May 9, 2013

"ಆಕೀ,ಗೋರಿ ಮ್ಯಾಗಿನ ಹಳದಿ ಹೂವು"


ಚೆಲ್ವಿನ ಮಾತಿಗೆ ಮನಸು 
ಮಳ್ಯಾಗ ತೋದ ಮಣ್ಣಾತ 
ಚಿಗರೋಡ್ಯಾಕ ಸಜ್ಜಾತ 

ಚಂದನ ಮಾತಿನ ಮತ್ತೇ ಮತ್ತು
ಬರೀ ಮಾತಿಗದೇನು ಗೊತ್ತು
ಹಗಲು ನುಂಗಿ ನಗೋ ಚಂದ್ರಾಮನ ತಂಗಿ ಮಾತು
ಸೊಗಸಿಗೆ ಹೆಸರು ಇನ್ನೊಂದಾತು

ಬಂದ ಬಂದಾಕಿನ ಎದಿ ಚಿವುಟಿ 
ಒಳಗ ನಕ್ಕೋತ ಕುಂತ್ಳು 
ಗರ್ಭಗುಡ್ಯಾಗ ದೇವಿ ಕುಂತಂಗ
ಬೆಳಕಿನಂತಾಕಿಗೆ ಗಾಳಿಗಾರಿ ಹೋಗೋ ದೀಪ ಯಾಕ ಬೇಕು ?
ನಾ ಮುತ್ತಿನಾರತಿ ಮಾಡಿದ್ರ  ಸಾಕು

ಆ ನಗಿನ ನಗಿ, ನನಗಾಗಿ
ನಾ ಕರಗಿ ಹೋಗ್ಬಕು ಅಂತಾ ನಗಿ
ಮುಗಲು ಹರದ ಬಿದ್ದಂತಾ ಮಳಿ ಬಂತು
ಮಳ್ಯಾಗ ತೋದ ಚಿನ್ನದಂತಾ ಮೈಯಿ
ಥಂಡಿ ರಾತ್ರಿ, ಕ್ವಾಣ್ಯಾಗ ಕೆಂಡ ನಿಗಿ ನಿಗಿ 

ಅಕಿದು, ಆಟನ ಆಟ
ಹಾವು -ಏಣಿ ಆಟ
ಚದುರಂಗದಾಟದಾಗ ನುಗ್ಗಿ ಬರೋ ರಾತ್ರಿರಾಣಿ ಜಾತಕ
=====
=====

4 comments:

  1. ಭಲ್ ಚಂದೈತಿ ನಿಮ್ ಕವನ :)

    ReplyDelete
  2. thumba cute!!!
    Aurthy :)

    ReplyDelete
  3. "ಬೆಳಕಿನಂತಾಕಿಗೆ ಗಾಳಿಗಾರಿ ಹೋಗೋ ದೀಪ ಯಾಕ ಬೇಕು ?" ವಾವ್. ಮನಸ್ಸಿಗೆ ಗಾಢ ಪರಿಣಾಮ ಬೀರಿದ ಕವನ.

    ReplyDelete
  4. ಚೆಂದ ಅದಾರಿ :-)

    ReplyDelete