Oct 12, 2013

ಚಹಾದ ಘಮದಲ್ಲಿ ಮಾತಾಡಿದ್ದೆಲ್ಲ ಬರೀತಾ. .


ಗಿಜಿಗಿಜಿಯಿಲ್ಲದ ಮುಂಜಾನೆಯೋ ಮುಸ್ಸಂಜೆಯೊ ಬೀಸು ಗಾಳಿಗೆ ಮೈಯೊಡ್ಡಿ ಕೂತು ಗೆಳೆಯರೊಂದಿಗೆ ಹರಟುತ್ತಾ ಚಹಾ ಕುಡಿಯುವ ಸೊಗಸೇ ಬೇರೆ, ಅಲ್ವಾ ? ನಾವು ರಜೆಯಲ್ಲಿದ್ದರಂತೂ ಅದ್ಧೂರಿಯೇ. ಎಲ್ಲರಿಗೂ ತಮ್ಮದೇ ಆದ ಬೇಕುಗಳು  ಮತ್ತು ಬೇಸರಗಳಿರ್ತವೆ, ಬದುಕನ್ನ, ಖುಷಿಯನ್ನ, ನೋವುವನ್ನ ಇತ್ಯಾದಿ ಇತ್ಯಾದಿಗಳನ್ನ ಹಂಚಿಕೊಳ್ಳುವ ಅಭಿಲಾಷೆಗಳಿರ್ತವೆ ಹಾಗಾಗಿ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಕೊಡಬಹುದಾದ, ಕೊಟ್ಟರೆ ನಷ್ಟವಾಗದ  ಅತ್ಯಂತ ಬೆಲೆಬಾಳುವ, ಬದುಕು ಬದಲಾಯಿಸುವ ಮತ್ತು ನಾಲ್ಕು ಗೋಡೆಗಳ ಮಧ್ಯೆ ಜಮಾ ಮಾಡಿದರೆ ಕನಿಷ್ಠ ಬಡ್ಡಿಯೂ ಸಿಗದ ಒಡವೆ ಅಂದ್ರೆ ಅದು 'ಸಮಯ' - The TIME

' ನಾನು ಸ್ವಲ್ಪ ಬ್ಯುಸಿ, ಮತ್ತೆ ಸಿಗೋಣ' ಅನ್ನೋ ಮಾತನ್ನ ಒಪ್ಪಬಹುದು ಹಾಗೆ,ಇನ್ನೊಮ್ಮೆ ಭೇಟಿಯಾಗುವ ಪ್ರಯತ್ನಮಾಡಬಹುದು ಆದರೆ, 'ನನಗೆ ಟೈಮೇ ಇಲ್ಲ' ಅನ್ನೋದು ಶುದ್ದ ಸುಳ್ಳು ಅನ್ಸುತ್ತೆ.ಭೂಮಿಯಲ್ಲಿರೋ ಪ್ರತಿಯೊಂದು ಜೀವಿಗೂ ಇರೋದು ಇಪ್ಪತ್ನಾಲ್ಕು ಗಂಟೆಗಳಷ್ಟೇ. 
'ನನಗೆ ಟೈಮೇ ಇಲ್ಲ' ಅನ್ನೋ ಮಾತಿಗೆ 'ಟೈಮ್' ಒಂದೇ ಕಾರಣವಲ್ಲ ಅನ್ನೋದು ನಮಗೆ ಗೊತ್ತಿಲ್ಲದೆಯಿರಲ್ಲ. 
ಎಲ್ಲರು ಟೈಮಿಲ್ಲ ಅಂದಿದ್ರೆ ನಾವಿರುತ್ತಿರಲಿಲ್ಲ!! 
ಸಾಕು, ಇದಿಲ್ಲಿಗೆ ಸಾಕು. 

ಆಗಾಗ ಗೆಳೆಯರೊಂದಿಗೆ ಹರಟುತ್ತಾ ಬಿಸಿ ಬಿಸಿ ಚಹಾ ಹೀರುತ್ತಾ ಮಾತಾಡುವಾಗ , ಮಾತು ಮಾತಲ್ಲಿ ಮೂಡುವ ಮಾತುಗಳು , ಸಾಲುಗಳು ಖುಷಿ ಕೊಡುತ್ತವೆ, ಹಾಗೆ ಹುಟ್ಟಿಕೊಂಡ ಸಾಲುಗಳಿವು.  
ಓದಿ, ಗೆಳೆಯರೊಂದಿಗೆ ಹರಟಿ, ತರ್ಲೆ ಮಾಡಿ, ಅರ್ಥವನ್ನ ತಿರುಚಿ ಕೀಟಲೆ ಮಾಡಿ .. .ನಗುತಾಯಿರಿ.
 
ನಿಮಗೆ ಮತ್ತು ನಿಮ್ಮ ಮನೆಯರಿಗೆಲ್ಲ ದಸರಾ ಹಬ್ಬದ ಹಾರ್ದಿಕ ಶುಭಾಷಯಗಳು.
ಇನ್ನು ನೀವುಂಟು, ಆಡಿದ ಮಾತುಗಳುಂಟು . . ಈಗ 'ನಾನು ಸ್ವಲ್ಪ ಬ್ಯುಸಿ, ಮತ್ತೆ ಸಿಗೋಣ'

೧)
""ಕರಡಿ ಮೈಯಗಿನ ಕೂದಲು ಎಣಿಸಿದಂಗೆ ನೋವು 
ಸಾಗರದಾಳದ ಹೊಳೆವ ಮುತ್ತು ಸಿಕ್ಕಂಗೆ ಒಲವು, ನಲಿವು, ಗೆಲುವು ""

೨)
""ಅಂದುಕೊಂಡರೆ ಬದುಕು  ಕ್ಷಣಿಕ, ಸಾವು ಆಗಂತುಕ 
ಸಾಲ ಮಾಡಕ್ಯಾಕೆ? ಆತಂಕ 
ದುಡಿಯದ ಭಗವಂತನೂ ಕಂಡ ಕಂಡಲ್ಲಿ ಭಿಕ್ಷುಕ""

೩)
""ನಿಂತು ಹೋಯಿತೆನೋ ಎಂದುಕೊಂಡರೆ,
ಮತ್ತೆ ಮತ್ತೆ ಸುರಿಯುತಿದೆ ಮಳೆ 
ತಣ್ಣಗಾಗುತುದೆ ಇಳೆ 
ಎನ್ನೆದೆಯೊಳಗೆ ವಿರಹದ ಕೆಂಡದಾ ಮಳೆ 

ಸೀರೆಯುಟ್ಟು ,ಮುಂಗುರುಳ ಜಾರಿ ಬಿಟ್ಟು, 
ನೀರ ಹನಿಯಲಿ ಮಿಂದು ನನಗೆ ಕಾಣಬಾರದೆ ನೀರೆ 
ಮುತ್ತಿನ ಹನಿಯ ಪರದೆಯ ಸರಿಸಿ ದಾರಿ ಮಾಡುವೆ ಎದೆಯರಮನೆಗೆ 
ಕನಿಷ್ಠ, ಪರಿಶೀಲಗಾದರು ಒಮ್ಮೆ ಬಾರೆ 

ನಿಂತು ಹೋಯಿತೆನೋ ಎಂದುಕೊಂಡರೆ 
ಮತ್ತೆ ಮತ್ತೆ ಸುರಿಯುತಿದೆ ಮಳೆ 
ಸಹಜವಾಗಿ ಮೈ ತುಂಬಿಕೊಂಡಿದೆ ಭಾವದ ಬೆಳೆ ""

೪)
""ಪ್ರಳಯ ಆಗಬೇಕಿತ್ತು ಆಗಲಿಲ್ಲ 
ಯಾಕೆ ಗೊತ್ತ?
ನಾವಿಬ್ಬರೂ ಒಂದಾಗವುದೊಂದು ಬಾಕಿಯಿತ್ತು 
ನಮ್ಮಿಬ್ಬರ ಕಂಡಮೇಲೆ ಪ್ರಳಯವೂ ಸುಮ್ಮನಾಗಿದೆ 
ಏಕೆಂದರೆ,
ಅದಕೂ ಮನಸಿಲ್ಲ ""

Time is time, nothing can replace it. spend quality time with dears / nears and its a good feel, that's what I'm feeling now. Thanks for your time.
=====
=====

8 comments:

 1. ಸಮಯದ ಬಗ್ಗೆ ಮಹತ್ವದ ಮಾತು ಹೇಳಿದ್ದೀರಿ.. ಹಾಗೆಯೇ ಗೆಳೆಯರ ಚಹಾ ಚರ್ಚೆಯ ನಡುವೆ ಹುಟ್ಟಿಕೊಂಡ ಸಾಲುಗಳೂ ಅದ್ಭುತವಾಗಿವೆ

  ReplyDelete
 2. ಗೆಳೆಯರೊಂದಿಗೆ ಬಿಸಿ ಬಿಸಿ ಚಹಾ ಹಾಗು ಬಿಸಿ ಬಿಸಿ ಹರಟೆ ಇವು ಕೊಡೋ ಮಜಾನೇ ಬೇರೆ!

  ReplyDelete
 3. ಇಲ್ಲದ ಸಮಯದ ನಡುವೆ ಉಳಿದುಬಿಡುವ ಸಾಲುಗಳು !

  ಚಹಾದ ಹರಟೆಯೇ ಆದರೂ ತೂಕದ ಮಾತುಗಳು!

  ReplyDelete
 4. ತುಂಬಾನೇ ಇಷ್ಟವಾಯಿತು ಸರಾ.

  ReplyDelete
 5. ಸಮಯ ಮಾಡಿಕೊಂಡು ಪ್ರತಿಕ್ರಿಯೆ ನೀಡಬೇಕೆನಿಸಿತು... ಒಂದೇ ಸಮನೆ ಓದಿಸಿಕೊಂಡು ಹೋಯಿತು.. ಸಮಯವೂ ಕಡಿಮೆಯೇ ಸಾಕಾಯಿತು... ಸಾಲುಗಳು ಇಷ್ಟವಾದವು..

  ReplyDelete
 6. ಚನ್ನಾಗಿ ಬರೆದಿದ್ದೀರ...ಇಷ್ಟವಾಯ್ತು :)

  ReplyDelete