Jul 10, 2011

"ಗಂಗೂ : ರೆಡ್ ಲೈಟ್ ನಲ್ಲಿ"

ಕಾತೆವಾಡದ ರಾಜ ಮನೆತನಕ್ಕೆ ತೀರಾ ಹತ್ತಿರದ, ತುಂಬಾ ಅನುಕೂಲಸ್ತ ಕುಟುಂಬದ ಹುಡುಗಿ ಅವಳು - ಗಂಗಾ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಷ್ಟಾಗಿ ಒತ್ತು ಕೊಡದ ಆ ಕಾಲದಲ್ಲಿ ಆಕೆ ಸ್ಕೂಲ್ ಗೆ ಹೋಗ್ತಾಯಿದ್ಲು. ಅವಳಿಗೆ ಆಸೆಯಿತ್ತು - ಸಿನಿಮಾ ನಟಿಯಾಗಬೇಕು ಅಂತ. ಒಮ್ಮೆ ಆಕೆಯ ಕ್ಲಾಸ್ ಮೇಟ್ ಮುಂಬೈ ನೋಡಿ ಬಂದವರು, ಮುಂಬೈ ಹಾಗಿದೆ ಗೊತ್ತಾ? ಹೀಗಿದೆ ಗೊತ್ತಾ? ಆಹಾ ಎಷ್ಟು ದೊಡ್ಡ ಕತ್ತದಗಲಿದಾವೆ ಗೊತ್ತಾ? ಅಂತೆಲ್ಲ ಮಾತಾಡಿದ್ರು. ಗಂಗಾಗೆ ತಾನು ಮುಂಬೈ ನೋಡಬೇಕು ಆನೋ ಆಸೆ ಹುಟ್ಟಿತು. ಸಿನಿಮಾ ನಟಿಯಾಗೊದಂತು ದೂರದ ಮಾತು ಅಂತ ಅವಳಿಗೆ ಗೊತ್ತಿತ್ತು ಯಾಕಂದ್ರೆ ಕೌಟುಂಬಿಕ ಹಿನ್ನಲೆ ಹಾಗಿತ್ತು / ದೊಡ್ಡದಿತ್ತು. ಆಗಲೇ ಗಂಗಾನ ತಂದೆ ರಮಣಿಕ್ ಹೆಸರಿನ ಹುಡುಗನನ್ನ ಕೆಲಸಕ್ಕೆ ನೆಮಿಸಿಕೊಳ್ಳುತ್ತಾರೆ, ಅವನು ಮುಂಬೈ ನೋಡಿದವನು ಅಂತ ಗೊತ್ತಾದ ಮೇಲೆ ಗಂಗಾ ಅವನಿಗೆ ಹತ್ರ ಆಗ್ತಾಳೆ. ಆತ ತನಗೆ ಸಿನಿಮಾಕ್ಕೆ ಹತ್ತಿರವಿರುವ ಸ್ನೇಹಿತರಿದ್ದಾರೆ ಅಂತ ಹೇಳ್ತಾನೆ - ಗಂಗಾ ನಂಬಿ ಬಿಡ್ತಾಳೆ.

ಇಬ್ಬರ ನಡುವೆ ಪ್ರೀತಿ ಬೆಳೆಯುತ್ತೆ. ಒಂದು ದಿನ ಒಡವೆ,ಹಣವನ್ನ ಕಟ್ಟಿಕೊಂಡು ಗಂಗಾ ರಮಣಿಕ್ ನೊಂದಿಗೆ ಮುಂಬೈಗೆ ಬರ್ತಾಳೆ. ಮನೆಯವರಿಗೆ ಒಂದೇ ಒಂದು ಚೀಟಿಯನ್ನು ಸಹ ಬರೆದಿಟ್ಟಿರಲ್ಲ.
ಅವಳು ತಂದ ಹಣದಲ್ಲಿ ಇಬ್ಬರು ಲಾಡ್ಜಿನಲ್ಲಿ ಉಳಿತಾರೆ, ಸಿಟಿ ಸುತ್ತಾಡ್ತಾರೆ, ದೈಹಿಕವಾಗಿ ಒಂದಾಗ್ತಾರೆ - ರಮಣಿಕ್ ಜೊತೆಯಾಗಿ ಸಂಸಾರ ಮಾಡೋಣ ಅಂತ ಹೇಳಿರ್ತಾನೆ. ಇನ್ನೇನು ಹಣವೆಲ್ಲ ಖಾಲಿಯಾಗ್ತಾಯಿದೆ ಅನ್ನುವಾಗ ಅವನು ಮನೆ ನೋಡ್ತೀನಿ ಅಲ್ಲಿಯವರೆಗೂ ನನ್ನ ಆಂಟಿ ಮನೆಲಿರು ಅಂತ ಹೇಳಿ ಗಂಗಾಳನ್ನ ತನ್ನ ಆಂಟಿ ಜೊತೆ ಕಳಿಸಿ. ಮನೆ ಹುಡುಕಲಿಕ್ಕೆ ಅಂತ ಹೋಗ್ತಾನೆ.


ರಮಣಿಕ್ ನ ಆಂಟಿ ಜೊತೆ ಟ್ಯಾಕ್ಸಿಯಲ್ಲಿ ಬಂದು ಗಂಗಾ ಇಳಿಯೋದು - ಮುಂಬೈ ನಗರಿಯ 'ಕಾಮಾಟಿಪುರ', ರೆಡ್ ಲೈಟ್ ಏರಿಯ!! ಗಂಗಾಗೆ ಆ ಜಾಗ ಎಂತದು ಅಂತ ಗೊತ್ತಿರಲ್ಲ. ಆದರೂ ಯಾಕೋ ಏನೋ ಸರಿಯಿಲ್ಲ ಅನಿಸುತ್ತೆ.
ಹೇಗೋ, ಇವತ್ತು ಒಂದು ದಿನ ತಾನೇ. ನಾಳೆ ನಾನು ರಮಣಿಕ್ ನ ಜೊತೆ ಹೊಸ ಮನೆಗೆ ಹೋಗ್ತೀನಿ ಅಂತ ಅನ್ಕೊತಾಳೆ, ಆದರೆ ಆಂಟಿ ಹೇಳಿದ್ದು ಕೇಳಿ ಗಂಗಾಗೆ ದಂಗುಬಡಿಯುತ್ತೆ - ರಮಣಿಕ್ ಗಂಗಾಳನ್ನ ಮಾರಾಟ ಮಾಡಿ ಹೋಗಿಬಿಟ್ಟಿರುತ್ತಾನೆ. ಇನ್ನು ಆಂಟಿ, ಆಕೆ ಆಂಟಿಯಲ್ಲ - ಘರ್ ವಾಲಿ.

ಗಂಗಾ ಜಗಳ ಮಾಡ್ತಾಳೆ, ಕಿರಿಚಾಡ್ತಾಳೆ ಅವಳಿಗೆ ಒದೆಗಳು ಬೀಳ್ತವೆ ಮತ್ತೆ ಅಳ್ತಾಳೆ. ಕೊನೆಗೆ ಎಲ್ಲಾ ರೀತಿಯಲ್ಲಿ ಯೋಚಿಸಿ ತಾನು ವೇಶ್ಯೆಯಾಗಲಿಕ್ಕೆ ತಯಾರು ಅಂತಾಳೆ - ಕಾತೆವಾಡದ ತುಂಬಾ ಅನುಕೂಲಸ್ತ ಮನೆಯ ಹುಡುಗಿ.
ಮಾರಾಟಮಾಡಿದ ರಮಣಿಕ್ ಒಂದು ವಾರ ಗಂಗಾಳನ್ನ ದೈಹಿಕಾವಾಗಿ ಉಪಯೋಗಿಸಿಕೊಂಡು, ಗಂಗಾ ಇನ್ನು ಕನ್ಯೆ ಅಂತ ಹೇಳಿ ಮಾರಾಟ ಮಾಡಿರ್ತಾನೆ. ತಾನು ಕನ್ಯೆ ಅಲ್ಲ ಅಂತ ಗಂಗಾ ಕೂಡ ಘರ್ ವಾಲಿಗೆ ಹೇಳೋದಿಲ್ಲ. ಅವಳ ಜೊತೆ ಕಾಮಾಟಿಪುರದಲ್ಲಿ ಮಲಗಿದ ಮೊದಲ ಗಂಡಸಿಗೆ ಆಕೆ ಇಷ್ಟ ಆಗ್ತಾಳೆ. ಆ ಗಂಡಸು ಎಲ್ಲಾ ಮುಗಿದ ಮೇಲೆ ನಿನ್ನ ಹೆಸರೇನು ಅಂತ ಕೇಳ್ತಾನೆ. ಸ್ವಲ್ಪ ಸುಮ್ಮನಿದ್ದು ಗಂಗಾ, 'ಗಂಗೂ' ಅಂತಾಳೆ - ಬರ್ತ್ ಆಫ್ ಪ್ರೋಷ್ಟಿಟ್ಯುಟ್. ನಂತರ ಅವಳನ್ನೇ ಹುಡುಕಿಕೊಂಡು ಎಷ್ಟೋ ಜನ ಬರೋಕ್ಕೆ ಶುರುಮಾಡ್ತಾರೆ.

ಗಂಗೂ ತನ್ನ ಬುದ್ಧಿವಂತೆಕೆಯಿಂದ, ಪ್ಲ್ಯಾನ್ ಗಳಿಂದ ಬೆಳೆದ ರೀತಿ ಅಮೇಜಿಂಗ್ ಅನ್ಸಿಬಿಡುತ್ತೆ. ಮುಂದೆ ಆಕೆ ಇಡೀ ಕಾಮಾಟಿಪುರವನ್ನ ರಾಣಿಯಂತೆ ಆಳುತ್ತಾಳೆ. ಅದೆಷ್ಟೋ ಕಷ್ಟಗಳಿಂದ ವೇಶ್ಯೆಯರನ್ನ ಕಾಪಾಡ್ತಾಳೆ. ಎಲ್ಲರು ಆಕೆಗೆ 'ಅಮ್ಮ' ಅಂತಾರೆ. ವೇಶ್ಯೆಯರು ಸಮಾಜಕ್ಕೆ ಎಷ್ಟರಮಟ್ಟಿಗೆ ಅವಶ್ಯಕ ಅಂತ ಆಕೆ ಮಾಡಿದ ಭಾಷಣ ಸಭೆಯಲ್ಲಿ ನೆರೆದಿದ್ದ ರಾಜಕಾರಣಿಗಳಿಗೆ, ಸಮಾಜ ಸೇವಕರಿಗೆ, ದೊಡ್ಡ ದೊಡ್ಡ ಹುದ್ದೆಯಲ್ಲಿರುವವರಿಗೆ ಸಿಡಿಲು ಬಡಿದಂತಾಗಿತ್ತು.


ಗಂಗೂಬಾಯಿ ಸೀರೆಯ
ಅಂಚಿಗೆ ಬಂಗಾರದ ಪಟ್ಟಿಯಿರ್ತಾಯಿತ್ತು, ಬ್ಲೌಸಿಗೆ ಬಂಗಾರದ ಗುಂಡಿಗಳು. ಆ ಕಾಲದಲ್ಲಿ ಆಕೆಯ ಹತ್ತಿರ ಇದ್ದಿದ್ದು 'ಬೆಂತ್ಲಿ' ಕಾರಿತ್ತು. ಭಯಂಕರ ಆಸ್ತಿ. ಈಗಲೂ ಕಾಮಾಟಿಪುರದ ಎಷ್ಟೋ ಮನೆಗಳಲ್ಲಿ ಆಕೆಯನ್ನ ಪೂಜಿಸ್ತಾರೆ, ಆಕೆದೊಂದು ಫೋಟೋ ಇಟ್ಟಿರ್ತಾರೆ. ಅಲ್ಲಿಯೇ ಆಕೆದೊಂದು ಮೂರ್ತಿಯಿದೆ.

೧೯೬೦ ರಲ್ಲಿ ಒಬ್ಬ ವೇಶ್ಯೆಯಾಗಿ / ಕಾಮಾಟಿಪುರದ ಲೀಡರ್ ಆಗಿ ಭಾರತದ ಪ್ರದಾನ ಮಂತ್ರಿ ನೆಹರು ಜೊತೆ ಆಕೆ ಮೀಟಿಂಗ್ ಮಾಡಿದ್ದಳು ಅಂದ್ರೆ ನೀವು ನಂಬ್ತೀರಾ ? ನಂಬಲೇ ಬೇಕು!!

"ಯಾಕಮ್ಮ ನೀನು ವೆಶ್ಯೇಯಾದೆ ? ಒಂದು ಒಳ್ಳೆ ಕೆಲ್ಸಾ ಮಾಡೋದಲ್ವ ? ಒಳ್ಳೆ ಗಂಡನ ಜೊತೆ ಇರಬಹುದಲ್ವಾ ?" ಅಂತ ನೆಹರು ಕೇಳಿದ್ರೆ.
"ನೀವು ನನ್ನ ಶ್ರೀಮತಿ. ನೆಹರು ಅಂತ ಮಾಡಿಕೊಳ್ಳೋದಾದ್ರೆ, ನಾನು ಈಗಿನ ಕೆಲಸ ಬಿಡ್ತೀನಿ" ಅಂದಳು ಗಂಗೂಬಾಯಿ, ನೆಹರು ಕಕ್ಕಾಬಿಕ್ಕಿ.

ನೂರಾರು ಜನ ವೇಶ್ಯೆಯರನ್ನ ಮತ್ತು ರಾಜಕಾರಣಿಗಳನ್ನ, ಗೂಂಡಾಗಳನ್ನ, ಮಾದ್ಯಮದವರನ್ನ ಆಕೆ ಹ್ಯಾಂಡಲ್ ಮಾಡ್ತಿದ್ದಳು ಅಂದ್ರೆ ಅದೇನ್ ತಮಾಷೆ ಮಾತಾ?

ಮಹಾನಗರಿ ಮುಂಬೈ ಕ್ರೂರಪ್ರಪಂಚ/ ಅಂಡರ್ ವಲ್ಡ್ ನ ಇನ್ನು ಅನೇಕ ರಾಣಿಯರ ಬಗ್ಗೆ ನಿಮಗೆ ಓದಬೇಕು ಅನಿಸಿದರೆ.
ಎಸ್. ಹುಸೇನ್ ಜೈದಿ ಬರೆದಿರುವ "ಮಾಫಿಯ ಕ್ವೀನ್ಸ್ ಆಫ್ ಮುಂಬೈ" ಪುಸ್ತಕವನ್ನ ನೀವು ಓದಬೇಕು.
ಓದಿದ ಮೇಲೆ ಖಂಡಿತವಾಗಿಯೂ ಬೇರೆಯದೊಂದು ಪ್ರಪಂಚ ನಿಮಗೆ ಕಾಣುತ್ತೆ. ನೀವು ಓದ್ತೀರಾ ನನಗೊತ್ತು.

=====
=====

15 comments:

 1. ಅಬ್ಬಾ..!! ಎನಿಸಿತು ಕಥೆ ಕೇಳಿ. ಓದಲೇ ಬೇಕು... ಎನಿಸಿದೆ.

  ReplyDelete
 2. gangoobaayiya katheyannu naanu ee modalu odiddeeni. bahushaha tarangadallirabeku.
  uttama vivarane.

  ReplyDelete
 3. @Akka and Vijashri madam :: Thank you. Do read the book.

  ReplyDelete
 4. ಈ ಗಂಗೂ ಬಾಯಿ ಕಥೆ ಸುಮಾರು ಜನರಿಗೆ ಗೊತ್ತಿರಬಹುದು. ಇದು ರಾಮ್ ತೇರಿ ಗಂಗಾ ಮೈಲಿ ಹೋಗಯೀ ಕಥೆಯನ್ನೇ ಸುಮಾರಾಗಿ ಹೋಲುತ್ತದೆ!

  ReplyDelete
 5. @V R Bhat Sir :: Sir, This is real story. Thank you.

  ReplyDelete
 6. chennaagi vivarisiddeera... abba! entha jeevana!

  ReplyDelete
 7. ಈ ಸತ್ಯಕಥೆಯನ್ನು ಓದಿ ದಂಗು ಬಡಿದೆ, ವ್ಯಥೆಯೂ ಆಯಿತು. ‘ಉಮರಾವ ಜಾನ್’ ಚಿತ್ರ ನೋಡಿದ್ದೀರಾ? ಆಡುತ್ತಿರುವ ಹುಡುಗಿಯನ್ನು ಅಪಹರಿಸಿಕೊಂಡೊಯ್ದು, ಲಖನೌದಲ್ಲಿ ವೇಶ್ಯಾವಾಟಿಕೆಗೆ ಮಾರಿದ ಕತೆ ಅದು.
  ಎಂತಹ ಭಾರತ!?

  ReplyDelete
 8. @Pradeep :: Thanks for response

  @Sunaath Sir :: Yes sir, its a traumatic. but, its not only in Bharata. Human trafficking is world wide. Girls are also not blank slates.

  ReplyDelete
 9. ಇದು ಒಬ್ಬರ ಕಥೆಯಲ್ಲ ... ಏಷ್ಟೋ ಹೆಣ್ಣುಗಳ ಕಥೆ...

  ReplyDelete
 10. ಪುಸ್ತಕ ಪರಿಚಯಕ್ಕೆ ಧನ್ಯವಾದಗಳು

  ReplyDelete
 11. ಚೆನ್ನಾಗಿದೆ.......:)
  1 ರೌಂಡ್ ಬೇರೆ ಪ್ರಪಂಚನೆ ಕಣ್ಣ ಮುಂದೆ ಬಂತು......

  ReplyDelete
 12. ನಾಗರಾಜ್,
  ಬಿಡುವು ಮಾಡಿಕೊಂಡು ನಿಮ್ಮ ಲೇಖನ ಓದಿದೆ. ಹೊಸದೊಂದು ಪ್ರಪಂಚ ಕಣ್ಣಮುಂದೆ ಬಂದಂತೆ ಆಯಿತು..ತುಂಬಾ ಚೆನ್ನಾಗಿ ಬರೆದಿದ್ದೀರಿ..

  ReplyDelete