Jul 31, 2011

"Me, ಅವಳು ಮತ್ತು ನನ್ನ ಕವಿತೆ"

ಓದಿನ ಸಲುವಾಗಿ ಊರು ಬಿಟ್ಟು ಹನ್ನೊಂದು ವರ್ಷದ ಮೇಲಾಯ್ತು. ಪ್ರೈಮರಿ ಸ್ಕೂಲ್ ಕೂಡ ಬೇರೆ ಊರಲ್ಲಿ ಓದಿದ್ದು ಆದ್ರೆ ನನ್ನ ಊರಿಗೆ ಹತ್ರ ಇತ್ತು. ಇಷ್ಟು ವರ್ಷ ಊರಿಂದ ಊರಿಗೆ ಸೈಕಲ್, ಆಟೋ, ಕುದುರೆಗಾಡಿ(ಜಟಕಾಬಂಡಿ), ದೋಣಿ, ಬಸ್ಸು,ಕಾರು, ರೈಲು ಮತ್ತು ವಿಮಾನ, ಈ ಎಲ್ಲಾ ಸಂಚಾರಿ ವಾಹನಗಳಲ್ಲಿ ತಿರುಗಾಡಿದಿನಿ. ದುರಂತ ಅಂದ್ರೆ ಇಷ್ಟು ವರ್ಷಗಳ ಪ್ರಯಾಣದಲ್ಲಿ ಒಮ್ಮೆ ಕೂಡ ಅಪರಿಚಿತ, ಚಂದದ ಹುಡುಗಿ ನನ್ನ ಪಕ್ಕ ಕೂತಿಲ್ಲ ಮತ್ತು ನಾನು ಅಂಥವಳ ಪಕ್ಕ ಕೂತಿಲ್ಲ. ಚಂದದ ಹುಡುಗಿ ಅಲ್ಲ ಬರೀ ಹುಡುಗಿ ಕೂಡ ಕೂತಿಲ್ಲ. ಕಾರಣ ಗೊತ್ತಿಲ್ಲ (ನಾನು ಸ್ವಲ್ಪ ಕಪ್ಪು).

ಸುಮಾರು ತಿಂಗಳಗಳ ನಂತರ ಧಾರವಾಡಕ್ಕೆ ಹೋಗ್ತಾಯಿದ್ದೆ ಬೆಂಗಳೂರಿನಿಂದ. ಜನಶತಾಬ್ಧಿ ರೈಲಿನಲ್ಲಿ ಹುಬ್ಬಳ್ಳಿವರೆಗೆ ಹೋಗಬೇಕಾಗಿತ್ತು, ಅದರ ಟೈಮಿಂಗ್ ಬೆಳಗ್ಗೆ 6:00 am. ನನಗೆ ಸುಪ್ರಬಾತ ಕೇಳಿಸೋದು early morning 8:00 am. ನನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತು ಅದಕ್ಕೆ reservation ಮಾಡ್ಸಿರ್ಲಿಲ್ಲ. ಪಾಪ, ರೈಲಿಗೆ ಅದೃಷ್ಟ ಇರ್ಲಿಲ್ವೋ ಅಥವಾ ನನ್ನ ಪಕ್ಕ ಕೂತ್ಕೋಳೊ ಹುಡುಗಿ ಇನ್ನು ರೆಡಿ ಆಗಿರ್ಲಿಲ್ವೋ ಏನೋ ಒಟ್ನಲ್ಲಿ ನಾನಂತೂ ಜನಶತಾಬ್ಧಿಗೆ ಹೋಗಲಿಲ್ಲ.

ಚಿಕ್ಕವರಿದ್ದಾಗ ದೇವರ ಮುಂದೆ ನಿಂತು ಭಕ್ತಿಯಿಂದ ನಮಸ್ಕಾರ, ಪ್ರಾರ್ಥನೆ ಇತ್ಯಾದಿ, ಇತ್ಯಾದಿಗಳನ್ನ ಮಾಡ್ಬೇಕು ಅಂತ ಮನೇಲಿ ಹೇಳೋರು ಅದನ್ನೇ ಈಗ ಕೂಡ ಮಾಡ್ತೀನಿ. ಆದ್ರೆ, ಈಗಿನ ಮಸಲತ್ತು ಬ್ಯಾರೆ. ಸಿಲಿಕಾನ್ ಸಿಟಿಯ BTM layout ನಲ್ಲಿರುವ ರೂಮು ಬಿಡುವಾಗಲೇ ದೇವರ ಮುಂದೆ ನಿಂತು ಭಕ್ತಿಯಿಂದ "ಇವತ್ತಾದರೂ ಚಂದದ ಹುಡುಗಿ ನನ್ನ ಪಕ್ಕ ಕೂತ್ಕೊಳೋ ಹಾಗೆ ಮಾಡಪ್ಪ/ ಮಾಡಮ್ಮ" ಅಂತ ಬೇಡ್ಕೊಂಡೆ.

ಬೆಂಗಳೂರು ರೈಲ್ವೆ ಸ್ಟೇಷನ್ನಿನ ಆ platform ನಲ್ಲಿ ಚಿಯಾ-ಮಿಯಾಗಳಿಂದ ಹಿಡಿದು ಇನ್ನೇನು validity ಮುಗಿಯಲಿರುವ ಎಲ್ಲಾ ವಯಸ್ಸಿನವರು 'ತ್ರಿಪುರ ಸುಂದರಿ'ಯನ್ನ ಕಾಯುವಂತೆ ಕಾಯುತ್ತಿದ್ದರು. ಆಗಾಗ, ನಿಂತವರು ಸೊಂಟದ ಮೇಲಿನ ಭಾಗವನ್ನ ಡೊಂಕಿಸಿ ನೋಡುತ್ತಿದ್ದರು, ಬೆಂಚಿನ ಮೇಲೆ ಕೂತವರು ಕೂತಲ್ಲೇ ನೋಡುವ ಪ್ರಯತ್ನ ಮಾಡುತ್ತಿದ್ದರು (ಎದ್ದರೆ ಮತ್ತೆ ಜಾಗ ಸಿಗುವ ಚಾನ್ಸ್ ಕಡಿಮೆ ಅದಕ್ಕೆ). ಒಟ್ಟಾರೆ 'Bangalore-Dharwad Intercity Express' ಎನ್ನುವ ತ್ರಿಲೋಕ ಸುಂದರಿಗಾಗಿ ಭಯಂಕರ ಕಾಯುವಿಕೆ. ಕೆಲವರು ಅದಾಗಲೇ ಪೇಪರ್, ಸಣ್ಣ ಸಣ್ಣ ಬ್ಯಾಗುಗಳನ್ನ ಕಿಡಕಿಯಿಂದ ಎಸೆದು ಸೀಟು ಪಕ್ಕ ಮಾಡ್ಕೊಬೇಕು ಅಂತ ತಯಾರಾಗಿದ್ದರು. ನಾನು ಆ ಪ್ಲ್ಯಾಟ್ಫಾರ್ಮ್ ಗೆ ಹೋಗಿ ಹದಿನೇಳು ನಿಮಿಷಗಳ ನಂತರ ಬಂದಳು ಸುಂದರಿ ಧಡಕ್-ಬಡಕ್, ಧಡಕ್-ಬಡಕ್, . . . . Intercity Express.

ಮೊದಲ ಬಾರಿ ಕಂಪಿಸಿತು ರೈಲು ::
ನಾನು ಆರಾಮಾಗಿ ಹತ್ತಿದೆ ಯಾಕಂದ್ರೆ ಸೀಟು ಸಿಗೋದು ಖಾತ್ರಿಯಿರ್ಲಿಲ್ಲ, ಅದಕ್ಯಾಕ ಗುದ್ದಾಡ್ಕೊಂಡು ಹತ್ತೋದು. ರೈಲಿನಲ್ಲೂ ಒಂದೇ ಕಡೆ ಕೂತು ಪ್ರಯಾಣ ಮಾಡೋನು ಟೆಸ್ಟ್ ಲೆಸ್ ಫೆಲೋ. ಸೀಟು ಹಿಡಿದು ಒಂದೇ ಕಡೆ ಕೂತ್ಕೊಬೇಕು ಅಂದ್ರೆ ಬಸ್ಸಿಗೆ ಹೋಗಬಹುದಲ್ವಾ ?. ಆದ್ರೂ, ಪಕ್ಕದ ಸೀಟಿನಲ್ಲಿ ಯಾರು ಕೂತ್ಕೋತಾರೆ ಅನ್ನೋ ಹುಳ ತಲೇಲಿ ಇತ್ತಲ್ಲ ಅದಕ್ಕೆ ಒಮ್ಮೆ ಕಣ್ಣಾಡಿಸಿದೆ. ಖಾಲಿ ಸೀಟು ಕಂಡಿತು, ನೋಡಿದ್ರೆ ಕಿಡಕಿ ಸೀಟಿಗೆ ಯಾರೋ ಪೇಪರ್ ಇಟ್ಟಿದ್ರು 'ಛೆ' ಅಂದುಕೊಂಡು ಅದೇ ಸೀಟಿನ ತುದಿಗೆ ಕೂತು ಎದುರುಗಡೆ ನೋಡಿದೆ. ಗುಬ್ಬಚ್ಚಿ ಕಂಡಂಗೆ ಹೆಣ್ಣು ಪ್ರಾಣಿಯೊಂದು ಕಿಡಿಕಿ ಸೀಟಿನಲ್ಲಿ ಕಂಡಿತು ಮತ್ತೆ 'ಛೆ' ಅಂದುಕೊಂಡೆ ಯಾಕಂದ್ರೆ ಅವಳ ಪಕ್ಕದಲ್ಲಿ ಯಾರೋ ಪೇಪರ್, ಬ್ಯಾಗು ಇಟ್ಟಿದ್ರು. 'ದೇವ್ರೇ ಪಕ್ಕದಲ್ಲಿ ಕೇಳಿದ್ರೆ ಎದುರುಗಡೆ ಕೊಡ್ತಿಯಲ್ಲ' ಅಂತ ನನ್ನೊಳೋಗೆ ಹೇಳಿಕೊಳ್ಳುವಾಗಲೇ ಒಬ್ಬ ಅಂಕಲ್ ಬಂದು 'ನಾನಿಲ್ಲಿ ಸೀಟು ಹಾಕಿದಿನಮ್ಮ' ಅಂದ್ರು.

That girl shifted to window side of my seat, ಅವಾಗ್ಲೇ ನನಗೆ ಗೊತ್ತಾಗಿದ್ದು ಅದು,paper, ಯಾರೋ ಸೀಟಿಗೆ ಹಾಕಿದ್ದಲ್ಲ ಮರೆತು ಬಿಟ್ಟಿರೋದು ಅಂತ. 'ಅನ್ಯಾಯವಾಗಿ ಕಿಡಕಿ ಸೀಟು miss ಆಯ್ತಲ್ಲ. ಹೋಗ್ಲಿ ಬಿಡು ಮಿಸ್ ಆದ್ರೆ ಏನಂತೆ ಚಂದದ 'ಮಿಸ್' ಗೆ ಪಾಸ್ ಆಗಿದೆಯಲ್ಲ' ಅಂದ್ಕೊಂಡೆ. ನಮ್ಮಿಬ್ಬರ ಮಧ್ಯೆ ಇನ್ನೂ ಒಬ್ಬರು ಕೂತ್ಕೊಳ್ಳುವಷ್ಟು ಜಾಗ ಖಾಲಿಯಿತ್ತು, ಈಗದನ್ನ ಮಾಯಾ ಮಾಡಬೇಕಿತ್ತು. ಯಾರಾದ್ರು ಬಂದು 'ಸ್ವಲ್ಪ ಆ ಕಡೆ ಸರೀರಿ' ಅಂತಾರೆ ಅಂತ expect ಮಾಡಿದ್ದೆ.

ಅಷ್ಟರಲ್ಲಿ ಒಂದು ಹುಡುಗ ಬಂದು 'I got it, I got it' ಅನ್ನುತ್ತಾ ಎರಡು ಪ್ಲಾಷ್ಟಿಕ್ ಕ್ಯಾರಿ ಬ್ಯಾಗುಗಳನ್ನ ಆ ಹುಡುಗಿಗೆ ತೋರಿಸಿ, ನಗುತ್ತ ನಮ್ಮಿಬ್ಬರ ನಡುವೆ ಕೂತ್ಕೊಂಡ, ಏನೋ ಸಾಧನೆ ಮಾಡಿರೋನ ತರಾ, ಕರಡಿ ನನ್ಮಗ- ಶಿವ ಪೂಜೆಯಲ್ಲಿ. I don't know what was there in those bags. ಅವರಿಬ್ಬರೂ ಕಲ್ಲಿಗೆ ಕಣ್ಣೀರು ಬರೋ ಹಾಗೆ ವಟ ವಟ ಅಂತ ಮಾತಾಡೋಕೆ ಶುರುಮಾಡಿದ್ರು, and that guy ಮಾತಿನ ನಡುನಡುವೆ ನಗ್ತಿದ್ದ, ಕಳ್ಳ. ಮಾತು ಮಾತಲ್ಲಿ ಗೊತ್ತಗಿದ್ದೆನಂದ್ರೆ she is from Dharwad and ಅವ್ರು siblings ಅಲ್ಲ. then Lovers? -ನಾನು ಅಷ್ಟು ಕೆಟ್ಟದ್ದನ್ನ ಯೋಚನೆ ಮಾಡಲ್ಲ because It hurts me, ಅಥವಾ just Friends - May be. ನನಗಂತೂ ಮೈಯಲ್ಲ ಬೆಂಕಿ, ಇವನೇ ನನ್ನ ಮೊದಲ ಶತ್ರು ಅಂತ declare ಮಾಡಿದೆ. ದೇವರನ್ನ ಅದೆಷ್ಟು ಬೈದುಕೊಂಡೆನೋ ಏನೋ, ರೈಲು ನಿಂತಲ್ಲೇ ಒಮ್ಮೆ ಕಂಪಿಸಿತು. ಆಮೇಲೆ ಹೊರಟಿತು !!

She and My Poem ::
ಆ ಹುಡುಗ ಯಶವಂತಪುರದಲ್ಲಿ ಇಳಿದ - 'ಖದೀಮ, ಇವಳನ್ನ ರೈಲು ಹತ್ಸಲಿಕ್ಕೆ ಮೆಜೆಸ್ಟಿಕ್ ತನಕ ಬಂದಿದಾನೆ. ಅದೆಷ್ಟು ರೈಲು ಹತ್ತಿಸಿದ್ನೋ ಏನೋ, ಇವ್ಳು ಎಷ್ಟು ನಂಬಿದ್ಲೋ ಏನೋ' ಅನ್ಕೊಂಡೆ. ಯಾರೋ ಬಂದ ಹಾಗಾಯ್ತು ಅವರು ಸೀಟು ಕೇಳುವ ಮೊದ್ಲೇ ನಾನೇ ಸರ್ರನೆ ಕಿಡಕಿ ಸುಂದರಿ ಕಡೆ ಜಾರಿ, ದಾನವೀರ ಶೂರ ಕರ್ಣನಾದೆ. ನನಗೆ ಎಷ್ಟೋ ವರ್ಷಗಳನ್ನ ಕೂತಲ್ಲೇ ಕಳೆದಂಗಾಗಿತ್ತು, ಈಗ ಒಂಥಾರ ನಿರಾಳ. ರೈಲು ತನ್ನ ಪಾಡಿಗೆ ತಾನು ಹೊರಟಿತ್ತು. ದೇವ್ರೇ ಕೊನೆಗೂ ಕಣ್ಣು ಬಿಟ್ಟಲ್ಲಪ್ಪ- ಹುಡುಗಿ ನನ್ನ ಪಕ್ಕ ಬಂದ್ರು, ನಾನು ಹುಡುಗಿ ಪಕ್ಕ ಹೋದರು ಒಂದೇ, ಅಲ್ವಾ?

ಈಗ ಮಾತಾಡ್ತಾಳೆ ಆಗ ಮಾತಾಡ್ತಾಳೆ ಕಾಯ್ತಾಯಿದ್ದೆ ನನ್ನ ಬ್ಯಾಗಿನಲ್ಲಿದ್ದ ಎರಡು ಪುಸ್ತಕಗಳಲ್ಲಿ ಒಂದು ಕನ್ನಡ ಕಾದಂಬರಿ ಇತ್ತು. ನಾನು ಹುಡುಗಿ ಮುಂದೆ, ಸ್ವಲ್ಪ ಬಿಲ್ಡ್ ಅಪ್ ಇರ್ಲಿ ಅಂತ ಇಂಗ್ಲೀಷ್ ಕಾದಂಬರಿ ಎತ್ಕೊಂಡೆ. ಕಾಯ್ತೀನಿ ಕಾಯ್ತೀನಿ ಉಹುಂ ಮೇಡಂ ಮಾತಾಡೋ ಯಾವ symptoms ತೋರ್ತಾಯಿಲ್ಲ. ಕಾದಂಬರಿಯ ಮೊದಲ ಪುಟ ಕೂಡ ಓದಿರಲಿಲ್ಲ, ಸುಮ್ನೆ ಪೇಜ್ ತಿರುವುತ್ತಿದ್ದೆ. ಮಾತಿನಲ್ಲಿ ನನ್ನದೋ ಭಯಂಕರ starting trouble . ಅವಳದು ಅದೇ ಪ್ರಾಬ್ಲಂ ಇರಬಹುದಾ? ಗೊತ್ತಿಲ್ಲ. ಕೆಲವು ತಾಸುಗಳು ಕಳೆದು ಹೋದವು ಆ ಹುಡುಗಿ ಸ್ವಲ್ಪ ಹೊತ್ತು ಹಾಡು ಕೇಳಿದ್ಲು, ನಂತರ ಮಲಗಿದ್ಲು ಆಗ ಅವ್ಳು ತಲೆ ಸೀಟಿನಿಂದ ಜಾರಿ ಆಸರೆ ಪಡೆಯಲಿ ಅಂತ ನನ್ನ ಭುಜವನ್ನ ಅದಕ್ಕಾಗಿ ರೆಡಿ ಮಾಡ್ಕೊಂಡೆ. ಇನ್ನೇನು ಅವ್ಳು ತಲೆ ನನ್ನ ಭುಜದ ಮೇಲೆ ಲ್ಯಾಂಡ್ ಆಗ್ಬೇಕು - ಎಚ್ಚರ ಆಗ್ಬಿಟ್ಲು. 'ಅಯ್ಯೋ ಪಾಪಿ' ಅನ್ಕೊಂಡೆ.

ಕೈಯಲ್ಲಿದ್ದ Agatha Christie ಯವರ 'Partners in Crime' ಎಂಬ ರೋಚಕ ಕಾದಂಬರಿ ಕೂಡ ಸಪ್ಪೆ ಅನಿಸಿತು ಮತ್ತೆ ಬ್ಯಾಗಿನೋಳಗಿಟ್ಟೆ. ಸ್ವಲ್ಪ ಹೊತ್ತು ಮತ್ತೆ waiting but no use. I thought train is moving so fast, ನಂತರ ಕೊನೆ ಪ್ರಯತ್ನವೆಂಬಂತೆ ಒಂದು ಕವಿತೆ ಬರೆಯಲು ರೆಡಿಯಾದೆ. ಎಲ್ಲಾದರು, ಏನಾದ್ರೂ ವಿಷಯ ಸಿಗಬಹುದು ಅಂತ ನನ್ನ ಹತ್ತಿರ ಸದಾ ಒಂದು ಪೆನ್ನು ಮತ್ತು ಖಾಲಿ ಪೇಪರ್ ಇಟ್ಕೊಂಡಿರ್ತೀನಿ (ಅದೇ ಕಾರಣಕ್ಕೆ ಈ ಬ್ಲಾಗಿನ ಹೆಸರು 'ಪೆನ್ನುಪೇಪರ್'). To be frank, i was not cheating myself - ಮನಸಿನಿಂದ ಬರೆದೆ. ಅವಳು ಅದನ್ನ ಗಮನಿಸಿದ್ಲೋ ಇಲ್ವೋ ಗೊತ್ತಾಗ್ಲಿಲ್ಲ. ಕೊನೆಗೆ ಟೈಟಲ್ ಸ್ವಲ್ಪ ದೊಡ್ಡದಾಗಿ ಬರೆದೆ 'Saying I Love U' ಅಂತ. ಅವಳು ಗಮನಿಸಲಿ ಅಂತ I Love U ಅನ್ನೋದರ ಕೆಳಗೆ ಎರಡು ಸಲ underline ಮಾಡ್ದೆ. and Finally, NO USE.

ME and My Poem ::
ಆಮೇಲೆ ಅಲ್ಲೇ ಸುತ್ತ-ಮುತ್ತಾ ಎರಡು-ಮೂರು ಸಲ ಸೀಟು ಬದಲಾಯಿಸಿದೆ. ಈವರೆಗಿನ ನನ್ನ ರೈಲು ಪ್ರಯಾಣದಲ್ಲಿ ನಾನು ತುಂಬಾ ಹೊತ್ತು ಕೂತಲ್ಲೇ ಕೂತಿದ್ದು ಅದೇ ಮೊದಲು - only because of that girl. ಬೆಂಗಳೂರಿನಿಂದ ಧಾರವಾಡಕ್ಕೆ Intercity train ನಲ್ಲಿ ಹೋದ್ರೆ ಒಂಬತ್ತು ತಾಸು ಬೇಕಾಗುತ್ತೆ. ಆ ಒಂಬತ್ತು ತಾಸಿನಲ್ಲಿ ಸುಮಾರು ಐದು ತಾಸು ನಾನು ಅವಳ ಜೊತೆಯಲ್ಲೇ ಇದ್ದೆ (ನಡುನಡುವೆ ಸುತ್ತಾದೊದನ್ನ ಬಿಟ್ಟು). ಹುಬ್ಬಳ್ಳಿ ಬಂತು ಎಲ್ಲರು ಇಳಿದು ಹೋದರು.

ನಾನಿದ್ದ ಡಬ್ಬಿಯಲ್ಲಿ ಇದ್ದಿದ್ದು ನಾನು, ಅವಳು ಮತ್ತು ನಾನು ಅವಳಿಗೆಂದೇ ಬರೆದ ಕವಿತೆ. ನಾವಿದ್ದ ಡಬ್ಬಿಯ ಎರಡು ಕಡೆ ಡಬ್ಬಿಗಳಲ್ಲಿ ಯಾರು ಇಲ್ಲ, ಹುಬ್ಬಳ್ಳಿಯ ಸ್ಟೇಷನ್ನಿನಲ್ಲಿ ಮಸ್ತ್ ಮೌನ, ಹತ್ತು ಗಂಟೆಯತ್ತ ಸಾಗುತ್ತಿತ್ತು, ರಾತ್ರಿ. ಧಾರವಾಡಕ್ಕೆ ಹೋಗೋರು ಬಹುಶಃ ಇಡೀ ರೈಲಿನಲ್ಲಿ ಹೆಚ್ಚು ಅಂದ್ರೆ 40-50 ಜನ ಮಾತ್ರ. ಈ ಎಲ್ಲಾ ಕಾರಣಗಳಿಗೆ ಆ ಹುಡುಗಿಗೆ ಹೆದರಿಕೆಯಾಯ್ತು ಅನ್ಸುತ್ತೆ. ಮೆಲ್ಲಗೆ ಎದ್ದು 'ನೀವೂ ಧಾರವಾಡಕ್ಕೆನ್ರಿ' ಅಂದಳು ಮೌನ ಸುಂದರಿ. ಹುಡುಗಿಯರಿಗೆ ಯಾವಾಗ ಹೆದ್ರಕೆಯಾಗೊತ್ತೋ, ಯಾವಾಗ ತಮ್ಮ ಕೈಯಲ್ಲಿ ಕೆಲಸ ಆಗಲ್ಲ ಅಂತ ಗೊತ್ತಾಗುತ್ತೋ ಆಗಷ್ಟೇ ಹುಡುಗುರು ನೆನಪಾಗ್ತಾರೆ. ಅಲ್ವಾ ?. ನನಗೂ ಸಿಟ್ಟು ಬಂದಿತ್ತು ಆ ಹುಡುಗಿ ಮೇಲೆ because i was disappointed . ಅದಕ್ಕೆ ' ಇಲ್ಲ ವಾಪಾಸ್ ಬೆಂಗಳೂರಿಗೆ ಹೋಗಾಂವ ಅದೀನಿ' ಅಂತ ಅನ್ಬೇಕು ಅನ್ಸಿತ್ತು ಆದ್ರೂ ತಡ್ಕೊಂಡು 'ಹೌದು' ಅಂದೆ. ಎಷ್ಟೇ ಆಗ್ಲಿ ಗಂಡು ಜೀವ ಹೆಣ್ಣಿಗೆ ಕರಗುತ್ತೆ.

ನಾನು ರೈಲಿಳಿದು ಪ್ಲ್ಯಾಟ್ಫಾರ್ಮ್ ನಲ್ಲಿ ಸುತ್ತಾಡಿದೆ. ಆ ಹುಡುಗಿಗೆ ನನ್ನಿಂದಲೂ ಅಭಯ ಸಿಗಲಿಲ್ಲ ಅನ್ಸುತ್ತೆ ತನ್ನ ಲಗೇಜ್ ತೊಗೊಂಡು ಬೇರೆ ಡಬ್ಬಿಗೆ ಹೊರಟಳು - Yes, She moved away and ironically she was no time with me. ರೈಲು ಧಾರವಾಡಕ್ಕೆ ಹೊರಟಿತು - InterCity now more beauty for none unless it start again to Bangalore. ಉಳಿದದ್ದು ನಾನು ಮತ್ತು ಕವಿತೆ there and only there.

Destination ::
ಸ್ವಲ್ಪ ಹೊತ್ತು ಕೂತೆ, ನಾನಿದ್ದ ಡಬ್ಬಿ ಕೊನೆಯಿಂದ ಮೂರನೆಯದಾಗಿತ್ತು. ರೈಲ್ವೆ ಕಾರ್ಮಿಕರು ಹುಬ್ಬಳ್ಳಿಯಿಂದ ಕ್ಲೀನ್ ಮಾಡೋಕೆ ಶುರು ಮಾಡಿದ್ರು, ಧೂಳು ಅಡರುತ್ತಿತ್ತು. ಬ್ಯಾಗನ್ನು ಹೆಗಲಿಗೇರಿಸಿಕೊಂಡು ಒಂದೊಂದೇ ಡಬ್ಬಿಗಳನ್ನ ದಾಟಿದೆ. ಅಲ್ಲಿ ನಾಲ್ಕೈದು ಜನರಲ್ಲಿ ಆ ಹುಡುಗಿಯು ಇದ್ದಿದ್ದು ಗೊತ್ತಾಯ್ತು ಆದ್ರೆ ಹತ್ರ ಹೋದಾಗ ಅವಳ ಕಡೆ ನೋಡಲಿಲ್ಲ. ಧಾರವಾಡದಲ್ಲಿ ಮನೆಗೆ ಹೋದಾಗ ರಾತ್ರಿ ಹೊನ್ನೊಂದು ಹತ್ತಿರವಾಗಿತ್ತು. 'ಚೆನ್ನಾಗಿತ್ತಾ ಪ್ರಯಾಣ ?' ಮನೆಯಲ್ಲಿ ಸಾಮಾನ್ಯ ಪ್ರಶ್ನೆ.
'It was beautiful' ಹಾಗಂತ ಹೇಳ್ಬೇಕು ಇಲ್ಲಾಂದ್ರೆ ಸುಮ್ನೆ ಪ್ರಶ್ನೆ, ಗಾಬರಿ ಶುರುವಾಗ್ತವೆ.

ಮುಗಿಯಿತು :
ಮರುದಿನ ಬಟ್ಟೆ ತೊಳೆಯೋಕೆ ಹಾಕುವಾಗ ತಂಗಿ, ಶರ್ಟ್ ನಲ್ಲಿದ್ದ ಹಾಳೆ ನೋಡಿ ಏನೋ ಕವನ ಬರ್ದಿರ್ತಾನೆ ಅಂತ ಓದಿದಾಳೆ.
ನನ್ನಿಂದ ವಿರಚಿತ ಕವಿತೆ ತೋರಿಸಿ 'ಯಾರಿಗೋ ಪ್ರಪೋಸ್ ಮಾಡಿರೋ ಹಾಗಿದೆ' ಅಂದ್ಲು.
'yep, But no use' ಅಂದೆ
she said 'I think , You don't know how to approach'
'May be, I have not attended any classes of it' we both laughed.
'ಹೆಂಗಿದ್ಲು ?' she asked
"Beautiful" ಅನ್ನುತ್ತಾ ಬೈಕಿನ ಕಿಕ್ ಅನ್ನು ಜೋರಾಗಿಯೇ ಒದ್ದೆ.
who knows ? same 'window beauty' may ask me a lift now . hoping for the best.
=====
=====

23 comments:

  1. ನಿಮ್ಮ ಈ WONDERFUL ಬರಹ , ಆ SILENT ಹುಡುಗಿ , CHUK BUK ರೈಲು , ದೇವದಾಸನ ತಾರಾ ಇರೋ.. ಆ ನಿಮ್ಮ POEM ..... ನನ್ನ MOUTH ತಕ್ಕೊಂಡು ನಗೋ ರೀತಿ ಮಾಡ್ಬಿಡ್ತು ಕಣ್ರೀ..
    I ಎನ್ಜೋಯೇದ್ ಅ Lot

    ReplyDelete
  2. ಪ್ರೀತಿಯ ನಾಗೂ..

    ನನ್ನ ಕಾಲೇಜಿನ ದಿನಗಳು ನೆನಪಾದವು ಕಣೋ..

    ಆಗ ಎಲ್ಲರಿಗೂ ನಾನು "ಪ್ರಕಾಶಣ್ಣ" ಆಗೋಗಿದ್ದೆ..

    ವಯಸ್ಸಿನ ಸಹಜ ಹಂಬಲಗಳು..
    ಭಾವನೆಗಳು ತುಂಬಾ ಚಂದವಾಗಿ ವ್ಯಕ್ತವಾಗಿದೆ..

    ಇದರ ಸಂಗಡ " ಸಿಕ್ಕರೂ.. ಸಿಗದ ಅವಳ ಬಗೆಗೆ" ಒಂದು ಕವನವೂ ಇದ್ದರೆ..
    ಇನ್ನೂ ಮಜಾ ಬರ್ತಿತ್ತು..

    ಇದನ್ನು ಓದಿ ನನ್ನನ್ನು ನನ್ನ ಕಾಲೇಜುದಿನಗಳಿಗೆ ಕಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..

    ಅವಳೊಂದು ಕವನ ಅಲ್ಲ..

    ರಸಗವಳ... !!

    ReplyDelete
  3. @ಸಂದೀಪ್ : ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್,
    Its different :-)

    @ಪ್ರಕಾಶ್ ಮಾಮ : Thank u, thank u so much :-)
    ಅವಳಿಗೆಂದೇ ಬರೆದ ಕವನ ಬೇಕೂ ಅಂತಾನೆ ಹಾಕಿಲ್ಲ, ನನಗೆ ನಾಚಿಕೆ :-)

    ReplyDelete
  4. ತುಂಬಾ ಮಜವಾಗಿದೆ ... ಓದುತ್ತ ಹೋದಂಗೆ ಮುಗ್ದಿದ್ದೆ ಗೊತಾಗ್ಲಿಲ್ಲ ... ಚೆನ್ನಾಗಿದೆ ..
    ಅದರೂ ಆ ಹುಡುಗಿ ಸಿಕ್ಕಿದ್ರೆ ಇನ್ನು ಚೆನ್ನಾಗಿರದೇನೋ...
    ಬನ್ನಿ ನಮ್ಮನೆಗೂ
    http://chinmaysbhat.blogspot.com/


    ಇತಿ ನಿಮ್ಮನೆ ಹುಡುಗ
    ಚಿನ್ಮಯ್

    ReplyDelete
  5. ತುಂಬಾ ಚೆನ್ನಾಗಿದೆ. ಇದನ್ನು ಓದಿ ರಸ್ಕಿನ್ ಬಾಂಡ್ ಅವರ ಕಥೆಯೊಂದು ನೆನಪಾಯಿತು.

    ReplyDelete
  6. ಅರೆರೆ
    ಒಂಥರ ಚೆನ್ನಾಗಿದೆ..

    _ನನ್ನ ಬ್ಲಾಗಿಗೂ ಬನ್ನಿ.

    ReplyDelete
  7. @Mallanna : In that, Ruskin bond story, girl would be blind right ? yep, i know that. Thanks for comment and thanks for reminding the Ruskin's story.

    ReplyDelete
  8. ನಾಗರಾಜ,
    All the best next time. ಅಂದರೆ ಮತ್ತೊಂದು ಕವನ ಬರೆಯೋಕೆ best luck ಅಂತ! ಯಾಕಂತೀರಾ? ನಿಮಗೆ disappoint ಆದರೂ ಸಹ, ಓದ್ತಾ ಇದ್ದಂಗೆ ನನಗೆ ಸಕತ್ ಮಜಾ ಬಂತು! Sorry!

    ReplyDelete
  9. ಸುಲಲಿತವಾಗಿ ಓದಿಸಿಕೊ೦ಡು ಹೋಗುವ ಈ ಕಥಾನಕದ ರಸಿಕ-ರೋಚಕ ಶೈಲಿ ಇಷ್ಟವಾಯ್ತು, ನಾಗರಾಜ್. ಬಹಳ ದಿನವಾಗಿತ್ತು, ನಾನು ಬ್ಲಾಗ್ ನಿ೦ದ ದೂರವಿದ್ದು. ಇವತ್ತು ಮೊದಲಾಗಿ ನಿಮ್ಮ ಲೇಖನ ಓದಿ ಖುಶಿಗೊಳ್ಳುವ ಅವಕಾಶ ನನ್ನದಾಯ್ತು. ಹೀಗೆ ಬರೆಯುತ್ತಿರಿ.

    ReplyDelete
  10. @Sunaath sir: Thanks for wish. by next time, i try to make it success.

    @Paranjape sir: Thank u.

    ReplyDelete
  11. ನಾಗ್, ಬಲ್ ನನ್ ಮಗ ಅನ್ನಬೇಕು ಅನ್ನಿಸ್ತಾಇದೆ...ಹಹಹ ಎಲ್ಲಾ ಯುವ ಹೃದಯಗಳ ಪ್ರಸ್ತುತ ಗೀತೆಯನ್ನ ಬಹಳ ಪಸಂದಾಗಿ ಹಾಡಿದ್ದೀಯಾ,,,ಅಲ್ಲಲ್ಲ ಕಥಿತಗೊಳಿಸಿದ್ದೀಯಾ...ಅಲ್ಲಲ್ಲ ಕವನಿಸಿದ್ದೀಯ...ಛೇ...ಏನೋ ಒಂದು...ಒಟ್ನಲ್ ಪಸಂದಾಯ್ತ್ ಕಣ್ಮಗ...
    ಇಲ್ಲಿ ಗುಟ್ಟು ಎನು ಗೊತ್ತಾ...ವಯಸ್ಸಾದವರಿಗೆ ಈ ಹಾಡು ಪಥ್ಯ ಏನಲ್ಲಾ....ಅಯ್ಯೋ ಮನಸಲೇ ಮಂಡಿಗೆ ತಿನ್ನೋರಿಗೆ ಕಡಿಮೆ ಇಲ್ಲ...ಹಹಹಹ
    ಅಂತೂ ನೈಸ್..ಹೌದು ...ಸಿಕ್ಕಿದ್ಲ್ಲಾ ಆ ಕವನಿಕೆ....????

    ReplyDelete
  12. ಕವನವನ್ನು ಹಾಕಬೇಕಿತ್ತು...ಆಗಲಿ ಲೇಖನ ಚೆನ್ನಾಗಿದೆ...

    ReplyDelete
  13. @Azad sir: Thank u. I didn't see her again.

    @Sitaram sir : Poem, I can't :-) its only for that girl. Thank u

    ReplyDelete
  14. ಸರಾಗವಾಗಿ ಓದಿಸಿಕೊಳ್ಳುವ ಉತ್ತಮ ಶೈಲಿ, ಅಭಿನ೦ದನೆಗಳು. ಆದರೆ ಹಾಗೆ ಪಕ್ಕದಲ್ಲಿ ಕುಳಿತ ಹುಡುಗಿಯ ಬಗ್ಗೆ ಏನೇನೋ ಕನಸು ಕಾಣುವುದೂ....

    ReplyDelete
  15. @Prabhamani madam :: Thank u. plz, don't mistake me. its was just a fun write up and i think, its a feel of most youths who don't hav partners :-). thanks again

    ReplyDelete
  16. @Asha madam : welcome to penupaper. thanks for comments :-)

    ReplyDelete
  17. Naga tumbane Chennagide,,adre nange madya madya english sumne sikki hakondide anstu..

    ReplyDelete
  18. @Bhat :: while editing, those lines were not translated to Kannada. so, removed and put directly in English

    ReplyDelete
  19. ha ha ha... mast naagu...
    ellige hogtale bidu... sikke siktaale :P

    ReplyDelete
  20. sooper :)kannadadalli innond saari :P- thumbaa chennagide :)

    ReplyDelete