ತುಟಿಯ ಹಸಿವು ಸಹಿಸಲಾಗದೆ,
ಒಂದು ಶಕ್ತಿಯುತವಾದ ಮುತ್ತಿಗೆ ಪರಿತಪಿಸುವ ಅವಳು.
ಭಯ ಮಿಶ್ರಿತ ಕಂಪನದಲ್ಲಿ ಸಿಗರೇಟು ಹಚ್ಚುವ ನಾನು.
ಬೆಂಕಿಕಡ್ಡಿಯ ಬೆಂಕಿಯಂತೆ,
ನನ್ನ ಸುಡುವಂತೆ ನೋಡುವ ಅವಳು.
ನನ್ನ ಸಂಕಟ ನನಗೆ - ನಡುಗುವ ಹೋಗೆ ಬಿಡುವ ನಾನು.
'ಏನೋ ಯೋಚನೆ ಮಾಡ್ತಿದಿಯಾ, ರಾಕ್ಷಸ ?' ಅನ್ನುವ ಅವಳು.
ತಲೆ ಅಲ್ಲಾಡಿಸಿ ಮತ್ತದೇ ಹೋಗೆ ಬಿಡುವ ನಾನು.
ತುಟಿಯಂಚಿಗೆ ಬೆರಳೊಯ್ದರೆನೆ ಕಚ್ಚುವ ಹುಡುಗಿ, ಅವಳು.
'ಇನ್ನು ಮುತ್ತಿಟ್ಟರೆ ಗತಿ ಏನು ?' ಅಂದುಕೊಳ್ಳುವ ನಾನು.
ಜಿಟಿಗುಡುವ ಮಳೆಯ ಸಂಜೆ,
ಮರದಡಿಯಲ್ಲಿ ನಿಂತಿದ್ದೇವೆ ಅವಳು-ನಾನು.
ಅವಳ ಬಿಸಿಯುಸಿರ ನಡುವೆ ಇನ್ನೊಂದು ಸಿಗರೇಟು ಹಚ್ಚಿಕೊಂಡೆ ನಾನು.
ಇನ್ನೂ ಕಾಯುತ್ತಿದ್ದಾಳೆ ಅವಳು.
ಹನಿಗಳು ಮಣ್ಣಿಗೆ ಮುತ್ತಿಡ್ತಾಯಿವೆ--ಸುಮ್ನೆ ನೋಡ್ತಾಯಿದಿನಿ ನಾನು.
ಇನ್ನೇನು, ಕೆಲವು ಕ್ಷಣಗಳಲ್ಲಿ ಮಹಾಸ್ಪೋಟ -ಅವಳು.
ಖಾಲಿ ಖಾಲಿ ಬರೀ ಖಾಲಿ ನಾನು.
=====
=====
Apr 20, 2011
Subscribe to:
Post Comments (Atom)
Good one...
ReplyDeleteಉತ್ತಮವಾದ, ಸ್ವಾರಸ್ಯಪೂರ್ಣ ಕವನ. ಇನ್ನು ಮೇಲೆ ಅವಳ ಬೆಂಕಿ ನಿಮ್ಮಲ್ಲೂ ಹತ್ತಿಕೊಳ್ಳಲಿ ಎಂದು ಹಾರೈಸುತ್ತೇನೆ!
ReplyDeleteKiss her yaaar...!!!
ReplyDeleteನಿಮಗೂ ಆ ತುಟಿಯ ಹಸಿವು ಗೊತ್ತಾಗಲಿ
vaaw...
ReplyDeletecool man.... very nice one...
hahaha nice one
ReplyDeleteKhatarnaak Interesting kavana..!!
ReplyDeleteNeevu prarambhisuvaaga balasikonda kalpane superb sir..
ReplyDeleteNice............:)
ReplyDelete@ಚೇತನಾ ಮೇಡಂ: ಥ್ಯಾಂಕ್ಯು
ReplyDelete@ಸುನಾಥ ಸರ್ : ಥ್ಯಾಂಕ್ಯು ಮತ್ತು ನಿಮ್ಮ ಹಾರೈಕೆಗೆ ತುಂಬಾ ಥ್ಯಾಂಕ್ಸ್
@ಭಾಶೆ : अरे यार, क्या बात कर रही है ,ಥ್ಯಾಂಕ್ಯು
@ದಿನಕರಣ್ಣ : ಥ್ಯಾಂಕ್ಯು, ya its raining! so cool
@ಸುಗುಣಕ್ಕ : ಥ್ಯಾಂಕ್ಸ್ ಅಕ್ಕೋ
@ಪ್ರದೀಪ್ : ವಯಸ್ಸು ಗುರುವೇ interesting ಆಗದೆ ಏನು
@ವಿಚಲಿತ : ಇದು ಬರೀ ಕಲ್ಪನೆ ಅಂತ ಗೊತ್ತಾಗಿ ಹೊಯ್ತ ?
hurted man. ಥ್ಯಾಂಕ್ಯು.
@ಕಾವ್ಯ : ದೊಡ್ಡ ಥ್ಯಾಂಕ್ಸ್ ಮೇಡಂ
nice poem ,abhinandanegalu
ReplyDeleteನಾಗರಾಜ್,
ReplyDeleteಇದು ನಿಮ್ಮದೇ ಅನುಭವನಾ? ಗಾಢವಾಗಿ ಬರೆದಂತಿದೆ..
Ohhhhhh!!! Naga,
ReplyDeleteits
Keep It Short & Sweet ;)
Right :)
very cute...
@Kalarava: thanks
ReplyDelete@Shivanna: Anna, adannella helangilla :-)
@Aarthy: ok ok, Thank you
@V R Bhat: Thank you sir