Oct 11, 2010

"ಮಳೆಗೊಂದು ಮಾತು"

ಸುರಿವ ಮಳೆಯೇ ಸಾಕು
ಏಕೆ ನಿನ್ನೀ ಹಠ ?
ನೀನೆಷ್ಟೇ ಸುರಿದರು ನನ್ನ ತಣಿಸಲಾರೆ,
ಗಾಯವನ್ನ ಗುಣಪಡಿಸಲಾರೆ.

ಭೋರ್ಗರೆದ ಮಳೆಯಿಂದ
ಹಳೆಯ ಮನೆಗಳೆಲ್ಲ ಕುಸಿದಂತೆ
ನೋವಿನ ಮನೆ ಕುಸಿಯದು.
ಮರ-ಗಿಡಗಳ ಬದುಕಿಸಲು
ಸುರಿದು ನೀನು, ಕಾಡ್ಗಿಚ್ಚನ್ನು ಆರಿಸಬಹುದು.
ದಿವ್ಯ ತಿರಸ್ಕಾರದಿಂದ, ಮನದಲಿ
ಹೊತ್ತಿ ಉರಿಯುತಿರುವ ಜ್ವಾಲೆಯ ನೀ ಆರಿಸಲಾರೆ.

ಮಳೆಯೇ,
ನೀನು ರೈತನ ಕಷ್ಟ ಮರೆಮಾಡಬಹುದು,
ನನ್ನ ಕಣ್ಣಂಚಿನ ನೋವು ಮರೆಮಾಡಬಹುದು.
ನನ್ನ ಹೃದಯದೊಳಗೆ ಕಾಣದಿರುವ ಕಣ್ಣೀರ ನೀ
ಅನುಭವಿಸಲಾರೆ, ಮರೆಮಾಡಲಾರೆ.
ದಯಮಾಡಿ ಸುಮ್ಮನಾಗು

ಸತತವಾಗಿ ಸುರಿದು
ನಾನೇ ಉರಿಸಿ, ಆರಿಸಿ ಎಸೆದ
ಸಿಗರೇಟಿನ ತುಂಡುಗಳನ್ನ,
ಕಾಗದದ ದೋಣಿಯಂತೆ ತೇಲಿಸಬಹುದು.
ಆಸೆಗಳು ನುಚ್ಚುನೂರಾದ ಎದೆಯೊಳಗೆ
ನಿರಂತರವಾಗಿ ಕುದಿಯುವ ಲಾವರಸವಿದೆ !
ನೀನೆಷ್ಟೇ ಸುರಿದರೂ, ಏನೂ ಆಗದು.

ಮಳೆಯೇ ನಿನ್ನದು
ಪಲಿತಾಂಶವಿರದ ಪ್ರಯತ್ನ.
ನಿನಗೆ, ನನ್ನದೊಂದು ವ್ಯಂಗ್ಯನಗು.
ಇನ್ನು ನಿನ್ನಿಷ್ಟ.

=====
=====

16 comments:

  1. Superb lines.......:) end is wonderful.....:)

    ReplyDelete
  2. ಸುರಿವ ಮಳೆಯ ಧಾರಾಕಾರಣೆಗೂ ನಿಮ್ಮ ಮನಸ್ಸಿನ ನೋವು-ವಿಷಾದಕ್ಕೂ ಅದ್ಬುತವೆನಿಸುವ ತಾಕಲಾಟ... ಎರಡೂ ಕಡೆಯಲ್ಲಿ ಸುಂದರ ಚಿತ್ರಗಳನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದೀರಿ...ತುಂಭಾ ಚೆನ್ನಾಗಿದೆ ತಲುಪಿದೆ ಕವನ.

    ReplyDelete
  3. ನಾಗರಾಜ್;ಒಳ್ಳೆಯ ಕವನ.ಪ್ರಯತ್ನ ಮುಂದುವರಿಯಲಿ.ಧನ್ಯವಾದಗಳು.

    ReplyDelete
  4. ಮಳೆಯ ಕವಿತೆ ಯಲ್ಲಿ ನೆನೆದು ಒದ್ದೆಯಾಗಿದ್ದೇನೆ !!! ಸುಂದರ ಕವಿತೆ ಥ್ಯಾಂಕ್ಸ್.

    ReplyDelete
  5. WOW! Superb!

    Very meaningful and very nice!

    ReplyDelete
  6. ಸೊಗಸಾದ ಮಳೆ ಕವನ .ಚೆನ್ನಾಗಿದೆ

    ReplyDelete
  7. ಚ೦ದ ಬರೆದಿದ್ದೀರಿ..
    ಮಳೆಯಲ್ಲೇ ಇದ್ದರೆ ಗಾಯದ ಹಸಿ ಆರದು..
    ಬಿಸಿಲಿಗೆ ಬ೦ದು ನೋಡಿ.. ಗಾಯ ಒಣಗೀತು...

    ReplyDelete
  8. ನಾಗರಾಜ್,
    ಮಳೆ ಅಂದ್ರೆ ಎಲ್ಲರಿಗೂ ಇಷ್ಟ
    ಆದರೆ ನಿಮಗ್ಯಾಕೆ ಸ್ವಲ್ಪ ಕಷ್ಟ?
    ಒಂದಂತೂ ಸ್ಪಷ್ಟ
    ಕವನದ ಶೈಲಿ ವಿಶಿಷ್ಟ!

    ತುಂಬಾ ಚನ್ನಾಗಿದೆ.

    ReplyDelete
  9. Chennagide kavana anna..

    ReplyDelete
  10. Awesome...... awesome.......... awesome........
    Thats all i can say... Aurthy :)

    ReplyDelete
  11. kavana superb ... end antu adbhuta!! :)

    ReplyDelete
  12. ನನ್ನ ಮಾತುಗಳನ್ನ ಮಳೆ ಕೇಳಿತಾ ಇಲ್ಲವಾ ಗೊತ್ತಿಲ್ಲ ಆದ್ರೆ ಕೇಳಿಸಿಕೊಂಡ ನಿಮಗೆಲ್ಲಾ ಥ್ಯಾಂಕ್ಸ್ . . .
    ನಿಮ್ಮ ಪ್ರೋತ್ಸಾಹ ಹೀಗೆ ಇರಲಿ . . .

    ReplyDelete
  13. ಮಳೆಗೆ , ನೀ ಮಾಡಲಾರೆ ಎಂದು ವ್ಯಂಗ್ಯ ಮಾಡಿ ಹೇಳಿದ ನಿಮ್ಮ ಕವಿತೆಗೆ ಆ ಶಕ್ತಿ ಇದೆ :)ಅದ್ಭುತವಾಗಿದೆ ನಿಮ್ಮ ಕವಿತೆ :)

    ReplyDelete