Apr 7, 2010

"ನಿನ್ನ ಹೆಸರೇನು ?"



ಒಂಟಿ ಬಿಸಿಹೃದಯದ ಅಂತರಾಳದಲ್ಲಿ

ಆಗೊಮ್ಮೆ ಈಗೊಮ್ಮೆ ಸುಂಯ್ಯನೆ ಬೀಸುವ ತಂಪಿಗೆ,

ಬಯಸಿ ಹಡೆಯುವ ಬಯಕೆಯೇ !

ಯಾರು ನೀನು ?

ನನ್ನೊಳಗಿರುವ ನಿನಗೊಂದು ಹೆಸರಿಲ್ಲವೇ ?

ಯಾರಾದರು ಕೇಳಿದರೆ ಹೇಳಬೇಡವೆ ?

ಅದಾವ ನಿನ್ನ ಸ್ಪರ್ಶವದು ?

ನನಗೆ ತಿಳಿಯದಂತೆ

ನನ್ನ ಅಂತರ್ಮುಖಿಯನ್ನಾಗಿಸುವುದು !

ಸಾಗರ ನೋಡುವ ಕಣ್ಣೊಳಗೆ

ನೋಟವಿರದೆ !

ನೋಟವೆಲ್ಲ ಎದೆಯಲೆಗಳಲಿ

ತೆಲಾಡುವುದು.

ಬೆಳ್ಳಕ್ಕಿಗೆಳಿ ಬೆಳ್ಳನೆ ಉಂಗುರ ತೊಡಿಸುವೆ.

ಹೊಳೆದಂಡೆಯಲಿ, ಪಾಪಸಕಳ್ಳಿ ಹಣ್ಣ

ಮುಳ್ಳು ತೆಗೆದು ತಿನ್ನಿಸುವೆ.

ತಿಳಿ ನೀಲಿ ಕಣ್ಣಿನ

ಕೆಂಪು ಲಂಗದ ಹೂವೆ.

ನೀನು ಯಾರೇ ?

ನನ್ನೊಳಗಿರುವ ನಿನಗೊಂದು ಹೆಸರಿಲ್ಲವೇನೆ ?

ಯಾರಾದರು ಕೇಳಿದರೆ ನಾನು

ಹಸಿ ನಾಚಿಕೆ ನಗುವಿನಲ್ಲಿ

ನಿನ್ನ ಹೆಸರ ಹೇಳಬೇಡವೆ ?


=====
=====

8 comments:

  1. 'ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು ' .ಕೆ.ಎಸ್.ನರಸಿಂಹಸ್ವಾಮಿ ಯವರ ಗೀತೆ ನೆನಪಿಗೆ ಬಂತು .ಕವನ ಚೆನ್ನಾಗಿದೆ.

    ReplyDelete
  2. ತುಂಬಾ ಅರ್ಥಪೂರ್ಣ ಸುಂದರ ಕವನ
    ಆಶಯ ತುಂಬಾ ಚೆನ್ನಾಗಿದೆ

    ReplyDelete
  3. ಕೃಷ್ಣಮೂರ್ತಿಯವರಿಗೆ ಮತ್ತು ಸಾಗರದಾಚೆಯ ಇಂಚರಕ್ಕೂ ತುಂಬು ಹೃದಯದ ಧನ್ಯವಾದಗಳು
    ಪೆನ್ನುಪಪೆರ್ ಗೆ ನಿಮ್ಮ ಪ್ರೋತ್ಸಾಹ ಸದಾ ಸಿಗಲಿ

    ReplyDelete
  4. ಕವನ ತು೦ಬಾ ಚೆನ್ನಾಗಿದೆ.

    ReplyDelete
  5. ಸುಮಧುರವಾಗಿದೆ ಭಾವನೆಗಳು.

    ReplyDelete
  6. ಅಹಾ !. ಪ್ರೇಮಗೀತೆಗಳು ಇನ್ನಷ್ಟು ಬರಲಿ. ಚೆನ್ನಾಗಿದೆ.

    ReplyDelete
  7. @ ಮನಮುಕ್ತಾ, ಸಾಗರಿ ಮತ್ತು ಸುಬ್ರಮಣ್ಯವರಿಗೆ ತುಂಬಾ ಧನ್ಯವಾದಗಳು.
    ಪೆನ್ನುಪಪೆರ್ ಲೋಕಕ್ಕೆ ನಿಮಗೆ ಸ್ವಾಗತ.
    ನಿಮ್ಮ ಪ್ರೋತ್ಸಾಹ ಪೆನ್ನುಪೇಪರ್ ಗೆ ಸದಾ ಸಿಗಲಿ.

    ReplyDelete
  8. ಹೆಸರು ಹೇಳಲು ಹಸಿ ನಾಚಿಕೆಯೇ?
    Naga chennagide kavana.

    ReplyDelete