"ಕಟ್ಟ ಕಡೆಯ ಅಲೆ"
ಮೊಣಕಾಲಿನವರೆಗೆ ಪ್ಯಾಂಟು ಮಡಿಚಿ
ಈ ಕಿನಾರೆಯುದ್ದಕ್ಕೂ ನಡೆಯುತ್ತಿದ್ದೆವು
ಕಟ್ಟ ಕಡೆ ಅಲೆಗಳಲ್ಲಿ ಅವಳಿರುತ್ತಿದ್ದಳು
ಅವಳ ಕೈಹಿಡಿದು ನಾನು ಒಣ ಮರಳಲ್ಲಿ ನಡೆಯುತ್ತಿದ್ದೆ;
ಉಳಿಯುತ್ತಿದ್ದವು ನನ್ನ ಒಂಟಿ ಹೆಜ್ಜೆಗಳು
**
ಅಲೆಗಳು ಸೂಚನೆ ಕೊಟ್ಟಿದ್ದವು ಮೊದಲು
ನನ್ನೋಳಗಾಗ : ತಣ್ಣಗಿರಲಿ ನನ್ನವಳ ಅಂಗಾಲು
ಅದೇ ಕಿನಾರೆಯಲ್ಲಿ ನಾನೊಬ್ಬನೇ ನಡೆದು ಬಂದೆ
ಈಗಲೂ ನನ್ನ ಒಂಟಿ ಹೆಜ್ಜೆಗಳು
**
ಕಡೆಯ ಅಲೆಗಳಲ್ಲಿ ಕಾಲಿಳಿಬಿಟ್ಟು,
ಖಾಲಿ ನೀಲಿ ನೋಡುತ್ತಾ ಮಲಗಿರುವೆ
ನನ್ನ ಪಾದದ ಬಿಸಿಗೆ ಅದೆಷ್ಟೋ ಮರಳ ಹರಳುಗಳು ಒಣಗುತಿವೆ
ಅವಳು ಜೋತೆಗಿದ್ದಾಗಿನಂತೆ,
ಈಗಲೂ ಮನೆಗೆ ಹೋಗಬೇಕು !
ನನ್ನ ಅಪ್ಪಿಕೊಳ್ಳಲು ಬರುತ್ತಲಿದೆ ರಾತ್ರಿ
ಅವಳಿಗಿಂದು ಮೊದಲರಾತ್ರಿ
ಅದೆಲ್ಲಿಯದೋ ಗಟ್ಟಿಮೇಳ, ಶಹನಾಯಿ ಸದ್ದು
ಇನ್ನೂ ಕೇಳುತ್ತಲೇಯಿದೆ
ಸುಮ್ಮನೆ ಬೆಚ್ಚನೆಯ ಕಣ್ಣೀರು ಜಾರುತಿದೆ
=====
=====
Mar 9, 2011
Subscribe to:
Post Comments (Atom)
tumbaa ghaaDavaada kavana....
ReplyDeletechennaagide...
ಕೊನೆಗೂ ಉಳಿದದ್ದು ಒಂದೇ ಹೆಜ್ಜೆಯ ಗುರುತು.....
ReplyDeleteಅವಳ ಹೆಜ್ಜೆಗಾದರೂ ಒಂದು ಜೊತೆಯಾಯಿತಲ್ಲಾ....
ತುಂಬ ಚನ್ನಾಗಿದೆ....
@ದಿನಕರಣ್ಣ :: ಗಾಢತೆಯನ್ನ ಅನುಭವಿಸಿದ್ದಕ್ಕೆ ಥ್ಯಾಂಕ್ಸ್.
ReplyDelete@ಕನಸು ಕಂಗಳ ಹುಡುಗ :: ಹೌದು - ಅವಳ ಹೆಜ್ಜೆಗೊಂದು ಜೊತೆಯಾಯಿತು. ತುಂಬಾ ಥ್ಯಾಂಕ್ಸ್.
ನಾಗರಾಜರೆ,
ReplyDeleteಭಾವ ತುಂಬಿದ ಕವನ. ತುಂಬ ಚೆನ್ನಾಗಿದೆ.
nice poem.
ReplyDeleteclass!
ReplyDelete@Sunaath sir, Manamukta madam and Murthy sir :: Thanks lot
ReplyDeleteನಾಗರಾಜ್,
ReplyDeleteಇಡೀ ಕವನದಲ್ಲಿ ನಿಮ್ಮ ಒಂಟಿ ಹೆಜ್ಜೆಯ ಗುರುತಿನ ವಿಷಾದ ಎದ್ದು ಕಾಣುತ್ತದೆ..ನಿಮ್ಮ ಓದು ಮುಗಿದು ಒಳ್ಳೆಯ ಕೆಲಸ ಸಿಕ್ಕಿ ನಂತರ ನಿಮ್ಮದು ಜೋಡಿ ಹೆಜ್ಜೆಯಾಗಲಿ..
@ಶಿವಣ್ಣ :: ಥ್ಯಾಂಕ್ಸ್, ಆದರೆ ಇನ್ನೂ ಒಂಟಿ ಹೆಜ್ಜೆಯಾಗಿರುವುದಕ್ಕೆ ವಿಷಾದ ಇಲ್ಲ :-)
ReplyDeletechennagide kavana...
ReplyDeleteexcellent one naagu...
ReplyDelete@Shivaprakash : Thank you.
ReplyDeletesuperb..........
ReplyDeletesakath ishta aithu........:):)
ಜೊತೆ ನಡೆದ ಹೆಜ್ಜೆಗಳು ದೂರವಾದಾಗ ಮನಸಿಗಾಗುವ ಹತಾಶೆ , ನಿರಾಸೆ ಯ ಭಾವನೆಗಳು ಕವನದಲ್ಲಿ ತುಂಬಾ ಚೆನ್ನಾಗಿ ವ್ಯಕ್ತವಾಗಿವೆ. ತುಂಬಾ ಒಳ್ಳೆಯ ಕವನ.
ReplyDelete