನು ಅದರ ಲಿಂಗ ಭೇದ ಮಾಡಿದನಲ್ಲನೆಂಬ ಸಿಟ್ಟಿನಲ್ಲಿ ಝಾಡಿಸಿ ಒದ್ದುಬಿಟ್ಟಿತಲ್ಲ 'ಎತ್ತು' - ಶೀಟ್ ಮ್ಯಾನ್

=====
=====

21 comments:

  1. Naga Hosa prayatna soooperr!! Sheet man alla adu shit man ;-).
    sadma andare enu??

    ReplyDelete
  2. hha hha... majaa ide hosa prayatna...

    chandru heLida haage adu..."'shit man"

    ReplyDelete
  3. ನಾಗರಾಜ,
    Wonderful humour!

    ReplyDelete
  4. Awesome.
    ಶಿಟ್ ಮ್ಯಾನ್ ಅಂತು ಸಖತ್!

    ReplyDelete
  5. ಎನ್.ಆರ್.ಕೆ. ಯವರೆ....
    ಅಧ್ಭುತ ಕಲ್ಪನೇರಿ.....
    ತುಂಬಾ ಹೊದಾಗಿದೆ ಕವನ......
    ಿಡೀ ಕವನದ ತುಂಬೆಲ್ಲ ಹೊಸತನ......
    ಶಿಟ್ ಮ್ಯಾನ್...... wonderful....
    ನಾಕು ಚಾಲಾ ನಚ್ಚಾವು.....

    ReplyDelete
  6. ಸೂಪರ್ ಸಾರ್... ಬಿದ್ದು ಬಿದ್ದು ನಕ್ಕಿದ್ದಾಯ್ತು! ಇನ್ನಷ್ಟು ಬರಲಿ!

    ReplyDelete
  7. ಹಾಸ್ಯದ ಹೂರಣ ಬಡಿಸಿದ ನಿಮಗೆ ಅಭಿನ೦ದನೆಗಳು.

    ಅನ೦ತ್

    ReplyDelete
  8. ಹ್ಹ ಹ್ಹ ಹ್ಹ...
    ಮುತ್ತಿನ ಮತ್ತು, ತುಂಬ ಚನ್ನಾಗಿತ್ತು...

    ReplyDelete
  9. @Shivaprakash: I think u r experienced :-)
    thank u

    ReplyDelete
  10. ಹ್ಹ ಹ್ಹ ಹ್ಹ!!! ಶಿಟ್ ಮ್ಯಾನ್, ಸಕತ್ತಾಗಿದೆ

    ReplyDelete
  11. ಬಾಯ್ತುಂಬ ನಗಿಸುವ ಕವನಗಳು. ಚೆನ್ನಾಗಿವೆ.

    ReplyDelete
  12. ನಗೆ ಹೊನಲು ಹರಿಸುವ ಸಾಲುಗಳು

    ReplyDelete
  13. ಶೀಟ್ ಮ್ಯಾನ್ ಸಾಲುಗಳು superb .........:)

    ReplyDelete