Mar 9, 2011

"ಕಟ್ಟ ಕಡೆಯ ಅಲೆ"

ಮೊಣಕಾಲಿನವರೆಗೆ ಪ್ಯಾಂಟು ಮಡಿಚಿ
ಈ ಕಿನಾರೆಯುದ್ದಕ್ಕೂ ನಡೆಯುತ್ತಿದ್ದೆವು

ಕಟ್ಟ ಕಡೆ ಅಲೆಗಳಲ್ಲಿ ಅವಳಿರುತ್ತಿದ್ದಳು
ಅವಳ ಕೈಹಿಡಿದು ನಾನು ಒಣ ಮರಳಲ್ಲಿ ನಡೆಯುತ್ತಿದ್ದೆ;
ಉಳಿಯುತ್ತಿದ್ದವು ನನ್ನ ಒಂಟಿ ಹೆಜ್ಜೆಗಳು
**
ಅಲೆಗಳು ಸೂಚನೆ ಕೊಟ್ಟಿದ್ದವು ಮೊದಲು
ನನ್ನೋಳಗಾಗ : ತಣ್ಣಗಿರಲಿ ನನ್ನವಳ ಅಂಗಾಲು


ಅದೇ ಕಿನಾರೆಯಲ್ಲಿ ನಾನೊಬ್ಬನೇ ನಡೆದು ಬಂದೆ
ಈಗಲೂ ನನ್ನ ಒಂಟಿ ಹೆಜ್ಜೆಗಳು
**
ಕಡೆಯ ಅಲೆಗಳಲ್ಲಿ ಕಾಲಿಳಿಬಿಟ್ಟು,
ಖಾಲಿ ನೀಲಿ ನೋಡುತ್ತಾ ಮಲಗಿರುವೆ
ನನ್ನ ಪಾದದ ಬಿಸಿಗೆ ಅದೆಷ್ಟೋ ಮರಳ ಹರಳುಗಳು ಒಣಗುತಿವೆ

ಅವಳು ಜೋತೆಗಿದ್ದಾಗಿನಂತೆ,
ಈಗಲೂ ಮನೆಗೆ ಹೋಗಬೇಕು !
ನನ್ನ ಅಪ್ಪಿಕೊಳ್ಳಲು ಬರುತ್ತಲಿದೆ ರಾತ್ರಿ
ಅವಳಿಗಿಂದು ಮೊದಲರಾತ್ರಿ

ಅದೆಲ್ಲಿಯದೋ ಗಟ್ಟಿಮೇಳ, ಶಹನಾಯಿ ಸದ್ದು
ಇನ್ನೂ ಕೇಳುತ್ತಲೇಯಿದೆ
ಸುಮ್ಮನೆ ಬೆಚ್ಚನೆಯ ಕಣ್ಣೀರು ಜಾರುತಿದೆ

=====
=====

14 comments:

  1. ಕೊನೆಗೂ ಉಳಿದದ್ದು ಒಂದೇ ಹೆಜ್ಜೆಯ ಗುರುತು.....
    ಅವಳ ಹೆಜ್ಜೆಗಾದರೂ ಒಂದು ಜೊತೆಯಾಯಿತಲ್ಲಾ....

    ತುಂಬ ಚನ್ನಾಗಿದೆ....

    ReplyDelete
  2. @ದಿನಕರಣ್ಣ :: ಗಾಢತೆಯನ್ನ ಅನುಭವಿಸಿದ್ದಕ್ಕೆ ಥ್ಯಾಂಕ್ಸ್.

    @ಕನಸು ಕಂಗಳ ಹುಡುಗ :: ಹೌದು - ಅವಳ ಹೆಜ್ಜೆಗೊಂದು ಜೊತೆಯಾಯಿತು. ತುಂಬಾ ಥ್ಯಾಂಕ್ಸ್.

    ReplyDelete
  3. ನಾಗರಾಜರೆ,
    ಭಾವ ತುಂಬಿದ ಕವನ. ತುಂಬ ಚೆನ್ನಾಗಿದೆ.

    ReplyDelete
  4. @Sunaath sir, Manamukta madam and Murthy sir :: Thanks lot

    ReplyDelete
  5. ನಾಗರಾಜ್,

    ಇಡೀ ಕವನದಲ್ಲಿ ನಿಮ್ಮ ಒಂಟಿ ಹೆಜ್ಜೆಯ ಗುರುತಿನ ವಿಷಾದ ಎದ್ದು ಕಾಣುತ್ತದೆ..ನಿಮ್ಮ ಓದು ಮುಗಿದು ಒಳ್ಳೆಯ ಕೆಲಸ ಸಿಕ್ಕಿ ನಂತರ ನಿಮ್ಮದು ಜೋಡಿ ಹೆಜ್ಜೆಯಾಗಲಿ..

    ReplyDelete
  6. @ಶಿವಣ್ಣ :: ಥ್ಯಾಂಕ್ಸ್, ಆದರೆ ಇನ್ನೂ ಒಂಟಿ ಹೆಜ್ಜೆಯಾಗಿರುವುದಕ್ಕೆ ವಿಷಾದ ಇಲ್ಲ :-)

    ReplyDelete
  7. superb..........
    sakath ishta aithu........:):)

    ReplyDelete
  8. ಜೊತೆ ನಡೆದ ಹೆಜ್ಜೆಗಳು ದೂರವಾದಾಗ ಮನಸಿಗಾಗುವ ಹತಾಶೆ , ನಿರಾಸೆ ಯ ಭಾವನೆಗಳು ಕವನದಲ್ಲಿ ತುಂಬಾ ಚೆನ್ನಾಗಿ ವ್ಯಕ್ತವಾಗಿವೆ. ತುಂಬಾ ಒಳ್ಳೆಯ ಕವನ.

    ReplyDelete