Mar 30, 2011

"ರೆಕ್ಕೆ ಬಿಚ್ಚಿತಷ್ಟೆ"--> ಕೈಜಾರುತಿದೆ ಲೇಖನಿ, ನಿದಿರೆಗೆ ಸೋತು. ನಡೆಯುತಿದೆ ಒಳಗೆ ನಿಚ್ಚಳವಾಗಿ ಕಣ್ತೆರೆಸುವ ಕಸರತ್ತು - ಸಡಿಲಾಗದ ಪಟ್ಟು. ಬೆರಳ ಬಿಸುಪಿಗೂ ನಿಲ್ಲುತ್ತಿಲ್ಲ ಲೇಖನಿ, ಮಲಗಲು ಸಾಯುತಿದೆ ನನ್ನೊಬ್ಬನನ್ನೇ - ಪರದಾಡಲು ಬಿಟ್ಟು. ಇದು ಇಷ್ಟ, ಆದರೂ ಕಷ್ಟ! ಮೈಯ ಬಿಚ್ಚಿಟ್ಟು, ಲೇಖನಿಯ ಕಾಯಲೇಬೇಕು ಕಾವು ಕೊಟ್ಟು; ಆಳಕಿಳಿದರೆ ಸಿಕ್ಕೀತು ನುಡಿಗಟ್ಟು. ಬರೆಯಬೇಕಾದದ್ದು ಸ್ಪಷ್ಟ - ಕೊಡಬೇಕಾದ ಮುತ್ತಿನಂತೆ. ಮುನಿದು ಜಾರಿದರೇನು ಲೇಖನಿ, ಅದು ಮುಂಜಾವಿಗೆ ಕೈಸೇರುವ ಹನಿ - ಅದೃಷ್ಟ. ಶೀಘ್ರಸ್ಖಲನವಾಗುವುದೇನೋ ? - ಆದರೇನು ? ಜಾರದು ಪದ, ಹದ್ದು ಮೀರದು ಹದ - ಮೊದಲೇ ರೆಕ್ಕೆ ಬಿಚ್ಚಿತಷ್ಟೆ ! !

25 comments:

  1. ಕೈಜಾರಿದರೇನಾಯ್ತು ಲೇಖನಿ? ನಿಮ್ಮ ಶೈಲಿ ಅಪೂರ್ವವಾಗಿದೆ!

    ReplyDelete
  2. ತು೦ಬಾ ಚೆನ್ನಾಗಿದೆ ನಾಗರಾಜ್

    ReplyDelete
  3. ವಿಭಿನ್ನ ಶೈಲಿಯ ಬರವಣಿಗೆ... ಕೈಜಾರಿದರೂ ಎಚ್ಚರಿಸುವುದು...

    ReplyDelete
  4. nice sir ... its very true ... good poems are came at late night... its my experience ..

    ReplyDelete
  5. @Nannolagina kanasu :: Thank you and plz no SIR business just call me Nagaraj :-)

    ReplyDelete
  6. ಮೇಲೆ ನೋಡಿದರೆ ಕ್ಲಿಷ್ಟ ಪದಗಳು, ಸುಲಭವಾಗಿ ಜೀರ್ಣವಾಗದ ಸಾಲುಗಳು.
    ಒಳಗಿಳಿದರೆ ಮಾತ್ರ ಅದ್ಭುತ ಅರ್ಥ ಕೊಡುತ್ತವೆ.
    Different one... Thumps Up Naga :-)

    ReplyDelete
  7. ಲೇಖನಿ ಕೈ ಜಾರಿದರೇನು,
    ಮನದೊಳಗಿನ ಭಾವ ಮತ್ತು ಭಾವನೆಗಳು,
    ಹೃದಯದ ಮಾತುಗಳು ಎಂದೂ ಜಾರುವುದಿಲ್ಲವಲ್ಲ

    ReplyDelete
  8. @Giri : Exactly; It also says that, chosen path to achieve something may fail or may be it is conquered much earlier but purpose remains the same. Thank u

    @Dinakaranna : Anna, Thanks

    ReplyDelete
  9. ಸೊಗಸಾಗಿದೆ.....ತುಂಬಾ ಇಷ್ಟವಾಯಿತು.

    ReplyDelete
  10. ನಾಗರಾಜ್,
    ಬರಹ ಚೆನ್ನಾಗಿದೆ..ಆದ್ರೆ ಕವನದ ರೂಪದಲ್ಲಿದ್ದರೆ ಚೆನ್ನಾಗಿತ್ತೇನೋ ಅನ್ನಿಸಿತ್ತು..

    ReplyDelete
  11. @Shivanna :: Thanks, nAnu kavana rUpadalle baredaddu Adhre hIge mUdide.

    @Sitaram Sir :: Thank you

    ReplyDelete
  12. nimma blog ge nanna modala bheti.. Sundara taana...nimma barahagalu ishtavadavu...

    ReplyDelete
  13. @Ashok sir : Hearty Well Come. Thank you very much, plz keep visiting.

    ReplyDelete
  14. Fantastic nagarj, i missed them all:-( long before i could have read them:-) all the very best!!!

    ReplyDelete
  15. ಚೆನ್ನಾಗಿದೆ ..........:)

    ReplyDelete
  16. ತುಂಬಾ ಚೆನ್ನಾಗಿದೆ ನಾಗಾರಜ್ ...
    ಆಳಕಿಳಿದರೆ ಸಿಕ್ಕೀತು ಮುತ್ತು
    ಆಳಕಿಳಿಯುವುದು ಕಷ್ಟ ..ಆದರೂ ಇಷ್ಟ .
    ತುಂಬಾ ಚೆನ್ನಾಗಿದೆ.

    ReplyDelete