Sep 30, 2010

ಜಿಂದಗಿ ಬಡೀ ಹೋನಿ ಚಾಹಿಯೇ, ಲಂಬೀ ನಹಿ..!




ಹೌದು
, "ಜೀವನ ದೊಡ್ಡದಾಗಿರಬೇಕು, ಉದ್ದ ಅಲ್ಲಾ..!"
ಈ ಸಾಲು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯ ಬಹುದು..


ಮತ್ತೊಮ್ಮೆ ಮಗದೊಮ್ಮೆ ಓದಿದರೆ, ಕೇಳಿದರೆ, ಖಂಡಿತ ಅರ್ಥ ಆಗುತ್ತೆ..!!


ಸುಮ್ನೆ ಯೋಚನೆ ಮಾಡಿ, ನಿಮಗೆ ಒಂದು ವಾರದಿಂದ 'ನೆಗಡಿ',,
ಏನೇ ಮಾತ್ರೆ ತೊಗೊಂಡ್ರು, ಮತ್ತೊಂದು ಮಾಡಿದರು ಮೂಗಿನ ಜಲಪಾತ ನಿಲ್ತಾಯಿಲ್ಲ ..!

ನೆಗಡಿ ಬೇಡ, ಬೆನ್ನು ಇಲ್ಲಾ ಸೊಂಟ ನೋವು, ಹೋಗ್ಲಿ ಅವು ಯಾವೂ ಬೇಡಾ..
ಬೆಳಿಗ್ಗೆ ಇಂದ ಕತ್ತು ನೋವು, ಎಡ-ಬಲ, ಮೇಲೆ-ಕೆಳಗೆ, ಏನ ಮಾಡಿದ್ರು ನೋವು ನೋವು..!!


ಈ ಸಮಯದಲ್ಲಿ,
ನೀವು-ನಾವು ಕೊಡುವ ಒಂದು ಸಾಮಾನ್ಯವಾದ ಹೇಳಿಕೆ: "ಏನೇ ಬರಲಿ, ಈ ನೆಗಡಿ ಮಾತ್ರ ಬರಬಾರ್ದಪ್ಪ.."
ಅಯ್ಯೋ, "ಏನ್ ಬೇಕಾದ್ರೂ ತಡಕೊಬಹುದು, ಆದ್ರೆ ಈ ಕತ್ತು ನೋವು ಬೇಡಪ್ಪ ಬೇಡಾ.."


ಅಸಲಿಗೆ ನಮ್ಮ ಸಮಸ್ಯೆ ಏನಂದ್ರೆ ನಾವು ಕಷ್ಟಗಳಿಗೆ ಎದೆ ಒಡ್ಡಲು ತಯಾರಿಲ್ಲ ..!!
ಹಾಗೇನೆ , "ಕಷ್ಟ ನಮಗೆ ಬಂದಾಗ ಮಾತ್ರ ಕಷ್ಟ ..!!"
ಬೇರೆಯವರ ಕಷ್ಟ -ನೋವಿನ ಅರಿವು ನಮಗೆ ಅಷ್ಟಕಷ್ಟೇ ..!!!


ಒಮ್ಮೆ ಯೋಚಿಸಿ ..!
ಮನುಷ್ಯನಿಗೆ , ಇಂತದ್ದೆ ದಿನ ಅಥವಾ ಇಂತಿಷ್ಟು ದೀನಗಳೊಳಗೆ ಮ್ರತ್ಯು ನಿಶ್ಚಿತ ಅಂತ
ಗೊತ್ತಾದಾಗ
ಅವನ /ಳ ಮನಸ್ತಿತಿ
ಹೇಗಿದ್ದೀತು ..!?
ಆ ಮನುಷ್ಯ ನಾವೇ ಆಗಿದ್ದರೆ ..?
ಏನ್ ಮಾಡ್ತಿವಿ ..?? ಏನು ಮಾಡಬಹುದು ..?



ಅವನೊಬ್ಬನಿದ್ದ ,,,
"ಎಲ್ಲ್ಲೇ ಇರು ಹೇಗೆ ಇರು , ಎಂದೆದಿಗೂ ನೀ ನಗುತಲಿರು "
ನಿನ್ನ ಸುತ್ತಲಿರುವರನ್ನು ನಗಿಸುತಲಿರು .."
ಇದು ಅವನ ಸಿದ್ಧಾಂತ ..!


ಅವನು ಹೇಳುತಿದ್ದ ಮತ್ತೊಂದು ಮಾತು ,
"ನಾಳಿನ ಕಷ್ಟಗಳ ನೆನೆದು ಈ ಕ್ಷಣ , ಈ ದಿನದ ಕೊಲೆ ಮಾಡೋದು .."
ನಮ್ಮ ಅತೀ ದೊಡ್ಡ ತಪ್ಪು..! ಅದು ಪಾಪ ..!



ದಿನಗಳೆದಂತೆ ಕರಗುವ ದೇಹ..
ಸಾಯಲಿಕ್ಕೆ ವರ್ಷಗಳಿದ್ದರೇನು, ದಿನಗಳಿದ್ದರೇನು. ..?
"ಸಾವು ಅನ್ನೋದು ಕ್ಷಣ ಮಾತ್ರ",
"ಬದಲಿಗೆ ಪ್ರತೀ ಕ್ಷಣ ಅದ್ಭುತವಾಗಿ ಕಳೆದರೆ ಹೇಗೆ..?
ಒಂದೊಂದು ಕ್ಷಣ ಒಂದು ಜೀವನ ಆದ್ರೆ ಹೇಗೆ ..?"



ಉಸಿರಿರುವ ತನಕ ಸಾವಿಲ್ಲ.. ಉಸಿರಿಲ್ಲದ ಮೇಲೆ ನಾವೇ ಇಲ್ಲ ..!!



ಹೀಗಿರಬೇಕಾದ್ರೆ, ಹೆದರಿಕೆ ಯಾವುದು..? ಕಷ್ಟ-ನೋವು ಅಂದ್ರೆ ಯಾವುದು..?


ಹೀಗೆಲ್ಲ ಹೇಳುತ್ತಿದ್ದ ಅವನು ಆರು ತಿಂಗಳಿನೋಳಗಡೇ ಸಾಯುವನಿದ್ದ..!!
ಅದೂ ಅವನಿಗೂ ಹೊತ್ತಿತು..!!


ಅವನಿಗಿದ್ದದ್ದು ಕ್ಯಾನ್ಸರ್..!!


ಆ ರೋಗದ ಮೇಲು ಅವನಿಗೆ ಬೇಜಾರಿಲ್ಲ ..!
ಬದಲಿಗೆ, ಅದರ ವೈಜ್ಞ್ಯನಿಕ ಹೆಸರು ಕೇಳಿ ಖುಷಿ ಪಡುತ್ತಿದ್ದ..!!
ತನ್ನ ರೋಗ ಗುಣಪಡಿಸಲಾಗದ ವೈದ್ಯರ ಮೇಲೆ ಅನುಕಂಪ ಇತ್ತು ಅವನಿಗೆ.



ಯಾರೋ ಅಪರಿಚಿತನಿಗೆ ಬೆನ್ನು ತಟ್ಟಿ, ಮಾತಾಡಿಸಿ, ತಲೆ ತಿಂದು ಪರಿಚಯ ಮಾಡಿಕೊಳ್ಳುತ್ತಿದ್ದ..
ಅವನಿಗೆ "ನನ್ನವರು" ಅನ್ನುವವರು ಯಾರು ಇರ್ಲಿಲ್ಲ, ಅದಕ್ಕೂ ಅವನಿಗೆ ಬೇಜಾರಿಲ್ಲ..!



ಹಾಗಂತ ಅವನಿಗೆ ದುಃಖ ಇರ್ಲಿಲ್ಲ ಅನ್ನೋದು ಸುಳ್ಳು..!
ಅವನಿಗೂ ದುಃಖ ಗಳಿದ್ದವು, ಅವನೊಬ್ಬ ಭಗ್ನ ಪ್ರೇಮಿ..!!
ಆದರೆ,
ಯಾರಿಗೂ ತನ್ನ ನೋವು ಹೇಳುತ್ತಿರಲಿಲ್ಲ..
ದುಃಖ ಹಂಚಿಕೊಳ್ಳುವ ವಿಷಯದಲ್ಲಿ ಅವನು ಬಲು ಸ್ವಾರ್ಥಿ..!!



ತನ್ನ ಕೊನೆಯ ದಿನಗಳನ್ನು 'ಮುಂಬಯಿ' ಯಲ್ಲಿ ಕಳೆಯಬೇಕು, ಹೊಸ ಗೆಳೆಯರೊಡನೆ ಇರಬೇಕು ಅನ್ನೋದು ಅವನ ಇಚ್ಛೆ..!
ಅವನು ಹಾಗೆ ಮಾಡಿದ..



ಮುಂಬಯಿ ಅವನಿಗೆ ಹಿಡಿಸಿತು,
ಅಲ್ಲಿ ಅವನಿಗೆ ತಾಯಿ, ತಂಗಿ, ಅತ್ತಿಗೆ , ಗುರು, ಗೆಳೆಯರು.. ಸಿಕ್ಕರು.
ತಾನು ಸಾಯುವ ಮೊದಲು ಗೆಳೆಯನಿಗೆ ಹುಡುಗಿ ನೋಡಿದ..
ಆದರೆ ಅವನ ಮದುವೆ ನೋಡಲಾಗಲಿಲ್ಲ..!


"ಒಂದು ಮಿಂಚಿನಂತೆ ಬಂದು ಹೋದ"
ಒಂದು ದೊಡ್ಡ ಬೆಳಕ ಚೆಲ್ಲಿ..!!


ಅವನ ಹೆಸರು,
"ಆನಂದ್"


******



೧೯೭೦ ರಲ್ಲಿ ತೆರೆ ಕಂಡ ಹಿಂದಿ ಚಿತ್ರ "ಆನಂದ್"
ರಾಜೇಶ್ ಖನ್ನಾ, ಮಾಡಿದ ಪಾತ್ರವೇ ಆನಂದ್ ..
ಅಮಿತಾಬ್ ಬಚ್ಚನ್ ಆವಾಗ ಸಹ ಕಲಾವಿದ..!


ಅದರ ನಿರ್ದೇಶಕ "ಹ್ರಿಶಿಕೇಶ್ ಮುಖರ್ಜೀ" ಪ್ರೀತಿಯ "ಹ್ರಿಶಿದಾ"
ಇಂದು ಅವರ ಜನ್ಮ ದಿನ..!

ಸೆಪ್ಟೆಂಬರ್ ೩೦, ೧೯೨೨ ಕೊಲ್ಕತ್ತಾ ದಲ್ಲಿ ಜನಿಸಿದ, 'ಹ್ರಿಶಿದಾ'.
'ರಸಾಯನ
ಶಾಸ್ತ್ರ' ವಿಷಯದಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದು, ಕೆಲ ಕಾಲ, "ಗಣಿತ ಹಾಗು ವಿಜ್ಞ್ಯಾನ' ಪಾಠ ಮಾಡಿದರು.



ಮೊದಲಿಗೆ "ಬಿಮಲ್ ರೋಯ್" ಜೊತೆ ಸೇರಿ ಸಿನಿಮ ಕೆಲಸ ಕಲಿತಿದ್ದು.. ಅವರು ಮೊದಲು ಮಾಡಿದ್ದು ಕ್ಯಾಮರಾಮೆನ್ ಕೆಲಸ.. ಜೊತೆಗೆ 'ಸಂಕಲನಕಾರ'.


ಮೊದಲ ಸಿನಿಮ, 'ಮುಸಾಫಿರ್' ೧೯೫೭ ರಲ್ಲಿ ತೆರೆಕಂಡಿತು, ಆದರೆ ಹೆಸರು ಮಾಡಲಿಲ್ಲ..


೧೯೫೯ ರಲ್ಲಿ 'ರಾಜ್ ಕಪೂರ್' ನಟಿಸಿದ 'ಅನಾಡಿ' ಅವರ ಎರಡನೇ ಸಿನಿಮ.
ಅದು ದೊಡ್ಡ ಹೆಸರು ಮಾಡಿತು..
'ಅನಾಡಿ' ಚಿತ್ರದ "ಜೀನಾ ಇಸೀ ಕಾ ನಾಮ್ ಹೈ" ಅದ್ಭುತವಾದ ಹಾಡು..!!



"ಆನಂದ, ಮಿಲಿ, ಚುಪ್ಕೆ ಚುಪ್ಕೆ, ಗೋಲ್ಮಾಲ, ಗುಡ್ಡಿ, ಬಾವರ್ಚಿ, ಅಭಿಮಾನ್,,,, ಆಗಿನ ದೊಡ್ಡ ಹಿಟ್ ಚಿತ್ರಗಳು.
ಒಟ್ಟು ೪೨ ಚಿತ್ರದ ನಿರ್ದೇಶನ ಮಾಡಿದ್ದು."
ಕಿರಿತೆರೆಯಲ್ಲೂ ಅವರ ಕೊಡುಗೆ ಇದೆ..!!



"ಫಿಲಂ ಫೇರ್, ರಾಷ್ಟ್ರ ಪ್ರಶಸ್ತಿ, ದಾದ ಸಾಹೇಬ್ ಫಾಲ್ಕೆ, ಪದ್ಮ ವಿಭೂಷಣ. ಪುರಸ್ಕ್ರತರು."


ಮಧ್ಯಮ ವರ್ಗದ ಕುಟುಂಬಗಳ ಕತೆ, ಗಂಡ-ಹೆಂಡತಿ, ಹಾಸ್ಯ, ಜೀವನ..
ಹೀಗೆ ಎಲ್ಲಾ ತರದ 'ಅದ್ಭತ' ಎನಿಸುವ ಚಿತ್ರ ಕೊಟ್ಟ "ಹ್ರಿಶಿದ"
೨೦೦೬ ಅಗುಸ್ಟ್ ೨೭ ರಂದು ಮುಂಬೈ ಯಲ್ಲಿ ನಿಧನ ರಾದರು.


ಇಂದು ಅವರ ಜನ್ಮದಿನದ ಪ್ರಯುಕ್ತ ಈ ಲೇಖನ.

"ಆನಂದ್" ಒಂದು ಅದ್ಭ್ತವಾದ ಚಿತ್ರ.. ಬದುಕು ಬದಲಿಸಿದ, ಬದಲಿಸುವ ಚಿತ್ರ..
ಅದೆಷ್ಟು ಸಾರಿ ನೋಡಿದೆನೋ, ಪ್ರತೀ ಸಾರಿ ನೋಡಿದಾಗ, ನಾನು ಹೊಸದಾಗಿದ್ದೇನೆ..
ಆನಂದ್, ಜೀವನಾಮೃತ .. ..!!



***

ಇವತ್ತಿಗೆ ೨೦ ವರ್ಷ ಆಯ್ತು, ಅವನು ಹೋಗಿ.. ಅಣ್ಣ "ಶಂಕ್ರಣ್ಣ", ಶಂಕರ್ ನಾಗ್.
"ಒಂದಾನೊಂದು ಕಾಲದಲ್ಲಿ, ಗಂಡುಗಲಿ.. ಕನಸುಗಾರ, ಅವನ ವೇಗ ಅದಕ್ಕೆ ಅವನೇ ಸಾಟಿ.. ಒಂದು ಮುತ್ತಿನ ಕತೆಯ ಕೊಟ್ಟು, ಜನುಮ ಜನುಮದ ಅನುಭಂದ ದಲ್ಲಿ, ಹೊಸ ಜೀವನ ನಡೆಸೆಂದ, ಗೀತಾಳ ಸಂಜು, ಮಿಂಚಿನ ಓಟಗಾರ, 'ಆಕ್ಸಿಡೆಂಟ್' ನಲ್ಲಿ ಹೋಗಿಬಿಟ್ಟ.. ನಮ್ಮೆಲ್ಲರ 'ಶಂಕರ್ ನಾಗ್"





"ಬದುಕು-ಸಾವು ಎಲ್ಲ ದೇವರ ಇಚ್ಛೆ..
ಅವನ ಲಿಖಿತ, ಯಾರು ಬದಲಿಸಲಾಗದು..
ಜೀವನದ ನಾಟಕದಲ್ಲಿ ಬಂದು ಹೋಗುವ ಪಾತ್ರಧಾರಿಗಳು ನಾವು,
ಯಾವ ಪಾತ್ರ ಎಲ್ಲಿ, ಹೇಗೆ, ಎಷ್ಟು, ಅದು ಅವನಂತೆ ಹೇಳಲಾಗದು..!"



***


ಹಲವು ಅದ್ಭುತವಾದ ಚಿತ್ರಗಳ ಕೊಟ್ಟ, ತಮ್ಮ ಚಿತ್ರಗಳಿಂದ ನಮ್ಮೆಲ್ಲರ ಬದುಕಿನಲ್ಲಿ ಬಂದ
"ಹ್ರಿಶಿಕೇಶ್ ಮುಖರ್ಜೀ - ಶಂಕರ್ ನಾಗ್" ಅವರಿಗೆ
ನನ್ನ ನಮನಗಳು..




17 comments:

  1. ಬೆಳ್ಳಂ ಬೆಳಿಗ್ಗೆ ಮೊದಲು ನೋದಿದ್ದು ಈ ಚೇತೋಹಾರಿ ಲೇಖನ..

    ಈ ಆನಂದ್ ಸಿನೇಮಾ ನನ್ನ ಅಚ್ಚುಮೆಚ್ಚಿನ ಸಿನೇಮಾ..

    ಅದರ ಹಾಡುಗಳು...
    ಹಾಡುಗಳ ಸಾಲುಗಳು ಬಹಳ ಅರ್ಥಪೂರ್ಣ..

    ಈ ಸಿನೇಮಾ ನೋಡಿದರೆ ನಮ್ಮ ಬದುಕನ್ನು ಒಮ್ಮೆ ಪರಾಮರ್ಶಿಕೊಳ್ಳುವಂತೆ ಮಾಡಿಬಿಡುತ್ತದೆ...

    ಏನೂ ಖರ್ಚಿಲ್ಲದೆ ಇಂಥಹ ಅದ್ಭುತ ಸಿನೇಮಾ ತೆಗೆದ ಮುಖರ್ಜಿಯವರನ್ನು..
    ಅವರ ಜನ್ಮದಿನದದಂದು ನೆನೆದದದ್ದು ಅರ್ಥಪೂರ್ಣ..

    ಹಾಗೆಯೇ ನಮ್ಮ ಶಂಕರ್ ನಾಗ್..

    ಅವರಿಲ್ಲದಿದ್ದರೂ ಅವರು ಮಾಡಿರುವ ಕೆಲಸ ನಮಗೆ ಸ್ಪೂರ್ತಿ ಕೊಡುತ್ತಲಿದೆ...

    ಇಂಥಹ ಎರಡು ಸಾರ್ಥಕ ಬದುಕನ್ನು ಬಾಳಿದವರನ್ನು ನೆನಪಿಸಿದ್ದಕ್ಕೆ ನಮ್ಮೆಲ್ಲರ ಧನ್ಯವಾದ..

    ಜೈ ಹೋ...

    ReplyDelete
  2. ಆನ೦ದ್ ಚಿತ್ರವನ್ನು ಅನೇಕ ಸಲ ನೋಡಿದೇನೆ.ತು೦ಬಾ ಚೆನ್ನಾಗಿದೆ.ನಿಜ..ಪ್ರತೀಸಾರಿ ನೋಡಿದಾಗ ಹೊಸ ಭಾವನೆಗಳನ್ನು ತರುತ್ತದೆ.ಹೊಸದಾಗಿಸುತ್ತದೆ. ಮಿಲಿ,ಗುಡ್ಡಿ ಹಾಗೂ ಅಭಿಮಾನ್ ಕೂಡಾ ನನಗೆ ಹಿಡಿಸಿದ ಚಿತ್ರಗಳು.
    ಹೃಷಿಕೇಶ್ ಮುಖರ್ಜಿ ಹಾಗೂ ಶ೦ಕರ್ ನಾಗ್ ಅವರಿಗೆ ವ೦ದನಗಳು.
    ಚೆ೦ದದ ಬರವಣಿಗೆಯಲ್ಲಿ ಇಬ್ಬರನ್ನೂ ನೆನಪಿಸಿದ್ದೀರಿ. ಧನ್ಯವಾದಗಳು.

    ReplyDelete
  3. ಅನಿಲ್ ಆನಂದ್ ಬಗ್ಗೆ ಹೇಳೀರಿ ಧನ್ಯವಾದಗಳು. ಇವತ್ತಿಗೂ ಆ ಚಿತ್ರ ನನ್ನ ಕಣ್ಣು ಹನಿಗೂಡಸ್ತದ.
    ನೆನಪು ಮಾಡಿದ್ದಕ್ಕ ಥ್ಯಾಂಕ್ಸ

    ReplyDelete
  4. ಕನ್ನಡ ಮತ್ತು ಹಿಂದಿ ಚಲನಚಿತ್ರದ ಇಬ್ಬರು ಮಹಾನ್ ಕ್ರಿಯೇಟಿವ್ ವ್ಯಕ್ತಿಗಳ ಬಗ್ಗೆ ತುಂಬ ಚೆನ್ನಾಗಿ ಬರೆದಿದ್ದೀರಿ . ಹೃಷಿದಾ ಅವರ ಆನಂದ್ , ಬಾವರ್ಚಿ , ಚುಪ್ ಕೆ ಚುಪ್ ಕೆ , ಅಭಿಮಾನ್ ನನ್ನ ಮೆಚ್ಚಿನ ಚಿತ್ರಗಳು .

    ReplyDelete
  5. Zindagi aur maut upar wale ki haath mein hai jahapanah, isse na to aap badal sakte hain naa hum -- Anand movie dialogue :) :)

    ReplyDelete
  6. ಶಂಕರನಾಗ ನನ್ನ ಮೆಚ್ಚಿನ ನಟ. ಕನ್ನಡದ ಮತ್ತು ಹಿಂದಿಯ ಇಬ್ಬರು ಗತಿಸಿದ ಮೇರುನಟರ ನೆನಪಿಸಿದ್ದಿರಾ... ಆನಂದ ಚಿತ್ರಕಥೆ ಚೆನ್ನಾಗಿದೆ.
    ಧನ್ಯವಾದಗಳು.

    ReplyDelete
  7. ಅನಿಲ್,

    ಬೆಳಿಗ್ಗೆ ಇವತ್ತು ದಿನಪತ್ರಿಕೆ ಕೆಲಸಕ್ಕೆ ಹೊರಡುವ ಮೊದಲು ಲೇಖನ ಓದಿದೆ. ಪೂರ್ತಿ ಓದಲಾಗಲಿಲ್ಲ. ಮತ್ತೊಮ್ಮೆ ಈಗ ಎಲ್ಲಾ ಓದಿದೆ. ಮನಸ್ಸಿಗೆ ಖುಷಿಯಾಯ್ತು..ಆನಂದ್ ಚಿತ್ರದ ಬಗ್ಗೆ ಅದರ ನಿರ್ಧೇಶಕರ ಬಗ್ಗೆ, ನಮ್ಮ ಶಂಕರ್ ನಾಗ್‍ರವರ ಬಗ್ಗೆ ಒಂದು ಸೊಗಸಾದ ಲೇಖನವನ್ನು ಬರೆದಿದ್ದೀರಿ..ತುಂಬಾ ಇಷ್ಟವಾಯ್ತು...ಆದರೂ ಇಡೀ ಲೇಖನದಲ್ಲಿ ಏನೋ ಇಲ್ಲವಾಗಿದೆ ಎನಿಸಿತು. ಅದೇನೆಂದು ನಿಮಗೆ ಫೋನ್ ಮಾಡಿ ಹೇಳುತ್ತೇನೆ..
    ಮನಸ್ಸಿಗೆ ಖುಷಿಯೆನಿಸಿದ ಲೇಖನಕ್ಕಾಗಿ ಧನ್ಯವಾದಗಳು.

    ReplyDelete
  8. ಅನಿಲ್;ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ.ಹಳೆಯ ಮಧುರ ನೆನಪುಗಳನ್ನು ಮತ್ತೆ ನೆನಪಿಸಿದ್ದಕ್ಕೆ ಅನಂತ ಧನ್ಯವಾದಗಳು.

    ReplyDelete
  9. ಹೃಷಿಕೇಶ್ ಮುಖರ್ಜಿ ಹಾಗೂ ಶ೦ಕರ್ ನಾಗ್ ರವರ ಸಾಧನೆ ನೆನಪಿಸಿದ್ದಕ್ಕೆ ಧನ್ಯವಾದಗಳು....

    ReplyDelete
  10. ನನ್ನ ಜೀವನದ ದಿಕ್ಕನ್ನೇ ಬದಲಿಸಿದ ಪುಸ್ತಕ " ಗೃಹಭಂಗ" ವಾದರೆ ... ಬದುಕನ್ನು ನೋಡಲು ಒಂದು ಹೊಸ ಧ್ರುಷ್ಟಿಕೋನವನ್ನ ಕಲ್ಪಿಸಿಕೊಟ್ಟ ಚಿತ್ರ " ಆನಂದ್" ... ನನ್ನನ್ನು ಆ ಚಿತ್ರ ನೋಡಲು ಹುರಿದುಂಬಿಸಿದ ಅನಿಲನಿಗೆ ನಾನು ಚಿರಋಣಿ....

    ReplyDelete
  11. ನಾನು ಈ ಚಿತ್ರ ನೋಡಿದ್ದೇನೆ. ಮನಸ್ಸಿಗೆ ಹಿಡಿಸಿದ ಲೇಖನ. ಚೆನ್ನಾಗಿದೆ.

    ReplyDelete
  12. A-Nil,
    naanu ee modale comment haakidde... yaake kaaNistaa ilvo tilitilla...

    ee saari film star hinde biddiddiraa...?

    tumbaa chennaagide nimma lekhana.....
    odi khushiyaayitu....

    ReplyDelete